Tata: ಇದೇ ತಿಂಗಳ 22ಕ್ಕೆ ಹೊಸ ಟಾಟಾ ಹ್ಯಾಚ್‌ಬ್ಯಾಕ್ ಬಿಡುಗಡೆ: ಏನೆಲ್ಲಾ ನಿರೀಕ್ಷೆಗಳಿವೆ?
ಟಾಟಾ ಮೋಟಾರ್ಸ್ (Tata Motors) ಶೀಘ್ರದಲ್ಲೇ ಹೊಸ ಆಲ್ಟ್ರೋಜ್ ಅನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಮೂಲಗಳ ಪ್ರಕಾರ ಇದು ಕೆಲ ವಿನ್ಯಾಸ ಬದಲಾವಣೆಗಳು ಹಾಗೂ ಹೊಸ ಫೀಚರ್ಸ್‌ಗಳ ಜೋಡಣೆ ಸೇರಿದಂತೆ ಇಂಟೀರಿಯರ್‌ನಲ್ಲಿ ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನ ಕಾರು ಹೇಗಿರಲಿದೆ ಎಂದು ತೋರಿಸುವ ಟೀಸರ್‌ಗಳು ಈಗಾಗಲೇ ಹೊಸ ಟಾಟಾ ಆಲ್ಟ್ರೋಜ್ ಮೇಲೆ ನಿರೀಕ್ಷೆಗಳನ್ನು ಹೆಚ್ಚಿಸಿವೆ. ಕಂಪನಿ ಹೇಳಿಕೊಂಡಿರುವಂತೆ ಈ ಹೊಸ ಫೇಸ್‌ಲಿಫ್ಟ್ ಆವೃತ್ತಿಯನ್ನು ಇದೇ ತಿಂಗಳ 22 ರಂದು ಬಿಡುಗಡೆ ಮಾಡಲಾಗುವುದು.
ಟಾಟಾ ಆಲ್ಟ್ರೋಜ್ ಫೇಸ್ ಲಿಫ್ಟ್ ಬಿಡುಗಡೆಯ ಬಳಿಕ ಮಾರುತಿ ಸುಜುಕಿ ಬಲೆನೊ, ಟೊಯೊಟಾ ಗ್ಲಾಂಝಾ ಮತ್ತು ಹ್ಯುಂಡೈ ಐ 20 ಕಾರುಗಳಿಗೆ ಪೈಪೋಟಿ ನೀಡಲಿದೆ. ಆಲ್ಟ್ರೊಜ್‌ನ ಎಲ್ಲಾ ಮೂರು ಪ್ರತಿಸ್ಪರ್ಧಿಗಳನ್ನು ಸಿಎನ್‌ಜಿ ಆಯ್ಕೆಯೊಂದಿಗೆ ಪೆಟ್ರೋಲ್ ಎಂಜಿನ್ ನೊಂದಿಗೆ ಮಾತ್ರ ನೀಡಲಾಗುತ್ತದೆ, ಆಲ್ಟ್ರೋಜ್ ಈ ವಿಭಾಗದಲ್ಲಿ ಡೀಸೆಲ್ ಎಂಜಿನ್ ಹೊಂದಿರುವ ಏಕೈಕ ಕಾರು ಆಗಿದೆ.

ಮುಂಬರುವ ಟಾಟಾ ಆಲ್ಟ್ರೋಜ್ ಕಾರಿನ ಒಳಗೆ ಈ ಹಿಂದಿಗಿಂತಲು ಹೆಚ್ಚು ಪ್ರೀಮಿಯಂ ಆಗಿರಲಿದೆ. ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಿದ ಡ್ಯಾಶ್‌ಬೋರ್ಡ್ ನೀಡಲಾಗಿದ್ದು, ಇದು ಸಾಫ್ಟ್-ಟಚ್ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಸ್ಟೀರಿಂಗ್ ವೀಲ್ ಕೂಡ ಹೊಸದಾಗಿದ್ದು, ವಿವಿಧ ಕಾರ್ಯಗಳಿಗಾಗಿ ಸ್ಟೀರಿಂಗ್ ವೀಲ್ ನಲ್ಲಿ ಟಚ್-ಆಪರೇಟೆಡ್ ಬಟನ್ ಗಳೊಂದಿಗೆ ಡಿಜಿಟಲ್ ಲೋಗೋವನ್ನು ನೀಡಲಾಗುವುದು.
ಮುಂದಿನ ದೊಡ್ಡ ಅಪ್‌ಡೇಟ್ ಎಂದರೆ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಇನ್ಸ್ಟ್ರುಮೆಂಟ್ ಕನ್ಸೋಲ್ ಆಗಿದ್ದು, ಇನ್ಫೋಟೈನ್ ಮೆಂಟ್ ಸಿಸ್ಟಂ 10.2-ಇಂಚಿನ ಘಟಕವಾಗಿರಲಿದೆ. ಇನ್ಸ್ಟ್ರುಮೆಂಟ್ ಕನ್ಸೋಲ್ ಸಹ ಸಂಪೂರ್ಣವಾಗಿ ಡಿಜಿಟಲ್ ಆಗಿದ್ದು, ಮತ್ತೊಂದು 10.2-ಇಂಚಿನ ಟಿಎಫ್‌ಟಿ ಸ್ಕ್ರೀನ್ ಎಲ್ಲಾ ಪ್ರಮುಖ ಮಾಹಿತಿಯನ್ನು ಒದಗಿಸುತ್ತದೆ.

360 ಡಿಗ್ರಿ ಕ್ಯಾಮೆರಾ, ಆರು ಏರ್ ಬ್ಯಾಗ್ ಗಳು, ಸ್ಟೆಬಿಲಿಟಿ ಕಂಟ್ರೋಲ್, ಎಬಿಎಸ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಹಿಂಭಾಗದ ಪ್ರಯಾಣಿಕರಿಗೆ ಎಸಿ ವೆಂಟ್ ಗಳು, ವಾಯ್ಸ್ ಆಕ್ಟಿವೇಟೆಡ್ ಸನ್ ರೂಫ್, ವೈರ್ ಲೆಸ್ ಚಾರ್ಜಿಂಗ್, ಸೇರಿದಂತೆ ಹಲವು ಫೀಚರ್‌ಗಳನ್ನು ಒಳಗೊಂಡಿದೆ. ಜೊತೆಗೆ ಟಾಟಾ ADAS ಸಹ ಪರಿಚಯಿಸುವ ನಿರೀಕ್ಷೆಯಿದೆ, ಆದರೆ ಈ ಬಗ್ಗೆ ಹೆಚ್ಚಿನ ವಿವರಗಳಿಲ್ಲ.
ಎಂಜಿನ್ ವಿಶೇಷತೆಗಳು: 2025ರ ಆಲ್ಟ್ರೋಜ್ ಫೇಸ್ ಲಿಫ್ಟ್ ಮೊದಲಿನಂತೆಯೇ ಎಂಜಿನ್ ಆಯ್ಕೆಗಳನ್ನು ಹೊಂದಿರುವ ನಿರೀಕ್ಷೆಯಿದೆ. ಇದರಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್, 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಇರಲಿವೆ. ಗೇರ್ ಬಾಕ್ಸ್ ಆಯ್ಕೆಗಳು ಮ್ಯಾನುವಲ್ ಮತ್ತು ಡಿಸಿಟಿಯನ್ನು ಒಳಗೊಂಡಿರುತ್ತದೆ ಹಾಗೆಯೇ ಸಿಎನ್‌ಜಿ ಆಯ್ಕೆಯೂ ಲಭ್ಯವಿರುತ್ತದೆ.

ಈ ಮೂಲಕ ಮುಂಬರಲಿರುವ ಟಾಟಾ ಆಲ್ಟ್ರೋಜ್ 2025ರ ಕಾರಿನಲ್ಲಿ ಯಾವುದೇ ಎಂಜಿನ್ ಬದಲಾವಣೆಗಳು ಇರುವುದಿಲ್ಲ. ಒಂದು ವೇಳೆ ಎಂಜಿನ್ ಬದಲಾವಣೆಗಳು ಇದ್ದಲ್ಲಿ ಕಂಪನಿಯು ಬಿಡುಗಡೆ ಸಮಯದಲ್ಲಿ ಪರಿಚಯಿಸಬಹುದು ಎಂದು ನಿರೀಕ್ಷಿಸಲಾಗಿದೆ. ಸದ್ಯಕ್ಕೆ ಈ ಸಣ್ಣ ಹ್ಯಾಚ್‌ಬ್ಯಾಕ್‌ಗೆ ಉತ್ತಮ ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications