ಜನವರಿ 2 ರಂದು ದೈತ್ಯ SUV ಬಿಡುಗಡೆಗೆ ಸಜ್ಜು... ಕಾರಿನ ಟಾಪ್ 5 ಫೀಚರ್‌ಗಳು!
ಇತ್ತೀಚೆಗಗಷ್ಟೆ ಪ್ರಮುಖ ಕೊರಿಯಾ ಮೂಲದ ಕಾರು ತಯಾರಕರಾದ 'ಕಿಯಾ' ತನ್ನ ಹೊಸ ಪೀಳಿಗೆಯ 2026 ಕಿಯಾ ಸೆಲ್ಟೋಸ್ ಅನ್ನು ಸಂಪೂರ್ಣ ಹೊಸ ಬದಲಾವಣೆಗಳೊಂದಿಗೆ ಅನಾರವಣಗೊಳಿಸಿದೆ. ಆಧುನಿಕ ಫೀಚರ್ಸ್ ಮತ್ತು ಸುಧಾರಿತ ಸುರಕ್ಷತೆಯೊಂದಿಗೆ ನವೀಕೃತ ಕ್ಯಾಬಿನ್ ಅನ್ನು ನೀಡಲಾಗಿದೆ. ಕಾಂಪ್ಯಾಕ್ಟ್ SUV ಮಾರುಕಟ್ಟೆಯಲ್ಲಿ ನಂ.1 ಆಗುವ ಗುರಿಯೊಂದಿಗೆ ಕಿಯಾ ಈ ಕಾರನ್ನು ಬಿಡುಗಡೆ ಮಾಡಲು ಕಂಪನಿ ಸಜ್ಜಾಗಿದೆ. ಜನವರಿ 2 ರಂದು ಬಿಡುಗಡೆಯನ್ನು ನಿಗದಿಪಡಿಸಲಾಗಿದ್ದು, ಅದಕ್ಕೂ ಮುನ್ನ ಈ ಕಾರಿನಲ್ಲಿ ನೀಡಲಾದ ಟಾಪ್ 5 ವೈಶಿಷ್ಟ್ಯಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು.
ಡ್ಯಾಶ್‌ಕ್ಯಾಮ್‌ಗಳು: ಹೊಸ ಕಿಯಾ ಸೆಲ್ಟೋಸ್ ಮುಂಭಾಗ ಮತ್ತು ಹಿಂಭಾಗದ ದೃಶ್ಯಗಳನ್ನು ಸೆರೆಹಿಡಿಯಲು ಒಂದಲ್ಲ, ಎರಡು ಡ್ಯಾಶ್‌ಕ್ಯಾಮ್‌ಗಳನ್ನು ಹೊಂದಿದೆ. ಆಫ್ಟರ್ ಮಾರ್ಕೆಟ್‌ನಲ್ಲಿ ನೀವು ಹಲವಾರು ಆಯ್ಕೆಗಳನ್ನು ಪಡೆಯಬಹುದಾದರೂ, ಕಾರ್ಖಾನೆಯಿಂದ ನೇರವಾಗಿ ನೀಡುವ ಇಂತಹ ಫೀಚರ್ಸ್‌ಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಕಾರಿನ ಸುರಕ್ಷತೆ ಜೊತೆಗೆ ಈ ಡ್ಯಾಶ್‌ಕ್ಯಾಮ್‌ಗಳು ಸಂಭಾವ್ಯ ಅಪಘಾತ, ಇತರರಿಂದ ಎದುರಾಗುವ ದುಷ್ಕೃತ್ಯಗಳನ್ನು ಸೆರೆಹಿಡಿಯುವಲ್ಲಿ ಸಹಕರಿಸುತ್ತವೆ.

ಲೆವೆಲ್-2 ADAS: 2026 ಕಿಯಾ ಸೆಲ್ಟೋಸ್ 21 ಸ್ವಾಯತ್ತ ವೈಶಿಷ್ಟ್ಯಗಳೊಂದಿಗೆ ಲೆವೆಲ್-2 ADAS ಸೂಟ್ ಹೊಂದಿದೆ. ಇದು HTX (A) ಮತ್ತು GTX (A) ವೇರಿಯೆಂಟ್‌ಗಳಿಗೆ ಮಾತ್ರ ಸೀಮಿತವಾಗಿದ್ದು, ಪ್ಯಾಕೇಜ್‌ನಲ್ಲಿ ಡಿಕ್ಕಿ ಎಚ್ಚರಿಕೆಗಳು (collision alerts) ಮತ್ತು ತಪ್ಪಿಸಿಕೊಳ್ಳುವಿಕೆ ಸಹಾಯಗಳು (avoidance assists), ಲೇನ್ ಡ್ರೈವಿಂಗ್ ಏಡ್‌ಗಳು, ಚಾಲಕ ಗಮನ ಪತ್ತೆ (driver attention detection) ಸೇರಿವೆ.
ಇವಿಷ್ಟೆ ಅಲ್ಲದೆ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್‌ನೊಂದಿಗೆ 360 - ಡಿಗ್ರಿ ಕ್ಯಾಮೆರಾ, ಸ್ಟಾಪ್ & ಗೋ ಜೊತೆಗೆ ಸ್ಮಾರ್ಟ್ ಕ್ರೂಸ್ ಕಂಟ್ರೋಲ್ ಮತ್ತು ಇನ್ನೂ ಹೆಚ್ಚಿನವು ಸೇರಿವೆ. ಇದು 6 ಏರ್‌ಬ್ಯಾಗ್‌ಗಳು, ಬ್ರೇಕ್ ಅಸಿಸ್ಟ್‌ನೊಂದಿಗೆ ABS, ESC, ಡೌನ್‌ಹಿಲ್ ಬ್ರೇಕ್ ಕಂಟ್ರೋಲ್, ರಿಯರ್ ವ್ಯೂ ಕ್ಯಾಮೆರಾ ಸೇರಿದಂತೆ ಬಲವಾದ ಪ್ರಮಾಣಿತ ಸುರಕ್ಷತಾ ಸೂಟ್ ಅನ್ನು ಹೊಂದಿದ್ದು, ಪ್ರಯಾಣಿಕರಿಗೆ ಗರಿಷ್ಟ ಸುರಕ್ಷತೆಯನ್ನು ಒದಗಿಸುತ್ತದೆ.

ಟ್ರಿನಿಟಿ ಪನೋರಮಿಕ್ ಡಿಸ್ಪ್ಲೇ: ಹೊಸ ಸೆಲ್ಟೋಸ್ ಇನ್ಫೋಟೈನ್‌ಮೆಂಟ್‌ಗಾಗಿ ಹೊಸ ಫ್ಲೋಟಿಂಗ್ ಟಚ್‌ಸ್ಕ್ರೀನ್ ಸೆಟಪ್ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ ಡಿಜಿಟಲ್ ಕ್ಲಸ್ಟರ್ ಅನ್ನು ಹೊಂದಿದೆ. ಇದು ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್‌ಗಾಗಿ ಎರಡು 12.3-ಇಂಚಿನ ಪ್ಯಾನೆಲ್‌ಗಳನ್ನು ಮತ್ತು ಮಧ್ಯದಲ್ಲಿ 5-ಇಂಚಿನ HVAC ಟಚ್ ಪ್ಯಾನೆಲ್ ಅನ್ನು ಸಂಯೋಜಿಸುತ್ತದೆ. ಡಿಸ್ಪ್ಲೇ ನಯವಾದ ಬಳಕೆದಾರ ಅನುಭವಕ್ಕಾಗಿ ಇತ್ತೀಚಿನ ಗ್ರಾಫಿಕಲ್ ಇಂಟರ್ಫೇಸ್‌ನೊಂದಿಗೆ ಬರುತ್ತದೆ.
10-ವೇ ಪವರ್ಡ್ ಡ್ರೈವರ್ ಸೀಟ್: GTX ವೇರಿಯೆಂಟ್‌ನಲ್ಲಿ, ಚಾಲಕನಿಗೆ ಸೊಂಟದ ಹೊಂದಾಣಿಕೆ ಮತ್ತು ಮೆಮೊರಿ ಸೆಟ್ಟಿಂಗ್‌ಗಳೊಂದಿಗೆ 10 - ವೇ ಪವರ್ - ಹೊಂದಾಣಿಕೆ ಮಾಡಬಹುದಾದ ಸೀಟ್ ಅನ್ನು ನೀಡಲಾಗುತ್ತದೆ. ಕಿಯಾ ವಿಶ್ರಾಂತಿ ವೈಶಿಷ್ಟ್ಯ ಮತ್ತು 3 - ವೇ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಸೇರಿಸಿದೆ. ಇದು ಪ್ರಯಾಣದಲ್ಲಿ ಡ್ರೈವರ್‌ಗೆ ಸೌಕರ್ಯಯುತ ಅನುಭವ ನೀಡುತ್ತದೆ.

ಟ್ರಾಕ್ಷನ್ ಮೋಡ್‌ಗಳು: ನಿಜವಾದ ಆಫ್-ರೋಡ್ ಕಾರಲ್ಲದಿದ್ದರೂ, 2026 ಸೆಲ್ಟೋಸ್ ತನ್ನ ಹೊಸ ಟ್ರಾಕ್ಷನ್ ಮೋಡ್‌ಗಳೊಂದಿಗೆ ಕಷ್ಟಕರವಾದ ಭೂಪ್ರದೇಶದಲ್ಲೂ ಮುನ್ನುಗ್ಗುವ ಸಾಮರ್ಥ್ಯವನ್ನು ಹೊಂದಿದೆ. ಇದು ವಿವಿಧ ಪರಿಸ್ಥಿತಿಗಳಲ್ಲಿ ಹಿಡಿತ ಮತ್ತು ಸ್ಥಿರತೆಯನ್ನು ಹೆಚ್ಚಿಸಲು ಸಹಾಯ ಮಾಡುವಂತೆ ಐಸ್, ಮಡ್ ಮತ್ತು ಸ್ಯಾಂಡ್ ಎಂಬ ಮೂರು ಸೆಟ್ಟಿಂಗ್‌ಗಳನ್ನು ಪಡೆದಿದೆ.
ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಸುತ್ತಲೂ ಡಿಸ್ಕ್ ಬ್ರೇಕ್‌ಗಳು, 360 - ಡಿಗ್ರಿ ಕ್ಯಾಮೆರಾದೊಂದಿಗೆ ಸರೌಂಡ್ ವ್ಯೂ ಮಾನಿಟರ್ ಮತ್ತು ಒಟ್ಟಾರೆಯಾಗಿ ಹೆಚ್ಚು ನೇರವಾದ ನಿಲುವಿನೊಂದಿಗೆ, ಹೊಸ - ಪೀಳಿಗೆಯ ಕಿಯಾ ಸೆಲ್ಟೋಸ್ ಮಾಡಲ್ ಭರವಸೆಯ ಪ್ಯಾಕೇಜ್ ಅನ್ನು ನೀಡುತ್ತದೆ. ಜನವರಿ 2 ರಂದು ಬಿಡುಗಡೆಯಾಗಲಿರುವ ಈ ಕಾರು, ಸ್ಪರ್ಧಾತ್ಮಕ ಬೆಲೆಯಲ್ಲಿದ್ದರೆ ಉತ್ತಮ ಬೇಡಿಕೆ ಪಡೆದುಕೊಳ್ಳಲಿದೆ.


Click it and Unblock the Notifications








