ಬರೀ 5 ಲಕ್ಷಕ್ಕೆ ಸಿಗುವ ವಿಶಾಲವಾದ ಕಾರು: ಫುಲ್ ಡಿಮ್ಯಾಂಡ್, ಇಲ್ಲಿಯವರೆಗೆ 35 ಲಕ್ಷ ಕಾರುಗಳು...
ಜನಪ್ರಿಯ ಕಾರು ತಯಾರಕರಾದ ಮಾರುತಿ ಸುಜುಕಿ ಇಂಡಿಯಾ, ಭಾರತದಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿರುವ ತನ್ನ ವ್ಯಾಗನ್ ಆರ್ (WagonR) 35 ಲಕ್ಷ ಯುನಿಟ್ ಕಾರುಗಳ ಉತ್ಪಾದನಾ ಮೈಲಿಗಲ್ಲನ್ನು ದಾಟಿದೆ ಎಂದು ಘೋಷಿಸಿದೆ. ಈ ಮೈಲಿಗಲ್ಲನ್ನು ಸಾಧಿಸಿದ ದೇಶದ ಕೆಲವೇ ಪ್ರಯಾಣಿಕ ವಾಹನಗಳಲ್ಲಿ ಇದು ಕೂಡ ಒಂದಾಗಿ ಗುರ್ತಿಸಿಕೊಂಡಿದೆ. ಡಿಸೆಂಬರ್ 1999 ರಲ್ಲಿ ಬಿಡುಗಡೆಯಾದ ವ್ಯಾಗನ್‌ಆರ್ 25 ವರ್ಷಗಳಲ್ಲಿ ಈ ಮೈಲಿಗಲ್ಲನ್ನು ಸಾಧಿಸಿದೆ. ಆಲ್ಟೊ ಮತ್ತು ಸ್ವಿಫ್ಟ್ ಕಾರುಗಳ ನಂತರ 35 ಲಕ್ಷ ಕಾರು ಉತ್ಪಾದನಾ ಗಡಿಯನ್ನು ದಾಟಿದ ಮಾಡಲ್ ಆಗಿ ವ್ಯಾಗನ್ ಆರ್ ಗುರ್ತಿಸಿಕೊಂಡಿದೆ.
ಮಾರುತಿ ಸುಜುಕಿ ವ್ಯಾಗನ್ ಆರ್ ಕಾರನ್ನು ಪ್ರಸ್ತುತ ಹರಿಯಾಣದ ಗುರಗಾಂವ್ ಮತ್ತು ಮಾನೇಸರ್ ಸ್ಥಾವರಗಳಲ್ಲಿ ತಯಾರಿಸಲಾಗುತ್ತಿದೆ. ವ್ಯಾಗನ್‌ಆರ್ ಕಾರು ಜಪಾನ್, ಭಾರತ ಮತ್ತು ಯುರೋಪ್ ಸೇರಿದಂತೆ ಜಾಗತಿಕವಾಗಿ 75 ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಒಂದು ವಾಹನ ಬಿಡುಗಡೆಯಾದ 25 ವರ್ಷಗಳ ನಂತರವೂ ಜನರಿಂದ ಅದೇ ಸ್ವೀಕಾರವನ್ನು ಪಡೆಯುತ್ತಿರುವುದು ವಿಶೇಷ.

ವ್ಯಾಗನ್‌ಆರ್ 1999 ರಲ್ಲಿ ತನ್ನ ಚೊಚ್ಚಲ ಪ್ರವೇಶವನ್ನು ಮಾಡಿತು, 2004 ರಲ್ಲಿ ಪರಿಚಯಿಸಲಾದ ಸಿಎನ್‌ಜಿ ಆಯ್ಕೆಯು ಕಾರಿಗೆ ಉತ್ತಮ ಬೇಡಿಕೆ ತಂದುಕೊಟ್ಟಿತು. ನಂತರ ಎರಡನೇ ತಲೆಮಾರಿನ ಕಾರು 2010 ರಲ್ಲಿ ಬಂದಿತು, ನಂತರ ಆ ವರ್ಷದ ಕೊನೆಯಲ್ಲಿ ಆ ಮಾಡಲ್‌ಗೆ ಸಿಎನ್‌ಜಿ ವೇರಿಯೆಂಟ್ ಸೇರಿಸಲಾಯಿತು. 2015 ರಲ್ಲಿ, AMT ಗೇರ್‌ಬಾಕ್ಸ್, ಡ್ಯುಯಲ್ ಏರ್‌ಬ್ಯಾಗ್‌ಗಳು ಮತ್ತು ಎಬಿಎಸ್ ಸೇರಿದಂತೆ ಗಮನಾರ್ಹ ನವೀಕರಣಗಳನ್ನು ನೀಡಲಾಯಿತು.
ಮಾರುತಿ ಸುಜುಕಿ 2017 ರಲ್ಲಿ VXi+ ವೇರಿಯೆಂಟ್ ಅನ್ನು ಹೆಚ್ಚುವರಿ ಫೀಚರ್‌ಗಳೊಂದಿಗೆ ಪರಿಚಯಿಸುವ ಮೂಲಕ ಶ್ರೇಣಿಯನ್ನು ವಿಸ್ತರಿಸಿತು. ಮೂರನೇ ತಲೆಮಾರಿನ ಕಾರು 2019 ರಲ್ಲಿ ಮಾರುಕಟ್ಟೆಗೆ ಪ್ರವೇಶಿಸಿತು, ನಂತರ ವ್ಯಾಗನ್‌ಆರ್ 2022 ರಲ್ಲಿ ಸಣ್ಣ ನವೀಕರಣವನ್ನು ಪಡೆಯಿತು. ಒಟ್ಟಾರೆ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಈ ಕಾರು ಮೂರು ತಲೆಮಾರುಗಳನ್ನು ದಾಟಿದೆ ಎಂದು ಕಂಪನಿ ಹೇಳಿದೆ.

ವ್ಯಾಗನ್‌ಆರ್ ಕೈಗೆಟುಕುವ ಸಣ್ಣ ಫ್ಯಾಮಿಲಿ ಹ್ಯಾಚ್‌ಬ್ಯಾಕ್ ಆಗಿ ಸದ್ಯ ಮುಂದುವರಿಯುತ್ತಿದೆ. ಎತ್ತರದ ವಿನ್ಯಾಸ, ವಿಶಾಲವಾದ ಒಳಾಂಗಣ ಮತ್ತು ಮೈಲೇಜ್ ಸೇರಿದಂತೆ ಹೊಸ ತಂತ್ರಜ್ಞಾನ ಮತ್ತು ವೈಶಿಷ್ಟ್ಯಗಳೊಂದಿಗೆ ಭಾರತೀಯರ ನೆಚ್ಚಿನ ಕಾರಾಗಿದೆ. ಪ್ರಸ್ತುತ ವ್ಯಾಗನ್‌ಆರ್, LXi, VXi, ZXi ಮತ್ತು ZXi+ ಟ್ರಿಮ್‌ಗಳಲ್ಲಿ 11 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ, ಇದರ ಬೆಲೆ ರೂ. 4.99 ಲಕ್ಷದಿಂದ ರೂ. 6.95 ಲಕ್ಷ (ಎಕ್ಸ್-ಶೋರೂಂ) ವರೆಗೆ ಇದೆ.
ಇತ್ತೀಚಿನ ವ್ಯಾಗನ್‌ಆರ್ ಕಾರು ಆರು ಏರ್‌ಬ್ಯಾಗ್‌ಗಳು, ABS ಜೊತೆಗೆ EBD ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಸೇರಿದಂತೆ ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ, ಬ್ಲೂಟೂತ್ ಸಂಪರ್ಕ ಮತ್ತು 17.78 ಸೆಂ.ಮೀ ಸ್ಮಾರ್ಟ್‌ಪ್ಲೇ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಂತಹ ಹಲವಾರು ವೈಶಿಷ್ಟ್ಯಗಳನ್ನು ಸಹ ಪಡೆದುಕೊಂಡಿದೆ.

ಈ ಕಾರು 1.0-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 67 PS ಗರಿಷ್ಠ ಪವರ್ ಮತ್ತು 89 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 5-ಸ್ಪೀಡ್ AMT ಯೊಂದಿಗೆ ಬರುತ್ತದೆ. ಅದೇ ಎಂಜಿನ್ CNG ಪವರ್‌ಟ್ರೇನ್‌ನೊಂದಿಗೆ ಸಹ ಲಭ್ಯವಿದೆ. ಇದು 57 PS ಪವರ್ ಮತ್ತು ಟಾರ್ಕ್ 82 Nm ಟಾರ್ಕ್ ಹೊರಹಾಕುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಬರುತ್ತದೆ.
ಕೊನೆಯದಾಗಿ, 1.2-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 90 PS ಪವರ್ ಮತ್ತು 113 Nm ಟಾರ್ಕ್ ಉತ್ಪಾದಿಸುತ್ತದೆ. ಇದನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 5-ಸ್ಪೀಡ್ AMT ಯೊಂದಿಗೆ ನೀಡಲಾಗುತ್ತದೆ. ಒಂದು ವಾಹನ ಬಿಡುಗಡೆಯಾದ 25 ವರ್ಷಗಳ ನಂತರವೂ ಜನರಿಂದ ಅದೇ ಸ್ವೀಕಾರವನ್ನು ಪಡೆಯುತ್ತಿರುವುದು ವಿಶೇಷ.


Click it and Unblock the Notifications








