ಟೊಯೋಟಾಗೆ ಮಾರುತಿ ಸುಜುಕಿ ಸಾಥ್... 4 ಲಕ್ಷಕ್ಕೂ ಹೆಚ್ಚು ಕಾರುಗಳು ಮಾರಾಟ!

ಭಾರತದಲ್ಲಿ ಮಾರುತಿ ಸುಜುಕಿ ಹಾಗೂ ಟೊಯೋಟಾ ಕಂಪನಿಗಳ ಸಹಭಾಗಿತ್ವದಲ್ಲಿ ಕಾರುಗಳು ನಿರ್ಮಾಣವಾಗುವುದು ಎಲ್ಲರಿಗೂ ತಿಳಿದಿದೆ. ಮಾರುತಿ ಕಂಪನಿ ಬಲೆನೊ ಕಾರನ್ನು ಹೊಂದಿದ್ದರೆ, ಟೊಯೋಟಾ ಇದೇ ಕಾರಿನ ರೀಬ್ಯಾಡ್ಜ್ ಆವೃತ್ತಿಯಾಗಿ ಗ್ಲಾಂಝಾವನ್ನು ಹೊಂದಿದೆ. ಹೀಗೆ ಹಲವು ಕಾರುಗಳನ್ನು ಎರಡೂ ಬ್ರಾಂಡ್‌ಗಳು ರೀಬ್ಯಾಡ್ಜ್ ಆವೃತ್ತಿಗಳಲ್ಲಿ ಮಾರಾಟ ಮಾಡುತ್ತಿವೆ. ಇದೀಗ ಈ ಮಾರುತಿ-ಟೊಯೋಟಾ ಬ್ರಾಂಡ್‌ಗಳ ರೀಬ್ಯಾಡ್ಜ್ ಆವೃತ್ತಿಗಳು ಬರೋಬ್ಬರಿ 4 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿವೆ. ಮಾರುತಿ ಸುಜುಕಿ ಬಲೆನೊ, ಫ್ರಾಂಕ್ಸ್ ಕಾರುಗಳ ರಿಬ್ಯಾಡ್ಜ್ ಟೊಯೊಟಾ ಕಾರುಗಳು 2025ರ ಆರ್ಥಿಕ ವರ್ಷದಲ್ಲಿ 4 ಲಕ್ಷಕ್ಕೂ ಹೆಚ್ಚು ಕಾರುಗಳು ಮಾರಾಟವಾಗಿವೆ.

ಮಾರುತಿ ಸುಜುಕಿ ಬಲೆನೊವನ್ನು ಟೊಯೊಟಾ ಗ್ಲಾಂಝಾ ಆಗಿ ಮಾರಾಟ ಮಾಡುತ್ತಿದ್ದರೆ, ಫ್ರಾಂಕ್ಸ್ ನ ರಿಬ್ಯಾಡ್ಜ್ ಆವೃತ್ತಿಯಾಗಿ ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ಇದೆ. ಈ ನಾಲ್ಕು ಕಾರುಗಳ ಸಂಯೋಜಿತ ಮಾರಾಟವು ಏಪ್ರಿಲ್ 2024 ಮತ್ತು ಮಾರ್ಚ್ 2025 ರ ನಡುವಿನ ಅವಧಿಯಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟವಾಗಿವೆ.

4-lakh-units-of-maruti-baleno-fronx-and-toyota-glanza-taisor-sold-in-fy25

ಆರ್ಥಿಕ ವರ್ಷ 2023 ಕ್ಕೆ ಹೋಲಿಸಿದರೆ ಟೊಯೊಟಾ ಶೇಕಡಾ 78 ರಷ್ಟು ಭಾರಿ ಪ್ರಮಾಣದ ಏರಿಕೆಯನ್ನು ದಾಖಲಿಸಿದೆ. ಒಟ್ಟು ಶೇ 7.2 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಟೊಯೊಟಾ ವಾರ್ಷಿಕ ಆಧಾರದ ಮೇಲೆ ಶೇ 1.3 ರಷ್ಟು ಲಾಭ ಗಳಿಸಿದೆ. ಮಾರುತಿ ಬಲೆನೊ 1,67,161 ಯುನಿಟ್ ಕಾರುಗಳ ಮಾರಟದೊಂದಿಗೆ ಆರ್ಥಿಕ ವರ್ಷವನ್ನು ಕೊನೆಗೊಳಿಸಿದೆ.

ಇದು 2024 ರ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 15 ರಷ್ಟು ಕುಸಿತ ಮತ್ತು 2023 ರ ಸಂಖ್ಯೆಗಳಿಗೆ ಹೋಲಿಸಿದರೆ ಶೇ 18 ರಷ್ಟು ತೀವ್ರ ಕುಸಿತವಾಗಿದೆ. ಇದರ ರೀಬ್ಯಾಡ್ಜ್ ಆವೃತ್ತಿಯಾದ ಟೊಯೊಟಾ ಗ್ಲಾಂಝಾ 2024ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಮಾರಾಟವು ಶೇಕಡಾ 7 ರಷ್ಟು ಕುಸಿದಿದ್ದು, ಒಟ್ಟು 48,839 ಯುನಿಟ್ ಕಾರುಗಳು ಮಾರಾಟವಾಗಿವೆ.

4-lakh-units-of-maruti-baleno-fronx-and-toyota-glanza-taisor-sold-in-fy25

ಇದು 2023 ರ ಹಣಕಾಸು ವರ್ಷದ 39,766 ಯುನಿಟ್ ಕಾರುಗಳಿಗಿಂತ ಶೇ 23 ರಷ್ಟು ಲಾಭವನ್ನು ದಾಖಲಿಸಿದೆ. ಫ್ರಾಂಕ್ಸ್ 2025ರ ಹಣಕಾಸು ವರ್ಷದಲ್ಲಿ 1,66,216 ಯುನಿಟ್ ಕಾರುಗಳು ಮಾರಾಟವಾಗಿದೆ. 2024ರ ಹಣಕಾಸು ವರ್ಷದ 1,34,735 ಯುನಿಟ್ ಕಾರುಗಳಿಗಿಂತ ಶೇ.23ರಷ್ಟು ಬೆಳವಣಿಗೆ ದಾಖಲಾಗಿದೆ.

ಟೊಯೊಟಾ ಟೈಸರ್ ತನ್ನ ಮೊದಲ ಪೂರ್ಣ ಆರ್ಥಿಕ ವರ್ಷದಲ್ಲಿ 32,378 ಯುನಿಟ್ ಕಾರುಗಳ ಮಾರಾಟವಾಗಿದೆ. ಇದು ಗ್ಲಾಂಝಾ ಜೊತೆಗೆ ಬಜೆಟ್-ಪ್ರಜ್ಞೆಯುಳ್ಳ ಖರೀದಿದಾರರಲ್ಲಿ ಟೊಯೊಟಾದ ವ್ಯಾಪ್ತಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ತನ್ನ ಆಕರ್ಷಕ ಡಿಸೈನ್ ಹಾಗೂ ಆಧುನಿಕ ಫೀಚರ್ಸ್ ಗ್ರಾಹಕರಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

4-lakh-units-of-maruti-baleno-fronx-and-toyota-glanza-taisor-sold-in-fy25

ಟೊಯೋಟಾ ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ರೀಬ್ಯಾಡ್ಜ್ ಮಾಡಿದ ಮಾರುತಿ ಎರ್ಟಿಗಾವನ್ನು ರುಮಿಯನ್ ಹೆಸರಿನಲ್ಲಿ ಮಾರಾಟ ಮಾಡುತ್ತದೆ. ಎರ್ಟಿಗಾ MPV ಜಾಗದಲ್ಲಿ ಮುಂಚೂಣಿಯಲ್ಲಿದ್ದರೂ, ರುಮಿಯನ್ ಕಳೆದ ಹಣಕಾಸು ವರ್ಷದಲ್ಲಿ 21,878 ಯುನಿಟ್‌ ಕಾರುಗಳು ಮಾತ್ರ ಮಾರಾಟವಾಗಿವೆ. ಟೊಯೋಟಾ ಇನ್ನೂ ಗಮನಹರಿಸಿ ಈ ಕಾರನ್ನು ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ನೀಡಬೇಕಿದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, April 22, 2025, 11:44 [IST]
English summary
4 lakh units of maruti baleno fronx and toyota glanza taisor sold in fy25
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+