Renault: ಲಕ್ಷುರಿ ಫೀಚರ್.. ರೆನಾಲ್ಟ್ ಡಸ್ಟರ್‌ಗೆ ಹೊಸ ಹೆಸರು ಘೋಷಣೆ, 7-ಸೀಟರ್.. 10 ಲಕ್ಷಕ್ಕೆ ಬಿಡುಗಡೆ?
ಫ್ರಾನ್ಸ್ ಮೂಲದ ರೆನಾಲ್ಟ್ (Renault), ಪ್ರಖ್ಯಾತ ಕಾರು ತಯಾರಕ ಕಂಪನಿಯಾಗಿಯಾಗಿ ಮನೆ ಮಾತಾಗಿದೆ. ದೇಶೀಯವಾಗಿ ಕ್ವಿಡ್, ಕಿಗರ್ ಮತ್ತು ಟ್ರೈಬರ್ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇವುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಅತ್ಯಂತ ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತವೆ. ಸದ್ಯ, ಕಂಪನಿಯು ಮಾರಾಟದಿಂದ ಸ್ಥಗಿತಗೊಳಿಸಿದ್ದ 'ಡಸ್ಟರ್' ಎಸ್‌ಯುವಿಯನ್ನು ಹೊಸ ರೂಪದಲ್ಲಿ ಮತ್ತೆ ಬಿಡುಗಡೆಗೊಳಿಸಲು ಸಾಕಷ್ಟು ತಯಾರಿಯನ್ನು ನಡೆಸುತ್ತಿದೆ. ಆದರೆ, ಈ ಬಾರಿ ಡಸ್ಟರ್ (Duster) ನೂತನ ಹೆಸರಿನೊಂದಿಗೆ ಮಾರಾಟಕ್ಕೆ ಬರುವುದು ಬಹುತೇಕ ಖಚಿತವಾಗಿದೆ.
ಈ ಸಂಬಂಧ ರೆನಾಲ್ಟ್ ಕಂಪನಿಯು ಅಧಿಕೃತ ಟೀಸರ್‌ವೊಂದನ್ನು ಹೊರತಂದಿದ್ದು, 7 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಬಿಡುಗಡೆಗೊಳಿಸುವ ಡಸ್ಟರ್‌ಗೆ ಬೋರಿಯಲ್ (Boreal) ಹೆಸರನ್ನು ಇಡಲಾಗುತ್ತದೆ ಎಂದು ದೃಢಪಡಿಸಿದೆ. ವಿಶೇಷವಾಗಿ 'ಬೋರಿಯಲ್ ಎಂಬ ಹೆಸರು ಗ್ರೀಕ್ ಪದವಾದ 'ಬೋರಿಯಾಸ್'ನಿಂದ ಉತ್ಪತ್ತಿಯಾಗಿದೆ. ಬೋರಿಯಾಸ್ ಎಂಬುದು ದೇವರ ಹೆಸರಾಗಿದೆ.

ನೂತನ ಡಸ್ಟರ್, ರೆನಾಲ್ಟ್ ಮಾಲೀಕತ್ವದ ಡೇಸಿಯಾ (Dacia) ಕಂಪನಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟಗೊಳಿಸುವ ಬಿಗ್‌ಸ್ಟರ್ (Bigster) ಎಸ್‌ಯುವಿಯ ತದ್ರೂಪವಾಗಿದೆ. ಇದು 2026ರಲ್ಲಿ ಭಾರತದ ಮಾರುಕಟ್ಟೆಯಲ್ಲಿಯೂ ರೆನಾಲ್ಟ್ ಬೋರಿಯಲ್ (ಡಸ್ಟರ್) ಹೆಸರಿನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಆದರೆ, ಈ ಕುರಿತಂತೆ ಕಂಪನಿಯ ಕಡೆಯಿಂದ ಯಾವುದೇ ಅಧಿಕೃತ ವಿವರಗಳು ಲಭ್ಯವಾಗಿಲ್ಲ.
ಮುಂಬರಲಿರುವ ರೆನಾಲ್ಟ್ ಬೋರಿಯಲ್ (ಡಸ್ಟರ್) ವಿಶೇಷತೆಗಳೇನು: ಈ ಎಸ್‌ಯುವಿ ಹೆಚ್ಚು-ಕಮ್ಮಿ 'ಡೇಸಿಯಾ ಬಿಗ್‌ಸ್ಟರ್' ಕಾರಿನಂತೆಯೇ ಇರಲಿದೆ. ಎಲ್ಇಡಿ ಹೆಡ್‌ಲೈಟ್‌ಗಳು, ಫಾಗ್ ಲೈಟ್‌ಗಳು, ಸೈಡ್ ಮಿರರ್‌ಗಳಲ್ಲಿ ಟರ್ನ್-ಇಂಡಿಕೇಟರ್‌ಗಳು, ಸಿಲ್ವರ್ ರೂಫ್ ರೈಲ್‌ಗಳು, ಬ್ಲ್ಯಾಕ್ ರೂಫ್, 'ವಿ' ಆಕಾರದಲ್ಲಿರುವ ಎಲ್ಇಡಿ ಟೈಲ್ ಲೈಟ್‌ಗಳು ಹಾಗೂ ಡುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಒಳಗೊಂಡಿರುವ ಸಾಧ್ಯತೆಯೂ ಇದೆ.

ಈ ಕಾರು ಹೆಚ್ಚು ಶಕ್ತಿಯುತವಾದ 1.2-ಲೀ. ಮೈಲ್ಡ್-ಹೈಬ್ರಿಡ್ ಸಿಸ್ಟಮ್ (ಪೆಟ್ರೋಲ್ + ಎಲೆಕ್ಟ್ರಿಕ್) ಹಾಗೂ 1.2-ಲೀ. ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಆಯ್ಕೆಯನ್ನು ಹೊಂದಿರುವ ನಿರೀಕ್ಷೆಯಿದೆ. ಜೊತೆಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 4ಡಬ್ಲ್ಯೂಡಿ (ಫೋರ್ ವೀಲ್ ಡ್ರೈವ್) ಟೆಕ್ನಾಲಜಿಯನ್ನು ಪಡೆದುಕೊಂಡಿರಬಹುದು ಎನ್ನಲಾಗಿದ್ದು, ಗರಿಷ್ಠ ಮೈಲೇಜ್ ಕೂಡ ನೀಡಬಹುದು ಎಂದು ಹೇಳಲಾಗಿದೆ.
ನೂತನ ರೆನಾಲ್ಟ್ ಬೋರಿಯಲ್ (ಡಸ್ಟರ್) ಎಸ್‌ಯುವಿ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ. 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಪನೊರೊಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿರಬಹುದು. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಹಾಗೂ ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಹೊಸ ಕಾರನ್ನು ಮಧ್ಯಮ ವರ್ಗದ ಜನರು ಸುಲಭವಾಗಿ ಖರೀದಿ ಮಾಡಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಇದು ಅತ್ಯಂತ ಕೈಗೆಟುಕುವ ಬೆಲೆಯಲ್ಲಿಯೂ ಮಾರಾಟಕ್ಕೆ ಬರಲಿದ್ದು, ರೂ.10 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ದರವನ್ನು ಪಡೆದುಕೊಂಡಿರುವ ನೀರಿಕ್ಷೆಯಿದೆ. ಈ ಕಾರಿಗೆ ಮಾರುತಿ ಸುಜುಕಿ ಎರ್ಟಿಗಾ ಹಾಗೂ ಟೊಯೊಟಾ ರೂಮಿಯನ್ ಎಂಪಿವಿಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಲಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








