Acer Faster Awards: ಏಸರ್ ಫಾಸ್ಟರ್ ಪ್ರಶಸ್ತಿ.. ನಾಳೆಯಿಂದ ಜ್ಯೂರಿ ಸಭೆ, ಡ್ರೈವ್‌ಸ್ಪಾರ್ಕ್ ಪ್ರತಿನಿಧಿ ಭಾಗಿ!

ದೇಶದ ಆಟೋಮೋಟಿವ್ ಮಾಧ್ಯಮಗಳ ಸಂಘಟನೆಯಾಗಿ 'ಫಾಸ್ಟರ್' ಗುರುತಿಸಿಕೊಂಡಿದೆ. ಜನಪ್ರಿಯ ಕಾರು & ದ್ವಿಚಕ್ರ ವಾಹನಗಳಿಗೆ ನೀಡುವ ಏಸರ್ ಫಾಸ್ಟರ್ ಪ್ರಶಸ್ತಿ (Acer Faster Awards-2025) ಸಮಾರಂಭ ಇನ್ನೂ ಕೆಲವೇ ದಿನಗಳಲ್ಲಿ ನಡೆಯಲಿದೆ. ಈಗಾಗಲೇ, ಈ ಕಾರ್ಯಕ್ರಮಕ್ಕಾಗಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ನಾಳೆಯಿಂದ ಫೆಬ್ರವರಿ 27ರವರಿಗೆ ನಾಲ್ಕನೇ ಆವೃತ್ತಿಯ ಪ್ರಶಸ್ತಿ ಸುತ್ತಿಗೆ ವಾಹನಗಳನ್ನು ಆಯ್ಕೆ ಮಾಡಲು ಚೆನ್ನೈನ ಮದ್ರಾಸ್ ಮೋಟಾರ್ ರೇಸ್ ಟ್ರ್ಯಾಕ್‌ನಲ್ಲಿ ಜ್ಯೂರಿಗಳ ಮಹತ್ವದ ಸಭೆ ನಡೆಯಲಿದೆ.

ಹಿಂದಿನ ಆವೃತ್ತಿಯಂತೆ ಈ ಬಾರಿಯು 2024ರ ಆರಂಭದಿಂದ ಮಾರಾಟಕ್ಕೆ ಬಂದ ಎಲ್ಲ ಹೊಸ ಕಾರುಗಳು ಹಾಗೂ ದ್ವಿಚಕ್ರ ವಾಹನಗಳು ಅರ್ಹತೆ ಸುತ್ತಿನಲ್ಲಿರುತ್ತವೆ. ಜ್ಯೂರಿಗಳು ಆಯ್ಕೆ ಮಾಡಿದ ಒಂದಷ್ಟು ವಾಹನಗಳನ್ನು ಅಂತಿಮ ಸುತ್ತಿಗೆ ನಾಮನಿರ್ದೇಶನವನ್ನು ಮಾಡಲಾಗುತ್ತದೆ. ಅವುಗಳ ಹೆಸರನ್ನು ಕೂಡ ನಾಳೆಯೇ ಬಹಿರಂಗಗೊಳಿಸುವ ಸಾಧ್ಯತೆಯಿದೆ.

Acer Faster Awards -2025 Jury Round Starts Tomorrow Details

2025ರ ಏಸರ್ ಫಾಸ್ಟರ್ ಪ್ರಶಸ್ತಿಯ ಜ್ಯೂರಿ ಸದಸ್ಯರು

ಅಮಿತ್ ಛಂಗನಿ - ಎಡಿಟರ್ (ಮೋಟಾರಾಯ್ಡ್ಸ್)
ಗೌರವ್ ಯಾದವ್ - ಎಡಿಟರ್ (ಗಾಡಿವಾಡಿ)
ನರೇಂದ್ರ ಶರ್ಮಾ - ಎಡಿಟರ್ (ಗೇರ್‌ಫ್ಲಿಕ್)
ಪ್ರಮೀತ್ ಘೋಷ್ - ರಿವ್ಯೂ ಎಡಿಟರ್ (ಡ್ರೈವ್‌ಸ್ಪಾರ್ಕ್)
ರೋಹಿತ್ ಖುರಾನಾ - ಎಡಿಟರ್ (ಕಾರ್‌ಬ್ಲಾಗ್)
ರೋಶನ್ ಜೋಸೆಫ್ - ಎಡಿಟರ್ (ಪೈಲಟ್ ಆನ್ ವೀಲ್ಸ್)

ಫಾಸ್ಟರ್ ಅವಾರ್ಡ್ ಬಗ್ಗೆ.. ಈ ಪ್ರಶಸ್ತಿಯನ್ನು ವಿವಿಧ ವಿಭಾಗಗಳಲ್ಲಿ ನೀಡಲಾಗುತ್ತದೆ. ಪ್ರಮುಖವಾಗಿ ವರ್ಷದ ಕಾರು, ವರ್ಷದ ಬೈಕ್, ವರ್ಷದ ಪ್ರೀಮಿಯಂ ಕಾರು, ವರ್ಷದ ಪ್ರೀಮಿಯಂ ಬೈಕ್ ಹಾಗೂ ಆಟೋಮೋಟಿವ್ ಕ್ಷೇತ್ರದ ಖ್ಯಾತ ನಾಮರು ಎಂಬ ವಿಭಾಗಗಳನ್ನು ಒಳಗೊಂಡಿರಲಿದೆ. ಫಾಸ್ಟರ್ ಸಂಘಟನೆಯಲ್ಲಿ ನಮ್ಮ 'ಡ್ರೈವ್‌ಸ್ಪಾರ್ಕ್' ಕೂಡ ಭಾಗವಾಗಿರುವುದು ಹೆಮ್ಮೆಯ ವಿಚಾರವಾಗಿದೆ.

Acer Faster Awards -2025 Jury Round Starts Tomorrow Details

ವಿಶ್ವದಾದ್ಯಂತ ಹಲವು ಭಾಷೆಗಳ 250 ಮಿಲಿಯನ್‌ಗಿಂತಲೂ ಹೆಚ್ಚು ಮಾಸಿಕ ಓದುಗರನ್ನು ತಲುಪುವ ವಿವಿಧ ಮಾಧ್ಯಮ ಸಂಸ್ಥೆಗಳ ಅನುಭವಿ ಆಟೋಮೋಟಿವ್ ಪತ್ರಕರ್ತರ ತಂಡ, ಈ ಫಾಸ್ಟರ್ ಸಂಘಟನೆಯ ಭಾಗವಾಗಿದ್ದಾರೆ. ಒಟ್ಟಾರೆಯಾಗಿ ಫಾಸ್ಟರ್ ಆಟೋಮೋಟಿವ್ ವಲಯದಲ್ಲಿ ಪ್ರಬಲವಾದ ಮಾಧ್ಯಮ ಸಂಘಟನೆಯಾಗಿದೆ ಎಂದು ಹೇಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, February 25, 2025, 21:55 [IST]
English summary
Acer faster awards 2025 jury round starts tomorrow details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+