ಹೊಸ ಕನ್ವರ್ಟಿಬಲ್ ಮಿನಿ ಕಾರಿಗೆ ಫುಲ್ ಡಿಮ್ಯಾಂಡ್: ಕೇವಲ 24 ಗಂಟೆಗಳಲ್ಲಿ ಎಲ್ಲವು ಮಾರಾಟ

ಭಾರತದಲ್ಲಿ ಡಿಸೆಂಬರ್ 12, 2025 ರಂದು ಬಿಡುಗಡೆಯಾಗಿದ್ದ ಹೊಸ ಮಿನಿ (MINI) ಕನ್ವರ್ಟಿಬಲ್ ಕಾಂಪ್ಯಾಕ್ಟ್ ಕಾರು, ತನ್ನ ಭಾರೀ ಬೇಡಿಕೆಯಿಂದಾಗಿ ಕೇವಲ 24 ಗಂಟೆಗಳಲ್ಲಿ ಮೊದಲ ಬ್ಯಾಚ್ ಸಂಪೂರ್ಣವಾಗಿ ಮಾರಾಟವಾಗಿದೆ. ಈಗ ಹೊಸ ಮಿನಿ ಕನ್ವರ್ಟಿಬಲ್‌ನ ಸಂಭಾವ್ಯ ಗ್ರಾಹಕರು ಮುಂದಿನ ವರ್ಷದ ಆರಂಭದಿಂದ ಪ್ರಾರಂಭವಾಗುವ ಮುಂದಿನ ಹಂತದ ವಿತರಣೆಗಳಿಗಾಗಿ ಈಗ ತಮ್ಮ ಬುಕಿಂಗ್‌ಗಳನ್ನು ಮಾಡಬಹುದು. ಈ ಕಾರನ್ನು ಸಂಪೂರ್ಣವಾಗಿ ನಿರ್ಮಿಸಲಾದ ಘಟಕವಾಗಿ (CBU) ರೂ. 58,50,000 ಎಕ್ಸ್ - ಶೋರೂಂ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.

BMW ಗ್ರೂಪ್ ಇಂಡಿಯಾದ ಸಿಇಒ ಹರ್ದೀಪ್ ಸಿಂಗ್ ಬ್ರಾರ್ ಮಾತನಾಡಿ, "ಇದು ತುಂಬಾ ವೇಗದ ಮಾರಾಟ! ಹೊಸ ಮಿನಿ ಕನ್ವರ್ಟಿಬಲ್ ನಮ್ಮ ಅದ್ಭುತ ವಿನ್ಯಾಸ ಮತ್ತು ನಿಜವಾದ ಮೋಜಿನ, ಅಧಿಕೃತ ಚಾಲನಾ ಅನುಭವದೊಂದಿಗೆ ಎಷ್ಟು ಬಲವಾಗಿ ಪ್ರತಿಧ್ವನಿಸುತ್ತದೆ ಎಂಬುದನ್ನು ಒತ್ತಿಹೇಳುತ್ತದೆ. ಮಿನಿ ಮಾಲೀಕರು ಪ್ರವೃತ್ತಿಗಳನ್ನು ಅನುಸರಿಸುವುದಿಲ್ಲ, ಅವರು ತಮ್ಮದೇ ಆದ ಹಾದಿಯನ್ನು ಹೊಂದಿದ್ದಾರೆ. ಈ ಐಕಾನಿಕ್ ಮಿನಿ ಭಾರತದಾದ್ಯಂತ ಪವರ್ ಸ್ಫೋಟಸುವುದನ್ನು ನೋಡಲು ಕಾತುರದಿಂದಿದ್ದೇವೆ" ಎಂದರು.

all-new-mini-convertible-sold-out-in-just-24-hours

ಹೊಸ MINI ಕನ್ವರ್ಟಿಬಲ್ ವಿಶೇಷತೆಗಳು: ಹೊಸ ಮಿನಿ ಕನ್ವರ್ಟಿಬಲ್‌ನ ಬಾಹ್ಯ ವಿನ್ಯಾಸವು ಕ್ಲಾಸಿಕ್ ಮಿನಿಯಂತೆಯೇ ಇರುತ್ತದೆ. ಕಾರಿನ ಪಾತ್ರವನ್ನು ಒತ್ತಿಹೇಳಲು ಸ್ಟ್ಯಾಂಡರ್ಡ್ LED ಹೆಡ್‌ಲೈಟ್‌ಗಳು, ಸ್ಲೈಡ್ ಸ್ಪೋಕ್ ಡ್ಯುಯಲ್ - ಟೋನ್ ಮತ್ತು ಫ್ಲ್ಯಾಶ್ ಸ್ಪೋಕ್ ಡ್ಯುಯಲ್ - ಟೋನ್ ಅಲಾಯ್‌ಗಳ ಆಯ್ಕೆಯೊಂದಿಗೆ ಏರೋಡೈನಮಿಕ್ ವಿನ್ಯಾಸಕ್ಕಾಗಿ ನಿರ್ಮಿಸಲಾದ 18-ಇಂಚಿನ ವೀಲ್‌ಗಳೊಂದಿಗೆ ಲಭ್ಯವಿದೆ.

18 ಸೆಕೆಂಡುಗಳಲ್ಲಿ ಸಂಪೂರ್ಣವಾಗಿ ತೆರೆಯಬಹುದಾದ ಮತ್ತು 15 ಸೆಕೆಂಡುಗಳಲ್ಲಿ ಮುಚ್ಚಬಹುದಾದ ಉತ್ತಮ - ಗುಣಮಟ್ಟದ ಬ್ಲಾಕ್ ಸಾಫ್ಟ್ ಟಾಪ್, ಎಲ್ಲಾ ಹವಾಮಾನದಲ್ಲೂ ಪ್ರಯಾಣಿಕರನ್ನು ರಕ್ಷಿಸುತ್ತದೆ. ವೇಗವನ್ನು ಲೆಕ್ಕಿಸದೆ 40 ಸೆಂಟಿಮೀಟರ್ ಉದ್ದದವರೆಗೆ ಸನ್‌ರೂಫ್ ಆಗಿ ಕಾರ್ಯನಿರ್ವಹಿಸಲು ಇದನ್ನು ಭಾಗಶಃ ತೆರೆಯಬಹುದು. ಇದರ ಸ್ವಚ್ಛ ಆಕಾರಗಳು ಮತ್ತು ಕನಿಷ್ಠ ಕಂಟ್ರೋಲ್‌ಗಳೊಂದಿಗೆ, ಈ ಕಾರಿನ ಒಳಭಾಗವು ಕ್ಲಾಸಿಕ್ ಮಿನಿ ವಿನ್ಯಾಸವನ್ನು ಹೋಲುತ್ತದೆ.

all-new-mini-convertible-sold-out-in-just-24-hours

ಕಾಕ್‌ಪಿಟ್‌ನಲ್ಲಿನ ಸೆಂಟರ್‌ನಲ್ಲಿ ದುಂಡಗಿನ ಹೈ - ರೆಸಲ್ಯೂಶನ್ OLED ಡಿಸ್ಪ್ಲೇ ನೀಡಲಾಗಿದೆ. ಮಿನಿ ಇಂಟರ್ಯಾಕ್ಷನ್ ಯೂನಿಟ್ ಎಂದು ಕರೆಯಲ್ಪಡುವ ಇದು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸೆಂಟ್ರಲ್ ಡಿಸ್ಪ್ಲೇಯ ಕಾರ್ಯಗಳನ್ನು ಸಂಯೋಜಿಸುತ್ತದೆ. ಮಿನಿ ಇಂಟೆಲಿಜೆಂಟ್ ಪರ್ಸನಲ್ ಅಸಿಸ್ಟೆಂಟ್ (IPA) ಅನ್ನು ವ್ಯಾಪಕ ಶ್ರೇಣಿಯ ಕಾರ್ಯಗಳನ್ನು ನಿಯಂತ್ರಿಸಲು "ಹೇ ಮಿನಿ" ಎಂದು ಹೇಳುವ ಮೂಲಕ ಸಕ್ರಿಯಗೊಳಿಸಬಹುದು.

ನವೀನ ಮಿನಿ ಡಿಜಿಟಲ್ ಕೀ ಪ್ಲಸ್ ಮಿನಿ ಅಪ್ಲಿಕೇಶನ್ ಮೂಲಕ ಸ್ಮಾರ್ಟ್‌ಫೋನ್ ಅನ್ನು ಕಾರ್ ಕೀ ಆಗಿ ಪರಿವರ್ತಿಸುತ್ತದೆ. ಹೆಡ್ - ಅಪ್ ಡಿಸ್ಪ್ಲೇ ಎಲ್ಲಾ ಸಂಬಂಧಿತ ಮಾಹಿತಿಯನ್ನು ನೇರವಾಗಿ ಚಾಲಕನಿಗೆ ತೋರಿಸುತ್ತದೆ. ಹರ್ಮನ್ ಕಾರ್ಡನ್ ಸರೌಂಡ್ ಸೌಂಡ್ ಸಿಸ್ಟಮ್ ಒಂದು ಅದ್ಭುತವಾದ ಶ್ರವಣ ರಸದೌತಣವಾಗಿದ್ದು ಪ್ರಯಾಣಿಕರಿಗೆ ಅತ್ಯದ್ಬುತ ಅನುಭವ ನೀಡುತ್ತದೆ.

all-new-mini-convertible-sold-out-in-just-24-hours

ಹೊಸ ಮಿನಿ ಕನ್ವರ್ಟಿಬಲ್ S ಇತ್ತೀಚಿನ ಮಿನಿ ಟ್ವಿನ್‌ಪವರ್ ಟರ್ಬೊ ತಂತ್ರಜ್ಞಾನದಿಂದ ನಡೆಸಲ್ಪಡುವ ನವೀನ ಮತ್ತು ಪರಿಣಾಮಕಾರಿ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದೆ. ಇದು 5,000 - 6,500 rpm ನಲ್ಲಿ 150 kW / 204 hp ಗರಿಷ್ಠ ಪವರ್ ಉತ್ಪಾದಿಸುತ್ತದೆ ಮತ್ತು 1450-4500 rpm ನಲ್ಲಿ 300 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಾರು ಕೇವಲ 6.9 ಸೆಕೆಂಡುಗಳಲ್ಲಿ 0 - 100 ಕಿಮೀ / ಗಂ ವೇಗವನ್ನು ತಲುಪುತ್ತದೆ. ಗರಿಷ್ಠ ವೇಗವು 240 ಕಿಮೀ ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, December 17, 2025, 18:01 [IST]
English summary
All new mini convertible sold out in just 24 hours
Read more on mini india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+