ಮೊನ್ನೆಯಷ್ಟೆ ಬಿಡುಗಡೆಯಾದ ಹೊಸ ಮಿನಿ ಕನ್ವರ್ಟಿಬಲ್ ಕಾರಿನ ವಿಶೇಷತೆಗಳು!
ಹೊಸ ಮಿನಿ (MINI) ಕನ್ವರ್ಟಿಬಲ್ ಕಾರನ್ನು ಇತ್ತೀಚೆಗಷ್ಟೆ (ಡಿಸೆಂಬರ್ 11, 2025) ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ, ಇದರ ಎಕ್ಸ್-ಶೋರೂಂ ಬೆಲೆ ರೂ.58.50 ಲಕ್ಷವಿದೆ. ಇದು ಸಂಪೂರ್ಣವಾಗಿ ಬಿಲ್ಟ್-ಅಪ್ ಯೂನಿಟ್ (CBU) ಆಗಿ ಲಭ್ಯವಿರಲಿದ್ದು, ಇತ್ತೀಚಿನ ಮಿನಿ ಟ್ವಿನ್‌ಪವರ್ ಟರ್ಬೊ ತಂತ್ರಜ್ಞಾನದಿಂದ ಚಾಲಿತವಾಗ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದೆ. ಹೊಸ ಮಿನಿ ಕನ್ವರ್ಟಿಬಲ್‌ನ ಬಾಹ್ಯ ವಿನ್ಯಾಸವು ಕ್ಲಾಸಿಕ್ ಮಿನಿನಂತೆಯೇ ಇರುತ್ತದೆ. ಈ ಕಾರಿನ ಬಗ್ಗೆ ಪ್ರಮುಖ ವಿವರಗಳು ಇಲ್ಲಿವೆ.
ಇಂಟೀರಿಯರ್ ಒಳಭಾಗದಲ್ಲೂ ಕ್ಲಾಸಿಕ್ ಮಿನಿಯ ವಿನ್ಯಾಸವನ್ನೇ ನೆನಪಿಸುತ್ತದೆ. ಹರ್ಮನ್ ಕಾರ್ಡನ್ ಸರೌಂಡ್ ಸೌಂಡ್ ಸಿಸ್ಟಮ್, ಆಪಲ್ ಕಾರ್‌ಪ್ಲೇ / ಆಂಡ್ರಾಯ್ಡ್ ಆಟೋ, ಟೆಲಿಸರ್ವಿಸಸ್, ರಿಮೋಟ್ ಸರ್ವೀಸ್‌ಗಳು, ರಿಮೋಟ್ ಸಾಫ್ಟ್‌ವೇರ್ ಅಪ್‌ಗ್ರೇಡ್‌ಗಳು, ಇನ್ - ಕಾರ್ ಕಲ್ಐಮೆಟ್ ಮತ್ತು ಇಂಟೆಲಿಜೆಂಟ್ ಎಮರ್ಜೆನ್ಸಿ ಕಾಲ್ ಸೇರಿವೆ. ಕಾಕ್‌ಪಿಟ್‌ನಲ್ಲಿ ದುಂಡಗಿನ ಹೈ-ರೆಸಲ್ಯೂಷನ್ OLED ಡಿಸ್ಪ್ಲೇ ನೀಡಲಾಗಿದೆ.

MINI ಇಂಟರಾಕ್ಷನ್ ಯೂನಿಟ್ ಎಂದು ಕರೆಯಲ್ಪಡುವ ಇದು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸೆಂಟ್ರಲ್ ಡಿಸ್ಪ್ಲೇಯ ಕಾರ್ಯಗಳನ್ನು ಸಂಯೋಜಿಸುತ್ತದೆ. ಇದರ ಇಂಟರ್ಫೇಸ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳಿಂದ ಪ್ರೇರಿತವಾಗಿದೆ. ನ್ಯಾವಿಗೇಷನ್, ಟೆಲಿಫೋನಿ, ಮನರಂಜನೆ ಮತ್ತು ಇತರವುಗಳಂತಹ ವ್ಯಾಪಕ ಶ್ರೇಣಿಯ ಕಾರ್ಯಗಳನ್ನು ನಿಯಂತ್ರಿಸಲು "ಹೇ MINI" ಎಂದು ಹೇಳುವ ಮೂಲಕ MINI ಇಂಟೆಲಿಜೆಂಟ್ ಪರ್ಸನಲ್ ಅಸಿಸ್ಟೆಂಟ್ (IPA) ಅನ್ನು ಸಕ್ರಿಯಗೊಳಿಸಬಹುದು.
ಹೊಸ MINI ಕನ್ವರ್ಟಿಬಲ್ S ಇತ್ತೀಚಿನ MINI ಟ್ವಿನ್‌ಪವರ್ ಟರ್ಬೊ ತಂತ್ರಜ್ಞಾನದಿಂದ ಚಾಲಿತವಾಗ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದೆ. ಕಾರು ಕೇವಲ 6.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪುತ್ತದೆ. ಟಾಪ್ ಸ್ಪೀಡ್ 240 ಕಿ.ಮೀ ಇದೆ. 7-ಸ್ಪೀಡ್ ಡಬಲ್ ಕ್ಲಚ್ ಸ್ಟೆಪ್ಟ್ರಾನಿಕ್ ಸ್ಪೋರ್ಟ್ ಟ್ರಾನ್ಸ್‌ಮಿಷನ್ ಒದಗಿಸಲಾಗಿದೆ. ಈ ಎಂಜಿನ್ 5,000 - 6,500 rpm ನಲ್ಲಿ 150 kW/204 hp ಗರಿಷ್ಠ ಪವರ್ ಉತ್ಪಾದಿಸುತ್ತದೆ. 1450-4500 rpm ನಲ್ಲಿ 300 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಪ್ರಮಾಣಿತ ಸುರಕ್ಷತೆಯ ಭಾಗವಾಗಿ 3-ಪಾಯಿಂಟ್ ಸೀಟ್ ಬೆಲ್ಟ್‌ಗಳು, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಕ್ರ್ಯಾಶ್ ಸೆನ್ಸರ್, ಏರ್‌ಬ್ಯಾಗ್‌ಗಳು ಮತ್ತು ಸೈಡ್ ಕರ್ಟನ್ ಏರ್‌ಬ್ಯಾಗ್‌ಗಳು, ಬ್ರೇಕ್ ಅಸಿಸ್ಟ್, ರಿಯರ್ ವ್ಯೂ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಇಂಡಿಕೇಟರ್‌ನೊಂದಿಗೆ ಟ್ಯೂಬ್‌ಲೆಸ್ ಟೈರ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್‌ಗಳನ್ನು ಒಳಗೊಂಡಿವೆ.
ಹೆಡ್-ಅಪ್ ಡಿಸ್ಪ್ಲೇ ಎಲ್ಲಾ ಸಂಬಂಧಿತ ಮಾಹಿತಿಯನ್ನು ನೇರವಾಗಿ ಚಾಲಕನ ದೃಷ್ಟಿಯಲ್ಲಿ ತೋರಿಸುತ್ತದೆ. ನವೀನ MINI ಡಿಜಿಟಲ್ ಕೀ ಪ್ಲಸ್ MINI ಅಪ್ಲಿಕೇಶನ್ ಮೂಲಕ ಸ್ಮಾರ್ಟ್‌ಫೋನ್ ಅನ್ನು ಕಾರ್ ಕೀ ಆಗಿ ಪರಿವರ್ತಿಸುತ್ತದೆ. ಕಸ್ಟಮೈಸ್ಡ್ ವಾಹನ ಸೆಟ್ಟಿಂಗ್‌ಗಳ ಜೊತೆಗೆ ವಿಭಿನ್ನ ಬಳಕೆದಾರರಿಗೆ ವರ್ಗಾಯಿಸಬಹುದು. ಬ್ರಿಟಿಷ್ ರೇಸಿಂಗ್ ಗ್ರೀನ್, ಚಿಲ್ಲಿ ರೆಡ್, ಸನ್ನಿ ಸೈಡ್ ಯೆಲ್ಲೋ ಮತ್ತು ಓಷನ್ ವೇವ್ ಗ್ರೀನ್ ಎಂಬ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.

ಡಿಸೈನ್ ವಿಷಯಕ್ಕೆ ಬಂದರೆ ಸ್ಟ್ಯಾಂಡರ್ಡ್ LED ಹೆಡ್‌ಲೈಟ್‌ಗಳು, ಸಣ್ಣ ಓವರ್‌ಹ್ಯಾಂಗ್‌ಗಳು, 18-ಇಂಚಿನ ವೀಲ್‌ಗಳೊಂದಿಗೆ ಸ್ಲೈಡ್ ಸ್ಪೋಕ್ 2-ಟೋನ್ ಮತ್ತು ಫ್ಲ್ಯಾಶ್ ಸ್ಪೋಕ್ 2-ಟೋನ್ ಅಲಾಯ್‌ಗಳ ಆಯ್ಕೆಯೊಂದಿಗೆ ಲಭ್ಯವಿದೆ. ಮುಂಭಾಗವು ಅದರ ಐಕಾನಿಕ್ ರೌಂಡ್ ಹೆಡ್‌ಲೈಟ್‌ಗಳು ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್‌ನೊಂದಿಗೆ ಬ್ರ್ಯಾಂಡ್‌ನ ವಿಶಿಷ್ಟ ಲೋಗೋ ಹೊಂದಿದೆ.
ಉತ್ತಮ ಗುಣಮಟ್ಟದ ಬ್ಲಾಕ್ ಬಣ್ಣದ ಸಾಫ್ಟ್ ಟಾಪ್ ಎಲೆಕ್ಟ್ರಿಕಲ್ಲಿ ಮಡಿಚಿಕೊಳ್ಳಬಲ್ಲದು. ಗಂಟೆಗೆ 30 ಕಿ.ಮೀ ವೇಗದಲ್ಲಿಯೂ ಸಹ 18 ಸೆಕೆಂಡುಗಳಲ್ಲಿ ಸಂಪೂರ್ಣವಾಗಿ ತೆರೆಯಬಹುದು. ವೇಗವನ್ನು ಲೆಕ್ಕಿಸದೆ 40 ಸೆಂಟಿಮೀಟರ್ ಉದ್ದದವರೆಗೆ ಸನ್‌ರೂಫ್ ಆಗಿ ಕಾರ್ಯನಿರ್ವಹಿಸಲು ಇದನ್ನು ಭಾಗಶಃ ತೆರೆಯಬಹುದು. ಮೇಲ್ಭಾಗವು ತೆರೆದಾಗ, MINI ಕನ್ವರ್ಟಿಬಲ್ 160 ಲೀಟರ್‌ಗಳ ಲಗೇಜ್ ಕಂಪಾರ್ಟ್ಮೆಂಟ್ ಪರಿಮಾಣವನ್ನು ಹೊಂದಿದೆ. ಮುಚ್ಚಿದಾಗ, ಅದು 215 ಲೀಟರ್‌ಗಳಿಗೆ ವಿಸ್ತರಿಸುತ್ತದೆ.


Click it and Unblock the Notifications








