ಶೀಘ್ರದಲ್ಲೆ ಹೊಸ ಫೋಕ್ಸ್‌ವ್ಯಾಗನ್ ಟಿಗುವಾನ್ R-ಲೈನ್ ಬಿಡುಗಡೆ: ವಿಶೇಷತೆಗಳೇನು?
ಭಾರತದಲ್ಲಿ ಹೊಸ ಫೋಕ್ಸ್‌ವ್ಯಾಗನ್ ಟಿಗುವಾನ್‌ನ (Volkswagen Tiguan) ಸ್ಪೋರ್ಟಿ ಎಡಿಷನ್ ಆಗಿರುವ ''R'' ಲೈನ್ ಆವೃತ್ತಿಯನ್ನು ಕಂಪನಿ ಪರಿಚಯಿಸಲು ಸಜ್ಜಾಗಿದೆ. ಶೀಘ್ರದಲ್ಲೇ ಪರಿಚಯಿಸಲಿರುವ ಈ ಪ್ರಮುಖ ಎಸ್‌ಯುವಿ ಗಮನಾರ್ಹವಾದ 'ಆರ್' ಥೀಮ್‌ನ ಡಿಸೈನ್ ಮತ್ತು ಪ್ರೀಮಿಯಂ ಸೌಕರ್ಯದೊಂದಿಗೆ ಬರುತ್ತದೆ. ಅಲ್ಲದೇ ಹೊಸ ಟಿಗುವಾನ್ ಆರ್ - ಲೈನ್ ಸಂಪೂರ್ಣವಾಗಿ ಹೊಸ ವಿನ್ಯಾಸ, ಗಮನಾರ್ಹ ವೈಶಿಷ್ಟ್ಯಗಳು, ಎಸ್‌ಯುವಿಯ ಮುಂಭಾಗವು ಎಲ್ಇಡಿ ಪ್ಲಸ್ ಹೆಡ್‌ಲೈಟ್‌ಗಳು ಮತ್ತು ಗಾಜಿನಿಂದ ಆವೃತವಾದ ಪವರ್‌ಫುಲ್ ನೋಟವನ್ನು ಹೊಂದಿದೆ.
ರೇಡಿಯೇಟರ್ ಗ್ರಿಲ್ ಅನ್ನು ಮುಂಭಾಗದ ಬಂಪರ್‌ನ ಹೊರ ಬದಿಗಳ ಕಡೆಗೆ ವಿನ್ಯಾಸಗೊಳಿಸಲಾಗಿದೆ. ಇದು ಸ್ಮಾರ್ಟ್ ಮತ್ತು ಪ್ರೀಮಿಯಂ ಆಕರ್ಷಣೆಯನ್ನು ನೀಡುತ್ತದೆ. ಹೊಸ ಟಿಗುವಾನ್ ಆರ್-ಲೈನ್ ಡೈಮಂಡ್-ಕಟ್ ಮೇಲ್ಮೈಗಳೊಂದಿಗೆ 'ಆರ್-ಲೈನ್' ಪ್ರೇರಿತ 19-ಇಂಚಿನ "ಕೋವೆಂಟ್ರಿ" ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಹೊಸ ಎಲ್ಇಡಿ ಸ್ಟ್ರಿಪ್ ಸೇರಿದಂತೆ ವಿಶಿಷ್ಟ ಹಿಂಭಾಗದ ವಿನ್ಯಾಸಕ್ಕೆ ಒತ್ತು ನೀಡುತ್ತದೆ.

ಇಂಟೀರಿಯರ್: ಹೊಸ ಟಿಗುವಾನ್ ಆರ್-ಲೈನ್‌ನ ಒಳಭಾಗವು ಪ್ರೀಮಿಯಂ ಡಿಸೈನ್ ಹೊಂದಿದೆ, ಇವುಗಳನ್ನು ಪ್ಲಶ್ ಮತ್ತು ಫ್ಯೂಚರಿಸ್ಟಿಕ್ ಆಕರ್ಷಣೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಸಂಪೂರ್ಣವಾಗಿ ಹೊಸ ಪರಿಕಲ್ಪನೆಯಿಂದ ಪ್ರೇರಿತವಾದ ಈ ವಿನ್ಯಾಸವು ಅದರ ಉತ್ತಮ ಗುಣಮಟ್ಟದ ವಸ್ತು ಅನ್ವಯಿಕೆ ಮತ್ತು ಕರಕುಶಲತೆಯೊಂದಿಗೆ ಎದ್ದು ಕಾಣುತ್ತದೆ.
ಇದರ ಜೊತೆಗೆ, ಹೊಸ ಕಾಕ್‌ಪಿಟ್ ವಿನ್ಯಾಸವು ಅರ್ಥಗರ್ಭಿತ ಸಂಯೋಜಿತವಾಗಿದೆ. ಎಸ್‌ಯುವಿಯ ಒಳಾಂಗಣದಲ್ಲಿ ಮುಂಭಾಗದ ಸ್ಪೋರ್ಟಿ ಆಸನಗಳಲ್ಲಿ 'ಆರ್-ಲೈನ್' ಡಿಸೈನ್ ಬ್ಯಾಡ್ಜ್‌ನೊಂದಿಗೆ ಅಲಂಕರಿಸಲ್ಪಟ್ಟಿವೆ. ಜೊತೆಗೆ ಡ್ಯಾಶ್‌ಬೋರ್ಡ್‌ನಲ್ಲಿ ಪ್ರಕಾಶಿತ 'ಆರ್' ಲೋಗೋವನ್ನು ಸಹ ಒಳಗೊಂಡಿದೆ. ವಿಶಾಲವಾದ ಮತ್ತು ಪ್ರೀಮಿಯಂ ಒಳಾಂಗಣವನ್ನು ಡ್ಯಾಶ್‌ಬೋರ್ಡ್ ಮತ್ತು ಡೋರ್ ಟ್ರಿಮ್‌ಗಳಿಗಾಗಿ 30 ಬಣ್ಣಗಳಲ್ಲಿ ಕಸ್ಟಮೈಸ್ ಮಾಡಬಹುದಾದ ಆಂಬಿಯೆಂಟ್ ಲೈಟಿಂಗ್‌ನೊಂದಿಗೆ ವರ್ಧಿಸಲಾಗಿದೆ.

ಓವರ್ ಹೆಡ್, ವಿಸ್ತಾರವಾದ ಪನೋರಮಿಕ್ ಸನ್‌ರೂಫ್' ಕ್ಯಾಬಿನ್ ಅನ್ನು ಹಗಲಿನಲ್ಲಿ ನೈಸರ್ಗಿಕ ಬೆಳಕಿನಿಂದ ತುಂಬಿಸುತ್ತದೆ. ಹೊಸ ಟಿಗುವಾನ್ ಆರ್-ಲೈನ್ ಹೆಡ್‌ಲ್ಯಾಂಪ್‌ಗಳ ನಡುವೆ ಪ್ರಕಾಶಿತ ಮೋಲ್ಡಿಂಗ್, ಹಿಂಭಾಗದ ಸಂಯೋಜಿತ ಲ್ಯಾಂಪ್‌ಗಳು ಮತ್ತು ಪ್ರಕಾಶಿತ ಡೋರ್ ಹ್ಯಾಂಡಲ್ ಹಿನ್ಸರಿತಗಳು, ಬ್ರಷ್ಡ್ ಸ್ಟೇನ್‌ಲೆಸ್ ಸ್ಟೀಲ್‌ನಲ್ಲಿ ಪೆಡಲ್‌ಗಳು, ಸರೌಂಡ್ ಲೈಟಿಂಗ್, ಸ್ಪೋರ್ಟಿ ಬಂಪರ್‌ಗಳು, ಕ್ರೋಮ್ ಟ್ರಿಮ್‌ನೊಂದಿಗೆ ಏರ್-ಇಂಟ್ಯಾಕ್ಟ್, ಸಿಲ್ವರ್-ಆನೊಡೈಸ್ಡ್ ರೂಫ್ ರೈಲ್‌ಗಳನ್ನು ಒಳಗೊಂಡಿದೆ.
ಕಂಫರ್ಟ್‌ಗಿಂತ ಆಚೆಗೆ ನಿರ್ಮಿಸಲಾದ ಹೊಸ ಟಿಗುವಾನ್ ಆರ್-ಲೈನ್ ಹೆಚ್ಚು ಸೌಕರ್ಯವನ್ನು ನೀಡುತ್ತದೆ. ಪ್ರತಿ ಡ್ರೈವ್‌ನೊಂದಿಗೆ ಅತ್ಯುತ್ತಮ ಅನುಭವಗಳನ್ನು ಸೃಷ್ಟಿಸುತ್ತದೆ. ಕಸ್ಟಮೈಸ್ ಮಾಡಬಹುದಾದ ಒಳಾಂಗಣವು ಆಕರ್ಷಕತೆಯನ್ನು ಹೆಚ್ಚಿಸುವ ಮೂಲಕ ನಿಮ್ಮ ಮನಸ್ಸಿಗೆ ಹೊಂದಿಕೊಳ್ಳುವ ಪ್ರಶಾಂತ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಮಸಾಜ್ ಕಾರ್ಯ ಮತ್ತು ಹೊಂದಾಣಿಕೆ ಮಾಡಬಹುದಾದ ಸೊಂಟದ ಬೆಂಬಲದೊಂದಿಗೆ ಆಸನಗಳಂತಹ ವಿಭಾಗ-ಮುಂಚೂಣಿಯ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿರುವ ಹೊಸ ಟಿಗುವಾನ್ ಆರ್-ಲೈನ್, ಕಸ್ಟಮೈಸ್ ಸೌಕರ್ಯವನ್ನು ನೀಡುತ್ತದೆ. ಏರ್ ಕೇರ್ ಕ್ಲೈಮ್ಯಾಟ್ರಾನಿಕ್ (3-ವಲಯ), ಪಾರ್ಕ್ ದೂರ ನಿಯಂತ್ರಣದೊಂದಿಗೆ ಪಾರ್ಕ್ ಅಸಿಸ್ಟ್ ಪ್ಲಸ್ ಮತ್ತು 2 ಸ್ಮಾರ್ಟ್ ಫೋನ್‌ಗಳಿಗೆ ಇಂಡಕ್ಟಿವ್ ಚಾರ್ಜಿಂಗ್‌ನಂತಹ ವೈಶಿಷ್ಟ್ಯಗಳು ಅನುಕೂಲತೆಯನ್ನು ಹೆಚ್ಚಿಸುತ್ತವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ..


Click it and Unblock the Notifications








