Auto Expo 2025: ಅಶೋಕ್‌ ಲೇಲ್ಯಾಂಡ್‌ಗೆ ಸಾಥ್ ಕೊಟ್ಟ HDK: ಬಡವರ ಬಂಡಿ ಅನಾವರಣ!

ಭಾರತದ ಪ್ರಮುಖ ವಾಣಿಜ್ಯ ವಾಹನ ತಯಾರಕ ಕಂಪನಿಯಾಗಿರುವ ಅಶೋಕ್ ಲೇಲ್ಯಾಂಡ್ (Ashok Leyland), ದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ (Auto Expo 2025) ದಲ್ಲಿ ಇಂದು 'ಸಾಥಿ' (SAATHI) - ಪ್ರೀಮಿಯಂ ಎಂಟ್ರಿ-ಲೆವೆಲ್ ಲೈಟ್ ಕಮರ್ಷಿಯಲ್ ವೆಹಿಕಲ್ ಅನ್ನು ಅನಾವರಣಗೊಳಿಸಿದೆ. ಕೇಂದ್ರ ಬೃಹತ್ ಕೈಗಾರಿಕೆ ಸಚಿವರಾದ ಎಚ್‌.ಡಿ ಕುಮಾರಸ್ವಾಮಿಯವರ ಸಮ್ಮುಖದಲ್ಲಿ 'ಸಾಥಿ'ಯನ್ನು ಅನಾವರಣಗೊಳಿಸಲಾಯಿತು. ಈ ಹೊಸ ವಾಹನವನ್ನು ಸುಧಾರಿತ ಎಲ್‌ಎನ್‌ಟಿ ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಈ ಹೊಸ ವಾಹನವು ಅತ್ಯುತ್ತಮ ದರ್ಜೆಯ 45HP ಪವರ್ ಹಾಗೂ 110Nm ಟಾರ್ಕ್ ಹೊರಹಾಕುತ್ತದೆ. ತನ್ನ ವಿಭಾಗದ ಇತರ ವಾಹನಗಳೊಂದಿಗೆ ಹೋಲಿಸಿದರೆ ಶೇ24 ರಷ್ಟು ದೊಡ್ಡ ಲೋಡಿಂಗ್ ಪ್ರದೇಶವನ್ನು ಹೊಂದಿದೆ. ಇದರ ಸಾಟಿಯಿಲ್ಲದ ಪೇಲೋಡ್ ಸಾಮರ್ಥ್ಯವು 1,120 ಕೆ.ಜಿ ಹೊಂದಿದೆ. ಅತ್ಯುತ್ತಮ ಮೈಲೇಜ್ ಮತ್ತು ದೊಡ್ಡ ಟೈರ್‌ಗಳು ಅಸಾಧಾರಣ ಪರ್ಫಾಮೆನ್ಸ್ ನಿಡುತ್ತವೆ ಎಂದು ಕಂಪನಿ ಹೇಳಿಕೊಂಡಿದೆ.

auto-expo-2025-ashok-leyland-unveils-saathi-at-bharat-mobility-global-expo

ಕ್ರಾಂತಿಕಾರಿ ಎಲ್‌ಎನ್‌ಟಿ ತಂತ್ರಜ್ಞಾನವು ಆಡ್‌ಬ್ಲೂ ಅಗತ್ಯವನ್ನು ನಿವಾರಿಸಿ ಕಾರ್ಯಾಚರಣೆಯ ತೊಂದರೆಗಳನ್ನು ಕಡಿಮೆ ಮಾಡುತ್ತದೆ. 5 ವರ್ಷ ಅಥವಾ 2 ಲಕ್ಷ ಕಿ.ಮೀಗಳ ವಾರಂಟಿ ಸೇರಿದಂತೆ ಅತ್ಯುತ್ತಮ ಸವಾರಿ ಸೌಕರ್ಯದೊಂದಿಗೆ ಸಾಥಿಯನ್ನು ಮಾರಾಟಕ್ಕೆ ತರಲಾಗುತ್ತುದೆ. SAATHI FSD ರೂಪಾಂತರಕ್ಕೆ ಸ್ಪರ್ಧಾತ್ಮಕವಾಗಿ ರೂ. 6,49,999/- ಬೆಲೆ ನಿಗದಿಪಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಹೊಸ ಉತ್ಪನ್ನಗಳ ಪ್ರದರ್ಶನ: ಎಕ್ಸ್‌ಪೋದಲ್ಲಿ ಕೇವಲ ಸಾಥಿ ಮಾತ್ರವಲ್ಲದೆ ಅಶೋಕ್ ಲೇಲ್ಯಾಂಡ್ ಭಾರತದ ಮೊದಲ ಮಲ್ಟಿ-ಆಕ್ಸಲ್, ಮುಂಭಾಗದ ಎಂಜಿನ್‌ನೊಂದಿಗೆ ಬರುವ 15-ಮೀಟರ್ ಪ್ರೀಮಿಯಂ ಬಸ್ 'GARUD 15' ಅನ್ನು ಸಹ ಪ್ರಸ್ತುತಪಡಿಸಿತ್ತು. ಭಾರತದ ವೈವಿಧ್ಯಮಯ ರಸ್ತೆ ಪರಿಸ್ಥಿತಿಗಳಿಗಾಗಿ ದೂರದ ಅಂತರ - ನಗರ ಪ್ರಯಾಣಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬಸ್‌ ಇದಾಗಿದೆ.

ಈ ನವೀನ ಬಸ್ ಸಾಮರ್ಥ್ಯ 42 ಸ್ಲೀಪರ್ ಬರ್ತ್‌ಗಳು, ವಿಶಾಲವಾದ ಲಗೇಜ್ ವಿಭಾಗ ಮತ್ತು ಅದರ ವರ್ಗದಲ್ಲಿ 22,500 ಕೆ.ಜಿಯಲ್ಲಿ ಅತ್ಯಧಿಕ GVW ಅನ್ನು ಒದಗಿಸುತ್ತದೆ. ಹೀಗಾಗಿ ಬಸ್ ನಿರ್ವಾಹಕರಿಗೆ ಪ್ರತಿ ಟ್ರಿಪ್‌ಗೆ ಗರಿಷ್ಠ ಆದಾಯವನ್ನು ನೀಡುತ್ತದೆ. 3-ವೇ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ADAS, DMS ನಂತಹ ಇತರ ಸುಧಾರಿತ ವೈಶಿಷ್ಟ್ಯಗಳು ಇದರಲ್ಲಿವೆ ಎಂದು ಕಂಪನಿ ಹೇಳಿಕೊಂಡಿದೆ.

ಟರ್ಮಿನಲ್ ಟ್ರ್ಯಾಕ್ಟರ್: ಎಲೆಕ್ಟ್ರಿಕ್ ಟ್ರಕ್‌ಗಳನ್ನು ನಿರ್ಮಿಸಿದ ಮೊದಲಿಗರಲ್ಲಿ ಒಬ್ಬರಾಗಲು ನಿರ್ಧರಿಸಿರುವ ಕಂಪನಿಯು, ದೇಶದ ಮೊದಲ ಎಲೆಕ್ಟ್ರಿಕ್ ಪೋರ್ಟ್ ಟರ್ಮಿನಲ್ ಟ್ರ್ಯಾಕ್ಟರ್ ಅನ್ನು ಪ್ರದರ್ಶನದಲ್ಲಿಟ್ಟಿತ್ತು. ಈ ವಿಭಾಗವು ಬಂದರು ಸರಕು ಸಾಗಣೆ ನಿರ್ವಾಹಕರಿಗೆ ಅತ್ಯುತ್ತಮವಾದ TCO ಮತ್ತು ಬಂದರು ಮಾಲೀಕರು ಸುಸ್ಥಿರ ಪರಿಹಾರಗಳಿಗೆ ಬದಲಾಯಿಸುವ ಸಾಮರ್ಥ್ಯವನ್ನು ಒದಗಿಸುವ ಎಲೆಕ್ಟ್ರಿಕ್ ಪವರ್‌ಟ್ರೇನ್ ಹೊಂದಿದೆ.

ಅಶೋಕ್ ಲೇಲ್ಯಾಂಡ್‌ನ ಹೊಸ eTIRAN ಟರ್ಮಿನಲ್ ಟ್ರ್ಯಾಕ್ಟರ್, 180-350 ಕಿಲೋಮೀಟರ್‌ಗಳ ಕಸ್ಟಮೈಸ್ ಮಾಡಬಹುದಾದ ಬ್ಯಾಟರಿ ರೇಂಜ್ ಹೊಂದಿದೆ. 360-ಡಿಗ್ರಿ ನೋಟ ಮತ್ತು ಸುಲಭ ಪ್ರವೇಶ-ಹೊರಹೋಗುವಿಕೆಯೊಂದಿಗೆ ನಿರ್ಮಿಸಲಾಗಿದ್ದು, ಹವಾನಿಯಂತ್ರಿತ ಕ್ಯಾಬಿನ್‌ನೊಂದಿಗೆ ಸಜ್ಜುಗೊಂಡಿದೆ. ಸುರಕ್ಷತಾ ADAS ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್‌ನಂತಹ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಸಜ್ಜಾಗಿದೆ ಎಂದು ಕಂಪನಿ ಹೇಳಿದೆ.

ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರ ಎರಡನೇ ಆವೃತ್ತಿಯು ಜನವರಿ 17 ರಿಂದ ಜನವರಿ 22 ರವರೆಗೆ ನವದೆಹಲಿಯಲ್ಲಿ ನಡೆಯುತ್ತಿದೆ. ಸ್ಟ್ಯಾಂಡ್ ಸಂಖ್ಯೆ H6 - 10, ಹಾಲ್ ಸಂಖ್ಯೆ 06 ರಲ್ಲಿ ಅಶೋಕ್ ಲೇಲ್ಯಾಂಡ್‌ಗೆ ಭೇಟಿ ನೀಡಿ ಕಂಪನಿಯ ಎಲ್ಲಾ ಉತ್ಪನ್ನಗಳನ್ನು ಪರಿಶೀಲಿಸಲು ಸಾರ್ವಜನಿಕರಿಗೆ ಕಂಪನಿ ಅವಕಾಶ ಕಲ್ಪಿಸಿದೆ.

More from DriveSpark

Article Published On: Friday, January 17, 2025, 19:20 [IST]
English summary
Auto expo 2025 ashok leyland unveils saathi at bharat mobility global expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+