Creta EV: ಹ್ಯುಂಡೈ ಕ್ರೆಟಾ ತಮ್ಮನಾಗಿ ಬಿಡುಗಡೆಯಾದ ಹೊಸ ಎಲೆಕ್ಟ್ರಿಕ್ ಎಸ್‌ಯುವಿ ವಿಶೇಷತೆಗಳು!
ಬಹುನಿರೀಕ್ಷಿತ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು (hyundai creta ev) ಕೊನೆಗೂ ಆಟೋ ಎಕ್ಸ್‌ಪೋ 2025 (Auto Expo 2025) ರಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹ್ಯುಂಡೈ ಕ್ರೆಟಾ ಇವಿ ಸಾಕಷ್ಟು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆಯಾದರೂ, ಕೆಲವು ಸಣ್ಣ ವಿನ್ಯಾಸ ಬದಲಾವಣೆಗಳನ್ನು ಮಾಡಲಾಗಿದೆ. ಇಂಧನ ಚಾಲಿತ ಕ್ರೆಟಾ ಕಾರಿನ ಅದೇ ಪ್ಲಾಟ್ ಫಾರ್ಮ್‌ನಲ್ಲಿ ನಿರ್ಮಾಣವಾಗಿದ್ದು, ತನ್ನ ವಿಭಾಗದಲ್ಲಿ ಮಾರುತಿ ಇ ವಿಟಾರಾ ಮತ್ತು ಟಾಟಾ ಕರ್ವ್ ಇವಿಗೆ ಪೈಪೋಟಿ ನೀಡುತ್ತದೆ.
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿನ ಬಾಹ್ಯಾ ವಿನ್ಯಾಸ ಥೇಟ್ ಇಂಧನ ಚಾಲಿತ ಕ್ರೆಟಾ ಕಾರಿನಂತೆ ಕಾಣುತ್ತದೆ. ಇಂಟೀರಿಯರ್‌ನಲ್ಲಿ ಸ್ವಿಚ್ ಗೇರ್, ಡ್ಯಾಶ್ ಬೋರ್ಡ್ ಸೇರಿದಂತೆ ಕೆಲವು ಭಾಗಗಳನ್ನು ಸಾಮಾನ್ಯ ಕ್ರೆಟಾದಂತೆಯೇ ಇದರಲ್ಲೂ ಬಳಸಲಾಗಿದೆ. ಹೊಸ ಹ್ಯುಂಡೈ ಕ್ರೆಟಾ ಇವಿ ಕಾರು ಭಾರತದ ಎಕ್ಸ್ ಶೋರೂಂ ದರದಂತೆ ರೂ. 17.99 ಲಕ್ಷಕ್ಕೆ ಬಿಡುಗಡೆಯಾಗಿದೆ.

ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರನ್ನು 51.4kWh ಮತ್ತು 42KWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. 42KWh ಮತ್ತು 51.4kWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳಲ್ಲಿ ಚಿಕ್ಕ ಬ್ಯಾಟರಿ ಪ್ಯಾಕ್ 390 ಕಿ.ಮೀ ರೇಂಜ್ ಹಾಗೂ ದೊಡ್ಡದು MIDC ಪರೀಕ್ಷೆಯಲ್ಲಿ 473 ಕಿ.ಮೀ ರೇಂಜ್ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.
ಇನ್ನು ಈ ಎರಡೂ ಬ್ಯಾಟರಿಗಳಿಗೆ ಮತ್ತೆ ವಿವಿಧ ವೇರಿಯೆಂಟ್‌ಗಳನ್ನು ಪರಿಚಯಿಸಲಾಗಿದ್ದು, 51.4kWh ಬ್ಯಾಟರಿ ಪ್ಯಾಕ್ ಸ್ಮಾರ್ಟ್(ಒ) ಮತ್ತು ಎಕ್ಸ್‌ಲೆನ್ಸ್ ಎಂಬ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಹಾಗೆಯೇ 42KWh ಬ್ಯಾಟರಿ ಪ್ಯಾಕ್ ಎಕ್ಸಿಕ್ಯೂಟಿವ್, ಸ್ಮಾರ್ಟ್, ಸ್ಮಾರ್ಟ್(ಒ), ಪ್ರೀಮಿಯಂ ಎಂಬ ನಾಲ್ಕು ವೇರಿಯೆಂಟ್‌ಗಳನ್ನು ಹೊಂದಿದೆ.

ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿನ ಬ್ಯಾಟರಿ ಪ್ಯಾಕ್‌ಗಳನ್ನು ಮುಂಭಾಗದ ಆಕ್ಸಲ್‌ಗೆ ಲಿಂಕ್ ಮಾಡಲಾದಸಿಂಗಲ್ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲಾಗಿದೆ. ಇದು 133bh (42kWh ಬ್ಯಾಟರಿ ಪ್ಯಾಕ್) ಪವರ್ ಮತ್ತು ದೊಡ್ಡ 51.2kWh ಬ್ಯಾಟರಿ ಪ್ಯಾಕ್‌ನೊಂದಿಗೆ 169bh ಪವರ್ ಅನ್ನು ಉತ್ಪಾದಿಸುತ್ತದೆ. ಬೆಲೆಗಳು ಭಾರತದ ಎಕ್ಸ್ ಶೋರೂಂ ದರದಂತೆ ರೂ. 17.99 ಲಕ್ಷದಿಂದ ಆರಂಭವಾಗಿ 23.49 ಲಕ್ಷ ರೂ.ವರೆಗೆ ಇದೆ.
ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿನ ಇಂಟೀರಿಯರ್‌ನಲ್ಲಿ ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಸೌಂಡ್ ಸಿಸ್ಟಮ್‌ಗಾಗಿ ಕಂಟ್ರೋಲ್‌ಗಳು, USB A ಮತ್ತು C ಪೋರ್ಟ್‌ಗಳು, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಟ್ವಿನ್ 10.25 ಇಂಚಿನ ಟಸ್ ಸ್ಕ್ರೀನ್‌ಗಳನ್ನು ನೀಡಲಾಗಿದ್ದು, ಒಂದು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಮತ್ತೊಂದು ಇನ್ಫೋಟೈನ್‌ಮೆಂಟ್ ಸೆಟಪ್‌ಗಾಗಿ ಟಚ್‌ಸ್ಕ್ರೀನ್ ನೀಡಲಾಗಿದೆ.

ಎರಡೂ ಸ್ಕ್ರೀನ್‌ಗಳು ದೊಡ್ಡದಾಗಿದ್ದು, ಬಳಸಲು ತುಂಬಾ ಸುಲಭ ಎನ್ನಿಸುತ್ತವೆ. ಬೋಸ್‌ನಿಂದ 8-ಸ್ಪೀಕರ್ ಪ್ರೀಮಿಯಂ ಸೌಂಡ್ ಸಿಸ್ಟಮ್, ಜೊತೆಗೆ 12V ಚಾರ್ಜಿಂಗ್ ಪೋರ್ಟ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಪ್ರಮುಖ ಫೀಚರ್ಸ್ ನೀಡಲಾಗಿದೆ. ಹಾಗೆಯೇ ಕಾರನ್ನು 10 ಬಣ್ಣಗಳ ಆಯ್ಕೆಗಳಲ್ಲಿ ನೀಡಲಾಗುತ್ತಿದ್ದು, ಮೂರು ಮ್ಯಾಟ್ ಬಣ್ಣಗಳನ್ನು ಹೊಂದಿದೆ.
ಚೈಲ್ಡ್ ಸೀಟ್ ಆಂಕರ್ (ISOFIX) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC), ಹಾಗೆಯೇ ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್‌ನೊಂದಿಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ (HDC) ಸೇರಿದಂತೆ 19 ವೈಶಿಷ್ಟ್ಯಗಳೊಂದಿಗೆ LEVEL-2 ADAS ಸೆಟಪ್ ಒಳಗೊಂಡಿದೆ.


Click it and Unblock the Notifications








