ಬಾಸ್.. ಅಗ್ಗದ ಮಾರುತಿ ಆಲ್ಟೊ ಕೆ10 ಹ್ಯಾಚ್‌ಬ್ಯಾಕ್‌ಗೆ 3 ಪರ್ಯಾಯ ಕಾರುಗಳಿವು, ಬೆಲೆ ಎಷ್ಟು.. ಹೇಗಿವೆ?
ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಪ್ರಖ್ಯಾತ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಇದು ರೂ.4.23 ಲಕ್ಷದಿಂದ ರೂ.6.21 ಲಕ್ಷ (ಎಕ್ಸ್- ಶೋರೂಂ) ದರವನ್ನು ಪಡೆದಿದೆ. 1-ಲೀ. ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. ಯಾವ ಬೈಕ್‌ಗೂ ಕಮ್ಮಿಯಿಲ್ಲದಂತೆ 24.39 ರಿಂದ 33.85 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ 4 ರಿಂದ 5 ಮಂದಿ ಸಂಚರಿಸಬಹುದು.. 'ಆಲ್ಟೊ ಕೆ10' ಹ್ಯಾಚ್‌ಬ್ಯಾಕ್‌ಗೆ ಪರ್ಯಾಯವಾಗಿ ಗ್ರಾಹಕರು, ಈ 3 ಕಾರುಗಳನ್ನು ಕೊಂಡುಕೊಳ್ಳಬಹುದು. ಬನ್ನಿ, ಇವುಗಳ ಬೆಲೆ ಮತ್ತು ವಿಶೇಷತೆಗಳ ಕುರಿತಂತೆ ಒಂದಷ್ಟು ಮಾಹಿತಿಯನ್ನು ತಿಳಿಯೋಣ.
ರೆನಾಲ್ಟ್ ಕ್ವಿಡ್ (Renault Kwid): ಈ ಕಾರು ರೂ.4.70 ಲಕ್ಷದಿಂದ ರೂ.6.45 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಸಿಗುತ್ತದೆ. 1-ಲೀ. ಪೆಟ್ರೋಲ್ ಎಂಜಿನ್ ಹೊಂದಿದ್ದು, 21.46 ರಿಂದ 22.3 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಹೊಸ ಕ್ವಿಡ್ ಹ್ಯಾಚ್‌ಬ್ಯಾಕ್ ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಹೊಂದಿದ್ದು, ಫಿಯರಿ ರೆಡ್, ಮೂನ್‌ಲೈಟ್ ಸಿಲ್ವರ್ ಮತ್ತು ಐಸ್ ಕೂಲ್ ವೈಟ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ದೊರೆಯುತ್ತದೆ.

ನೂತನ ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್‌ನಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಕೀ ಲೆಸ್ ಎಂಟ್ರಿ ಮತ್ತು ಮ್ಯಾನುವಲ್ ಎಸಿ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಪಡೆದಿದೆ.
ಟಾಟಾ ಟಿಯಾಗೊ (Tata Tiago): ಇದು ಕೂಡ ಜನಪ್ರಿಯ ಹ್ಯಾಚ್‌ಬ್ಯಾಕ್ ಎಂದೇ ಖ್ಯಾತಿ ಗಳಿಸಿದೆ. ರೂ.5 ಲಕ್ಷದಿಂದ ರೂ.8.45 ಲಕ್ಷ (ಎಕ್ಸ್-ಶೋರೂಂ) ದರವನ್ನ ಹೊಂದಿದೆ. ಈ ಕಾರು ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದ್ದು, 19.43 ರಿಂದ 28.06 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿಯೂ 5 ಜನರು ಸುಲಭವಾಗಿ ಓಡಾಟ ನಡೆಸಬಹುದು.

ಈ ಟಾಟಾ ಟಿಯಾಗೊ ಕಾರು ಪ್ರಿಸ್ಟೈನ್ ವೈಟ್, ಡೇಟೋನಾ ಗ್ರೇ, ಟೊರ್ನಾಡೊ ಬ್ಲೂ, ಸೂಪರ್ನೋವಾ ಕಾಪರ್, ಒಸೆನಾ ಬ್ಲೂ ಮತ್ತು ಅರಿಜೋನಾ ಬ್ಲೂ ಸೇರಿದಂತೆ ಹಲವು ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕೀಲೆಸ್ ಎಂಟ್ರಿ & ಪುಶ್ ಸ್ಟಾರ್ಟ್-ಸ್ಟಾಪ್ ಬಟನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿದೆ.
ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis): ಆಲ್ಟೊ ಕೆ10 ಕಾರಿನ ಬದಲಾಗಿ ಈ ಹ್ಯಾಚ್‌ಬ್ಯಾಕ್‌ನ್ನು ಗ್ರಾಹಕರು ಖರೀದಿ ಮಾಡಬಹುದು. ಇದು ರೂ.5.85 ಲಕ್ಷದಿಂದ ರೂ.8.12 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಪಡೆದಿದೆ. 1.2-ಲೀ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದ್ದು, 20.89 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ಈ ಮಾರುತಿ ಇಗ್ನಿಸ್ ಕಾರಿನಲ್ಲಿ 5 ಮಂದಿ ಪ್ರಯಾಣಿಸಬಹುದು. ನೆಕ್ಸಾ ಬ್ಲೂ, ಲ್ಯೂಸೆಂಟ್ ಆರೆಂಜ್, ಸಿಲ್ಕಿ ಸಿಲ್ವರ್, ವೈಡೂರ್ಯ ಬ್ಲೂ & ಪರ್ಲ್ ಆರ್ಕ್ಟಿಕ್ ವೈಟ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ದೊರೆಯುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಡುಯಲ್ ಏರ್‌ಬ್ಯಾಗ್‌ಗಳನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications