32.85 Km ಮೈಲೇಜ್.. ಬರೀ 5 ಲಕ್ಷ, ಮಿಡಲ್ ಕ್ಲಾಸ್ ಜನರ ನೆಚ್ಚಿನ Maruti Swiftಗೆ 5 ಬದಲಿ ಕಾರುಗಳಿವು.. ಬೆಲೆ ಎಷ್ಟು?
ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿದೆ. ಇದು ರೂ.5.79 ಲಕ್ಷದಿಂದ ರೂ.8.80 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 1.2-ಲೀ. ಪೆಟ್ರೋಲ್ ಹಾಗೂ 1.2-ಲೀ. ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 24 ರಿಂದ 32.85 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. 9 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋ ಕ್ಲೇಮೇಟ್ ಕಂಟ್ರೋಲ್ ಮತ್ತು ಅರ್ಕಾಮಿಸ್ ಟ್ಯೂನ್ಡ್ ಸೌಂಡ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಹಾಗೂ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಹೊಂದಿದೆ.
ನೀವು ಇದೇ 'ಮಾರುತಿ ಸ್ವಿಫ್ಟ್'ಗೆ ಪರ್ಯಾಯವಾಗಿ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್, ಮಾರುತಿ ಸುಜುಕಿ ವ್ಯಾಗನ್ಆರ್, ಹ್ಯುಂಡೈ ಐ20, ಟಾಟಾ ಆಲ್ಟ್ರೊಜ್ ಹಾಗೂ ಸಿಟ್ರನ್ ಸಿ3ಗಳನ್ನು ಖರೀದಿ ಮಾಡಬಹುದು. ಬನ್ನಿ, ಈ 5 ನೂತನ ಹ್ಯಾಚ್‌ಬ್ಯಾಕ್‌ಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಒಂದಷ್ಟು ಪ್ರಮುಖ ವಿವರಗಳನ್ನು ತಿಳಿಯೋಣ.

ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ (Hyundai Grand i10 Nios):
ಇದು ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿದ್ದು, 'ಮಾರುತಿ ಸುಜುಕಿ ಸ್ವಿಫ್ಟ್'ಗೆ ಅತ್ಯುತ್ತಮವಾದ ಬದಲಿ ಆಯ್ಕೆಯಾಗಲಿದೆ. ಅದಕ್ಕೆ ತಕ್ಕಂತೆ ರೂ.5.47 ಲಕ್ಷದಿಂದ ರೂ.7.92 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1.2-ಲೀಟರ್ ಪೆಟ್ರೋಲ್ ಹಾಗೂ 1.2-ಲೀ. ಪೆಟ್ರೋಲ್ + ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 16 ರಿಂದ 27 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. 5 ಆಸನಗಳನ್ನು ತನ್ನದಾಗಿಸಿಕೊಂಡಿದೆ. 8 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 6 ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.
ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR):
ಈ ಹ್ಯಾಚ್‌ಬ್ಯಾಕ್‌ನ್ನು 'ಮಾರುತಿ ಸ್ವಿಫ್ಟ್'ಗೆ ಪರ್ಯಾಯವಾಗಿ ತೆಗೆದುಕೊಳ್ಳಬಹುದು. ರೂ.4.99 ಲಕ್ಷದಿಂದ ರೂ.6.95 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 1.2-ಲೀ. ಪೆಟ್ರೋಲ್ ಮತ್ತು 1-ಲೀ. ಪೆಟ್ರೋಲ್ + ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 23 ರಿಂದ 34 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹಾಗೂ 6 ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.

ಹ್ಯುಂಡೈ ಐ20 (Hyundai i20):
ಇದೊಂದು ವಿಶ್ವಾಸಾರ್ಹ ಕಾರಾಗಿದ್ದು, 'ಮಾರುತಿ ಸುಜುಕಿ ಸ್ವಿಫ್ಟ್'ಗೆ ಬದಲಿ ಹ್ಯಾಚ್‌ಬ್ಯಾಕ್ ಆಗಿಯೂ ಹೊರಹೊಮ್ಮಿದೆ. ರೂ.6.87 ಲಕ್ಷದಿಂದ ರೂ.10.43 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1.2-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 16 ರಿಂದ 20 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. 5 ಆಸನಗಳನ್ನು ಒಳಗೊಂಡಿದೆ. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು 6 ಏರ್‌ಬ್ಯಾಗ್‌ಗಳನ್ನು ಹೊಂದಿದೆ.
ಟಾಟಾ ಆಲ್ಟ್ರೋಜ್ (Tata Altroz):
ಈ ಕಾರನ್ನು 'ಮಾರುತಿ ಸ್ವಿಫ್ಟ್'ಗೆ ಪರ್ಯಾಯವಾಗಿ ಮನೆಗೆ ಮನೆಗೆ ತರಬಹುದು. ರೂ.6.30 ಲಕ್ಷದಿಂದ ರೂ.10.51 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 1.2-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 12-ಲೀ. ಪೆಟ್ರೋಲ್ + ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 19 ರಿಂದ 26 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ತನ್ನದಾಗಿಸಿಕೊಂಡಿದೆ. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹಾಗೂ 6 ಏರ್‌ಬ್ಯಾಗ್‌ಗಳನ್ನು ಪಡೆದಿದೆ.

ಸಿಟ್ರನ್ ಸಿ3 (Citroen C3):
ಇದನ್ನು ಕೂಡ 'ಮಾರುತಿ ಸುಜುಕಿ ಸ್ವಿಫ್ಟ್'ಗೆ ಬದಲಾಗಿ ತೆಗೆದುಕೊಳ್ಳಬಹುದು. ರೂ.4.80 ಲಕ್ಷದಿಂದ ರೂ.10.21 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1.2-ಲೀ. ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 19.3 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. 5 ಆಸನಗಳನ್ನು ಹೊಂದಿದೆ. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.

ಒಟ್ಟಾರೆಯಾಗಿ ಈ ಕಾರುಗಳು ಒಂದಕ್ಕಿಂತ ಒಂದು ಅದ್ಬುತವಾಗಿದ್ದು, 'ಮಾರುತಿ ಸ್ವಿಫ್ಟ್'ಗೆ ಪರ್ಯಾಯವಾಗಿ ಸುಲಭವಾಗಿಯೂ ಖರೀದಿಸಬಹುದು. ಇವು ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಜೊತೆಗೆ ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಖರೀದಿಗೆ ಲಭ್ಯವಿವೆ.. ನಿಮ್ಮಿಷ್ಟ ಕಾರು ಯಾವುದೆಂದು ತೀರ್ಮಾನಿಸಿ, ಅದನ್ನೇ ಖರೀದಿ ಮಾಡಿರಿ.


Click it and Unblock the Notifications








