Toyota Rumion: ಟೊಯಟೊ ಹೊಸ 7-ಸೀಟರ್ ಕಾರಿಗೆ ಫುಲ್ ಡಿಮ್ಯಾಂಡ್: 26.11 ಕಿ.ಮೀ ಮೈಲೇಜ್
ಟೊಯೊಟಾ ರುಮಿಯಾನ್ (Toyota Rumion) ಎಂಪಿವಿ ಕಾರು, ಮಾರುತಿ ಸುಜುಕಿ ಎರ್ಟಿಗಾದ ರೀಬ್ಯಾಡ್ಜ್ ಆವೃತ್ತಿಯಾಗಿದ್ದು, ಬಹುತೇಕ ಒಳಾಂಗಣವು ಎಂಪಿವಿಯನ್ನು ನಿಕಟವಾಗಿ ಪ್ರತಿಬಿಂಬಿಸುತ್ತದೆ. ಒಟ್ಟಾರೆ ವಿನ್ಯಾಸ ಮತ್ತು ಇಂಟೀರಿಯರ್ ಡಿಜೈನ್‌ವರೆಗೆ, ಕ್ಯಾಬಿನ್ ಒಂದೇ ಆಗಿರುತ್ತದೆ. ಈ 7-ಸೀಟರ್ ಕಾರಿನಲ್ಲಿ ಎಲ್ಲಾ ಮೂರು ಸಾಲುಗಳು ಆರಾಮದಾಯಕ ಆಸನಗಳನ್ನು ನೀಡುತ್ತವೆ. ಎರ್ಟಿಗಾಕ್ಕಿಂತ ರುಮಿಯಾನ್ ಅನ್ನು ಆಯ್ಕೆ ಮಾಡುವ ಖರೀದಿದಾರರು ಬುಕ್ ಮಾಡಿದ ಬಳಿಕ ಹೆಚ್ಚಿನ ದಿನಗಳು ಡೆಲಿವರಿಗೆ ಕಾಯುವ ಅವಶ್ಯಕತೆ ಇಲ್ಲ. ಬೇಗನೆ ಸಿಗಲಿದೆ ಎಂದು ಪ್ರಮುಖ ಡೀಲರ್‌ಶಿಪ್‌ಗಳು ತಿಳಿಸಿವೆ.
ಹೊಸ ಟೊಯೋಟಾ ರೂಮಿಯಾನ್ ಬೆಲೆಯ ವಿಷಯಕ್ಕೆ ಬಂದರೆ ಬೇಸ್ - ಸ್ಪೆಕ್ ವೇರಿಯೆಂಟ್ ಬೆಲೆಯು 10.54 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ಹಾಗೆಯೇ ಇದರ ಟಾಪ್-ಸ್ಪೆಕ್ ವೇರಿಯೆಂಟ್ ಬೆಲೆಯು 13.83 ಲಕ್ಷ ರೂ. ಲಕ್ಷ ರೂ.ಗಳವರೆಗೆ ಹೋಗುತ್ತದೆ. ಆಟೋಮ್ಯಾಟಿಕ್ ಎಸಿ, ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್ ಜೊತೆಗೆ ಕೆಲವು ಸಂಪರ್ಕಿತ ಕಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಟೊಯೊಟಾ ರುಮಿಯಾನ್‌ನಲ್ಲಿ ವೈರ್ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಹೊಂದಿರುವ 7 ಇಂಚಿನ ಟಚ್ ಸ್ಕ್ರೀನ್, ಪುಶ್ - ಬಟನ್ ಎಂಜಿನ್ ಸ್ಟಾರ್ಟ್ / ಸ್ಟಾಪ್, 6-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್ ಎಸಿ, ಕ್ರೂಸ್ ಕಂಟ್ರೋಲ್ ಮತ್ತು ಪ್ಯಾಡಲ್ ಶಿಫ್ಟರ್‌ಗಳು, ಕೀಲೆಸ್ ಎಂಟ್ರಿ ಮತ್ತು ಆಟೋಮ್ಯಾಟಿಕ್ ಹೆಡ್ ಲೈಟ್‌ಗಳನ್ನು ಸಹ ಹೊಂದಿದೆ.
ಮಾರುತಿ ಎರ್ಟಿಗಾ ನಂತರ ಭಾರತದಲ್ಲಿ ಖರೀದಿಗೆ ಸಿಗುವ ಬೆಸ್ಟ್ 7-ಸೀಟರ್ ಕಾರುಗಳಲ್ಲಿ ಟೊಯೊಟಾ ರುಮಿಯಾನ್ ಇತ್ತೀಚೆಗೆ ಭಾರೀ ಸದ್ದು ಮಾಡಿದೆ. ಇದು 5-ಸ್ಪೀಡ್ ಮ್ಯಾನುವಲ್ ಹಾಗೂ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಹಾಗೆಯೇ ಸಿಎನ್‌ಜಿ ಆಯ್ಕೆಯಿದ್ದು 5-ಸ್ಪೀಡ್ ಮ್ಯಾನುವಲ್ ಮಾತ್ರ ಸಿಗಲಿದೆ.

ಮೈಲೇಜ್ ವಿಷಯಕ್ಕೆ ಬಂದರೆ ಹೊಸ ಟೊಯೋಟಾ ರುಮಿಯಾನ್ ಪೆಟ್ರೋಲ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರುವ ಕಾರು 20.51 ಕಿ.ಮೀ ಮೈಲೇಜ್ ನೀಡುತ್ತದೆ. ಪೆಟ್ರೋಲ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಕಾರು 20.11 ಕಿ.ಮೀ ಮೈಲೇಜ್ ನೀಡುತ್ತದೆ. ಹಾಗೇಯೇ ಸಿಎನ್‌ಜಿ ಮ್ಯಾನುವಲ್ ಗೇರ್‌ಬಾಕ್ಸ್‌ನ ಕಾರು ಬರೋಬ್ಬರಿ 26.11 ಕಿ.ಮೀ/ಕೆ.ಜಿ ಮೈಲೇಜ್ ನೀಡುತ್ತದೆ.
ಸುರಕ್ಷತೆಯಲ್ಲೂ ಉತ್ತಮವಾಗಿರುವ ಈ ಕಾರು, ರುಮಿಯಾನ್‌ನಲ್ಲಿರುವ ಸ್ಟ್ಯಾಂಡರ್ಡ್ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಸೀಟ್ ಬೆಲ್ಟ್ ರಿಮೈಂಡರ್, ಹಿಲ್ ಹೋಲ್ಡ್ ಅಸಿಸ್ಟ್, ಎರಡು ಏರ್ ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸಾರ್, ಐಎಸ್ ಒಫಿಕ್ಸ್ ಮೌಂಟ್‌ಗಳು ಸೇರಿವೆ. ಟಾಪ್ - ಸ್ಪೆಕ್ ವೇರಿಯೆಂಟ್‌ಗಳು ಆರು ಏರ್ ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಮುಂಭಾಗದ ಫಾಗ್ ಲ್ಯಾಂಪ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿವೆ.

ಮಾರುತಿ ಸುಜುಕಿ ಎರ್ಟಿಗಾದ ರೀಬ್ಯಾಡ್ಜ್ ಆವೃತ್ತಿಯಾಗಿದ್ದರೂ, ಆರಾಮದಾಯಕ ಆಸನ, ಉತ್ತಮ ಮತ್ತು ಸುಗಮ ಚಾಲನೆಯ ಅನುಭವ ನೀಡುವುದರಲ್ಲಿ ಬೆಸ್ಟ್ ಎನ್ನಿಸಿಕೊಂಡಿದೆ. ಎರ್ಟಿಗಾಗಿಂತ ತುಸು ಬೆಲೆ ಹೆಚ್ಚಾದರೂ ನೀವು 15 ಲಕ್ಷ ರೂ.ಗಿಂತ ಕಡಿಮೆ ಬೆಲೆಯಲ್ಲಿ ಕುಟುಂಬಕ್ಕೆ ಆರಾಮದಾಯಕ 7 ಸೀಟರ್ ಎಂಪಿವಿಯನ್ನು ಹುಡುಕುತ್ತಿದ್ದರೆ, ಟೊಯೊಟಾ ರುಮಿಯಾನ್ ಬೆಸ್ಟ್ ಆಯ್ಕೆ ಎಂದು ಹೇಳಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








