ಕಳಪೆ ಗುಣಮಟ್ಟದ ಕಾರುಗಳ ತಂಟೆಗೆ ಹೋಗಬೇಡಿ: ಬುದ್ಧಿವಂತರಾಗಿ... 5-ಸ್ಟಾರ್ ಕಾರುಗಳೆ ಮುಖ್ಯ!

2025 ರಲ್ಲಿ ಭಾರತದ ಪ್ರಮುಖ ಕಾರು ಬ್ರ್ಯಾಂಡ್‌ಗಳು ತಮ್ಮ ಕಾರುಗಳನ್ನು ಸುರಕ್ಷತಾ ಪರೀಕ್ಷೆಗೆ ಒಳಪಡಿಸಿ ತಮ್ಮ ಗುಣಮಟ್ಟವನ್ನು ಸಾಭೀತುಪಡಿಸಿಕೊಂಡಿವೆ. ಇತ್ತೀಚಿನ ಭಾರತ್ NCAP ಮತ್ತು ಗ್ಲೋಬಲ್ NCAP ಕ್ರ್ಯಾಶ್ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಗಳಿಸಿರುವ ಪ್ರಮುಖ ಕಾರುಗಳು ಈಗ ಫುಲ್ ಡಿಮ್ಯಾಂಡ್ ಪಡೆದುಕೊಂಡಿವೆ. ಮಾರುತಿ ಸುಜುಕಿ ವಿಕ್ಟೋರಿಸ್, ಡಿಜೈರ್ ಮತ್ತು ಇತರ ಹೊಸ ಕಾರುಗಳು ಸುಧಾರಿತ 5-ಸ್ಟಾರ್ ರೇಟಿಂಗ್‌ಗಳನ್ನು ಪಡೆದುಕೊಂಡಿವೆ. ಈ ಸೇಫ್ಟಿ ರೇಟಿಂಗ್‌ನಲ್ಲಿ 3-ಸ್ಟಾರ್‌ಗಿಂತ ಕೆಳಗಿರುವ ಕಾರುಗಳ ತಂಟೆಗೆ ಹೋಗಬೇಡಿ. ಹಾಗಾದ್ರೆ 5 - ಸ್ಟಾರ್ ರೇಟಿಂಗ್ ಕಾರುಗಳು ಯಾವುವು?

ಮಾರುತಿ ಸುಜುಕಿ ವಿಕ್ಟೋರಿಸ್: ಇತ್ತೀಚೆಗಷ್ಟೆ ಬಿಡುಗಡೆ ಮಾಡಲಾದ ಹೊಚ್ಚ ಹೊಸ 'ಮಾರುತಿ ಸುಜುಕಿ ವಿಕ್ಟೋರಿಸ್' ಎಸ್‌ಯುವಿಯನ್ನು ಗ್ಲೋಬಲ್ ಎನ್‌ಸಿಎಪಿಯ ವಿವಿಧ ಸುರಕ್ಷತಾ ಮಾನದಂಡಗಳ ಅನ್ವಯ ಪರೀಕ್ಷಿಸಲಾಯಿತು. ವಿಶೇಷವಾಗಿ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 34ಕ್ಕೆ 33.72 ಅಂಕಗಳು ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 49ಕ್ಕೆ 41 ಅಂಕಗಳನ್ನು ಗಳಿಸಿ ಒಟ್ಟಾರೆ 5 - ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.

best-gncap-and-bncap-safety-rated-cars-in-india

ಟಾಟಾ ನೆಕ್ಸಾನ್: ಈ ಸಬ್ - ಕಾಂಪ್ಯಾಕ್ಟ್ ಎಸ್‌ಯುವಿ ಗ್ಲೋಬಲ್ ಎನ್‌ಸಿಎಪಿ ಮತ್ತು ಭಾರತ್ ಎನ್‌ಸಿಎಪಿ ಎರಡರಲ್ಲೂ 5 - ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ. ಗ್ಲೋಬಲ್ ಎನ್‌ಸಿಎಪಿಯಲ್ಲಿ ವಯಸ್ಕರ ರಕ್ಷಣೆಯಲ್ಲಿ 34ಕ್ಕೆ 32.22 ಅಂಕಗಳನ್ನು ಗಳಿಸಿದೆ. ಮಕ್ಕಳ ರಕ್ಷಣೆಯಲ್ಲಿ 49ಕ್ಕೆ 44.52 ಅಂಕಗಳನ್ನು ಗಳಿಸಿದೆ.

ಭಾರತ್ ಎನ್‌ಸಿಎಪಿಯಲ್ಲಿ ಇದು ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 32ಕ್ಕೆ 29.41 ಅಂಕಗಳನ್ನು ಮತ್ತು ಮಕ್ಕಳ ರಕ್ಷಣೆಯಲ್ಲಿ 49ಕ್ಕೆ 43.83 ಅಂಕಗಳನ್ನು ಗಳಿಸಿದೆ. ಒಟ್ಟಾರೆಯಾಗಿ, ನೆಕ್ಸಾನ್ ಕ್ರ್ಯಾಶ್ ಮೌಲ್ಯಮಾಪನಗಳಲ್ಲಿ ಘನ ಕಾರ್ಯಕ್ಷಮತೆಯನ್ನು ನೀಡಿದೆ. ವಿವಿಧ ಪರೀಕ್ಷೆಗಳು ಮತ್ತು ಸುರಕ್ಷತಾ ನಿಯತಾಂಕಗಳಲ್ಲಿ ಉತ್ತಮ ರೇಟಿಂಗ್‌ಗಳ ಮಿಶ್ರಣವನ್ನು ಪಡೆದುಕೊಂಡಿದೆ.

best-gncap-and-bncap-safety-rated-cars-in-india

ಟಾಟಾ ಹ್ಯಾರಿಯರ್ ಮತ್ತು ಸಫಾರಿ: ಟಾಟಾ ಹ್ಯಾರಿಯರ್ ಮತ್ತು ಸಫಾರಿ 5 - ಸ್ಟಾರ್ ಗಳನ್ನು ಹೊಂದಿವೆ. ಎರಡೂ ಎಸ್‌ಯುವಿಗಳನ್ನು ಭಾರತ್ ಎನ್‌ಸಿಎಪಿ ಮತ್ತು ಗ್ಲೋಬಲ್ ಎನ್‌ಸಿಎಪಿ ಪರೀಕ್ಷಿಸಿದೆ. ಗ್ಲೋಬಲ್ ಎನ್‌ಸಿಎಪಿಯಲ್ಲಿ ಎರಡೂ ಎಸ್‌ಯುವಿಗಳು ವಯಸ್ಕರ ರಕ್ಷಣೆಯಲ್ಲಿ 34 ಪಾಯಿಂಟ್‌ಗಳಲ್ಲಿ 33.05 ಪಾಯಿಂಟ್‌ಗಳನ್ನು ಮತ್ತು ಮಕ್ಕಳ ರಕ್ಷಣೆಯಲ್ಲಿ 49 ಕ್ಕೆ 45 ಪಾಯಿಂಟ್‌ಗಳನ್ನು ಗಳಿಸಿವೆ.

ಭಾರತ್ ಎನ್‌ಸಿಎಪಿಯಲ್ಲಿ ಎರಡೂ ಎಸ್‌ಯುವಿಗಳು ವಯಸ್ಕರ ಪ್ರಯಾಣಿಕರ ರಕ್ಷಣೆ ಮತ್ತು ಮಕ್ಕಳ ಪ್ರಯಾಣಿಕರ ರಕ್ಷಣೆಗಾಗಿ ಪರಿಪೂರ್ಣ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿವೆ. ಹ್ಯಾರಿಯರ್ ಮತ್ತು ಸಫಾರಿ ವಯಸ್ಕರ ರಕ್ಷಣೆಯಲ್ಲಿ ಗರಿಷ್ಠ 32 ರಲ್ಲಿ 30.08 ಅಂಕಗಳನ್ನು ಮತ್ತು ಮಕ್ಕಳ ಪ್ರಯಾಣಿಕರ ರಕ್ಷಣೆಯಲ್ಲಿ 49 ರಲ್ಲಿ 44.54 ಅಂಕಗಳನ್ನು ಗಳಿಸಿವೆ.

best-gncap-and-bncap-safety-rated-cars-in-india

ಮಾರುತಿ ಸುಜುಕಿ ಡಿಜೈರ್: ಈ ಕಾರು ಗ್ಲೋಬಲ್ ಎನ್‌ಸಿಎಪಿ ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆಯಲ್ಲಿ 34ಕ್ಕೆ 31.24 ಅಂಕಗಳನ್ನು ಗಳಿಸಿದರೆ, ಮಕ್ಕಳ ರಕ್ಷಣೆಯಲ್ಲಿ 42ಕ್ಕೆ 39.20 ಅಂಕಗಳನ್ನು ಪಡೆದುಕೊಂಡಿದೆ. ಈ ಮೂಲಕ 5-ಸ್ಟಾರ್ ರೇಟಿಂಗ್ ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ ನೂತನ 'ಮಾರುತಿ ಸುಜುಕಿ ಡಿಜೈರ್' ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಗ್ಲೋಬಲ್ ಎನ್‌ಸಿಎಪಿ 5 - ಸ್ಟಾರ್ ಸೇಫ್ಟಿ ರೇಟಿಂಗ್ ನೀಡಿದೆ.

ಹೊಸ ಡಿಸೈರ್ ಕಾರು, 6 - ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ 3 - ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಒಳಗೊಂಡಿರುವುದು ದೃಢಪಟ್ಟಿದೆ. ಈ ಹಿಂದೆ ಮೂರನೇ ತಲೆಮಾರಿನ (Third-Generation) ಡಿಸೈರ್, ಕೇವಲ 2 - ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಮಾತ್ರ ಪಡೆದಿತ್ತು. ನೀವು ಈ ಚಿತ್ರದಲ್ಲಿ ನೋಡುವ ಹಳೆಯ ಡಿಜೈರ್ ಆಪಘಾತವೊಂದರಲ್ಲಿ ನಜ್ಜುಗುಜ್ಜಾಗಿದೆ.

best-gncap-and-bncap-safety-rated-cars-in-india

ಇದು ಸುರಕ್ಷತಾ ಮೌಲ್ಯವನ್ನು ಎತ್ತಿತೋರುತ್ತದೆ, ಈಗ ಹೊಸ ಡಿಜೈರ್ ಖಡಕ್ ಆಗಿ 5 - ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡು ಹೊರಹೊಮ್ಮಿದೆ. ಮಾರುತಿ ಕಾರುಗಳು ಸುರಕ್ಷತೆಯಲ್ಲಿ ಹಿಂದುಳಿದುವೆ ಎಂದು ಹೇಳುತ್ತಿದ್ದವರು ಮೂಗು ಮುರಿಯುವಂತಾಗಿದೆ. ಸದ್ಯ ಡಿಜೈರ್ ಮಾರಾಟದಲ್ಲಿ ಭಾರತದ ನಂ.1 ಸ್ಥಾನದಲ್ಲಿ ಮುಂದುವರಿಯುತ್ತಿದೆ.

Article Published On: Sunday, September 21, 2025, 12:48 [IST]
English summary
Best gncap and bncap safety rated cars in india
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+