Hyundai: ರಣ ಹದ್ದಿನಂತಹ ವಿನ್ಯಾಸಕ್ಕೆ ಫಿದಾ ಆಗಲೇಬೇಕು: ಭಾರತದಲ್ಲಿ ಹ್ಯುಂಡೈನ ಏಕೈಕ ಬ್ರಹ್ಮಾಸ್ತ್ರ!

ಇಂದು ಭಾರತದಲ್ಲಿ ಆಟೋ ಉದ್ಯಮ ಹೆಮ್ಮರವಾಗಿ ಬೆಳೆದು ನಿಂತಿದೆ. ಬಹುತೇಕ ವಿದೇಶಿ ಕಾರು ಬ್ರಾಂಡ್‌ಗಳು ಸ್ಥಳೀಯವಾಗಿ ಉತ್ಪಾದನಾ ಸ್ಥಾವರಗಳನ್ನು ಹೊಂದಿದ್ದು, ಉತ್ತಮ ಮಾರಾಟವನ್ನು ಕಾಣುತ್ತಿವೆ. ಪ್ರತಿಯೊಂದು ಬ್ರಾಂಡ್‌ಗು ತನ್ನದೇ ಆದ ಜನಪ್ರಿಯತೆಯನ್ನು ತಂದುಕೊಡುವಲ್ಲಿ ಮುಖ್ಯ ಪಾತ್ರ ವಹಿಸುವ ಕೆಲವು ಕಾರುಗಳಿರುತ್ತವೆ. ಉದಾಹರಣೆಗೆ ಟಾಟಾಗೆ ನೆಕ್ಸಾನ್, ಮಹೀಂದ್ರಾಗೆ XUV ಸಿರೀಸ್, ಕಿಯಾಗೆ ಸೋನೆಟ್ ಕಾರುಗಳಾದರೆ ಹ್ಯುಂಡೈ ಇಂದು ಭಾರತದಲ್ಲಿ ಪ್ರಮುಖ ಕಂಪನಿಯಾಗಿ ಮುಂದುವರಿಯಲು ಕಾರಣವಾಗಿರುವುದು 'ಕ್ರೆಟಾ' ಆಗಿದೆ. ಇದು ಭಾರತದಲ್ಲಿ ಹ್ಯುಂಡೈನ ಏಕೈಕ ಬ್ರಹ್ಮಾಸ್ತ್ರವಾಗಿದೆ.

ಹ್ಯುಂಡೈ ಕ್ರೆಟಾ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಪ್ರಧಾನವಾಗಿ ಮಾರ್ಪಟ್ಟಿದೆ. ಹೆಚ್ಚು ಮಾರಾಟವಾಗುವ ವಾಹನಗಳಲ್ಲಿ ಸ್ಥಿರವಾಗಿ ತನ್ನ ಸ್ಥಾನವನ್ನು ಕಾಯ್ದುಕೊಳ್ಳುತ್ತಾ ಬಂದಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ 2025 ಜನವರಿಯ ಮಾರಾಟ ಅಂಕಿಅಂಶಗಳಾಗಿವೆ. ಬರೋಬ್ಬರಿ ಹ್ಯುಂಡೈ ಕ್ರೆಟಾದ 18,522 ಯುನಿಟ್ ಕಾರುಗಳು ಮಾರಾಟವಾಗುವ ಮೂಲಕ ಮಿಡ್‌ ಸೈಜ್ ಎಸ್‌ಯುವಿ ವಿಭಾಗದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

best-selling-suv-hyundai-creta-price-and-specs-details

ಇದು ಭಾರತದಲ್ಲಿ ಪಾದಾರ್ಪಣೆ ಮಾಡಿದ ನಂತರ ಅತಿ ಹೆಚ್ಚು ಮಾಸಿಕ ಮಾರಾಟವನ್ನು 2025 ಜನವರಿಯಲ್ಲಿ ದಾಖಲಿಸಿದೆ. ಈ ಮಾರಾಟವು ಕ್ರೆಟಾದ ನಿರಂತರ ಆಕರ್ಷಣೆ ಮತ್ತು ಬಲವಾದ ಮಾರುಕಟ್ಟೆ ಉಪಸ್ಥಿತಿಯನ್ನು ಒತ್ತಿಹೇಳುತ್ತದೆ. ತನ್ನ ರಣ ಹದ್ದಿನಂತಹ ವಿನ್ಯಾಸ ಹಾಗೂ ಆಕರ್ಷಕ ಫೀಚರ್ಸ್ ಎಂತವರನ್ನು ಸೆಳೆಯುತ್ತವೆ. ಈ ಕಾರು ಈ ಮಟ್ಟದ ಬೇಡಿಕೆ ಪಡೆಯಲು ಪ್ರಮುಖ ಕಾರಣಗಳು ಇಲ್ಲಿವೆ.

ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಹಾಗೂ ಪ್ರತಿಸ್ಪರ್ಧಿ ಕಾರುಗಳ ಪೈಪೋಟಿಯನ್ನು ಹಿಮ್ಮೆಟ್ಟಲು ಹೊಸ ಅಪ್‌ಡೇಟ್‌ಗಳೊಂದಿಗೆ ಹೊಸ 2024 ರ ನವೀಕೃತ ಕ್ರೆಟಾವನ್ನು ಕಂಪನಿ ಬಿಡುಗಡೆ ಮಾಡಿತ್ತು. ಕಳೆದ ತಿಂಗಳು ಭಾರತದಾದ್ಯಂತ ಪ್ರತಿ ಗಂಟೆಗೆ 88 ಕ್ರೆಟಾ ಕಾರುಗಳು ಮಾರಾಟವಾಗಿವೆ ಎಂದು ವರದಿಯಾಗಿದೆ. ಈ ಗಮನಾರ್ಹ ಹೆಚ್ಚಳವು ಭಾರತೀಯ ಗ್ರಾಹಕರಲ್ಲಿ ಈ ಎಸ್‌ಯುವಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಎತ್ತಿ ತೋರಿಸುತ್ತದೆ.

best-selling-suv-hyundai-creta-price-and-specs-details

ವಿಶೇಷತೆಗಳು: ಹೊಸ ಹುಂಡೈ ಕ್ರೆಟಾವು E, EX, S, S(O), SX, SX Tech, ಮತ್ತು SX(O) ಎಂಬ ಏಳು ರೂಪಾಂತರಗಳಲ್ಲಿ ಲಭ್ಯವಿದೆ. ಈ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ ಜೊತೆಗೆ 1.5 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಸಹ ಹೊಂದಿದೆ.

ಇದರಲ್ಲಿ 6-ಸ್ಪೀಡ್ MT, CVT ಹಾಗೂ 7-ಸ್ಪೀಡ್ DCT ಮತ್ತು 6-ಸ್ಪೀಡ್ MT, 6-ಸ್ಪೀಡ್ AT ಆಯ್ಕೆಯನ್ನು ನೀಡಲಾಗಿದೆ. ಮೊದಲಿಗೆ 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 115 ಪಿಎಸ್ ಪವರ್ ಮತ್ತು 144 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.5-ಲೀಟರ್ ಪವರ್ ಫುಲ್ ಟರ್ಬೊ ಪೆಟ್ರೋಲ್ ಎಂಜಿನ್ 160 ಪಿಎಸ್ ಪವರ್ ಹಾಗೂ 253 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

best-selling-suv-hyundai-creta-price-and-specs-details

ಸುರಕ್ಷತೆಯ ವಿಷಯದಲ್ಲಿ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ISOFIX ಚೈಲ್ಡ್ ಸೀಟ್ ಆಂಕರೇಜ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿಯನ್ನು ಒಳಗೊಂಡಿದೆ. ಹಿಂದಿನ ಸೀಟ್ 2 - ಸ್ಟೆಪ್ ರಿಕ್ಲೈನ್ ಫಂಕ್ಷನ್ ಮತ್ತು ದುಬಾರಿ ಪ್ಯಾಕೇಜ್ ಜೊತೆಗೆ, ಹೊಸ ಹುಂಡೈ ಕ್ರೆಟಾ ಒಳಭಾಗವು ಸೌಕರ್ಯ ಮತ್ತು ಅನುಕೂಲಕ್ಕಾಗಿ ಕ್ಯಾಬಿನ್‌ನಲ್ಲಿ ಸಾಕಷ್ಟು ಸ್ಥಳಾವಕಾಶವನ್ನು ನೀಡಲಾಗಿದೆ.

ಇದರೊಂದಿಗೆ ಪರಿಷ್ಕೃತ ಕ್ಲೈಮೆಟ್ ಕಂಟ್ರೋಲ್ ಪ್ಯಾನಲ್, 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಡ್ರೈವರ್ ಅಸಿಸ್ಟ್ ಸಿಸ್ಟಂಗಳೊಂದಿಗೆ (ADAS) ಡ್ಯುಯಲ್-ಜೋನ್ AC ಯೊಂದಿಗೆ ಒದಗಿಸಲಾಗಿದೆ. ಜೊತೆಗೆ ಪನಾರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು 8-ಸ್ಪೀಕರ್ ಬಾಸ್ ಸೌಂಡ್ ಸಿಸ್ಟಮ್ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, February 11, 2025, 10:00 [IST]
English summary
Best selling suv hyundai creta price and specs details
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+