Kia EV6: ಆಟೋ ಎಕ್ಸ್‌ಪೋ 2025 ರಲ್ಲಿ ಅನಾವರಣಗೊಂಡ ಕಿಯಾ ಇವಿ6 ವಿಶೇಷತೆಗಳು

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 (Bharat Mobility Global Expo 2025) ರಲ್ಲಿ ಪ್ರಮುಖ ಕಾರು ತಯಾರಕ ಕಂಪನಿಯಾದ ಕಿಯಾ, ತನ್ನ ಬಹುನಿರೀಕ್ಷಿತ EV6 ಅನ್ನು ಅನಾವರಣಗೊಳಿಸಿದೆ. ಹೊಸ EV6 ಹಿಂದೆಂದಿಗಿಂತಲೂ ಆಕರ್ಷಕ ಡಿಸೈನ್, ಪವರ್ ಮತ್ತು ತಂತ್ರಜ್ಞಾನದೊಂದಿಗೆ ನಿರ್ಮಾಣಗೊಂಡಿದೆ. ವಾಹನವು ಮಾರುಕಟ್ಟೆಯಲ್ಲಿ ಅತ್ಯಂತ ಮುಂದುವರಿದ ಎಲೆಕ್ಟ್ರಿಕ್ ವಾಹನಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಬಲಪಡಿಸುವ ಗಮನಾರ್ಹ ಅಪ್‌ಡೇಟ್‌ಗಳನ್ನು ಹೊಂದಿದ್ದು, ಕಂಪನಿಯು ಕಾರಿನ ಬಗ್ಗೆ ಹೇಳಿಕೊಂಡಿರುವ ಟಾಪ್ ವಿಶೇಷತೆಳನ್ನು ನೋಡೋಣ.

ಹೊಸ ಕಿಯಾ EV6 ಬುಕಿಂಗ್‌ಗಳನ್ನು ಕಂಪನಿಯು ಅನಾವರಣಗೊಳಿಸದ ದಿನವೆ ಪ್ರಾರಂಭಿಸಿದೆ. ಇದರ ಡಿಸೈನ್ ಬಗ್ಗೆ ಹೇಳುವುದಾದ್ರೆ, ಕನೆಕ್ಟೆಡ್ DRL ಗಳೊಂದಿಗೆ ಹೊಸ ಸಿಗ್ನೇಚರ್ ಸ್ಟಾರ್ ಮ್ಯಾಪ್ ಲೈಟಿಂಗ್, ಮುಂಭಾಗದ GT-ಲೈನ್ ಸ್ಟೈಲಿಂಗ್ ಬಂಪರ್, 19-ಇಂಚಿನ ಅಲಾಯ್ ವೀಲ್‌ಗಳು ಸೇರಿದಂತೆ ಕಾರು ಹೆಚ್ಚು ಸ್ಪೋರ್ಟಿಯರ್ ಮತ್ತು ಹೆಚ್ಚು ಆಕ್ರಮಣಕಾರಿ ಮುಂಭಾಗದ ಡಿಸೈನ್ ಹೊಂದಿದೆ.

bharat-mobility-global-expo-2025-kia-ev6-top-things

ಇವಿಷ್ಟೇ ಅಲ್ಲದೇ ಸ್ಟಾರ್-ಮ್ಯಾಪ್ LED ಹಿಂಭಾಗದ ಲ್ಯಾಂಪ್‌ಗಳು ಸೇರಿದಂತೆ 15 ವರ್ಧನೆಗಳೊಂದಿಗೆ, ಹೊಸ EV6 ಅದರ ಹಿಂದಿನ ಮಾಡೆಲ್‌ಗಿಂತ ಹೆಚ್ಚು ಆಕರ್ಷಕವಾಗಿದೆ. ಕೇವಲ ಡಿಸೈನ್ ಮಾತ್ರವಲ್ಲದೇ ಟೆಕ್ನಾಲಜಿಯನ್ನು ಹೇರಳವಾಗಿ ಈ ಕಾರಿನಲ್ಲಿ ಬಳಸಲಾಗಿದೆ. ಹಿಂದಿನ ಜೆನ್ EV6 ಗೆ ಹೋಲಿಸಿದರೆ ಇದು ಐದು ಹೆಚ್ಚುವರಿ ADAS 2.0 ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಕಂಪನಿ ತಿಳಿಸಿದೆ.

ಈ ಅತ್ಯಾಧುನಿಕ ಕಾರು, 27 ಸುಧಾರಿತ ಸುರಕ್ಷತೆ ಮತ್ತು ಚಾಲಕ ಸಹಾಯ ವೈಶಿಷ್ಟ್ಯ (Driver assistance features) ಗಳನ್ನು ಒಳಗೊಂಡಿರುವ ADAS 2.0 ಪ್ಯಾಕೇಜ್‌ನೊಂದಿಗೆ ಸಜ್ಜುಗೊಂಡಿದೆ. ಹೆಚ್ಚುವರಿ ಪವರ್ ಮತ್ತು ವರ್ಧಿತ ADAS ಪ್ಯಾಕೇಜ್‌ನೊಂದಿಗೆ, EV6 ಅನ್ನು ತನ್ನ ವಿಭಾಗದಲ್ಲಿಯೇ ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಲಾಗಿದೆ. ಈ ಆಧುನಿಕ ಫೀಚರ್‌ಗಳನ್ನು ನಮ್ಮ ಪ್ರಮುಖ ಮಾದರಿ EV9 ನ ಅತ್ಯಾಧುನಿಕ ತಂತ್ರಜ್ಞಾನದಿಂದ ಪಡೆಯಲಾಗಿದೆ ಎಂದು ಕಿಯಾ ಕಂಪನಿ ಹೇಳಿದೆ.

bharat-mobility-global-expo-2025-kia-ev6-top-things

ಇಂಟೀರಿಯರ್ ವಿಷಯಕ್ಕೆ ಬಂದರೆ, ಹ್ಯಾಂಡ್ಸ್ - ಆನ್ ಫೈಂಡ್ ತಂತ್ರಜ್ಞಾನದೊಂದಿಗೆ ಡಬಲ್ D-ಕಟ್ ಸ್ಟೀರಿಂಗ್ ವೀಲ್, ಹೊಸ EV6 ಡ್ಯುಯಲ್ 31.2cm (12.3-ಇಂಚಿನ) ಪನೋರಮಿಕ್ ಬಾಗಿದ ಡಿಸ್ಪ್ಲೆಯನ್ನು ನೀಡಲಾಗಿದ್ದು, ಇದು ಕಿಯಾದ ಮುಂದಿನ ಪೀಳಿಗೆಯ ಇನ್ಫೋಟೈನ್‌ಮೆಂಟ್ ಸಿಸ್ಟಮ್ - ಕನೆಕ್ಟೆಡ್ ಕಾರ್ ನ್ಯಾವಿಗೇಷನ್ ಕಾಕ್‌ಪಿಟ್ ಅನ್ನು ಸಂಯೋಜಿಸುತ್ತದೆ.

ಹೊಸ ಕಿಯಾ EV6 ಕಿಯಾ ಕನೆಕ್ಟ್ 2.0 ಅನ್ನು ಸಹ ಹೊಂದಿದ್ದು, ಕಿಯಾ ಕನೆಕ್ಟ್ ಡಯಾಗ್ನೋಸ್ಟಿಕ್ಸ್ ಮತ್ತು ಓವರ್-ದಿ-ಏರ್ (OTA) ಸಾಫ್ಟ್‌ವೇರ್ ಅಪ್‌ಡೇಟ್‌ಗಳನ್ನು ಸಪೋರ್ಟ್ ಮಾಡುತ್ತದೆ. ಈ ಮೂಲಕ ಹೊಸ EV6 ಇನ್ನೂ ಹೆಚ್ಚು ಪ್ರೀಮಿಯಂ ಮತ್ತು ವಿಶಾಲವಾದ ಕ್ಯಾಬಿನ್ ಜೊತೆಗೆ ಐಷಾರಾಮಿ ಅತ್ಯಾಧುನಿಕ ಕಾರಾಗಿ ಹೊರಹೊಮ್ಮಿದೆ ಎಂದು ಕಂಪನಿ ಹೇಳಿಕೊಂಡಿದೆ.

bharat-mobility-global-expo-2025-kia-ev6-top-things

ಈಗ ಶಕ್ತಿಯುತವಾದ 84-kWh ಬ್ಯಾಟರಿಯನ್ನು ಹೊಂದಿದ್ದು, 650 ಕಿ.ಮೀಗಿಂತ ಹೆಚ್ಚಿನ ರೇಂಜ್ ನೀಡುತ್ತದೆ. ಇದರ ಎಲೆಕ್ಟ್ರಿಕ್ ಮೋಟಾರ್ 325 PS ಪವರ್ ಮತ್ತು 605 Nm ಟಾರ್ಕ್ ಹೊರಹಾಕುತ್ತದೆ. ತನ್ನ 350-kW ಸ್ಪೀಡ್ ಚಾರ್ಜರ್ ಮೂಲಕ ಕೇವಲ 18 ನಿಮಿಷಗಳಲ್ಲಿ ಶೇ10 ರಿಂದ ಶೇ80 ರಷ್ಟು ಚಾರ್ಜ್ ಮಾಡಬಹುದು. ಒಟ್ಟಾರೆಯಾಗಿ ಸುರಕ್ಷಿತ ಹಾಗೂ ಪವರ್‌ಫುಲ್ ಎಲೆಕ್ಟ್ರಿಕ್ ವಾಹನಗಳಲ್ಲಿ ಒಂದಾಗಲಿದೆ ಎಂದು ಕಂಪನಿ ಭರವಸೆ ನೀಡದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, February 1, 2025, 13:00 [IST]
English summary
Bharat mobility global expo 2025 kia ev6 top things
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+