ಚೀನಾದ ಕಾರೆಂದು ಚಿಂತಿಸಬೇಡಿ: ವಿಮಾನದಂತೆ ಸೌಕರ್ಯವಿರುವ ಅದ್ಭುತ ಕಾರು... ನಂಬರ್‌ 1 ಆಗುತ್ತಾ?

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಬಿವೈಡಿ (BYD) ತನ್ನ ಹೊಸ ಸೀಲಿಯನ್ 7 ಕಾರನ್ನು ಇತ್ತೀಚೆಗೆ 2025ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿತು. ಈ ಹೊಸ ಬಿವೈಡಿ ಸೀಲಿಯನ್ 7 ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಈ ಹೊಸ ಬಿವೈಡಿ ಎಸ್‍ಯುವಿ ಮಾದರಿಯನ್ನು ಖರೀದಿಸಲು ಬಯಸುವ ಗ್ರಾಹಕರು ರೂ.70,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. 2025ರ ಮಾರ್ಚ್ ತಿಂಗಳಿನಲ್ಲಿ ಈ ಹೊಸ ಬಿವೈಡಿ ಎಲೆಕ್ಟ್ರಿಕ್ ಕಾರಿನ ವಿತರಣೆಗಳು ಪ್ರಾರಂಭವಾಗಲಿದೆ.

ಈ ಹೊಸ ಬಿವೈಡಿ ಸೀಲಿಯನ್ 7 ಎಲೆಕ್ಟ್ರಿಕ್ ಕಾರಿನ ಇತರ ಪ್ರಮುಖ ಫೀಚರ್ಸ್ ಗಳೆಂದರೆ, ಈ ಕಾರಿನಲ್ಲಿ ಪನರೊಮಿಕ್ ಸನ್‌ರೂಫ್ ಹಿಟೀಂಗ್ ಮತ್ತು ವಿಟಿಲಿಷನ್ ನೊಂದಿಗೆ ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳು, ಎರಡೂ ಝೋನ್ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, 12-ಸ್ಪೀಕರ್ ಆಡಿಯೊ ಸಿಸ್ಟಮ್ ಮತ್ತು ಹೆಡ್-ಅಪ್ ಡಿಸ್ ಪ್ಲೇ ಮತ್ತು ADAS ಸೂಟ್ ಅನ್ನು ಪಡೆಯುತ್ತದೆ.

BYD Sealion 7

ಹೊಸ ಬಿವೈಡಿ ಸೀಲಿಯನ್ 7 ಎಲೆಕ್ಟ್ರಿಕ್ ಕಾರು RWD ಮತ್ತು AWD ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿರುತ್ತದೆ. ಈ ಹೊಸ ಬಿವೈಡಿ ಎಲೆಕ್ಟ್ರಿಕ್ ಕಾರು ಎರಡು ವಿಭಿನ್ನ ಬ್ಯಾಟರಿ ಪ್ಯಾಕ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಈ ಕಾರಿನ RWD ಮಾದರಿಯು 82.5 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು 308 bhp ಪವರ್ ಮತ್ತು 380 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಇದನ್ನು ಫುಲ್ ಚಾರ್ಜ್ ಮಾಡಿದರೆ 482 ಕಿಲೋಮೀಟರ್ ವರೆಗೆ ಚಲಿಸುತ್ತದೆ. ಈ ಬಿವೈಡಿ ಸೀಲಿಯನ್ 7 ಎಲೆಕ್ಟ್ರಿಕ್ ಕಾರಿನ AWD ಮಾದರಿಯು ದೊಡ್ಡ 91.3 kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ, ಇದು EV ಗೆ 523 bhp ಪವರ್ ಮತ್ತು 690 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು AWD ಮಾದರಿಯು 502 ಕಿಲೋಮೀಟರ್ ಚಲಿಸುತ್ತದೆ.

BYD Sealion 7

ಈ ಹೊಸ ಬಿವೈಡಿ ಸೀಲಿಯನ್ 7 (BYD SeaLion 7) ಎಲೆಕ್ಟ್ರಿಕ್ ಎಸ್‍ಯುವಿ ಕೂಪ್ ತರಹದ ರೂಫ್ ನೊಂದಿಗೆ ಇತರ ಕಾರುಗಳ ಅನುಗುಣವಾಗಿ ಬರುತ್ತದೆ. ಸೀಲಿಯನ್ 7 ಚೈನೀಸ್ ಕಾರು ತಯಾರಕರ ಸಿಗ್ನೇಚರ್ ವಿನ್ಯಾಸ ಶೈಲಿಯ ಅಂಶಗಳಿವೆ. ಈ ಹೊಸ ಸೀಲಿಯನ್ 7 ಎಲೆಕ್ಟ್ರಿಕ್ ಕಾರುಸ್ವೆಪ್‌ಬ್ಯಾಕ್ LED ಹೆಡ್‌ಲೈಟ್‌ಗಳೊಂದಿಗೆ LED ಡೇಟೈಮ್ ರನ್ನಿಂಗ್ ಲೈಟ್‌ಗಳೊಂದಿಗೆ (DRL) ಸಂಯೋಜನೆಯನ್ನು ಒಳಗೊಂಡಿದೆ.

ಇದರೊಂದಿಗೆ ಬ್ಲ್ಯಾಕ್ ಹೊದಿಕೆಯೊಂದಿಗೆ ವ್ಹೀಲ್ ಅರ್ಚಾರ್ ಗಳನ್ನು ಪಡೆಯುತ್ತದೆ. ಆದರೆ ಬಿವೈಡಿ ಸೀಲಿಯನ್ 7 ಕಾರಿನ ಹಿಂಭಾಗದಲ್ಲಿ ನಯವಾದ ಎಲ್ಇಡಿ ಲೈಟ್ ಬಾರ್, ಡ್ಯುಯಲ್-ಟೋನ್ ಹಿಂಬದಿಯ ಬಂಪರ್ ಮತ್ತು ರೂಫ್ ಸ್ಪಾಯ್ಲರ್ ಮೂಲಕ ಜೋಡಿಸಲಾದ ಸುತ್ತುವ ಎಲ್ಇಡಿ ಟೈಲ್‌ಲೈಟ್‌ಗಳನ್ನು ಒಳಗೊಂಡಿದೆ. ಈ ಹೊಸ ಕಾರು ನಾಲ್ಕು ವಿಭಿನ್ನ ಬಣ್ಣಗಳ ಆಯ್ಕೆಗಳಲ್ಲಿ ಹೊಂದಿವೆ.

BYD Sealion 7

ಹೊಸ ಬಿವೈಡಿ ಸೀಲಿಯನ್ 7 ಎಲೆಕ್ಟ್ರಿಕ್ ಎಸ್‍ಯುವಿ ಕ್ಯಾಬಿನ್ ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಅನ್ನು 10.25-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 15.6-ಇಂಚಿನ ತಿರುಗುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಅದರ ಇತರ ಬಿವೈಡಿ ಕಾರುಗಳಂತೆ ಇದೆ. ಇನ್ನು ಈ ಎಲೆಕ್ಟ್ರಿಕ್ ಕಾರು ಹಲವಾರು ಆಧುನಿಕ ಫೀಚರ್ಸ್ ಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, January 21, 2025, 11:51 [IST]
English summary
Byd sealion 7 ev bookings open in india launch soon details
Read more on byd india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+