BYD: ಇತ್ತೀಚೆಗೆ ಬಿಡುಗಡೆಯಾದ ಹೊಸ ಚೀನಾ ಕಾರಿನ ವಿಶೆಷತೆಗಳು! ಫುಲ್‌ ಡಿಮ್ಯಾಂಡ್!

ಚೀನಾ ಮೂಲದ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ ಬಿವೈಡಿ (Build your Dreams), ತನ್ನ ಹೊಸ ಬಿವೈಡಿ ಸೀಲಯನ್ 7 (BYD SEALION 7) ಕಾರನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಹೊಸ ಬಿವೈಡಿ ಸೀಲೈಯನ್ 7 ಎರಡು ಬ್ಯಾಟರಿ ಪ್ಯಾಕ್‌ಗಳನ್ನು ಒಳಗೊಂಡಿರುವ ವೇರಿಯೆಂಟ್‌ಗಳನ್ನು ಹೊಂದಿದ್ದು, ಪ್ರೀಮಿಯಂ ವೇರಿಯೆಂಟ್ 82.56 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಇದು 48,90,000 ರೂ. ಎಕ್ಸ್‌ ಶೊರೂಂ ಬೆಲೆಯನ್ನು ಹೊಂದಿದೆ. ಹಾಗೆಯೇ ಪರ್ಫಾಮೆನ್ಸ್ ವೇರಿಯೆಂಟ್ 82.56 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರಲಿದ್ದು, ಇದು 54,90,000 ರೂ. ಎಕ್ಸ್‌ ಶೋರೂಂ ಬೆಲೆಯನ್ನು ಹೊಂದಿದೆ.

ಪ್ರೀಮಿಯಂ ವೇರಿಯೆಂಟ್ 6.7 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಪರ್ಫಾರ್ಮೆನ್ಸ್ ವೇರಿಯೆಂಟ್ 4.5 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಪ್ರೀಮಿಯಂ ವೇರಿಯೆಂಟ್ ಪೂರ್ಣ ಚಾರ್ಜ್‌ನಲ್ಲಿ 567 ಕಿ.ಮೀ ರೇಂಜ್ ನೀಡಿದರೆ, ಪರ್ಫಾರ್ಮೆನ್ಸ್ ವೇರಿಯೆಂಟ್ ಪ್ರತಿ ಚಾರ್ಜ್‌ನಲ್ಲಿ 542 ಕಿ.ಮೀ ರೇಂಜ್ ನೀಡುವುದಾಗಿ ಕಂಪನಿ ಹೇಳಿದೆ.

byd-sealion7-top-things-price-features-and-engine-details

ಪ್ರೀಮಿಯಂ ವೇರಿಯೆಂಟ್ 230 kW ಪವರ್ ಮತ್ತು 380 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಾಗೆಯೇ ಪರ್ಫಾಮೆನ್ಸ್ ವೇರಿಯೆಂಟ್ 390 kW ಪವರ್ ಮತ್ತು 690 Nm ಟಾರ್ಕ್ ಹೊರಹಾಕುತ್ತದೆ. ಫೀಚರ್ಸ್ ವಿಷಯಕ್ಕೆ ಬಂದರೆ, ಪ್ರೀಮಿಯಂ ಕ್ವಿಲ್ಟೆಡ್ ನಪ್ಪಾ ಲೆದರ್ ಸೀಟ್‌ಗಳು ಮತ್ತು 128-ಬಣ್ಣದ ಆಂಬಿಯೆಂಟ್ ಲೈಟಿಂಗ್, 15.6-ಇಂಚಿನ (39.62 cms) ತಿರುಗುವ ಟಚ್‌ಸ್ಕ್ರೀನ್‌ನೊಂದಿಗೆ ಇಂಟೀರಿಯರ್ ಅನ್ನು ಡಿಸೈನ್ ಮಾಡಲಾಗಿದೆ.

ಹೆಚ್ಚುವರಿ ಮುಖ್ಯಾಂಶಗಳಲ್ಲಿ 12 ಡೈನಾಡಿಯೊ ಸ್ಪೀಕರ್‌ಗಳೊಂದಿಗೆ ಆಡಿಯೋ ಸಿಸ್ಟಮ್, ವೆಂಟಿಲೇಟೆಡ್ ಸೀಟ್‌ಗಳು, 50 W ವೈರ್‌ಲೆಸ್ ಫೋನ್ ಚಾರ್ಜರ್, ಎಲೆಕ್ಟ್ರಿಕ್ ಸನ್‌ಶೇಡ್‌ನೊಂದಿಗೆ ಪನೋರಮಿಕ್ ಗ್ಲಾಸ್‌ರೂಫ್, ಹೆಡ್ಸ್-ಅಪ್ ಡಿಸ್ಪ್ಲೇ ಸೇರಿವೆ. ಫ್ಯೂಚರಿಸ್ಟಿಕ್ ಡೈನಾಮಿಕ್ ವಾಟರ್ ಡ್ರಾಪ್ ಟೈಲ್ ಲ್ಯಾಂಪ್‌ಗಳು, ಸ್ಟ್ಯಾಂಡರ್ಡ್ ಆಗಿ 11 ಏರ್‌ಬ್ಯಾಗ್‌ಗಳು, ಡ್ರೈವರ್ ಫೈಟ್‌ನೆಸ್ ಮಾನಿಟರಿಂಗ್ ಸೇರಿದಂತೆ ಇತರ ವೈಶಿಷ್ಟ್ಯಗಳನ್ನು ಹೊಂದಿದೆ.

byd-sealion7-top-things-price-features-and-engine-details

ಕಂಪನಿಯು ಜನವರಿ 18 ರಂದು ಈ ಕಾರನ ಬುಕಿಂಗ್‌ಗಳನ್ನು ಪ್ರಾರಂಭಿಸಿತ್ತು. ಕೇವಲ ಒಂದು ತಿಂಗಳೊಳಗೆ ಬರೋಬ್ಬರಿ 1000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಈ ಎಲೆಕ್ಟ್ರಿಕ್ ಎಸ್‌ಯುವಿ ಗಳಿಸಿದೆ. ಈ ಕಾರು ಹೆಚ್ಚಿನ ಕ್ಯಾಬಿನ್ ಸ್ಥಳ, ಉತ್ತಮ ನಿರ್ವಹಣೆ ಮತ್ತು ವಿಸ್ತೃತ ಶ್ರೇಣಿಯನ್ನು ನೀಡುತ್ತದೆ. ಕಂಪನಿಯ ಅತ್ಯಾಧುನಿಕ ಇಂಟೆಲಿಜೆನ್ಸ್ ಟಾರ್ಕ್ ಅಡಾಪ್ಷನ್ ಕಂಟ್ರೋಲ್ (iTAC) ಮತ್ತು ಮೆಚ್ಚುಗೆ ಪಡೆದ CTB (ಸೆಲ್ ಟು ಬಾಡಿ) ತಂತ್ರಜ್ಞಾನವನ್ನು ಒಳಗೊಂಡಿದೆ.

ಈ ವಾಹನವು ಮೊದಲ ಉಚಿತ ತಪಾಸಣೆ ಸೇವೆಯೊಂದಿಗೆ 6 ವರ್ಷಗಳ ರಸ್ತೆ-ಬದಿಯ ಸಹಾಯದೊಂದಿಗೆ ಬರುತ್ತದೆ. ಭಾರತೀಯ ಗ್ರಾಹಕರಿಗೆ, BYD SEALION 7 ನೊಂದಿಗೆ ಅವರು ಆಯ್ಕೆ ಮಾಡಿದ ಸ್ಥಳದಲ್ಲಿ 7kW ಚಾರ್ಜರ್ ಅನ್ನು ಉಚಿತವಾಗಿ ಒದಗಿಸುತ್ತದೆ. ಗ್ರಾಹಕರು BYD ಯ ಕಡಿಮೆ ವೋಲ್ಟೇಜ್ ಬ್ಯಾಟರಿಯ ಮೇಲೆ 6-ವರ್ಷ/1,50,000 ಕಿಮೀ, ಯಾವುದು ಮೊದಲೋ ಅದು ಖಾತರಿಯ ಪ್ರಯೋಜನವನ್ನು ಪಡೆಯಬಹುದು.

byd-sealion7-top-things-price-features-and-engine-details

ಈ ಬ್ಯಾಟರಿ LFP (ಲಿಥಿಯಂ ಐರನ್ ಫಾಸ್ಫೇಟ್) ತಂತ್ರಜ್ಞಾನವನ್ನು ಹೊಂದಿದೆ. BYD ಯ ಕಡಿಮೆ ವೋಲ್ಟೇಜ್ ಬ್ಯಾಟರಿಯು ಇತರ ಕಡಿಮೆ ವೋಲ್ಟೇಜ್ ಬ್ಯಾಟರಿಗಿಂತ ಆರು ಪಟ್ಟು ಹಗುರವಾಗಿದೆ. ಆಟೋ-ಡಿಸ್ಚಾರ್ಜ್ ಬಳಕೆಯಲ್ಲಿ ಐದು ಪಟ್ಟು ಉತ್ತಮವಾಗಿದೆ. 15 ವರ್ಷಗಳ ಜೀವಿತಾವಧಿಯನ್ನು ಹೊಂದಿದೆ. ಇದು 82.56 kWh ಬ್ಲೇಡ್ ಬ್ಯಾಟರಿಯ ಜೊತೆಗೆ ಭಾರತದಲ್ಲಿ BYD ಶ್ರೇಣಿಯಾದ್ಯಂತ 8-ವರ್ಷಗಳ ಖಾತರಿ ಮತ್ತು ಇತರ ಪ್ರಯೋಜನಗಳನ್ನು ನೀಡುವುದಾಗಿ ಕಂಪನಿ ಹೇಳಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, February 22, 2025, 13:00 [IST]
English summary
Byd sealion7 top things price features and engine details
Read more on byd electric vehicles india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+