BYD: ಚೀನಾ ಕಂಪನಿಯಿಂದ ರಸ್ತೆ & ನೀರಿನ ಮೇಲೆ ಓಡಾಡುವ ಕಾರು ಅನಾವರಣ.. 1,000 ಕಿ.ಮೀ ಮೈಲೇಜ್!
ಚೀನಾ ಮೂಲದ ಬಿವೈಡಿ (BYD) ಜನಪ್ರಿಯ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾಗಿದೆ. ಜಾಗತಿಕವಾಗಿ ಟೆಸ್ಲಾದೊಂದಿಗೆ ಸ್ಪರ್ಧಿಸುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ ಸೀಲ್, ಅಟ್ಟೊ 3 ಹಾಗೂ ಇಮ್ಯಾಕ್ 7 ಕಾರುಗಳನ್ನು ಮಾರಾಟಗೊಳಿಸುತ್ತಿದೆ. ನವದೆಹಲಿಯಲ್ಲಿ ಜರುಗುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಹೊಚ್ಚ ಹೊಸ ಯಾಂಗ್ವಾಂಗ್ ಯು8 (YangWang U8) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಹಿರಂಗಗೊಳಿಸಿದೆ. ಬನ್ನಿ.. ಈ ನೂತನ ಕಾರಿನ ಬಗ್ಗೆ ಒಂದಷ್ಟು ವಿವರಗಳನ್ನು ತಿಳಿಯೋಣ.
ನೂತನ ಬಿವೈಡಿ ಯಾಂಗ್ವಾಂಗ್ ಯು8 (BYD YangWang U8) ಎಲೆಕ್ಟ್ರಿಕ್ ಎಸ್‌ಯುವಿ ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದೆ. ಮುಂಭಾಗದ ಫಾಸಿಯಾದಲ್ಲಿ ಪಿಕ್ಸಲೇಟೆಡ್ ಪ್ಯಾಟರ್ನ್ ಗ್ರಿಲ್‌ನ್ನು ಒಳಗೊಂಡಿದೆ. ಉತ್ತಮವಾಗಿರುವ ಹೆಡ್‌ಲೈಟ್‌ಗಳು ಮತ್ತು ಡಿಆರ್‌ಎಲ್‌ಗಳನ್ನು ಪಡೆದಿದೆ. ಬ್ಲ್ಯಾಕ್-ಔಟ್ ವೀಲ್‌ಗಳು, ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳು, ದೊಡ್ಡದಾಗಿರುವ ಟೈಲ್‌ಗೇಟ್ ಮತ್ತು ಎಲ್ಇಡಿ ಟೈಲ್ ಲೈಟ್‌ಗಳನ್ನು ತನ್ನದಾಗಿಸಿಕೊಂಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಈ ಕಾರು, ಹೈಬ್ರಿಡ್ ಎಂಜಿನ್‌ನ್ನು ಒಳಗೊಂಡಿದೆ. 49.05 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಮತ್ತು 2.0-ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 1,184 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹೊರಹಾಕುತ್ತದೆ. 3.6 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ನೂತನ ಬಿವೈಡಿ ಯಾಂಗ್ವಾಂಗ್ ಯು8 ಎಲೆಕ್ಟ್ರಿಕ್ ಕಾರು, ಭರ್ತಿ ಚಾರ್ಜ್‌ನಲ್ಲಿ 180 ಕಿ.ಮೀ ಓಡುತ್ತದೆ. 75 ಲೀ. ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ. ಒಟ್ಟಾರೆಯಾಗಿ 1,000 ಕಿಲೋಮೀಟರ್ ಮೈಲೇಜ್ ಕೊಡುತ್ತದೆ. ಇದರಲ್ಲಿ ಉಪಯೋಗಿಸಲಾದ ಬ್ಯಾಟರಿ ಪ್ಯಾಕ್ 18 ನಿಮಿಷದಲ್ಲಿ 30 ರಿಂದ 80% ಚಾರ್ಜ್ ಆಗುತ್ತದೆ.

ಈ ಬಿವೈಡಿ ಯಾಂಗ್ವಾಂಗ್ ಯು8 ಎಲೆಕ್ಟ್ರಿಕ್ ಎಸ್‌ಯುವಿ, ಒಂದು ವಿಶಿಷ್ಟವಾದ 'ಯಾಚಿಂಗ್' ಎಂಬ ಡ್ರೈವಿಂಗ್ ಮೋಡ್ ಆಯ್ಕೆಯನ್ನು ಹೊಂದಿದೆ. ಇದು ಈ ಕಾರನ್ನು ರಸ್ತೆ ಮಾತ್ರವಲ್ಲದೆ, ನೀರಿನಲ್ಲೂ ಚಲಾಯಿಸಲು ನೆರವಾಗುತ್ತದೆ. ಅಪಾಯ ಒದಗಿ ಬಂದಾಗ ಸುಮಾರು 30 ನಿಮಿಷಗಳ ಕಾಲ ಈ ಕಾರನ್ನು ನೀರಿನಲ್ಲಿ ಓಡಿಸಬಹುದು. ಸಣ್ಣ ಹನಿಯೂ ಕಾರಿನ ಒಳಗೆ ಪ್ರವೇಶಿಸುವುದಿಲ್ಲ.
ಹೊಸ ಕಾರು, ದುಬಾರಿ ಬೆಲೆಯನ್ನು ಹೊಂದಿರಲಿದ್ದು, ರೂ.1.23 ಕೋಟಿ (ಎಕ್ಸ್ ಶೋರೂಂ) ದರದಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿರಲಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿಗೆ ಲ್ಯಾಂಡ್ ರೋವರ್ ರೇಂಜ್ ರೋವರ್ ಹಾಗೂ ಬಿಎಂಡಬ್ಲ್ಯೂ ಎಕ್ಸ್7 ಕಾರು ಪ್ರಬಲವಾದ ಪ್ರತಿಸ್ಪರ್ಧಿಯಾಗಲಿವೆ.

ಇನ್ನು, ಬಿವೈಡಿ ಕಂಪನಿಯು 'ಸೀಲಿಯನ್ 7' ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅನಾವರಣ ಮಾಡಿದೆ. ಈ ಕಾರು 82.56 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 567 ಕಿ.ಮೀ ಓಡುತ್ತದೆ. ಈಗಾಗಲೇ, ಈ ಕಾರಿನ ಬುಕ್ಕಿಂಗ್ ಶುರುವಾಗಿದ್ದು, ಆಸಕ್ತ ಗ್ರಾಹಕರು ರೂ.70,000 ಮುಂಗಡ ಹಣವನ್ನು ಪಾವತಿಸುವ ಮೂಲಕ ಆರ್ಡರ್ ಮಾಡಬಹುದು.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








