ನೀವು ನಂಬಲ್ಲ! ದಸರಾ, ದೀಪಾವಳಿಗೆ ಮಾರಾಟವಾದ ಕಾರು, ಸ್ಕೂಟರ್‌ಗಳೆಷ್ಟು ಗೊತ್ತಾ?

ಭಾರತೀಯ ಆಟೋ ಉದ್ಯಮಕ್ಕೆ 2025 ರ ಅಕ್ಟೋಬರ್ ತಿಂಗಳು ಭರ್ಜರಿ ಲಾಭ ತಂದುಕೊಟ್ಟಿದೆ. ಅಕ್ಟೋಬರ್ ತಿಂಗಳಿನಲ್ಲಿ ಬಂದ ಸಾಲು ಸಾಲು ಹಬ್ಬಗಳು ಹಾಗೂ ಹಬ್ಬಗಳಿಗೂ ಮುನ್ನ ಘೋಷಣೆಯಾಗಿದ್ದ GST ಕಡಿತದ ಘೋಷಣೆಯು ಗ್ರಾಹಕರಲ್ಲಿ ವಾಹನ ಖರೀದಿಯ ಉತ್ಸಾಹವನ್ನು ಹೆಚ್ಚಿಸಿತ್ತು. ಭಾರತೀಯ ಆಟೋಮೊಬೈಲ್ ತಯಾರಕರ ಸಂಘ (SIAM)ದ ಪ್ರಕಾರ, ಅಕ್ಟೋಬರ್ ತಿಂಗಳಿನಲ್ಲಿ ಬರೋಬ್ಬರಿ 28,01,412 ವಾಹನಗಳು ಭಾರತದಲ್ಲಿ ಮಾರಾಟವಾಗಿರುವುದಾಗಿ ವರದಿಯಾಗಿದೆ. ಇದರಲ್ಲಿ ಪ್ಯಾಸೆಂಜರ್ ಕಾರುಗಳು, ತ್ರಿಚಕ್ರ ವಾಹನಗಳು, ಸ್ಕೂಟರ್, ಬೈಕ್ ‌ಗಳು ಸೇರಿವೆ.

ಪ್ಯಾಸಿಂಜರ್ ಕಾರು ವಿಭಾಗದಲ್ಲಿನ ಹ್ಯಾಚ್ ‌ಬ್ಯಾಕ್‌ಗಳು, ಸೆಡಾನ್ ‌ಗಳು, ಎಸ್‌ಯುವಿಗಳನ್ನು ಒಳಗೊಂಡಂತೆ 4,60,739 ವಾಹನಗಳು ಅಕ್ಟೋಬರ್‌ ತಿಂಗಳಲ್ಲಿ ದಾಖಲೆಯ ಮಾರಾಟವನ್ನು ಕಂಡಿವೆ. ಇದು ಇತಿಹಾಸದಲ್ಲೇ ಈ ಮಟ್ಟದ ಮಾರಾಟವನ್ನು ಕಂಡಿಲ್ಲದ ಅಕ್ಟೋಬರ್ ತಿಂಗಳಾಗಿದೆ, ಕಳೆದ ವರ್ಷ ಇದೇ ಅವಧಿಗೆ (ಅಕ್ಟೋಬರ್ 2024) ಹೋಲಿಸಿದರೆ ಶೇ17.2 ರಷ್ಟು ಬೆಳವಣಿಗೆ ಎಂದು ಭಾರತೀಯ ಆಟೋಮೊಬೈಲ್ ತಯಾರಕರ ಸಂಘ ತಿಳಿಸಿದೆ.

car-scooter-bike-auto-rickshaw-october-2025-sales-report

ಭಾರತೀಯ ಆಟೋಮೊಬೈಲ್ ತಯಾರಕರ ಸಂಘದ ಡೈರೆಕ್ಟರ್ ರಾಜೇಶ್ ಮೆನನ್ ಮಾತನಾಡಿ, ಸಾಲು ಸಾಲು ಹಬ್ಬಗಳು ದೇಶದಲ್ಲಿ ಗ್ರಾಹಕರನ್ನು ಡೀಲರ್‌ಶಿಪ್‌ಗಳಿಗೆ ಬರಮಾಡಿಕೊಂಡರೆ, ಸೆಪ್ಟೆಂಬರ್ 22 ರಿಂದ ಜಾರಿಗೆ ಬಂದ GST ಇಳಿಕೆಯು ಡೀಲರ್‌ಶಿಪ್‌ನಿಂದ ವಾಹನಗಳನ್ನು ಮನೆಗೆ ಕೊಂಡೊಯ್ಯುವಂತೆ ಮಾಡಿದೆ. ದೇಶಾದ್ಯಂತ ವಾಹನಗಳನ್ನು ಸಾಗಿಸುವಲ್ಲಿ ಕೆಲವು ವ್ಯವಸ್ಥಾಪನಾ ಸವಾಲುಗಳ ಹೊರತಾಗಿಯೂ, ಬೇಡಿಕೆ ತುಂಬಾ ಹೆಚ್ಚಿತ್ತು ಎಂದು ಅವರು ಹೇಳಿದ್ದಾರೆ.

ದ್ವಿಚಕ್ರ ವಾಹನಗಳ ವಿಷಯಕ್ಕೆ ಬಂದರೆ, ಅಕ್ಟೋಬರ್ 2025 ರಲ್ಲಿ ಬರೋಬ್ಬರಿ 22,10,727 ವಾಹನಗಳು ಮಾರಾಟವಾಗಿ ದಾಖಲೆ ನಿರ್ಮಿಸಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ2.1 ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ. ಇದರಲ್ಲಿ ಸ್ಕೂಟರ್‌ಗಳದ್ದೇ ಹೆಚ್ಚು ಪಾಲಿದ್ದು, ಶೇ14.3 ರಷ್ಟು ಬೆಳವಣಿಗೆ ಸಾಧಿಸಿವೆ. ಸಿಟಿ ಸವಾರರು ಹಾಗೂ ಗ್ರಾಮೀಣ ಭಾಗಗಳಲ್ಲಿ ಜನ ಮುಗಿಬಿದ್ದು ಸ್ಕೂಟರ್‌ಗಳನ್ನು ಖರೀದಿಸಿದ್ದಾರೆ. ಗ್ರಾಮೀಣ ಮಾರುಕಟ್ಟೆಯ ಏರಿಳಿತಗಳಿಂದಾಗಿ ಮೋಟಾರ್ ಸೈಕಲ್‌ಗಳು ಶೇ.4 ರಷ್ಟು ಕುಸಿತ ಕಂಡಿವೆ.

car-scooter-bike-auto-rickshaw-october-2025-sales-report

ತ್ರಿಚಕ್ರ ವಾಹನಗಳ ವಿಷಯಕ್ಕೆ ಬಂದರೆ, ಪ್ಯಾಸಿಂಜರ್ ಆಟೋಗಳು, ಗೂಡ್ಸ್ ‌ಗಳು ಮತ್ತು ಎಲೆಕ್ಟ್ರಿಕ್ ಆಟೋಗಳು ಒಳಗೊಂಡಂತೆ ದಾಖಲೆಯ 81,288 ವಾಹನಗಳು ಮಾರಾಟವಾಗಿದ್ದು, ಒಟ್ಟಾರೆ ಶೇ5.9 ರಷ್ಟು ಬೆಳವಣಿಗೆ ಕಂಡಿವೆ. ಪ್ಯಾಸಿಂಜರ್ ಆಟೋಗಳು ಶೇ7.6 ಬೆಳವಣಿಗೆ ಹಾಗೂ ಗೂಡ್ಸ್ ಆಟೋ‌ಗಳು ಶೇ2.8 ಬೆಳವಣಿಗೆ ಕಂಡರೆ, ಎಲೆಕ್ಟ್ರಿಕ್ ಆಟೋಗಳ ನಿಧಾನ ಗತಿಯ ಗ್ರಾಹಕ ಅಳವಡಿಕೆಯಿಂದಾಗಿ ಶೇ27.2 ರಷ್ಟು ಕುಸಿತವನ್ನು ಕಂಡಿವೆ.

ಉದ್ಯಮ ತಜ್ಞರು ಹೇಳುವಂತೆ ಹಬ್ಬದ ಸೀಸನ್ ಮತ್ತು ಕಡಿಮೆಯಾದ GST ದರಗಳ ಸಂಯೋಜನೆಯು ಮಾರಾಟ ಮತ್ತು ನೋಂದಣಿಗಳನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಡಿಸ್ಕೌಂಟ್ ‌ಗಳು, ಆಫರ್ ‌ಗಳು ಮತ್ತು ತೆರಿಗೆ ಪ್ರಯೋಜನಗಳು ಖರೀದಿಗಳನ್ನು ಹೆಚ್ಚು ಆಕರ್ಷಕವಾಗಿ ಮಾಡಿದ್ದರಿಂದ ಹೆಚ್ಚಿನ ಗ್ರಾಹಕರು ಹೊಸ ವಾಹನಗಳನ್ನು ಖರೀದಿಸಲು ಆದ್ಯತೆ ನೀಡಿದರು.

car-scooter-bike-auto-rickshaw-october-2025-sales-report

ಅಕ್ಟೋಬರ್ 2025 ರ ಮಾರಾಟ ಸಂಖ್ಯೆಗಳು ಭಾರತೀಯ ಖರೀದಿದಾರರಲ್ಲಿ ಬೆಳೆಯುತ್ತಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತವೆ. ಹೆಚ್ಚಿನ ಹೊಸ ಮಾಡಲ್‌ಗಳು ಶೀಘ್ರದಲ್ಲೇ ಬರಲಿವೆ, EV ಅಳವಡಿಕೆ ಸ್ಥಿರವಾಗಿ ಹೆಚ್ಚುತ್ತಿರುವುದರಿಂದ ಮುಂಬರುವ ತಿಂಗಳುಗಳಲ್ಲಿ ಆಟೋ ಉದ್ಯಮವು ಲಾಭದೊಂದಿಗೆ ಮುಂದುವರಿಯುವ ನಿರೀಕ್ಷೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Friday, November 14, 2025, 20:00 [IST]
English summary
Car scooter bike auto rickshaw october 2025 sales report
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+