ಅಗ್ಗದ ಬೆಲೆಗೆ ಸಿಗುವ 5 ಜನಪ್ರಿಯ ಸೆಡಾನ್ ಕಾರುಗಳಿವು.. ಮೈಲೇಜ್ ಕೂಡ ಸೂಪರ್, ಗ್ರಾಹಕರು ಮುಗಿಬಿದ್ದು ಕೊಳ್ಳುವರು!
ಹೊಸ ಕಾರು ಖರೀದಿಸಬೇಕೆಂಬುದು ಲಕ್ಷಾಂತರ ಜನರ ಕನಸಾಗಿರುತ್ತದೆ. ಹ್ಯಾಚ್‌ಬ್ಯಾಕ್, ಸೆಡಾನ್ ಹಾಗೂ ಎಸ್‌ಯುವಿಗಳಲ್ಲಿ ಯಾವುದನ್ನು ತೆಗೆದುಕೊಂಡರೆ, ಹೆಚ್ಚು ಒಳಿತು ಎಂಬ ಗೊಂದಲದಲ್ಲಿ ಹಲವಾರು ಇರುತ್ತಾರೆ. ನೀವು ಹೆಚ್ಚು ಕಂಫರ್ಟ್ ಜರ್ನಿ ಒದಗಿಸಬಲ್ಲ ಹೊಚ್ಚ ಹೊಸ ಕಾರೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ ಮಾರುತಿ ಸುಜುಕಿ ಡಿಜೈರ್, ಹೋಂಡಾ ಅಮೇಜ್, ಹ್ಯುಂಡೈ ಔರಾ, ಸ್ಕೋಡಾ ಸ್ಲಾವಿಯಾ & ಟಾಟಾ ಟಿಗೂರ್ ಸೆಡಾನ್‌ಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಇಲ್ಲಿ ಈ ಕಾರುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.
ಮಾರುತಿ ಸುಜುಕಿ ಡಿಜೈರ್ (Maruti Suzuki Dzire):
ಇದು ಮಧ್ಯಮ ವರ್ಗದ ಗ್ರಾಹಕರ ನೆಚ್ಚಿನ ಸೆಡಾನ್ ಆಗಿದೆ. ಅದಕ್ಕೆ ತಕ್ಕಂತೆ ರೂ.6.26 ಲಕ್ಷದಿಂದ ರೂ.9.31 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಹೊಂದಿದೆ. ಸ್ಪ್ಲೆಂಡಿಡ್ ಸಿಲ್ವರ್, ಆರ್ಕ್ಟಿಕ್ ವೈಟ್, ಮ್ಯಾಗ್ಮಾ ಗ್ರೇ, ಗ್ಯಾಲಂಟ್ ರೆಡ್ ಹಾಗೂ ಅಲ್ಲುರಿಂಗ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ. 5 ಆಸನಗಳನ್ನು ಪಡೆದಿದೆ.

ನೂತನ 'ಡಿಜೈರ್' 1.2-ಲೀಟರ್ ಪೆಟ್ರೋಲ್ ಮತ್ತು 1.2-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. ಯಾವ ಬೈಕ್‌ಗೂ ಕಮ್ಮಿಯಿಲ್ಲದ ರೀತಿಯಲ್ಲಿ 24 ರಿಂದ 33 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. 160 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ (9 ಇಂಚು), ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ & ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಕ್ರೂಸ್ ಕಂಟ್ರೋಲ್ ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ತನ್ನದಾಗಿಸಿಕೊಂಡಿದೆ.
ಹೋಂಡಾ ಅಮೇಜ್ (Honda Amaze):
ಈ ಸೆಡಾನ್‌ನ್ನು ಖರೀದಿದಾರರು ಮೆಚ್ಚಿಕೊಂಡಿದ್ದಾರೆ. ಕನಿಷ್ಠ ರೂ.7.41 ಲಕ್ಷ ಹಾಗೂ ಗರಿಷ್ಠ ರೂ.10 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ರೇಡಿಯಂಟ್ ರೆಡ್ ಮೆಟಾಲಿಕ್, ಗೋಲ್ಡನ್ ಬ್ರೌನ್ ಮೆಟಾಲಿಕ್ ಮತ್ತು ಮೆಟಿರೊಯ್ಡ್ ಗ್ರೇ ಮೆಟಾಲಿಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದೆ.

ಹೊಸ 'ಅಮೇಜ್' 1.2-ಲೀಟರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 19.46 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. 160 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ (8 ಇಂಚು), ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಹಾಗೂ 6-ಸ್ಪೀಕರ್ ಸೌಂಡ್ ಸಿಸ್ಟಮ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 3 ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಪಡೆದಿದೆ.
ಹ್ಯುಂಡೈ ಔರಾ (Hyundai Aura):
ಇದನ್ನು ಕೂಡ ಅತ್ಯುತ್ತಮ ಸೆಡಾನ್ ಎಂದು ಪರಿಗಣಿಸಲಾಗಿದೆ. ರೂ.5.98 ಲಕ್ಷದಿಂದ ರೂ.8.42 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 5 ಆಸನಗಳನ್ನು ಹೊಂದಿದೆ. 1.2-ಲೀಟರ್ ಪೆಟ್ರೋಲ್ ಮತ್ತು 1.2-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 17 ರಿಂದ 28 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ (8 ಇಂಚು) & 6 ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.

ಸ್ಕೋಡಾ ಸ್ಲಾವಿಯಾ (Skoda Slavia):
ಈ ಸೆಡಾನ್ ಕನಿಷ್ಠ ರೂ.10 ಲಕ್ಷ ಮತ್ತು ಗರಿಷ್ಠ ರೂ.17.70 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದೆ. 1-ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ತನ್ನದಾಗಿಸಿಕೊಂಡಿದೆ. 18 ರಿಂದ 20 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ (10 ಇಂಚು) ಮತ್ತು 6 ಏರ್‌ಬ್ಯಾಗ್‌ಗಳನ್ನು ಹೊಂದಿದೆ.

ಟಾಟಾ ಟಿಗೂರ್ (Tata Tigor):
ಇದು ಜನಪ್ರಿಯ ಸೆಡಾನ್ ಆಗಿದೆ. ರೂ.5.49 ಲಕ್ಷದಿಂದ ರೂ.8.74 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 5 ಆಸನಗಳನ್ನು ಪಡೆದಿದೆ. 1.2-ಲೀಟರ್ ಪೆಟ್ರೋಲ್ ಮತ್ತು 1.2-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 19 ರಿಂದ 28 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ (10.25 ಇಂಚು) ಹಾಗೂ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ತನ್ನದಾಗಿಸಿಕೊಂಡಿದೆ.


Click it and Unblock the Notifications








