ಹೊಸ ಟಾಟಾ ಸಿಯೆರಾ ಬಗ್ಗೆ ಜನರಿಗಿವೆ ಹಲವು ಗೊಂದಲಗಳು: ಎಲ್ಲದಕ್ಕೂ ಉತ್ತರ ಇಲ್ಲಿದೆ

2025 ರ ಟಾಟಾ ಸಿಯೆರಾ ಸದ್ಯ ಭಾರತದಲ್ಲಿ ಭಾರೀ ಸದ್ದು ಮಾಡುತ್ತಿದೆ, ಗ್ರಾಹಕರಲ್ಲಿ ಈ ಎಸ್‌ಯುವಿ ಬಗ್ಗೆ ಹಲವು ಗೊಂದಲಗಳಿವೆ. ಡ್ರೈವ್ ಟ್ರೈನ್ ಆಯ್ಕೆಗಳು, ವೇರಿಯೆಂಟ್, ಡೆಲಿವರಿ ಮತ್ತು ಫೀಚರ್ಸ್ ಮುಖ್ಯಾಂಶಗಳ ಬಗ್ಗೆ ಜನರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಮಿಡ್ ಸೈಜ್ ಎಸ್‌ಯುವಿ ಅತಿ ವೇಗವಾಗಿ ಭಾರತದಲ್ಲಿ ಹೆಚ್ಚು ಚರ್ಚಿಸಲ್ಪಡುತ್ತಿದೆ, ಪ್ರೀಮಿಯಂ, ವೈಶಿಷ್ಟ್ಯ-ಸಮೃದ್ಧ ಒಳಾಂಗಣ ಮತ್ತು ವ್ಯಾಪಕ ಶ್ರೇಣಿಯ ಪವರ್ ಟ್ರೇನ್ ಆಯ್ಕೆಗಳ ಜೊತೆಗೆ ಸ್ಪೋರ್ಟಿ ಲುಕ್ ಹೊಂದಿರುವ ಹೊಸ ಟಾಟಾ ಸಿಯೆರಾ ಕಾರಿನ ಬಗ್ಗೆ ಜನರಿಗಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಟಾಟಾ ಸಿಯೆರಾ ಎಷ್ಟು ಎಂಜಿನ್ ಆಯ್ಕೆಗಳನ್ನು ಹೊಂದಿದೆ?: ಟಾಟಾ ಸಿಯೆರಾ ಎಸ್‌ಯುವಿ ಒಂದು ಡೀಸೆಲ್ ಮತ್ತು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಮೊದಲನೇಯದು 1.5 ಲೀ. ಹೈಪೀರಿಯಡ್ ಟಿಜಿಡಿಐ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದ್ದು, ಇದು 157 ಬಿಹೆಚ್ ಪವರ್ ಮತ್ತು 255 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು ಕೇವಲ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದೆ.

confusions-about-new-tata-sierra-here-are-the-answers

ಎರಡನೇಯದು 1.5 ಲೀ. ನ್ಯಾಚುರಲಿ ಆಸ್ಪಿರೇಟೆಡ್ ರೆವೊಟ್ರಾನ್ ಎಂಜಿನ್ ಆಗಿದ್ದು, ಇದು 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದ್ದು, 106 ಬಿಹೆಚ್ ಪವರ್ ಮತ್ತು 145 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಮೂರನೇಯದು ಕ್ರಯೋಜೆಟ್ ಟರ್ಬೊ-ಡೀಸೆಲ್, 6-ಸ್ಪೀಡ್ MT ಅಥವಾ AT ನೊಂದಿಗೆ ಬರುತ್ತದೆ. ಇದು 116 ಬಿಹೆಚ್ ಮತ್ತು 280 ಎನ್ಎಂ (ಎಟಿ) / 260 ಎನ್ಎಂ (ಎಂಟಿ) ಟಾರ್ಕ್ ಹೊರಹಾಕುತ್ತದೆ.

ಯಾವ ವೇರಿಯೆಂಟ್ ಸನ್‌ರೂಫ್ ಹೊಂದಿದೆ?: ಪನೋರಮಿಕ್ ಸನ್ ರೂಫ್ ಅನ್ನು ಟಾಟಾ ಸಿಯೆರಾ ಪ್ಯೂರ್ + ವೇರಿಯೆಂಟ್‌ನಿಂದ ಲಭ್ಯವಿದೆ. ಈ ಟ್ರಿಮ್ ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಆಟೋ ಹೆಡ್ ಲ್ಯಾಂಪ್ ಗಳು, ರೈನ್ ಸೆನ್ಸಿಂಗ್ ವೈಪರ್ ಗಳು, ರಿಯರ್ ಯುಎಸ್ ಬಿ-ಸಿ ಫಾಸ್ಟ್ ಚಾರ್ಜಿಂಗ್ ಪೋರ್ಟ್ ಗಳು ಮತ್ತು 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ.

confusions-about-new-tata-sierra-here-are-the-answers

ಹೊಸ ಸಿಯೆರಾದ ಆರಂಭಿಕ ಬೆಲೆ ಎಷ್ಟು?: ಹೊಸ ಸಿಯೆರಾ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.11.49 ಲಕ್ಷಗಳಾಗಿದೆ. ಅದರ ಆರಂಭಿಕ ಬೆಲೆ ಹೆಚ್ಚಾಗಿದ್ದರೂ, ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ಹೆಚ್ಚು ಪ್ರೀಮಿಯಂ, ವೈಶಿಷ್ಟ್ಯ ಭರಿತ ಕಾರಾಗಿದೆ. ಇದರ ಪ್ರತಿಸ್ಪರ್ಧಿಗಳಾದ ಹ್ಯುಂಡೈ ಕ್ರೆಟಾ ರೂ.10.73 ಲಕ್ಷ, ಕಿಯಾ ಸೆಲ್ಟೋಸ್ ರೂ.10.79 ಲಕ್ಷ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ರೂ.10.76 ಲಕ್ಷವಿದ್ದು, ಇವುಗಳಿಗಿಂತ ಸಿಯೆರಾ ಬೇಸ್ ವೇರಿಯೆಂಟ್ ಬೆಲೆ ಹೆಚ್ಚಾಗಿದೆ.

4x4 / AWD ನೊಂದಿಗೆ ಬರುತ್ತದೆಯೇ?: ಹೊಸ ಟಾಟಾ ಸಿಯೆರಾ ಫ್ರಂಟ್-ವ್ಹೀಲ್-ಡ್ರೈವ್ (FWD) ನೊಂದಿಗೆ ಬರುತ್ತದೆ. ಪ್ರಸ್ತುತ ಆಲ್-ವ್ಹೀಲ್-ಡ್ರೈವ್ (AWD) ಅಥವಾ 4x4 ವ್ಯವಸ್ಥೆಯನ್ನು ಹೊಂದಿಲ್ಲ. ಈ ಎಸ್ ಯುವಿಯನ್ನು ಟಾಟಾದ ಹೊಸ ಆಲ್-ಟೆರೈನ್ ರೆಡಿ, ಓಮ್ನಿ-ಎನರ್ಜಿ ಮತ್ತು ಜ್ಯಾಮೆಟ್ರಿ ಸ್ಕೇಲೆಬಲ್ (ಎಆರ್ ಜಿಒಎಸ್) ಆರ್ಕಿಟೆಕ್ಚರ್ ನಲ್ಲಿ ನಿರ್ಮಿಸಲಾಗಿದೆ. ಹಾಗಾಗಿ ಭವಿಷ್ಯದಲ್ಲಿ AWD / 4x4 ಆವೃತ್ತಿಗಳನ್ನು ಪಡೆಯಬಹುದು, ಆದರೆ ಇನ್ನೂ ದೃಢಪಡಿಸಲಾಗಿಲ್ಲ.

confusions-about-new-tata-sierra-here-are-the-answers

ಮತ್ತೆ ಬಿಡುಗಡೆ ಮಾಡಲು ಕಾರಣವೇನು?: 1991 ರಲ್ಲಿ ಸಿಯೆರಾ ಪಾದಾರ್ಪಣೆ ಮಾಡಿದಾಗ, ಅದು ಭಾರತ ಕಂಡ ಎಲ್ಲಕ್ಕಿಂತ ಭಿನ್ನವಾಗಿತ್ತು - ದಿಟ್ಟ ನೋಟ, ಪ್ರಗತಿಶೀಲ ವಿನ್ಯಾಸ ಮತ್ತು ಅದನ್ನು ಐಕಾನಿಕ್ ಆಗಿ ಮಾಡಿದ ಪ್ರವರ್ತಕ ವೈಶಿಷ್ಟ್ಯಗಳು, ವಾಹನಕ್ಕಿಂತ ಹೆಚ್ಚಾಗಿ ಅದು ನಂಬಿಕೆಯನ್ನು ಸಾಕಾರಗೊಳಿಸಿತ್ತು. ಇದನ್ನು ಮರಳಿ ಬಿಡುಗಡೆ ಮಾಡಲು ತುಂಬಾ ಬೇಡಿಕೆ ವ್ಯಕ್ತವಾಗಿತ್ತು, ಹಾಗಾಗಿ ಆ ದಂತಕಥೆ ಮರಳಿದೆ - ಹೊಸ ಯುಗಕ್ಕಾಗಿ ಮರುಶೋಧಿಸಿ ಬಿಡುಗಡೆ ಮಾಡಲಾಗಿದೆ ಎಂದು ಟಾಟಾ ಹೇಳಿದೆ.

ಸಿಯೆರಾ ಕೇವಲ ಒಂದು ವಿಭಾಗಕ್ಕೆ ಹೊಂದಿಕೊಳ್ಳುವುದಿಲ್ಲ, ಅದು ಹೊಸತನವನ್ನು ಸೃಷ್ಟಿಸುತ್ತದೆ. ಗ್ರಾಹಕರ ಅಗತ್ಯತೆಗಳು ಮತ್ತು ಅವರ ವಿಕಸನಗೊಳ್ಳುತ್ತಿರುವ ಆಕಾಂಕ್ಷೆಗಳ ಆಳವಾದ ತಿಳುವಳಿಕೆಯಿಂದ ಹುಟ್ಟಿದ ಸಿಯೆರಾ, ಮಧ್ಯಮ ಗಾತ್ರದ ಎಸ್‌ಯುವಿ ಹೇಗಿರಬಹುದು ಎಂಬುದನ್ನು ಮರುಕಲ್ಪಿಸುತ್ತದೆ. ಸ್ಥಳ, ಸೌಕರ್ಯ, ಐಷಾರಾಮಿ, ಸುರಕ್ಷತೆ ಮತ್ತು ದೈನಂದಿನ ಉಪಯುಕ್ತತೆಯ ಪ್ರತಿಯೊಂದು ಆಯಾಮಕ್ಕು ಹೊಂದಿಕೊಳ್ಳುತ್ತದೆ ಎಂದು ಟಾಟಾ ತಿಳಿಸಿದೆ.

More from DriveSpark

Article Published On: Friday, November 28, 2025, 12:04 [IST]
English summary
Confusions about new tata sierra here are the answers
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+