BYD: ಚೀನಾ ಕಾರಿಗೆ ಕ್ಯೂ ನಿಂತ ಜನ: ಒಂದೇ ದಿನ 51 ಕಾರುಗಳ ಡೆಲಿವರಿ: ಫುಲ್ ಡಿಮ್ಯಾಂಡ್
ಚೀನಾ ಮೂಲದ ಪ್ರಮುಖ ಕಾರು ತಯಾರಕಾ ಕಂಪನಿಯೊಂದು ಭಾರೀ ಸದ್ದು ಮಾಡುತ್ತಿದೆ. ತನ್ನ ಪ್ರೀಮಿಯಂ ಎಲೆಕ್ಟ್ರಿಕ್ ಕಾರದ ಬಿವೈಡಿ ಸೀಲಯನ್-7 (BYD SEALION 7) ಅನ್ನು ಇದೇ ವರ್ಷದ ಫೆಬ್ರವರಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಮೂಲಕ ನಿರೀಕ್ಷೆಗಳನ್ನು ಹೆಚ್ಚಿಸಿತ್ತು. ಇದೀಗ ಈ ಕಾರಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ಕೊಚ್ಚಿಯ EVM BYD ಶೋರೂಂನಲ್ಲಿ ಹೊಸ SEALION 7 ಕಾರಿನ ಮೆಗಾ ಡೆಲಿವರಿ ಈವೆಂಟ್ ಮಾಡಿ ಗ್ರಾಹಕರಿಗೆ ವಿತರಿಸಿದೆ. ಒಂದೇ ದಿನದಲ್ಲಿ ಅತಿ ಹೆಚ್ಚು ಪ್ರೀಮಿಯಂ EV ಕಾರುಗಳನ್ನು ವಿತರಿಸಲಾಗಿದೆ.
ಇದಕ್ಕಾಗಿ ಕೇರಳದ ಕೊಚ್ಚಿಯ EVM ಸೌತ್‌ಕೋಸ್ಟ್ BYD ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಪ್ರವೇಶಿಸಿದೆ ಎಂದು ಡೀಲರ್‌ಶಿಪ್ ಹೇಳಿಕೊಂಡಿದೆ. ಕೇವಲ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ತಯಾರಿಸಿ ಮಾರಾಟ ಮಾಡುವ ಚೀನಾದ 'ಬಿವೈಡಿ' (BYD) ಪ್ರಸ್ತುತ ಜಾಗತಿಕವಾಗಿ ಮನ್ನಣೆ ಗಳಿಸಿದೆ. ಇದೀಗ ಭಾರತದಲ್ಲೂ ತನ್ನ ಜನಪ್ರಿಯತೆ ಹೆಚ್ಚುತ್ತಿದ್ದು, ಕಾರುಗಳು ಹೆಚ್ಚಾಗಿ ಮಾರಾಟವಾಗುತ್ತಿವೆ.

ಬಿವೈಡಿ ಸೀಲಿಯನ್-7 ಕಾರನ್ನು ಭಾರತ್ ಮೊಬಿಲಿಟಿ ಎಕ್ಸ್ ಪೋ 2025 ರಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲಾಗಿತ್ತು. ಆ ಸಮಯದಲ್ಲಿ ಕಾರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ನಂತರ ಇದೇ ವರ್ಷದ ಫೆಬ್ರವರಿಯಲ್ಲಿ ಭಾರತದಲ್ಲಿ ಈ ಕಾರನ್ನು 48.90 ಲಕ್ಷ ರೂ.ಗಳ (ಎಕ್ಸ್ ಶೋರೂಂ) ಬೆಲೆಯಲ್ಲಿ ಬಿಡುಗಡೆ ಮಾಡಲಾಯಿತು.
ಒಂದೇ ದಿನದಲ್ಲಿ ಅತಿ ಹೆಚ್ಚು ಪ್ರೀಮಿಯಂ EV ಗಳನ್ನು ವಿತರಿಸಿ BYD ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಪ್ರವೇಶಿಸಿದೆ. BYD SEALION 7 ತನ್ನ ಹೊಸ ಮಾಲೀಕರೊಂದಿಗೆ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಂತೆ ಉತ್ಸಾಹದ ಒಂದು ನೋಟವಿಲ್ಲಿದೆ. ಈ ಪ್ಯೂರ್ ಪರ್ಫಾರ್ಮೆನ್ಸ್ eSUV ಅನ್ನು ನಾವು ಆನಂದಿಸಿದಂತೆಯೇ ನೀವು ಪ್ರತಿ ಮೈಲಿಯನ್ನು ಆನಂದಿಸುತ್ತೀರಿ ಎಂದು ನಾವು ಭಾವಿಸುತ್ತೇವೆ ಎಂದು ಡೀಲರ್ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದೆ.

ಕಾರಿನ ವಿಶೇಷತೆಗಳು: ಬಿವೈಡಿ ಸೀಲಿಯನ್ 7 ಎಲೆಕ್ಟ್ರಿಕ್ ಎಸ್‌ಯುವಿ ಪ್ರೀಮಿಯಂ ಮತ್ತು ಪರ್ಫಾಮೆನ್ಸ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಪ್ರೀಮಿಯಂ ವೇರಿಯೆಂಟ್ ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 567 ಕಿ.ಮೀ ಓಡಿಸಬಹುದು, ಹಾಗೆಯೇ ಪರ್ಫಾಮೆನ್ಸ್ ವೇರಿಯೆಂಟ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ 542 ಕಿ.ಮೀ ರೇಂಜ್ ನೀಡುವುದಾಗಿ ಕಂಪನಿ ಹೆಳಿಕೊಂಡಿದೆ.
ಪ್ರೀಮಿಯಂ ಮಾದರಿಯ ಬೆಲೆಯು ರೂ.48.90 ಲಕ್ಷಗಳಾದರೆ, ಪರ್ಫಾಮೆನ್ಸ್ ಮಾದರಿಯ ಬೆಲೆಯು ರೂ.54.90 ಲಕ್ಷಗಳಾಗಿದೆ. (ಎಕ್ಸ್ ಶೋರೂಂ) ಈ ಕಾರು 11 ಏರ್ ಬ್ಯಾಗ್‌ಗಳು ಮತ್ತು ಲೆವೆಲ್ 2 ADAS ಸೂಟ್ ನೊಂದಿಗೆ ಬರುತ್ತದೆ. ಆಟೋಮ್ಯಾಟಿಕ್ ಎಮೆರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಇದೆ.

ಹೊಸ ಬಿವೈಡಿ ಸೀಲಿಯನ್ 7 ಎಲೆಕ್ಟ್ರಿಕ್ ಎಸ್‍ಯುವಿ ಕ್ಯಾಬಿನ್ ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಅನ್ನು 10.25-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 15.6-ಇಂಚಿನ ತಿರುಗುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ನ್ಯಾಪಾ ಲೆದರ್ ಅಪ್ ಹೋಲ್ಸ್ಟರಿ ಮತ್ತು 12 ಸ್ಪೀಕರ್ ಆಡಿಯೊ ಸಿಸ್ಟಂ ಅನ್ನು ಅಳವಡಿಸಲಾಗಿದೆ.
ಪ್ರೀಮಿಯಂ ವೇರಿಯೆಂಟ್ ಸಿಂಗಲ್ ಎಲೆಕ್ಟ್ರಿಕ್ ಮೋಟರ್, ರಿಯರ್ ವೀಲ್ ಡ್ರೈವ್ (ಆರ್ ಡಬ್ಲ್ಯುಡಿ) ಸೆಟಪ್, 308 ಬಿಹೆಚ್ ಪವರ್ ಮತ್ತು 380 ಎನ್ಎಂ ಟಾರ್ಕ್ ಅನ್ನು ಹೊಂದಿದೆ. ಪರ್ಫಾಮೆನ್ಸ್ ವೇರಿಯೆಂಟ್ ಆಲ್ ವ್ಹೀಲ್ ಡ್ರೈವ್ (ಎಡಬ್ಲ್ಯುಡಿ) ಸಿಸ್ಟಂ ಹೊಂದಿದ್ದು, 523 ಬಿಹೆಚ್ ಪವರ್ ಮತ್ತು 690 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








