ಯಾರೂ ನಂಬಲ್ಲ... ಭಾರತದ ಭವಿಷ್ಯ ಹೇಗಿರಲಿದೆ ಗೊತ್ತಾ? ಎಲೆಕ್ಟ್ರಿಕ್ ವಾಹನಗಳ ಸಾಮ್ರಾಜ್ಯವಾಗಲಿದೆ!

ಆರಂಭದಲ್ಲಿ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳಲ್ಲಿ ಆಕಸ್ಮಿಕ ಬೆಂಕಿ, ರೇಂಜ್ ಆತಂಕ, ನಿರ್ವಹಣೆ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದು, ಸರ್ವಿಸ್ ಸೆಂಟರ್‌ಗಳ ಕೊರತೆಯಿಂದಾಗಿ ಇವಿಗಳ ಖರೀದಿಗೆ ಜನರು ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ, ಎಲ್ಲಾ ಆತಂಕಗಳನ್ನು ದೂರ ಮಾಡಿ ವಿಶ್ವಾಸಾರ್ಹ ವಾಹನಗಳನ್ನು ತಯಾರಕರು ಬಿಡುಗಡೆ ಮಾಡುತ್ತಿದ್ದಾರೆ. ಇವಿಗಳ ಅಗ್ನಿ ಅವಘಡಗಳು ಕೂಡ ತೀರಾ ಕಡಿಮೆಯಾಗಿರುವುದರಿಂದ ನಿಧಾನವಾಗಿ ಜನರು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ (ಇವಿ) ಖರೀದಿಯು ವೇಗವಾಗಿ ಬೆಳೆಯುತ್ತಿದೆ.

ಭಾರತದ ಭವಿಷ್ಯ ಹೇಗಿರಲಿದೆ?

ಭಾರತದ ಇವಿ ಮಾರುಕಟ್ಟೆ ವೇಗವಾಗಿ ವಿಸ್ತರಿಸುವ ನಿರೀಕ್ಷೆಯಿದೆ. ಇವಿ ಮಾರಾಟವು FY25 ರ ವೇಳೆಗೆ 1.64 ಮಿಲಿಯನ್ ಯುನಿಟ್‌ ವಾಹನಗಳನ್ನು ತಲುಪುವ ಸಾಧ್ಯತೆಯಿದೆ. 2030 ರ ವೇಳೆಗೆ 15.33 ಮಿಲಿಯನ್ ಯುನಿಟ್‌ ವಾಹನಗಳಿಗೆ ಏರಬಹುದು, ವಿಶೇಷವಾಗಿ B2B ಕೊನೆಯ ಮೈಲಿ ವಿತರಣಾ ವಿಭಾಗದಲ್ಲಿ ಪ್ರಾಥಮಿಕವಾಗಿ ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಹೆಚ್ಚಾಗಿ ಇವಿ ಆಟೋ ಉದ್ಯಮವನ್ನು ಆಳಲಿವೆ ಎಂದು ವರದಿಗಳು ಹೇಳುತ್ತಿವೆ.

future-of-electric-vehicles-in-india-40-percent-growth-expected-by-2030

2030 ರ ಹಣಕಾಸು ವರ್ಷದ ವೇಳೆಗೆ ಒಟ್ಟು ಪ್ರಯಾಣಿಕ ವಾಹನ ಮಾರಾಟದಲ್ಲಿ EV ಗಳು ಶೇ30 ರಷ್ಟನ್ನು ಪಾಲನ್ನು ಹೊಂದಬೇಕೆಂದು ಭಾರತ ಸರ್ಕಾರ ಗುರಿ ಹೊಂದಿದೆ. ಇದಕ್ಕಾಗಿ ಉತ್ಪಾದನೆ ಹೆಚ್ಚಾಗಬೇಕಿದ್ದು, 2026 ರಲ್ಲಿ ಬ್ಯಾಟರಿ ಚಾಲಿತ ಪ್ರಯಾಣಿಕ ವಾಹನಗಳ ಉತ್ಪಾದನೆಯು ವರ್ಷದಿಂದ ವರ್ಷಕ್ಕೆ ಶೇ140 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಾಹನ ತಯಾರಕರ ಭಾಗವಹಿಸುವಿಕೆ

2025 ರ ಅಂತ್ಯದ ವೇಳೆಗೆ, ಎಲ್ಲಾ ಪ್ರಮುಖ ವಾಹನ ತಯಾರಕರು ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಪೋರ್ಟ್‌ಫೋಲಿಯೊಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಹೊಂದುವ ನಿರೀಕ್ಷೆಯಿದೆ. ಇದು ಹೀಗಿದ್ದರೇ ಭಾರತವು ದೇಶೀಯ ಬ್ಯಾಟರಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಗಮನಹರಿಸುತ್ತಿದೆ. ತೈಲ ಆಮದು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ EV ಅಳವಡಿಕೆಯೇ ಪ್ರಮುಖ ಪಾತ್ರ ವಹಿಸಲಿದೆ.

future-of-electric-vehicles-in-india-40-percent-growth-expected-by-2030

ಸವಾಲುಗಳು

EVಗಳು ಪ್ರಸ್ತುತ ಇಂಧನ ಚಾಲಿತ ವಾಹನಗಳಿಗಿಂತ ಶೇ20 ರಿಂದ 30 ರಷ್ಟು ದುಬಾರಿಯಾಗಿವೆ. ಮುಖ್ಯವಾಗಿ ಬ್ಯಾಟರಿ ವೆಚ್ಚಗಳು ಮತ್ತು ಆಮದು ಮಾಡಿಕೊಂಡ ಘಟಕಗಳ (ವಿಶೇಷವಾಗಿ ಚೀನಾದಿಂದ) ಮೇಲಿನ ಅವಲಂಬನೆಯಿಂದಾಗಿ ಬೆಲೆಗಳು ದುಬಾರಿಯಾಗುತ್ತವೆ. ಹಾಗೆಯೇ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳ ಸಂಖ್ಯೆ ಹೆಚ್ಚುತ್ತಿದ್ದರೂ, ವಿಶೇಷವಾಗಿ ಟೈರ್-2 ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಣೆ ಕಾಣಬೇಕಿದೆ.

ಭಾರತವು ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನಕ್ಕಾಗಿ ಕೌಶಲ್ಯಪೂರ್ಣ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದೆ. ಪ್ರಮುಖ ಘಟಕಗಳಿಗೆ, ವಿಶೇಷವಾಗಿ ಲಿಥಿಯಂ - ಐಯಾನ್ ಬ್ಯಾಟರಿಗಳಿಗೆ ಆಮದಿನ ಮೇಲೆ ಅವಲಂಬಿತವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಅಗ್ಗದ ವಾಹನಗಳಿಗೆ ಬೇಡಿಕೆ ಹೆಚ್ಚಿರುವ ಕಾರಣ, ಎಲೆಕ್ಟ್ರಿಕ್ ವಾಹನಗಳ ಸಾಮೂಹಿಕ ಅಳವಡಿಕೆಗೆ ಕೈಗೆಟುಕುವಿಕೆಯೇ ನಿರ್ಣಾಯಕ ಅಂಶವಾಗಿದೆ.

future-of-electric-vehicles-in-india-40-percent-growth-expected-by-2030

ಮುಂಬರುವ ವರ್ಷಗಳಲ್ಲಿ ಸಾಲು ಸಾಲು ಹೊಸ ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಗೆ ಸಜ್ಜಾಗಿವೆ. ಒಂದು ಅಂದಾಜಿನ ಪ್ರಕಾರ, 2025 ಮತ್ತು 2027 ರ ನಡುವೆ ಸುಮಾರು 35 ಎಲೆಕ್ಟ್ರಿಕ್ ಕಾರುಗಳನ್ನು ನಿರೀಕ್ಷಿಸಲಾಗಿದೆ. ಒಂದೆಡೆ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳು ಆಕರ್ಷಣೆಯನ್ನು ಪಡೆಯುತ್ತಿದ್ದರೇ, ಮತ್ತೊಂದೆಡೆ ಸೀಮಿತ ಚಾರ್ಜಿಂಗ್ ಮೂಲಸೌಕರ್ಯ ಹೊಂದಿರುವ ಪ್ರದೇಶಗಳಲ್ಲಿ ಹೈಬ್ರಿಡ್‌ಗಳು ಮತ್ತು ಪ್ಲಗ್-ಇನ್ ಹೈಬ್ರಿಡ್‌ಗಳನ್ನು ಸಹ ಪರಿಗಣಿಸಲಾಗುತ್ತಿದೆ.

ಒಟ್ಟಾರೆ ಭಾರತದ ಎಲೆಕ್ಟ್ರಿಕ್ ವಾಹನಗಳ ಭವಿಷ್ಯವು ಬಲವಾದ ಸರ್ಕಾರಿ ಬೆಂಬಲ, ಮಹತ್ವಾಕಾಂಕ್ಷೆಯ ಗುರಿಗಳು ಮತ್ತು ಹೆಚ್ಚುತ್ತಿರುವ ಉದ್ಯಮ ಭಾಗವಹಿಸುವಿಕೆಯೊಂದಿಗೆ ಭರವಸೆಯಿಂದ ಕೂಡಿದೆ. ಆದರೂ ಸಾಮೂಹಿಕ ಅಳವಡಿಕೆಯನ್ನು ಸಾಧಿಸಲು ವೆಚ್ಚ, ಮೂಲಸೌಕರ್ಯ ಮತ್ತು ತಾಂತ್ರಿಕ ಸ್ವಾವಲಂಬನೆಗೆ ಸಂಬಂಧಿಸಿದ ಗಮನಾರ್ಹ ಅಡೆತಡೆಗಳನ್ನು ನಿವಾರಿಸುವ ಅಗತ್ಯವಿದೆ.

Article Published On: Wednesday, July 9, 2025, 14:52 [IST]
English summary
Future of electric vehicles in india 40 percent growth expected by 2030
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+