Kia: ಜಿಎಸ್‌ಟಿ ಕಡಿತ.. ಕಿಯಾ ಕಾರುಗಳ ಬೆಲೆ ರೂ.4.48 ಲಕ್ಷವರೆಗೆ ಇಳಿಕೆ, ಯಾವುದಕ್ಕೆ ಎಷ್ಟು?

ದೇಶದ ಪ್ರಮುಖ ಆಟೋಮೊಬೈಲ್ ಬ್ರ್ಯಾಂಡ್‌ಗಳಲ್ಲಿ ಕಿಯಾ ಇಂಡಿಯಾ (Kia India) ಕೂಡ ಒಂದಾಗಿದ್ದು, ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಕೇಂದ್ರ ಸರ್ಕಾರ 1200 ಸಿಸಿ ವರೆಗಿನ ಪೆಟ್ರೋಲ್, ಸಿಎನ್‌ಜಿ ಮತ್ತು 1500 ಸಿಸಿ ವರೆಗಿನ ಡೀಸೆಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿರುವ ಕಾರುಗಳ ಖರೀದಿ ಮೇಲಿನ ಜಿಎಸ್‌ಟಿ (GST) ಪ್ರಮಾಣವನ್ನು ಶೇಕಡ 28% ರಿಂದ 18%ಗೆ ಕಡಿತಗೊಳಿಸಿದೆ. ಇದರ ಸಂಪೂರ್ಣ ಲಾಭ ಗ್ರಾಹಕರಿಗೆ ವರ್ಗಾಯಿಸುವುದಾಗಿ ಸೋಮವಾರ ಕಂಪನಿಯು ಘೋಷಣೆ ಮಾಡಿದೆ.

ನೂತನ ದರಗಳು ಸೆಪ್ಟೆಂಬರ್ 22 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಕಿಯಾದ ಎಲ್ಲ ಎಸ್‌ಯುವಿ ಮತ್ತು ಎಂಪಿವಿಗಳಿಗೆ ಜಿಎಸ್‌ಟಿ ಕಡಿತದ ಪ್ರಯೋಜನ ಲಭ್ಯವಾಗಲಿದ್ದು, ಹೊಸ ಕಾರು ಖರೀದಿ ಮಾಡಬೇಕೆಂದಿರುವ ಮಧ್ಯಮ ವರ್ಗದ ಗ್ರಾಹಕರ ಸುಲಭವಾಗಿ ನನಸಾಗಲಿದೆ. ಬಹುಮುಖ್ಯವಾಗಿ ಸೋನೆಟ್, ಸೈರಸ್, ಸೆಲ್ಟೋಸ್, ಕ್ಯಾರೆನ್ಸ್, ಕ್ಯಾರೆನ್ಸ್ ಕ್ಲಾವಿಸ್ ಹಾಗೂ ಕಾರ್ನೀವಲ್ ಕಾರುಗಳ ದರವು ಭಾರೀ ಇಳಿಕೆಯಾಗಿದೆ.

GST Reforms Kia Price Cut Sonet Syros Seltos Carens Carens Clavis And Carnival

ಯಾವ ಕಾರಿನ ಬೆಲೆ ಎಷ್ಟು ಅಗ್ಗ?

ಸೋನೆಟ್ - ರೂ.1.64 ಲಕ್ಷ
ಸೈರಸ್ - ರೂ.1.86 ಲಕ್ಷ
ಸೆಲ್ಟೋಸ್ - ರೂ.75,000
ಕ್ಯಾರೆನ್ಸ್ - ರೂ.48,000
ಕ್ಯಾರೆನ್ಸ್ ಕ್ಲಾವಿಸ್ - ರೂ.78,000
ಕಾರ್ನೀವಲ್ - ರೂ.4.48 ಲಕ್ಷ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಿಯಾ ಇಂಡಿಯಾದ ಸಿಇಒ ಗ್ವಾಂಗು ಲೀ ಅವರು, 'ಪ್ರಯಾಣಿಕ ವಾಹನಗಳ (ಕಾರುಗಳು) ಮೇಲಿನ ಜಿಎಸ್‌ಟಿ ಪ್ರಮಾಣವನ್ನು ಕಡಿಮೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಇದು ವಾಹನ ಖರೀದಿಯನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ. ಜೊತೆಗೆ ಆಟೋಮೊಬೈಲ್ ವಲಯದ ಬೆಳವಣಿಗೆಗೂ ಉತ್ತೇಜನಕಾರಿಯಾಗಿದೆ' ಎಂದು ಹೇಳಿದ್ದಾರೆ.

GST Reforms Kia Price Cut Sonet Syros Seltos Carens Carens Clavis And Carnival

ಸದ್ಯ ಕಿಯಾ ಕಾರುಗಳ ಎಕ್ಸ್-ಶೋರೂಂ ದರ ಎಷ್ಟಿದೆ?

ಸೋನೆಟ್ - ರೂ.8 ಲಕ್ಷದಿಂದ ರೂ.15.64 ಲಕ್ಷ
ಸೈರಸ್ - ರೂ.9.50 ಲಕ್ಷದಿಂದ ರೂ.17.80 ಲಕ್ಷ
ಸೆಲ್ಟೋಸ್ - ರೂ.11.19 ಲಕ್ಷದಿಂದ ರೂ.20.56 ಲಕ್ಷ
ಕ್ಯಾರೆನ್ಸ್ - ರೂ.11.41 ಲಕ್ಷದಿಂದ ರೂ.13.26 ಲಕ್ಷ
ಕ್ಯಾರೆನ್ಸ್ ಕ್ಲಾವಿಸ್ - ರೂ.11.50 ಲಕ್ಷದಿಂದ ರೂ.21.50 ಲಕ್ಷ
ಕಾರ್ನೀವಲ್ - ರೂ.63.91 ಲಕ್ಷ

ಕಿಯಾದ ಪ್ರಮುಖ ಕಾರುಗಳ ವಿಶೇಷತೆಗಳಿವು:

ಕಿಯಾ ಸೈರಸ್ (Kia Syros): ಇದೊಂದು ಎಸ್‌ಯುವಿಯಾಗಿದೆ. 1-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನ್ನು ಪಡೆದಿದೆ. 17.65 ರಿಂದ 20.75 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 5 ಆಸನಗಳನ್ನು ಒಳಗೊಂಡಿದೆ. ಇನ್ಫೋಟೈನ್‌ಮೆಂಟ್‌ ಸಿಸ್ಟಮ್ & ಡ್ರೈವರ್ಸ್ ಡಿಸ್‌ಪ್ಲೇಗಾಗಿ ಡುಯಲ್ ಸ್ಕ್ರೀನ್‌ ಸೆಟಪ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, 8-ಸ್ಪೀಕರ್ ಸೌಂಡ್ ಸಿಸ್ಟಮ್, 6-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

GST Reforms Kia Price Cut Sonet Syros Seltos Carens Carens Clavis And Carnival

ಕಿಯಾ ಕ್ಯಾರೆನ್ಸ್ ಕ್ಲಾವಿಸ್ (Kia Carens Clavis): ಈ ಎಂಪಿವಿಯು 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿದೆ. 15.95 ರಿಂದ 19.54 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 6 ಮತ್ತು 7 ಆಸನಗಳನ್ನು ಪಡೆದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 6-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಹಾಗೂ 360-ಡಿಗ್ರಿ ಕ್ಯಾಮೆರಾ ಹೊಂದಿದೆ.

ಕಿಯಾ ಸೋನೆಟ್ (Kia Sonet): ಇದು ಎಸ್‌ಯುವಿಯಾಗಿದೆ. 1.2-ಲೀಟರ್ ಪೆಟ್ರೋಲ್, 1.0-ಲೀಟರ್ ಟರ್ಬೊ ಪೆಟ್ರೋಲ್ & 1.5-ಲೀಟರ್ ಡೀಸೆಲ್ ಎಂಜಿನ್‌ನ್ನು ಪಡೆದಿದೆ. 18.4 ರಿಂದ 24.1 ಕಿ.ಮೀ ವರೆಗೆ ಮೈಲೇಜ್ ಮೈಲೇಜ್ ನೀಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪ್ರೀಮಿಯಂ 7-ಸ್ಪೀಕರ್ ಆಡಿಯೋ ಸಿಸ್ಟಮ್, ಕನೆಕ್ಟ್ಡ್ ಕಾರ್ ಟೆಕ್, 6-ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಸರೌಂಡ್ ವ್ಯೂ ಕ್ಯಾಮೆರಾವನ್ನು ತನ್ನದಾಗಿಸಿಕೊಂಡಿದೆ.

More from DriveSpark

Article Published On: Monday, September 8, 2025, 21:39 [IST]
English summary
Gst reforms kia price cut sonet syros seltos carens carens clavis and carnival
Read more on kia motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+