ಹಬ್ಬಕ್ಕೆ ಬೆಲೆ ಇಳಿಕೆ ಘೋಷಣೆ ಬೆನ್ನಲ್ಲೆ ದಾಖಲೆ ಮಟ್ಟದಲ್ಲಿ ಹೋಂಡಾ ಕಾರುಗಳ ಮಾರಾಟ
ಭಾರತದಲ್ಲಿ ಪ್ರೀಮಿಯಂ ಕಾರುಗಳ ಪ್ರಮುಖ ತಯಾರಕರಾದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (HCIL) ಸೆಪ್ಟೆಂಬರ್ 2025 ರಲ್ಲಿ ಒಟ್ಟು 8,096 ಯುನಿಟ್ ಕಾರುಗಳ ಮಾರಾಟವನ್ನು ದಾಖಲಿಸಿದೆ. ಕಂಪನಿಯ ದೇಶೀಯ ಮಾರಾಟವು 5,303 ಯುನಿಟ್ ಕಾರುಗಳಾಗಿದ್ದು, ರಫ್ತು 2,793 ಯುನಿಟ್‌ಗಳಷ್ಟಿದೆ. ಕಂಪನಿಯು ಕಳೆದ ವರ್ಷ ಇದೆ ಅವಧಿಯಲ್ಲಿ ಅಂದರೆ ಸೆಪ್ಟೆಂಬರ್ 2024 ರಲ್ಲಿ ದೇಶೀಯ ಮಾರಾಟದಲ್ಲಿ 5,675 ಯುನಿಟ್ ಕಾರುಗಳನ್ನು ಮಾರಾಟ ಮಾಡಿದರೆ, 5,239 ಯುನಿಟ್ ಕಾರುಗಳನ್ನು ರಫ್ತು ಮಾಡಿದೆ.
ಮಾರಾಟದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಮಾರಾಟದ ಉಪಾಧ್ಯಕ್ಷ ಕುನಾಲ್ ಬೆಹ್ಲ್, "ಸೆಪ್ಟೆಂಬರ್‌ನಲ್ಲಿ ನವರಾತ್ರಿಯ ನಂತರ ಸಗಟು ಮತ್ತು ವಿತರಣೆಗಳಲ್ಲಿ ಬಲವಾದ ಏರಿಕೆ ಕಂಡುಬಂದಿದೆ, ಏಕೆಂದರೆ ಗ್ರಾಹಕರು GST ಸಂಬಂಧಿತ ಪ್ರಕಟಣೆಗಳ ನಂತರ ತಮ್ಮ ಖರೀದಿಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಜೊತೆಗೆ ಹಬ್ಬದ ನಮ್ಮ ಹಬ್ಬದ ಆಫರ್‌ಗಳು ಗ್ರಾಹಕರನ್ನು ಸೆಳೆದಿವೆ.

GST 2.0 ಘೋಷಣೆ ಆಟೋ ಉದ್ಯಮಕ್ಕೆ ವರದಾನವಾಗಿದೆ, ಏಕೆಂದರೆ ಕಾರುಗಳು ಈಗ ಕಡಿಮೆ ಬೆಲೆಗಳು ಮತ್ತು ಹೆಚ್ಚುವರಿ ಆಫರ್‌ಗಳೊಂದಿಗೆ ಹೆಚ್ಚು ಕೈಗೆಟುಕುವ ದರಕ್ಕೆ ಲಭ್ಯವಿದೆ. ಭಾರತದಾದ್ಯಂತ ಧಂತೇರಸ್ ಮತ್ತು ದೀಪಾವಳಿಯ ಸಮಯದಲ್ಲಿ ಗ್ರಾಹಕರ ಭಾವನೆಗಳು ಹೆಚ್ಚಾಗುವುದರೊಂದಿಗೆ ಅಕ್ಟೋಬರ್‌ನಲ್ಲಿಯೂ ಈ ಬಲವಾದ ಆವೇಗ ಮುಂದುವರಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ಹೇಳಿದರು.
GST ಸುಧಾರಣೆ: ಹೋಂಡಾ ಇತ್ತೀಚೆಗೆ ಘೋಷಿಸಲಾದ GST ಸುಧಾರಣೆಗಳು 2025 ರ ಸಂಪೂರ್ಣ ಪ್ರಯೋಜನಗಳನ್ನು ತನ್ನ ಗ್ರಾಹಕರಿಗೆ ವರ್ಗಾಯಿಸುತ್ತಿದೆ. ಇದು ಹಬ್ಬದ ಋತುವಿನಲ್ಲಿ ಹೋಂಡಾದ ಮೆಚ್ಚುಗೆ ಪಡೆದ ಕಾರುಗಳನ್ನು ಇನ್ನಷ್ಟು ಆಕರ್ಷಕ ಕೊಡುಗೆಯನ್ನಾಗಿ ಮಾಡಲಿದೆ. ಯಾವ ಹೋಂಡಾ ಕಾರಿನ ಮೇಲೆ ಎಷ್ಟು ಬೆಲೆ ಇಳಿಕೆಯಾಗಿದೆ ಬನ್ನಿ ನೋಡೋಣ.

ಹೋಂಡಾ ಎಲಿವೇಟ್: ಹೋಂಡಾ ಎಲಿವೇಟ್ ಬೆಲೆ ಇಳಿಕೆ ವಿಷಯಕ್ಕೆ ಬಂದರೆ, ಬೇಸ್ ವೇರಿಯೆಂಟ್ ಮೇಲೆ ರೂ. 42,800 ಕಡಿವಾಗಿದ್ದು, ಟಾಪ್ ವೇರಿಯೆಂಟ್ ಮೇಲೆ ರೂ. 91,100 ವರೆಗೆ ಇಳಿಕೆಯಾಗಿದೆ ಎಂದು ಕಂಪನಿ ಅಧಿಕೃತವಾಗಿ ಘೋಷಿಸಿದೆ. ಹೋಂಡಾ ಎಲಿವೇಟ್ ಬೇಸ್ ವೇರಿಯೆಂಟ್ ರೂ. 10,99,900 (ಎಕ್ಸ್ - ಶೋ ರೂಂ) ದಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಟಾಪ್ ವೇರಿಯೆಂಟ್ ಬೆಲೆಯು ರೂ. 16,34,600 (ಎಕ್ಸ್ - ಶೋ ರೂಂ) ಇದೆ.
ಹೋಂಡಾ ಅಮೇಜ್: ಇದರ ಎಕ್ಸ್ - ಶೋರೂಂ ಬೆಲೆಗಳು ಬೇಸ್ ವೇರಿಯೆಂಟ್‌ಗೆ ರೂ. 6,97,700 ದಿಂದ ಆರಂಭವಾಗಿ ಟಾಪ್ ವೇರಿಯೆಂಟ್‌ಗೆ ರೂ. 9,99,900 ವರೆಗೆ ಇದೆ. ಪರಿಷ್ಕೃತ ಬೆಲೆಯು ಜನಪ್ರಿಯ ಹೋಂಡಾ ಅಮೇಜ್‌ನ ಸಂಪೂರ್ಣ ಎಲ್ಲಾ ವೇರಿಯೆಂಟ್‌ಗಳನ್ನು ಈಗ ರೂ. 10 ಲಕ್ಷದೊಳಗೆ ಲಭ್ಯವಿದೆ ಎಂದು ತೋರಿಸುತ್ತದೆ. ಈಗ ಹೋಂಡಾ ಅಮೇಜ್ ವ್ಯಾಪಕ ಶ್ರೇಣಿಯ ಗ್ರಾಹಕರಿಗೆ ಆಕರ್ಷಕ ಆಯ್ಕೆಯಾಗಿದೆ.

3ನೇ ತಲೆಮಾರಿನ ಹೋಂಡಾ ಅಮೇಜ್ ಬೇಸ್ ವೇರಿಯೆಂಟ್ ಮೇಲೆ ರೂ. 69,100 ದಿಂದ ಟಾಪ್ ವೇರಿಯೆಂಟ್ ಮೇಲೆ ರೂ. 1,20,000 ವರೆಗೆ ಇಳಿಕೆಯಾಗಿದೆ. ಹಾಗೆಯೇ 2ನೇ ತಲೆಮಾರಿನ ಹೋಂಡಾ ಅಮೇಜ್ ಬೇಸ್ ವೇರಿಯೆಂಟ್ ಮೇಲೆ ರೂ. 65,100 ದಿಂದ ಟಾಪ್ ವೇರಿಯೆಂಟ್ ಮೇಲೆ ರೂ. 72,800 ರವರೆಗೆ ಬೆಲೆ ಇಳಿಕೆಯಾಗಿದೆ ಎಂದು ಹೋಂಡಾ ಅಧಿಕೃತವಾಗಿ ಘೋಷಿಸಿದೆ.
ಹೋಂಡಾ ಸಿಟಿ: ಜಿಎಸ್‌ಟಿ ಸುಧಾರಣೆಗಳ ಪ್ರಯೋಜನಗಳನ್ನು ಹೋಂಡಾ ಸಿಟಿಗೂ ವಿಸ್ತರಿಸಲಾಗಿದೆ. ಪ್ರೀಮಿಯಂ ವೈಶಿಷ್ಟ್ಯಗಳು, ಅತ್ಯಾಧುನಿಕ ವಿನ್ಯಾಸ ಮತ್ತು ಉಲ್ಲಾಸಕರ ಪರ್ಫಾಮೆನ್ಸ್ ನೀಡುವ ಈ ಕಾರು ಇನ್ನಷ್ಟು ಅಗ್ಗವಾಗಿದೆ. ಬೇಸ್ ವೇರಿಯೆಂಟ್ ಮೇಲೆ ರೂ. 41,790 ರಿಂದ ಟಾಪ್ ವೇರಿಯೆಂಟ್ ಮೇಲೆ ರೂ. 57,500 ವರೆಗಿನ ಬೆಲೆ ಕಡಿತದೊಂದಿಗೆ ಹೋಂಡಾ ಸಿಟಿ ಈಗ ರೂ. 11,95,300 (ಎಕ್ಸ್ - ಶೋರೂಂ) ದಿಂದ ಬೆಲೆಗಳು ಪ್ರಾರಂಭವಾಗುತ್ತವೆ.


Click it and Unblock the Notifications








