Honda: ಹೋಂಡಾ ಕಾರುಗಳಿಗೆ ಏನಾಗಿದೆ? ಯಾರೂ ಖರೀದಿಸುತ್ತಿಲ್ಲ! ಅಯ್ಯೋ ಮಾರಾಟವಾಗಿದ್ದು ಇಷ್ಟೇನಾ?
ಹೋಂಡಾ (Honda) ಕಾರುಗಳು ಕೇವಲ ಭಾರತ ಮಾತ್ರವಲ್ಲ ವಿಶ್ವಾದ್ಯಂತ ಭಾರೀ ಜನಪ್ರಿಯತೆ ಪಡೆದುಕೊಂಡಿವೆ. ಆದರೆ ಭಾರತದಲ್ಲಿ ಸದ್ಯ ಹೋಂಡಾ ಕಾರುಗಳಿಗೆ ಡಿಮ್ಯಾಂಡ್ ಕುಸಿದಿದೆ. ಇತ್ತ ಮಾರುತಿ, ಟಾಟಾ, ಟೊಯೋಟಾ, ಕಿಯಾ, ಮಹೀಂದ್ರಾ ಬ್ರಾಂಡ್‌ಗಳು ಮುನ್ನುಗ್ಗುತ್ತಿವೆ. ಆದರೆ ದಶಕಗಳಿಂದ ಭಾರತದಲ್ಲಿ ಬೇರೂರಿರುವ ಹೋಂಡಾ ಮಾತ್ರ ತನ್ನ ಕಾರುಗಳ ಮೂಲಕ ಜನರನ್ನು ಆಕರ್ಷಿಸುವಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಇತ್ತೀಚೆಗೆ ಹೋಂಡಾ' ಮೇ ತಿಂಗಳ ಮಾರಾಟದ ಅಂಕಿ ಅಂಶಿಗಳನ್ನು ಬಹಿರಂಗಪಡಿಸಿದೆ. ಇದರಲ್ಲಿ ಇತರ ಪ್ರತಿಸ್ಪರ್ಧಿ ಕಂಪನಿಗಳಿಗೆ ಹೋಲಿಸಿದರೆ ತೀರಾ ಕಡಿಮೆ ಕಾರುಗಳನ್ನು ಮಾರಾಟ ಮಾಡಿದೆ.
ಮಾರುತಿ ಹಾಗೂ ಟಾಟಾದಂತಹ ಪ್ರಮುಖ ಕಾರು ತಯಾರಕ ಕಂಪನಿಗಳಿಗೆ ಹೋಲಿಸಿದರೆ, ಹೋಂಡಾ ಕಾರುಗಳು ತುಸು ಹೆಚ್ಚಿನ ಬೆಲೆಯನ್ನು ಹೊಂದಿರುತ್ತವೆ. ಹಾಗಾಗಿ ಭಾರತದಲ್ಲಿ ಮಧ್ಯಮ ವಿಭಾಗದಲ್ಲಿ ಪ್ರೀಮಿಯಂ ಕಾರುಗಳ ಪ್ರಮುಖ ತಯಾರಕರಾಗಿ ಹೋಂಡಾ ಗುರ್ತಿಸಿಕೊಂಡಿದೆ. ಪ್ರತಿಸ್ಪರ್ಧಿ ಕಂಪನಿಗಳು ಅಗ್ಗದ ಬೆಲೆಗೆ ಕಾರುಗಳನ್ನು ನೀಡುತ್ತಿರುವ ಕಾರಣ ಹೋಂಡಾ ಕಾರುಗಳಿಗೆ ಡಿಮ್ಯಾಂಡ್ ಕಡಿಮೆಯಾಗಿದೆ ಎಂದು ಸಹ ಹೇಳಲಾಗುತ್ತಿದೆ.

ಅಂದಹಾಗೆ ಮೇ 2025 ರಲ್ಲಿ ಹೋಂಡಾ ಇಂಡಿಯಾ ಕಂಪನಿಯು ಒಟ್ಟು 5,985 ಯುನಿಟ್ ಕಾರುಗಳ ಮಾರಾಟವನ್ನು ದಾಖಲಿಸಿದೆ. ಕಂಪನಿಯು ಕೇವಲ ಭಾರತದಲ್ಲಿ ಮಾತ್ರ 3,950 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದರೇ, 2,035 ಯುನಿಟ್ ಕಾರುಗಳನ್ನು ಇತರ ದೇಶಗಳಿಗೆ ರಫ್ತು ಮಾಡಿರುವುದಾಗಿ ಹೋಂಡಾ ಕಂಪನಿ ತಿಳಿಸಿದೆ.
ಕಂಪನಿಯು ಕಳೆದ ವರ್ಷ ಇದೇ ಅವಧಿಯಲ್ಲಿ (ಮೇ 2024) ಭಾರತದಲ್ಲಿ 4,822 ಯೂನಿಟ್ ಕಾರುಗಳನ್ನು ಕೇವಲ ಭಾರತವೊಂದರಲ್ಲೆ ಮಾರಾಟ ಮಾಡಿತ್ತು. ಹಾಗೆಯೇ ಬರೋಬ್ಬರಿ 6,521 ಯುನಿಟ್ ಕಾರುಗಳನ್ನು ಇತರ ದೇಶಗಳಿಗೆ ರಫ್ತು ಮಾಡಿತ್ತು. ಈ ಮಾರಾಟ ಅಂಕಿ ಅಂಶಗಳನ್ನು ನೋಡಿದರೆ ಹೋಂಡಾ ಕಾರುಗಳಿಗೆ ಭಾರತದಲ್ಲಿ ಬೇಡಿಕೆ ಕುಸಿದಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ.

ಮಾರಾಟದ ಕಾರ್ಯಕ್ಷಮತೆಯ ಕುರಿತು ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಮಾರಾಟದ ಉಪಾಧ್ಯಕ್ಷ ಕುನಾಲ್ ಬೆಹ್ಲ್ ಮಾತನಾಡಿ, ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ಗ್ರಾಹಕರ ಬೇಡಿಕೆ ಕಡಿಮೆ ಆಗಿರುವುದರಿಂದ, ನಮ್ಮ ನೆಟ್‌ವರ್ಕ್‌ನಾದ್ಯಂತ ಅತ್ಯುತ್ತಮ ದಾಸ್ತಾನು ಮಟ್ಟವನ್ನು ಕಾಯ್ದುಕೊಳ್ಳಲು ನಾವು ಮೇ ತಿಂಗಳಲ್ಲಿ ನಮ್ಮ ರವಾನೆಗಳನ್ನು ಕಾರ್ಯತಂತ್ರವಾಗಿ ಮಿತಗೊಳಿಸುವುದನ್ನು ಮುಂದುವರಿಸಿದ್ದೇವೆ.
ಉತ್ತಮ ಮಾನ್ಸೂನ್‌ನ ಮುನ್ಸೂಚನೆಗಳಿಂದ ಬೆಂಬಲಿತವಾದ ಮುಂಬರುವ ತಿಂಗಳುಗಳಲ್ಲಿ ಸುಧಾರಿತ ಮಾರಾಟ ಕಾರ್ಯಕ್ಷಮತೆಯ ಬಗ್ಗೆ ಆಶಾವಾದಿಯಾಗಿ ಉಳಿದಿದ್ದೇವೆ. ಮುಂಬರುವ ದಿನಗಳಲ್ಲಿ ಉತ್ತಮ ಆಫರ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುವ ಯೋಜನೆಯಿದೆ ಎಂದು ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಮಾರಾಟದ ಉಪಾಧ್ಯಕ್ಷ ಕುನಾಲ್ ಬೆಹ್ಲ್ ಹೇಳಿದರು.

ಹೋಂಡಾ ಬಗ್ಗೆ: ಭಾರತದಲ್ಲಿ ಹೋಂಡಾ ಕಂಪನಿಯು ಡಿಸೆಂಬರ್ 1995 ರಲ್ಲಿ ಸ್ಥಾಪನೆಯಾಯಿತು, ಹೋಂಡಾದ ಕಾರ್ಪೊರೇಟ್ ಕಚೇರಿ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿದೆ. ಇದರ ಅತ್ಯಾಧುನಿಕ ಉತ್ಪಾದನಾ ಸೌಲಭ್ಯವು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ತಪುಕಾರದಲ್ಲಿದೆ. ಹೋಂಡಾದ ಕಾರುಗಳು ಬಾಳಿಕೆ, ವಿಶ್ವಾಸಾರ್ಹತೆ, ಸುರಕ್ಷತೆಗೆ ಜನಪ್ರಿಯತೆ ಪಡೆದಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








