Honda: ಮೊನ್ನೆಯಷ್ಟೆ ಬಿಡುಗಡೆಯಾಗಿದೆ ಹೋಂಡಾ ಸಿಟಿ ಸ್ಪೋರ್ಟ್: ಬೆಲೆಯೆಷ್ಟು, ವಿಶೇಷತೆಗಳೇನು?

ಭಾರತದಲ್ಲಿ ಪ್ರೀಮಿಯಂ ಕಾರುಗಳ ಪ್ರಮುಖ ತಯಾರಕರಾದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (HCIL), ಮೊನ್ನೆಯಷ್ಟೆ (ಜೂನ್ 20) ಹೊಸ ಸಿಟಿ ಸ್ಪೋರ್ಟ್ ಸೆಡಾನ್ ಕಾರನ್ನು ಬಿಡುಗಡೆ ಮಾಡಿದೆ. ಇದು ತನ್ನ ಜನಪ್ರಿಯ ಮಧ್ಯಮ ಗಾತ್ರದ ಸೆಡಾನ್ ಹೋಂಡಾ ಸಿಟಿಗೆ ಹೊಸ ಮೆರುಗನ್ನು ತಂದಿದೆ. ಯುವ, ವಿವೇಚನಾಶೀಲ ಖರೀದಿದಾರರನ್ನು ಆಕರ್ಷಿಸಲು ವಿನ್ಯಾಸಗೊಳಿಸಲಾದ ಸಿಟಿ ಸ್ಪೋರ್ಟ್, ಭಾರತದಲ್ಲಿ 14,88,900 (ಎಕ್ಸ್‌ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಬ್ಲಾಕ್ ಅಸೆಂಟ್‌ಗಳೊಂದಿಗೆ ಸ್ಪೋರ್ಟಿ ಬಾಹ್ಯ ಡಿಸೈನ್ ಹೊಂದಿರುವ ಹೊಸ ಸಿಟಿ ಸ್ಪೋರ್ಟ್ ವಿಶೇಷತೆಗಳು ಇಲ್ಲಿವೆ.

ಹೊಸ ಹೋಂಡಾ ಸಿಟಿ ಸ್ಪೋರ್ಟ್ ಎಡಿಷನ್ ಸೀಮಿತ ಘಟಕಗಳಲ್ಲಿ ಸಿಟಿ ಲೈನ್‌ಅಪ್‌ನಲ್ಲಿ ಹೊಸ ದರ್ಜೆಯಾಗಿ ಲಭ್ಯವಿರುತ್ತದೆ. ಇದನ್ನು CVT (ಸ್ವಯಂಚಾಲಿತ ಪ್ರಸರಣ) ದಲ್ಲಿ 3 ಬಣ್ಣ ಆಯ್ಕೆಗಳಲ್ಲಿ ನೀಡಲಾಗುವುದು. ಅವುಗಳೆಂದರೆ ರೇಡಿಯಂಟ್ ರೆಡ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್ ಮತ್ತು ಮೆಟಿಯೊರಾಯ್ಡ್ ಗ್ರೇ ಮೆಟಾಲಿಕ್ ಆಗಿವೆ.

honda-city-sport-edition-top-things-you-should-know

"ಹೊಸ ಸಿಟಿ ಸ್ಪೋರ್ಟ್ ಅನ್ನು ಪ್ರತ್ಯೇಕತೆ ಮತ್ತು ಉತ್ಸಾಹಭರಿತ ಡ್ರೈವ್ ಬಯಸುವ ಯುವ ಖರೀದಿದಾರರ ಆಕಾಂಕ್ಷೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಇದು ಸ್ಪೋರ್ಟಿ ಲುಕ್ ಮತ್ತು ಆಕರ್ಷಕ ಒಳಾಂಗಣ ಡಿಸೈನ್, ಹೈ-ಪರ್ಫಾಮೆನ್ಸ್‌ನೊಂದಿಗೆ 'ಲೈಫ್ ಈಸ್ ಎ ಸ್ಪೋರ್ಟ್' ಎಂಬ ಟ್ಯಾಗ್‌ಲೈನ್ ಹೊಂದಿದೆ. ಹೊಸ ಸಿಟಿ ಕಾರನ್ನು ಸಂಪೂರ್ಣ ಹೊಸ ಯುಗಕ್ಕೆ ಹೊಂದಿಕೊಳ್ಳುವಂತೆ ನಿರ್ಮಿಸಲಾಗಿದೆ.

ಹೊಸ ಹೋಂಡಾ ಸಿಟಿ ಸ್ಪೋರ್ಟ್ ಎಡಿಷನ್, ಹೋಂಡಾದ ಸಂಸ್ಕರಿಸಿದ 1.5L i-VTEC ಪೆಟ್ರೋಲ್ ಎಂಜಿನ್ [E20 ಕಂಪ್ಲೈಂಟ್] ಹೊಂದಿದ್ದು, 121PS ಪವರ್, 145NM ಟಾರ್ಕ್ ಹೊರಹಾಕುತ್ತದೆ. ಸಿವಿಟಿ ಮತ್ತು ಪ್ಯಾಡಲ್ ಶಿಫ್ಟ್ ಜೊತೆಗೆ ಮತ್ತು 18.4 ಕಿಮೀ/ಲೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

honda-city-sport-edition-top-things-you-should-know

ಇದು ಸ್ಮಾರ್ಟ್ ಮತ್ತು ಅರ್ಥಗರ್ಭಿತವಾದ ಸುಧಾರಿತ ಸುರಕ್ಷತೆಯನ್ನು ನೀಡುವ ಹೋಂಡಾ ಸೆನ್ಸಿಂಗ್ (ADAS) ನೊಂದಿಗೆ ಬರುತ್ತದೆ. ಮಲ್ಟಿ-ಸ್ಪೋಕ್ ಸ್ಪೋರ್ಟಿ ಗ್ರೇ ಅಲಾಯ್ ವೀಲ್‌ಗಳು, ಬ್ಲಾಕ್ ORVM (ಹೊರಭಾಗದ ಹಿಂಭಾಗ-ವೀಕ್ಷಣೆ ಕನ್ನಡಿಗಳು) ಗಳನ್ನು ಅಪ್‌ಡೇಟ್ ಮಾಡಲಾಗಿದೆ. ಡೈನಾಮಿಕ್ ಬಾಹ್ಯ ಡಿಸೈನ್‌ ಹೊಂದಿರುವ ಸಿಟಿ ಸ್ಪೋರ್ಟ್ ಎಡಿಷನ್ ತನ್ನ ಗಮನಾರ್ಹ ಹೊರಭಾಗದಿಂದ ಗಮನ ಸೆಳೆಯುತ್ತದೆ.

ಸ್ಪೋರ್ಟಿ ಬ್ಲಾಕ್ ಗ್ರಿಲ್, ಸ್ಪೋರ್ಟಿ ಬ್ಲಾಕ್ ಟ್ರಂಕ್ ಲಿಪ್ ಸ್ಪಾಯ್ಲರ್, ಗ್ಲೋಸಿ ಬ್ಲಾಕ್ ಶಾರ್ಕ್ ಫಿನ್ ಆಂಟೆನಾ ಮತ್ತು ವಿಶೇಷ ಸ್ಪೋರ್ಟ್ ಲೋಗೋವನ್ನು ಹೊಂದಿದೆ. ಹಾಗೆಯೇ ಇಂಟೀರಿಯರ್‌ನಲ್ಲಿ 7 - ಕಲರ್ ರಿದಮಿಕ್ ಆಂಬಿಯೆಂಟ್ ನೀಡುವ ಸ್ಪೋರ್ಟಿ ಕ್ಯಾಬಿನ್ ಅನ್ನು ಡಿಸೈನ್‌ ಮಾಡಲಾಗಿದೆ. ಪವರ್‌ - ಫುಲ್ ಡ್ರೈವ್‌ನ ಸೌಂದರ್ಯಕ್ಕೆ ಹೊಂದಿಕೆಯಾಗುವಂತೆ ಸಂಕೀರ್ಣವಾಗಿ ಈ ಬೆಳಕನ್ನು ಇರಿಸಲಾಗಿದೆ.

ಇಂಟೀರಿಯರ್‌ನಲ್ಲಿ ಪ್ರೀಮಿಯಂ ಲೆದರ್ ನೀಡಲಾಗಿದ್ದು, ಇಮ್ಮರ್ಸಿವ್ ಮತ್ತು ಸ್ಪೋರ್ಟಿ ಬ್ಲಾಕ್ ಕ್ಯಾಬಿನ್ ಹೊಂದಿದೆ. ಬ್ಲಾಕ್ ಸೀಟ್‌ಗಳು ಮತ್ತು ಪ್ಲಶ್ ಸಾಫ್ಟ್ ಡೋರ್ ಇನ್ಸರ್ಟ್‌ಗಳು, ಡಾರ್ಕ್ ಥೀಮ್ ಬ್ಲಾಕ್ ರೂಫ್, ಸೀಟ್‌ಗಳ ಮೇಲೆ ರೆಡ್ ಹೊಲಿಗೆ, ಡೋರ್ ಇನ್ಸರ್ಟ್‌ಗಳು ಮತ್ತು ಆಕರ್ಷಕ ಸ್ಟೀರಿಂಗ್ ವೀಲ್ ಹೊಂದಿದೆ. ಇವಿಷ್ಟೆ ಅಲ್ಲದೆ ಇದರ ಸ್ಪೋರ್ಟಿ ಡಾರ್ಕ್ ರೆಡ್ ಡ್ಯಾಶ್‌ ಬೋರ್ಡ್‌ ಕ್ಯಾಬಿನ್ ಅನುಭವವನ್ನು ಮತ್ತೊಂದು ಹಂತಕ್ಕೆ ಕೊಂಡೊಯುತ್ತದೆ.

"ಹೊಸ ಸಿಟಿ ಸ್ಪೋರ್ಟ್ ಇದು ಸ್ಪೋರ್ಟಿ ಬಾಹ್ಯ ಮತ್ತು ಒಳಾಂಗಣದ ಡಿಸೈನ್, ಚಾಲನೆ ಮಾಡಲು ಪವರ್‌ಫುಲ್ ಪರ್ಫಾಮೆನ್ಸ್ ಮಿಶ್ರಣವನ್ನು ಹೊಂದಿದ್ದು, ಆಕರ್ಷಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದನ್ನು ಉತ್ಸಾಹಭರಿತ ಚಾಲನಾ ಅನುಭವ ಬಯಸುವ ಯುವ ಖರೀದಿದಾರರಿಗಾಗಿ ನಿರ್ಮಿಸಲಾಗಿದೆ ಎಂದು ಹೋಂಡಾ ಮಾರ್ಕೆಟಿಂಗ್ ಮತ್ತು ಆಂಪ್ಲಿಫಯರ್‌ಗಳ ಉಪಾಧ್ಯಕ್ಷ ಕುನಾಲ್ ಬೆಹ್ಲ್ ಹೇಳಿದ್ದಾರೆ.

More from DriveSpark

Article Published On: Sunday, June 22, 2025, 17:00 [IST]
English summary
Honda city sport edition top things you should know
Read more on honda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+