Honda: ಭಾರತದ ಗತ್ತು ಜಪಾನ್‌ಗೆ ಗೊತ್ತು... ದೇಶೀಯ ಬಲಿಷ್ಟ ಕಾರಿಗೆ ಮುಗಿಬಿದ್ದ ಜಪಾನಿಗರು!

ಭಾರತದಲ್ಲಿ ವಿಶ್ವದ ಬಹುತೇಕ ಕಾರು ಬ್ರಾಂಡ್‌ಗಳು ತಮ್ಮ ಉತ್ಪಾದನಾ ಸ್ಥಾವರಗಳನ್ನು ಹೊಂದಿವೆ. ಇಲ್ಲಿ ನಿರ್ಮಾಣ ಮಾಡಿ ವಿದೇಶಗಳಿಗೆ ರಫ್ತು ಕೂಡ ಮಾಡುತ್ತವೆ. ಇಂತಹ ಪ್ರಮುಖ ಬ್ರಾಂಡ್‌ಗಳಲ್ಲಿ ಹೋಂಡಾ ಕೂಡ ಒಂದು. ಹೋಂಡಾ ಕಳೆದ ವರ್ಷ ಬಿಡುಗಡೆ ಮಾಡಿರುವ ತನ್ನ ಬಹುನಿರೀಕ್ಷಿತ ಎಲಿವೇಟ್ ಎಸ್‌ಯುವಿ ಸದ್ಯ ಜಪಾನ್‌ಗೆ ರಫ್ತು ಮಾಡಲಾಗುತ್ತಿದೆ. ಈ ಎಸ್‌ಯುವಿ ಇದೀಗ ಭಾರತ ನಿರ್ಮಿತ ಸುರಕ್ಷಿತ ಕಾರೆಂದು ಜಪಾನ್‌ನಲ್ಲಿ ಸದ್ದು ಮಾಡುತ್ತಿದೆ. ಹೋಂಡಾ ಎಲಿವೇಟ್ ಜಪಾನ್ ಎನ್‌ಸಿಎಪಿ (Japan New Car Assessment program) ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ.

ಭಾರತೀಯ ಉತ್ಪನ್ನಕ್ಕೆ ಜಾಗತಿಕ ಯಶಸ್ಸು: ಭಾರತ ನಿರ್ಮಿತ ವಾಹನಗಳು ದೇಶೀಯ ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯವನ್ನು ಮಾತ್ರವಲ್ಲದೆ ಅಂತರರಾಷ್ಟ್ರೀಯ ಸುರಕ್ಷತಾ ಮಾನದಂಡಗಳಿಗೂ ಸೈ ಎನ್ನಿಸಿಕೊಂಡಿವೆ. 5-ಸ್ಟಾರ್ ರೇಟಿಂಗ್ ಮೂಲಕ ಭಾರತ ನಿರ್ಮಿತ ಕಾರುಗಳು ಜಾಗತಿಕವಾಗಿ ವಿಶ್ವಾಸವನ್ನು ಹೆಚ್ಚಿಸಿವೆ. ಭಾರತದಲ್ಲಿಯೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಇತ್ತೀಚಿನ ಬಹುತೇಕ ಕಾರುಗಳು ಉತ್ತಮ ನಿರ್ಮಾಣ ಗುಣಮಟ್ಟದೊಂದಿಗೆ ಬಿಡಿಗಡೆಯಾಗುತ್ತಿವೆ.

honda-elevate-earns-5-star-safety-rating-in-jncap

ಜಪಾನ್ ಜನ ಫಿದಾ: ಕಾರಿನ ಗುಣಮಟ್ಟಕ್ಕೆ ಫಿದಾ ಆಗಿರುವ ಜಪಾನ್ ಜನ ಹೆಚ್ಚಾಗಿ ಈ ಎಸ್‌ಯುವಿಯನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಸದ್ಯ ಈ ಕಾರನ್ನು ಭಾರತದಲ್ಲಿ ತಯಾರಿಸಿ ಜಪಾನ್‌ಗೆ ಹೆಚ್ಚಾಗಿ ರಫ್ತು ಮಾಡಲಾಗುತ್ತದೆ. ಭಾರತದಲ್ಲಿ ಹೋಂಡಾ ಎಲಿವೇಟ್ ಹೆಸರಿನಲ್ಲಿ ಮಾರಾಟ ಮಾಡಿದರೆ, ಇದೇ ಕಾರನ್ನು ಜಪಾನ್‌ನಲ್ಲಿ ಡಬ್ಲ್ಯುಆರ್-ವಿ (WR-V) ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ.

ಜೆಎನ್‌ಸಿಎಪಿಯ 2024 ಮೌಲ್ಯಮಾಪನ ಪ್ರೋಟೋಕಾಲ್ ಅಡಿಯಲ್ಲಿ ಈ ಕಾರಿನ ಗುಣಮಟ್ಟವನ್ನು ಪರೀಕ್ಷಿಸಿದ್ದು, 193.8 ಪಾಯಿಂಟ್‌ಗಳಲ್ಲಿ 176.23 ಅಂಕಗಳನ್ನು ಗಳಿಸಿದೆ. ಈ ಎಸ್‌ಯುವಿನಲ್ಲಿ ಶೇ 90 ರಷ್ಟು ಒಟ್ಟಾರೆ ಸುರಕ್ಷತೆಯಿದೆ ಎಂದು ಅಧಿಕೃತ ಜಪಾನ್ ಎನ್‌ಸಿಎಪಿ ಪರೀಕ್ಷಾ ವರದಿ ನೀಡಿದ್ದು, 5-ಸ್ಟಾರ್ ಸುರಕ್ಷತಾ ರೇಟಿಂಗ್‌ ಪಡೆದುಕೊಂಡಿದೆ.

honda-elevate-earns-5-star-safety-rating-in-jncap

ಘರ್ಷಣೆ ಪರೀಕ್ಷೆಗಳಲ್ಲಿ ವಾಹನವು 100 ರಲ್ಲಿ 86.01 ಅಂಕಗಳನ್ನು ಗಳಿಸಿದ್ದು, ಶೇ 86 (ಗ್ರೇಡ್ ಎ) ಎಂದು ರೇಟ್ ಮಾಡಲಾಗಿದೆ. ಪ್ರಿವೆಂಟಿವ್ ಸೇಫ್ಟಿ ಪರ್ಫಾರ್ಮೆನ್ಸ್ ನಲ್ಲಿ ಇದು 85.8 ರಲ್ಲಿ 82.22 ಅಂಕಗಳನ್ನು ಸಾಧಿಸಿ ಶೇ95 ಸ್ಕೋರ್ (ಗ್ರೇಡ್ ಎ) ಮಾಡಿದೆ.
ತುರ್ತು ಕರೆ ವ್ಯವಸ್ಥೆ ಪರೀಕ್ಷೆ (Emergency Call System Test) ಯಲ್ಲಿ 8 ರಲ್ಲಿ 8 (100%) ಪೂರ್ಣ ಅಂಕಗಳನ್ನು ಗಳಿಸಿದೆ.

ಡಬ್ಲ್ಯುಆರ್-ವಿ ನಿರಂತರವಾಗಿ 10 ಕಿ.ಮೀ, 20 ಕಿ.ಮೀ ಮತ್ತು 45 ಕಿ.ಮೀ ವೇಗದಲ್ಲಿ ಘರ್ಷಣೆ ತಪ್ಪಿಸುವಿಕೆಯನ್ನು ಪ್ರದರ್ಶಿಸಿದೆ. ಇದು ಫಾರ್ವರ್ಡ್ ಕೊಲಿಷನ್ ವಾರ್ನಿಂಗ್ (ಎಫ್ಸಿಡಬ್ಲ್ಯೂಎಸ್) ಮತ್ತು ಲೇನ್ ಡಿಪಾರ್ಚರ್ ವಾರ್ನಿಂಗ್ (ಎಲ್ಡಿಡಬ್ಲ್ಯೂ) ನಂತಹ ಸುಧಾರಿತ ಸುರಕ್ಷತಾ ವ್ಯವಸ್ಥೆಗಳಿಗೆ ಪ್ರಾಥಮಿಕ ಸೆನ್ಸಾರ್ ಮೊನೊಕ್ಯುಲರ್ ಕ್ಯಾಮೆರಾವನ್ನು ಬಳಸುತ್ತದೆ. ಪರೀಕ್ಷಾ ಸನ್ನಿವೇಶಗಳಲ್ಲಿ ಶೇ100 ರಷ್ಟು ಯಶಸ್ಸಿನೊಂದಿಗೆ ದೃಢವಾದ ಲೇನ್ ನಿರ್ಗಮನ ತಡೆಗಟ್ಟುವಿಕೆಯನ್ನು ತೋರಿಸಿದೆ.

honda-elevate-earns-5-star-safety-rating-in-jncap

ಡಬ್ಲ್ಯೂಆರ್-ವಿ ಮುಂಭಾಗ ಮತ್ತು ಹಿಂಭಾಗದ ಸೀಟುಗಳಲ್ಲಿ ಇರಿಸಲಾದ ಕ್ರ್ಯಾಶ್ ಟೆಸ್ಟ್ ಡಮ್ಮಿಗಳು ಕಡಿಮೆ ಗಾಯಗಳನ್ನು ತೋರಿಸಿವೆ. ಇದು ಬಲವಾದ ರಚನಾತ್ಮಕ ಸಮಗ್ರತೆ ಮತ್ತು ಸುರಕ್ಷತಾ ವಿನ್ಯಾಸವನ್ನು ದೃಢಪಡಿಸುತ್ತದೆ. ಪಾದಚಾರಿಗಳ ಸುರಕ್ಷತೆಯನ್ನು ಸಹ ಮೌಲ್ಯಮಾಪನ ಮಾಡಲಾಗಿದ್ದು, ಕಾಲು ಮತ್ತು ತಲೆ ರಕ್ಷಣೆಯಲ್ಲಿ 5/5 ಅಂಕಗಳನ್ನು ಪಡೆದುಕೊಂಡಿದೆ. ಜೊತೆಗೆ ಆಟೋಮ್ಯಾಟಿಕ್ ಎಮೆರ್ಜೆನ್ಸಿ ಬ್ರೇಕಿಂಗ್‌ನಲ್ಲಿ ಪೂರ್ಣ ಅಂಕಗಳನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, April 17, 2025, 13:04 [IST]
English summary
Honda elevate earns 5 star safety rating in jncap
Read more on honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+