Honda: ಹೋಂಡಾ ಎರಡು ಹೊಸ ಸಿಎನ್‌ಜಿ ಕಾರುಗಳ ಬಿಡುಗಡೆ: ವಿಶೇಷತೆಗಳೇನು?
ಇತ್ತೀಚಿನ ವರ್ಷಗಳಲ್ಲಿ ಇಂಧನ ಬೆಲೆಗಳ ಹೆಚ್ಚಳ, ವಾತಾವರಣ ಕಾಲುಷ್ಯದಿಂದಾಗಿ ಬಹತೇಕ ಕಾರು ಖರೀದಿದಾರರು ಸಿಎನ್‌ಜಿ ಕಾರುಗಳ ಕಡೆ ಮುಖ ಮಾಡಿದ್ದಾರೆ. ಅಲ್ಲದೆ ಮೈಲೇಜ್ ಕೂಡ ಹೆಚ್ಚು ನೀಡುವುದರಿಂದ ಸಿಎನ್‌ಜಿ ವಾಹನಗಳು ಸದ್ಯ ಭಾರತದಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿವೆ. ಇದರ ಲಾಭವನ್ನು ಪಡೆದುಕೊಳ್ಳಲು ಪ್ರೀಮಿಯಂ ಬ್ರಾಂಡ್‌ಗಳು ಕೂಡ ಸಿಎನ್‌ಜಿ ಕಾರುಗಳನ್ನು ಪರಿಚಯಿಸುತ್ತಿವೆ. ಈಗ ಹೋಂಡಾ ತನ್ನ ಹೊಸ ಅಮೇಜ್ ಮತ್ತು ಎಲಿವೇಟ್ ಎಸ್‌ಯುವಿಗಳಿಗೆ ರೆಟ್ರೋಫಿಟ್ ಸಿಎನ್‌ಜಿ ಕಿಟ್‌ಗಳನ್ನು ನೀಡುತ್ತಿದೆ. ಈ ಎರಡೂ ವಾಹನಗಳು ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಬರುತ್ತವೆ, ಕಾರ್ಖಾನೆ-ಅಳವಡಿಸಿದ ಸಿಎನ್‌ಜಿ ಆಯ್ಕೆಗಳಿಲ್ಲ ಎಂಬುದನ್ನು ಗಮನಿಸಬೇಕು.
ಡೀಲರ್ ಮಟ್ಟದ ಅನುಸ್ಥಾಪನೆ: ಹೋಂಡಾ ಈಗಷ್ಟೇ 'ಸರ್ಕಾರಿ ಅನುಮೋದಿತ' ರೆಟ್ರೋಫಿಟ್‌ಮೆಂಟ್ ಕಿಟ್‌ಗಳನ್ನು ಪರಿಚಯಿಸಿದೆ. ಈ ಸಿಎನ್‌ಜಿ ಕಿಟ್‌ಗಳನ್ನು ಡೀಲರ್ ಮಟ್ಟದಲ್ಲಿ ಸ್ಥಾಪಿಸಲಾಗುವುದು. ತರಬೇತಿ ಪಡೆದ ಸೇವಾ ಸಿಬ್ಬಂದಿಯೊಂದಿಗೆ ಮಾತ್ರ ಆಯ್ದ ಡೀಲರ್ ಶಿಪ್‌ಗಳಲ್ಲಿ ಹೋಂಡಾ ಸಿಎನ್‌ಜಿ ಕಿಟ್‌ಗಳನ್ನು ನೀಡುವ ಸಾಧ್ಯತೆಯಿದೆ. ವಾರಂಟಿಗಾಗಿ ಸಿಎನ್‌ಜಿ ಕಿಟ್ ಪೂರೈಕೆದಾರರು ಕೆಲವು ಡಾಕ್ಯುಮೆಂಟ್ ಒದಗಿಸಬಹುದು.

ಅಲ್ಲದೆ, ಈ ವಾಹನಗಳ ನೋಂದಣಿ ಪ್ರಕ್ರಿಯೆಯು ಸ್ವಲ್ಪ ಕಷ್ಟಕರವಾಗಿರುತ್ತದೆ. ಏಕೆಂದರೆ ಅವುಗಳನ್ನು ಮೊದಲು ಪೆಟ್ರೋಲ್ ವಾಹನಗಳಾಗಿ ನಂತರ ಪೆಟ್ರೋಲ್ ಸಿಎನ್‌ಜಿ ವಾಹನಗಳಾಗಿ ನೋಂದಾಯಿಸಬೇಕಾಗುತ್ತದೆ. ಈ ಪರಿವರ್ತನೆ ಕಿಟ್ ಹೊಸ ಹೋಂಡಾ ಎಲಿವೇಟ್ ಮತ್ತು ಅಮೇಜ್ ಖರೀದಿದಾರರಿಗೆ ಮಾತ್ರವೇ ಅಥವಾ ಈಗಾಗಲೇ ಖರೀದಿಸಿರುವ ಮಾಲೀಕರು ಸಹ ಇದರಿಂದ ಪ್ರಯೋಜನ ಪಡೆಯಬಹುದೇ ಎಂಬುದು ಖಚಿತವಾಗಿಲ್ಲ. ಮೈಲೇಜ್ ಸಹ ಬಹಿರಂಗಪಡಿಸಲಾಗಿಲ್ಲ.
ಭಾರತದಲ್ಲಿ ಡೀಸೆಲ್ ಎಂಜಿನ್‌ಗಳು ಕಣ್ಮರೆಯಾಗುತ್ತಿರುವುದರಿಂದ, ಇದಕ್ಕೆ ಪರ್ಯಾಯವು ಅಗತ್ಯವಾಗಿದೆ. ಇದಕ್ಕೆ ಸೂಕ್ತ ಆಯ್ಕೆಯಾಗಿ ಸಿಎನ್‌ಜಿ ಇದೆ, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಅಗ್ಗದ ಸಿಎನ್‌ಜಿ ಬೆಲೆಗಳಿಂದಾಗಿ ಉತ್ತಮ ಆಯ್ಕೆಯಾಗಲಿದೆ. ಕೆಲವು ಕಾರು ತಯಾರಕಾ ಕಂಪನಿಗಳು ಕಾರ್ಖಾನೆಯಲ್ಲಿ ಅಳವಡಿಸಿದ ಸಿಎನ್‌ಜಿ ಕಿಟ್‌ಗಳನ್ನು ನೀಡಿದರೆ, ಕೆಲವು ರೆಟ್ರೋಫಿಟ್ ಮಾಡಿದ ಕಿಟ್‌ಗಳನ್ನು ನೀಡುತ್ತವೆ.

ಏಕೆ ಹೀಗೆ?: ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಮತ್ತು ಹ್ಯುಂಡೈನಂತಹ ಕಂಪನಿಗಳು ಭಾರತದಲ್ಲಿ ಕಾರ್ಖಾನೆಯಲ್ಲಿ ಅಳವಡಿಸಿದ ಸಿಎನ್‌ಜಿ ಕಿಟ್‌ಗಳನ್ನು ನೀಡುತ್ತವೆ. ಸಿಎನ್‌ಜಿ ಪವರ್‌ಟ್ರೇನ್ ವೆಚ್ಚವನ್ನು ಭರಿಸುವುದು ಕಂಪನಿಗಳಿಗೆ ದುಬಾರಿಯಾಗಿದೆ. ಹಾಗಾಗಿ ಡೀಲರ್ ಮಟ್ಟದಲ್ಲಿ ಸ್ಥಾಪಿಸಲಾದ ರೆಟ್ರೋಫಿಟ್‌ಮೆಂಟ್ ಕಿಟ್‌ಗಳನ್ನು ಆಶ್ರಯಿಸುತ್ತಾರೆ. ರೆನಾಲ್ಟ್ ಹಾಗೂ ನಿಸ್ಸಾನ್ ಕೂಡ ಇದೇ ಕೆಲಸವನ್ನು ಮಾಡುತ್ತಿವೆ.
ಈಗ, ಹೋಂಡಾ ಅದೇ ಮಾರ್ಗವನ್ನು ಅನುಸರಿಸುತ್ತಿದೆ. 3 ನೇ ತಲೆಮಾರಿನ ಅಮೇಜ್ ಮತ್ತು ಎಲಿವೇಟ್ ಕಾಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಸರ್ಕಾರ ಅನುಮೋದಿತ ಸಿಎನ್‌ಜಿ ರೆಟ್ರೋಫಿಟ್‌ಮೆಂಟ್ ಕಿಟ್‌ಗಳನ್ನು ಪರಿಚಯಿಸುತ್ತಿದೆ. ಹೋಂಡಾ ಈ ರೆಟ್ರೋಫಿಟ್‌ಮೆಂಟ್ ಸಿಎನ್‌ಜಿ ಕಿಟ್‌ಗಳನ್ನು ತಮ್ಮ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪಟ್ಟಿ ಮಾಡಿಲ್ಲ ಹಾಗೂ ಬೆಲೆ ಮಾಹಿತಿ ಇನ್ನೂ ಹೊರಬಿಟ್ಟಿಲ್ಲ.
ಜಪಾನ್‌ನಲ್ಲಿ ಧೂಳೆಬ್ಬಿಸಿದೆ ಎಲಿವೇಟ್: ಹೋಂಡಾ ಕಳೆದ ವರ್ಷ ಬಿಡುಗಡೆ ಮಾಡಿರುವ ತನ್ನ ಬಹುನಿರೀಕ್ಷಿತ ಎಲಿವೇಟ್ ಎಸ್‌ಯುವಿ ಸದ್ಯ ಜಪಾನ್‌ಗೆ ರಫ್ತು ಮಾಡಲಾಗುತ್ತಿದೆ. ಈ ಎಸ್‌ಯುವಿ ಇದೀಗ ಭಾರತ ನಿರ್ಮಿತ ಸುರಕ್ಷಿತ ಕಾರೆಂದು ಜಪಾನ್‌ನಲ್ಲಿ ಸದ್ದು ಮಾಡುತ್ತಿದೆ. ಹೋಂಡಾ ಎಲಿವೇಟ್ ಜಪಾನ್ ಎನ್‌ಸಿಎಪಿ (Japan New Car Assessment program) ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








