Honda: ಇತ್ತೀಚೆಗೆ 2025ರ ಹೊಸ ಹೋಂಡಾ ಶೈನ್ 125 ಬೈಕ್ ಮಾರಾಟಕ್ಕೆ.. ಪ್ರಮುಖಾಂಶಗಳಿವು!

ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), ನಂಬಿಕೆಗೆ ಹೆಸರುವಾಸಿಯಾಗಿರುವ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಇತ್ತೀಚೆಗೆ 2025ರ ಶೈನ್ 125 (Shine 125) ಬೈಕ್‌ನ್ನು ಅದ್ದೂರಿಯಾಗಿ ಮಾರಾಟಕ್ಕೆ ತಂದಿತ್ತು. ಈ ಮೋಟಾರ್‌ಸೈಕಲ್ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಬಿಡುಗಡೆಗೊಂಡಿದೆ. ಬನ್ನಿ.. ನೂತನ ಹೋಂಡಾ ಶೈನ್ 125 ಬೈಕ್‌ ಕುರಿತ ಪ್ರಮುಖಾಂಶಗಳನ್ನು ತಿಳಿಯೋಣ.

ಬೆಲೆ & ರೂಪಾಂತರಗಳು (Price & Variants): ಹೊಚ್ಚ ಹೊಸ ಹೋಂಡಾ ಶೈನ್ 125 ಬೈಕ್, ಬಜೆಟ್ ಬೆಲೆಯಲ್ಲಿ ಪರಿಚಯಿಸಲಾಗಿದೆ. ಇದು ರೂ.84,493 ಎಕ್ಸ್-ಶೋರೂಂ ದರವನ್ನು ಪಡೆದಿದೆ. ಡ್ರಮ್ ಬ್ರೇಕ್ ಮತ್ತು ಡಿಸ್ಕ್ ಬ್ರೇಕ್ ಎಂಬ ಎರಡು ಆಕರ್ಷಕ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಲಭ್ಯವಾಗುತ್ತದೆ.

Honda Shine 125 Bike Top Things You Should Must Know

ವಿನ್ಯಾಸ & ಬಣ್ಣಗಳ ಆಯ್ಕೆ (Design & Color Options): ನೂತನ ಶೈನ್ 125 ಮೋಟಾರ್‌ಸೈಕಲ್ ಹಳೆಯ 'ಶೈನ್' ಬೈಕ್‌ನಂತೆಯೇ ವಿನ್ಯಾಸವನ್ನು (ಡಿಸೈನ್) ಹೊಂದಿದೆ. ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಜೆನಿ ಗ್ರೇ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಡಿಸೆಂಟ್ ಬ್ಲೂ ಮೆಟಾಲಿಕ್ ಮತ್ತು ಪರ್ಲ್ ಸೈರನ್ ಬ್ಲೂ ಸೇರಿದಂತೆ 6 ಬಣ್ಣಗಳನ್ನು ಪಡೆದಿದೆ.

ಕಾರ್ಯಕ್ಷಮತೆ (Performance): ಈ ಬೈಕ್ ಶಕ್ತಿಯುತವಾದ ಒಬಿಡಿ2ಬಿ ಮಾನದಂಡಗಳ ಅನ್ವಯ ಮೇಲ್ದರ್ಜೆರಿಸಿದ 123.94 ಸಿಸಿ ಪೆಟ್ರೋಲ್ ಎಂಜಿನ್‌ ಆಯ್ಕೆಯನ್ನು ಹೊಂದಿದೆ. 10.63 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 11 ಎನ್ಎಂ (ನ್ಯೂಟನ್ ಮೀಟರ್) ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 55 ಕೆಎಂಪಿಎಲ್‌ವರೆಗೂ ಮೈಲೇಜ್ ಕೊಡುತ್ತದೆ.

ವೈಶಿಷ್ಟ್ಯಗಳು (Features): ಹೊಸ ಹೋಂಡಾ ಶೈನ್ 125 ಮೋಟಾರ್‌ಸೈಕಲ್, ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಒಳಗೊಂಡಿದೆ. ಇದು ರಿಯಲ್ ಟೈಮ್ ಮೈಲೇಜ್ ಒಳಗೊಂಡಂತೆ ಹಲವು ಮಾಹಿತಿಯನ್ನು ಒದಗಿಸುತ್ತದೆ. ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ನ್ನು ಪಡೆದುಕೊಂಡಿದೆ. ಈ ಬೈಕ್ 123 ಕೆಜಿ ತೂಕವಿದ್ದು, 10.5 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ತನ್ನದಾಗಿಸಿಕೊಂಡಿದೆ.

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup And Braking System): ಈ ಬೈಕ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗ (ರೇರ್) ಡುಯಲ್ ರೇರ್ ಸ್ಪ್ರಿಂಗ್ಸ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಒಳಗೊಂಡಿದೆ ಸುರಕ್ಷತೆಗಾಗಿ ಮುಂದೆ ಡ್ರಮ್/ ಡಿಸ್ಕ್ ಹಾಗೂ ಹಿಂದೆ ಡ್ರಮ್ ಬ್ರೇಕ್‌ನ್ನು ಹೊಂದಿದೆ.

ಇನ್ನು, ಹೋಂಡಾ ಶೈನ್ 125 ಬೈಕ್‌ಗೆ ಪ್ರತಿಸ್ಪರ್ಧಿಯಾದ ಬಜಾಜ್ ಪಲ್ಸರ್ 125 ಮೋಟಾರ್‌ಸೈಕಲ್, ರೂ.88,012 ಎಕ್ಸ್-ಶೋರೂಂ ದರವನ್ನು ಪಡೆದಿದೆ. ಅದೇ ರೀತಿಯಲ್ಲಿ ಹೀರೋ ಸೂಪರ್ ಸ್ಪ್ಲೆಂಡರ್ 125 ಬೈಕ್, ರೂ.82,298 ರಿಂದ 86,298 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಟಿವಿಎಸ್ ರೈಡರ್ 125 ಮೋಟಾರ್‌ಸೈಕಲ್, ರೂ.89,990 ರಿಂದ ರೂ.1.10 ಲಕ್ಷ ಎಕ್ಸ್-ಶೋರೂಂ ದರವನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, February 15, 2025, 9:52 [IST]
English summary
Honda shine 125 bike top things you should must know
Read more on honda motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+