Hyundai Aura: ಹುಂಡೈ ಔರಾ ಈಗ ಇನ್ನೂ ಅಗ್ಗ: ಕೈಗೆಟುಕುವ S AMT ವೇರಿಯೆಂಟ್ ಬಿಡುಗಡೆ
ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ತನ್ನ ಜನಪ್ರಿಯ ಔರಾ (AURA) ಸೆಡಾನ್ ಕಾರನ್ನು, ಈಗ ಕೈಗೆಟುಕುವ S AMT (ಆಟೋಮೇಟೆಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್) ವೇರಿಯೆಂಟ್‌ನಲ್ಲಿ ಪರಿಚಯಿಸಿದೆ. ಈ ಕ್ರಮವು ವ್ಯಾಪಕ ಶ್ರೇಣಿಯ ಭಾರತೀಯ ಗ್ರಾಹಕರಿಗೆ, ವಿಶೇಷವಾಗಿ ಯುವ, ಮೌಲ್ಯ ಪ್ರಜ್ಞೆಯುಳ್ಳ ಖರೀದಿದಾರರು, ಅನುಕೂಲತೆ ಮತ್ತು ಸುರಕ್ಷತೆಯನ್ನು ಬಯಸುವವರಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಹೆಚ್ಚಾಗಿ ಖರೀದಿಸುವಂತೆ ಮಾಡುತ್ತದೆ. ಇದು ಮಾತ್ರವಲ್ಲದೆ ಹೊಸ S AMT ವೇರಿಯೆಂಟ್ ಪ್ರಭಾವಶಾಲಿ ಫೀಚರ್ಸ್ ಹೊಂದಿದ್ದು, ಅವುಗಳಲ್ಲಿ ಹಲವು ಉನ್ನತ ವಿಭಾಗದ ವಾಹನಗಳಲ್ಲಿ ಕಂಡುಬರುತ್ತವೆ.
ಪ್ರಮುಖ ಮುಖ್ಯಾಂಶಗಳು
ಹೊಸ ಹುಂಡೈ ಔರಾ S AMT ವೇರಿಯೆಂಟ್ ಎಕ್ಸ್-ಶೋರೂಮ್ ಬೆಲೆಯು ರೂ. 8,07,700 ಇದೆ. ಈ ಕಾರು 1.2 - ಲೀಟರ್ ಕಪ್ಪಾ ಪೆಟ್ರೋಲ್ ಎಂಜಿನ್‌ನೊಂದಿಗೆ 5 - ಸ್ಪೀಡ್ ಆಟೋಮೇಟೆಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (AMT) ಹೊಂದಿದೆ. ಯುವಕರು, ನಗರ, ಬಜೆಟ್ - ಪ್ರಜ್ಞೆಯ ಖರೀದಿದಾರರಿಗೆ ಬೆಸ್ಟ್ ಆಯ್ಕೆಯಾಗಿದೆ ಎಂದು ಕಂಪನಿ ಹೇಳಿದೆ.

ಹೊಸ ಹುಂಡೈ ಔರಾ S AMT ವೇರಿಯೆಂಟ್, 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಹೈಲೈನ್), LED ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು (DRLs), ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‌ಗಳೊಂದಿಗೆ ಎಲೆಕ್ಟ್ರಿಕ್ - ಫೋಲ್ಡಿಂಗ್ ಔಟ್‌ಸೈಡ್ ರಿಯರ್ ವ್ಯೂ ಮಿರರ್‌ಗಳನ್ನು (ORVMs) ಹೊಂದಿದೆ.
S AMT ವೇರಿಯೆಂಟ್ ಬಿಡುಗಡೆ ಮಾಡುವ ಮೂಲಕ, ಆರಂಭಿಕ ಹಂತದ ಸೆಡಾನ್ ವಿಭಾಗದಲ್ಲಿ AMT ಟ್ರಾನ್ಸ್‌ಮಿಷನ್ ಅನ್ನು ಹೆಚ್ಚು ಕೈಗೆಟುಕುವಂತೆ ಮಾಡಿದೆ. ಈ ಕಾರಿನ ಸೇರ್ಪಡೆಯು ಮಾರುತಿ ಡಿಜೈರ್ ಮತ್ತು ಹೋಂಡಾ ಅಮೇಜ್‌ನಂತಹ ಪ್ರತಿಸ್ಪರ್ಧಿಗಳ ವಿರುದ್ಧ ಔರಾವನ್ನು ಆಕರ್ಷಕ ಆಯ್ಕೆಯನ್ನಾಗಿ ಮಾಡುತ್ತದೆ. ವಿಶೇಷವಾಗಿ ಬೆಲೆ ಮತ್ತು ವೈಶಿಷ್ಟ್ಯಗಳೆರಡಕ್ಕೂ ಆದ್ಯತೆ ನೀಡುವ ಗ್ರಾಹಕರಿಗೆ ಇದು ಸೂಕ್ತವಾಗಿದೆ.

ಇದರ 1.2 ಲೀಟರ್ ಕಪ್ಪಾ ಪೆಟ್ರೋಲ್ ಎಂಜಿನ್ ಉತ್ತಮ ಪರ್ಫಾಮೆನ್ಸ್ ಜೊತೆಗೆ ಮೈಲೇಜ್ ನಡುವೆ ಸಮತೋಲನವನ್ನು ನೀಡುತ್ತದೆ. ಈ ಎಂಜಿನ್ 83 PS ಪವರ್ ಮತ್ತು 113.8 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ARAI- ಪ್ರಮಾಣೀಕೃತ ಮೈಲೇಜ್ ಸುಮಾರು 20.3 ಕಿಮೀ/ಲೀ ಅನ್ನು ನೀಡುತ್ತದೆ. ಇದು ದೈನಂದಿನ ಪ್ರಯಾಣಕ್ಕೆ ವೆಚ್ಚ-ಪರಿಣಾಮಕಾರಿಯಾಗಿದೆ.
ಹ್ಯುಂಡೈನ ಪೂರ್ಣಾವಧಿ ನಿರ್ದೇಶಕ ಮತ್ತು COO ಆಗಿರುವ ತರುಣ್ ಗರ್ಗ್ ಮಾತನಾಡಿ, "ಔರಾ ಎಸ್ ಎಎಮ್‌ಟಿಯನ್ನು ಪರಿಚಯಿಸುವುದರೊಂದಿಗೆ, ಕೈಗೆಟುಕುವ ಬೆಲೆಯಲ್ಲಿ ಉತ್ತಮ ಸೌಕರ್ಯ, ಸುರಕ್ಷತೆ, ಕಾರ್ಯಕ್ಷಮತೆ ಮತ್ತು ಅನುಕೂಲತೆಯನ್ನು ನೀಡುವ ಮೂಲಕ ಮೌಲ್ಯ ಪ್ರತಿಪಾದನೆಯನ್ನು ಮರು ವ್ಯಾಖ್ಯಾನಿಸುವ ಗುರಿಯನ್ನು ನಾವು ಹೊಂದಿದ್ದೇವೆ'' ಎಂದು ಕಂಪನಿಯ ಉದ್ದೇಶವನ್ನು ಒತ್ತಿ ಹೇಳಿದರು.

ಈ ಬಿಡುಗಡೆಯು ಸುಧಾರಿತ ತಂತ್ರಜ್ಞಾನ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಹುಂಡೈನ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ, ವೈಶಿಷ್ಟ್ಯಗಳು ಅಥವಾ ಸುರಕ್ಷತೆಯಲ್ಲಿ ರಾಜಿ ಮಾಡಿಕೊಳ್ಳದೆ ಕೈಗೆಟುಕುವ ಎಎಂಟಿ ಆಯ್ಕೆಯನ್ನು ಹುಡುಕುತ್ತಿರುವ ಭಾರತೀಯ ಸೆಡಾನ್ ಖರೀದಿದಾರರಿಗೆ ಔರಾವನ್ನು ಒಂದು ಆಕರ್ಷಕ ಆಯ್ಕೆಯನ್ನಾಗಿ ಮಾಡುತ್ತದೆ ಎಂದು ಕಂಪನಿ ಭರವಸೆ ನೀಡಿದೆ.
ಯುವ ಭಾರತೀಯ ಖರೀದಿದಾರರ ವಿಕಸನಗೊಳ್ಳುತ್ತಿರುವ ಆಕಾಂಕ್ಷೆಗಳನ್ನು ಪೂರೈಸಲು ಈ ವೇರಿಯೆಂಟ್ ಕೈಗೆಟುಕುವ ಬೆಲೆಯಲ್ಲಿ ಸೆಡಾನ್‌ನಲ್ಲಿ ಶೈಲಿ, ಅನುಕೂಲತೆ ಮತ್ತು ಸೌಕರ್ಯದ ಪರಿಪೂರ್ಣ ಮಿಶ್ರಣವನ್ನು ನೀಡುತ್ತದೆ. ಸುಧಾರಿತ AMT ಪರಿಚಯವು ಗ್ರಾಹಕರಿಗೆ ಅನುಕೂಲತೆಯನ್ನು ಹೆಚ್ಚಿಸಲು ನಮ್ಮ ನಿರಂತರ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.


Click it and Unblock the Notifications








