Hyundai: ಹ್ಯುಂಡೈನ ಪುಟ್ಟ ಕಾರಿಗೆ ಭೀಕರ ಬೇಡಿಕೆ: 33 ಲಕ್ಷಕ್ಕೂ ಹೆಚ್ಚು ಕಾರುಗಳ ಮಾರಾಟ!

ಜನಪ್ರಿಯ ವಾಹನ ತಯಾರಕ ಕಂಪನಿಯ ಹುಂಡೈ, ಇಂದು ತನ್ನ i10 ಅನ್ನು ಭಾರತದಲ್ಲಿ 3.3 ಮಿಲಿಯನ್ ಯೂನಿಟ್ ಕಾರುಗಳ ಮಾರಾಟ ಮತ್ತು ರಫ್ತು ಮಾಡಿರುವುದಾಗಿ ಹೇಳಿಕೊಂಡಿದೆ. ಭಾರತದಲ್ಲಿ 2 ಮಿಲಿಯನ್ ಯೂನಿಟ್‌ ಕಾರುಗಳನ್ನು ಮಾರಾಟ ಮಾಡಿದ್ರೆ, 1.3 ಮಿಲಿಯನ್ ಯೂನಿಟ್‌ ಕಾರುಗಳನ್ನು 140 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗಿದೆ. ಹ್ಯುಂಡೈ i10 ನ ಪ್ರಮುಖ ರಫ್ತು ಮಾರುಕಟ್ಟೆಗಳಲ್ಲಿ ದಕ್ಷಿಣ ಆಫ್ರಿಕಾ, ಮೆಕ್ಸಿಕೊ, ಚಿಲಿ ಮತ್ತು ಪೆರು ಸೇರಿವೆ. ಭಾರತ ಇದೀಗ ಕಂಪನಿಗೆ ಅತಿದೊಡ್ಡ ಪ್ರಯಾಣಿಕ ವಾಹನಗಳ ರಫ್ತು ಕೇಂದ್ರವಾಗಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ.

ಹುಂಡೈ ಐ10 ಮಾರಾಟದ ಕುರಿತು ಪ್ರತಿಕ್ರಿಯಿಸಿದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅನ್ಸೂ ಕಿಮ್, i10 ನ ಒಟ್ಟು ಮಾರಾಟ 3 ಮಿಲಿಯನ್ ಮೀರುವ ಹೆಗ್ಗುರುತು ಸಾಧನೆಯ ಬಗ್ಗೆ ನಮಗೆ ಹೆಮ್ಮೆ ಇದೆ. ಭಾರತದಲ್ಲಿ 2 ಮಿಲಿಯನ್ ಯೂನಿಟ್‌ಗಳಿಗೂ ಹೆಚ್ಚು ಮಾರಾಟವಾಗಿ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ 1.3 ಮಿಲಿಯನ್ ಯೂನಿಟ್‌ಗಳಿಗೂ ಹೆಚ್ಚು ರಫ್ತು ಮಾಡಲಾಗಿದ್ದು, ಬ್ರ್ಯಾಂಡ್ i10 ವಿಶ್ವ ದರ್ಜೆಯ ಉತ್ಪನ್ನವಾಗಿ ಗುರ್ತಿಸಿಕೊಂಡಿದೆ.

hyundai-i10-surpasses-3-million-sales-milestone

ಈ ಯಶಸ್ಸು ನಮ್ಮ ಗ್ರಾಹಕರ ನಂಬಿಕೆ, ಭಾರತೀಯ ಉತ್ಪಾದನೆಯ ಶಕ್ತಿ ಮತ್ತು ಜಗತ್ತಿಗೆ ಸ್ಮಾರ್ಟ್ ಮೊಬಿಲಿಟಿ ಪರಿಹಾರಗಳನ್ನು ರಚಿಸಲು ಕಂಪನಿಯ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ. ಮಹಾರಾಷ್ಟ್ರದಲ್ಲಿ ನಮ್ಮ ಮುಂಬರುವ ಸ್ಥಾವರದೊಂದಿಗೆ, ನಾವು ಉದಯೋನ್ಮುಖ ಮತ್ತು ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳಿಗೆ ರಫ್ತುಗಳನ್ನು ವಿಸ್ತರಿಸಲು ಉದ್ದೇಶಿಸಿದ್ದೇವೆ. ಮೇಕ್ ಇನ್ ಇಂಡಿಯಾ, ಫಾರ್ ದಿ ವರ್ಲ್ಡ್‌ಗೆ ನಮ್ಮ ಬದ್ಧತೆಯನ್ನು ಬಲಪಡಿಸುತ್ತೇವೆ ಎಂದರು.

ಹ್ಯುಂಡೈ i10 ಕಾರು ಬಿಡುಗಡೆಯಾಗಿ 18 ವರ್ಷವಾಗುತ್ತಿದ್ದು, ಪ್ರಸ್ತುತ ಮೂರನೇ ತಲೆಮಾರಿನ ಕಾರು ಮಾರಾಟದಲ್ಲಿದೆ. ಪ್ರಸ್ತುತ 1.2 L ಕಪ್ಪಾ ಪೆಟ್ರೋಲ್ ಮ್ಯಾನುವಲ್, 1.2 L ಕಪ್ಪಾ ಪೆಟ್ರೋಲ್ AMT, ಮತ್ತು CNG ಜೊತೆಗೆ 1.2 L ಬೈ-ಫ್ಯೂಲ್ ಕಪ್ಪಾ ಪೆಟ್ರೋಲ್ ಸೇರಿದಂತೆ 3 ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಿದೆ. ವಾರ್ಷಿಕವಾಗಿ 1 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಲಾಗಿದೆ.

hyundai-i10-surpasses-3-million-sales-milestone

ಹ್ಯುಂಡೈ i10 ವಿಕಸನ: 2007 ರಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳು, ABS ಮತ್ತು ಕೀಲೆಸ್ ಎಂಟ್ರಿ ಸೇರಿದಂತೆ ಹಲವಾರು ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಭಾರತದಲ್ಲಿ i10 ಅನ್ನು ಪರಿಚಯಿಸಲಾಗಿತ್ತು. ಹಲವು ವರ್ಷಗಳಲ್ಲಿ, ಬ್ರ್ಯಾಂಡ್ ಭಾರತೀಯ ಗ್ರಾಹಕರ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳಿಗೆ ಅನುಗುಣವಾಗಿ ನಿರಂತರವಾಗಿ ವಿಕಸನಗೊಂಡಿದೆ, ಅದರ ವಿಭಾಗದಲ್ಲಿ ಬೆಸ್ಟ್ ಎನ್ನಿಸಿಕೊಂಡಿದೆ.

ಇದಾದ ನಂತರ ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಎಲ್ಲಾ ಸೀಟುಗಳಿಗೆ 3 - ಪಾಯಿಂಟ್ ಸೀಟ್ ಬೆಲ್ಟ್ ಮತ್ತು ಸೀಟ್‌ಬೆಲ್ಟ್ ರಿಮೈಂಡರ್ ಮುಂತಾದ ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಹ್ಯುಂಡೈ i10 ಕಾರಿನಲ್ಲಿ ಪ್ರಮಾಣಿತವಾಗಿ ನೀಡಲಾಗಿದೆ.

hyundai-i10-surpasses-3-million-sales-milestone

ನಂತರ ಇತ್ತೀಚಿನ ವೈಶಿಷ್ಟ್ಯಗಳಾಗಿ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) - ಹೈಲೈನ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), LED ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು (DRLs), ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 20.25 ಸೆಂ.ಮೀ (8") ಟಚ್‌ಸ್ಕ್ರೀನ್ ಡಿಸ್ಪ್ಲೇ ಆಡಿಯೋ ಮುಂತಾದ ಇತ್ತೀಚಿನ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, April 28, 2025, 16:22 [IST]
English summary
Hyundai i10 surpasses 3 million sales milestone
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+