5-ಸೀಟರ್.. ಪ್ರಖ್ಯಾತ 'Hyundai i20' ಕಾರಿನ ಹೊಸ ವೇರಿಯೆಂಟ್ ಕುರಿತ ಪ್ರಮುಖಾಂಶಗಳಿವು!

ಹ್ಯುಂಡೈ ಐ20 (Hyundai i20) ಜನಪ್ರಿಯ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ಇತ್ತೀಚೆಗೆ, ದೇಶೀಯ ಮಾರುಕಟ್ಟೆಯಲ್ಲಿ ಈ ಕಾರಿನ ಹೊಸ ರೂಪಾಂತರವನ್ನು (ವೇರಿಯೆಂಟ್) ಕೂಡ ಆದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಇದು ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಬನ್ನಿ, ನೂತನ ರೂಪಾಂತರದ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಯೋಣ.

ಬೆಲೆ (Price): ಹೊಚ್ಚ ಹೊಸ ಹ್ಯುಂಡೈ ಐ20 ಮ್ಯಾಗ್ನಾ ಎಕ್ಸಿಕ್ಯೂಟಿವ್ (Hyundai i20 Magna Executive) ರೂಪಾಂತರ, ಅತಿ ಕಡಿಮೆ ಬೆಲೆಯಲ್ಲಿಯೂ ಬಿಡುಗಡೆಗೊಂಡಿದೆ. ಹೀಗಾಗಿ ಮಧ್ಯಮ ವರ್ಗದ ಖರೀದಿದಾರರು ಕೂಡ ಸುಲಭವಾಗಿ ಕೊಂಡುಕೊಳ್ಳಬಹುದು. ಇದು ರೂ.7.51 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

Hyundai i20 Magna Executive Variant Top Things

ವಿನ್ಯಾಸ & ಆಸನ ಆಯ್ಕೆ (Design & Seating Capacity): ನೂತನ ಕಾರು ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದೆ. ಇದರಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಪ್ರವಾಸಕ್ಕೆ ತೆರಳುವಾಗ ಹೆಚ್ಚಿನ ಲಗೇಜ್ ಸಾಗಿಸಲು 311 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ.

ಕಾರ್ಯಕ್ಷಮತೆ (Performance): ಹೊಸ ಹ್ಯುಂಡೈ ಐ20 ಮ್ಯಾಗ್ನಾ ಎಕ್ಸಿಕ್ಯುಟಿವ್ ರೂಪಾಂತರ, 1.2-ಲೀ. ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. ಇದರೊಟ್ಟಿಗೆ 5-ಸ್ಪೀಡ್ ಮ್ಯಾನುವಲ್/ ಸಿವಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಯಾವ ಬೈಕ್‌ಗೂ ಕಮ್ಮಿಯಿಲ್ಲದ ರೀತಿಯಲ್ಲಿ 20 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

Hyundai i20 Magna Executive Variant Top Things

ವೈಶಿಷ್ಟ್ಯಗಳು (Features): ಈ 'ಐ20' ಮ್ಯಾಗ್ನಾ ಎಕ್ಸಿಕ್ಯುಟಿವ್ ರೂಪಾಂತರ, ಬೆಲೆಗೆ ತಕ್ಕಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಪುಶ್ ಬಟನ್ ಸ್ಟಾರ್ಟ್‌, ಸ್ಮಾರ್ಟ್ ಕೀ, ಎಲೆಕ್ಟ್ರಿಕ್ ಸನ್‌ರೂಫ್, 7-ಸ್ಪೀಕರ್ ಬೋಸ್ ಸ್ಟೀರಿಯೋ ಸಿಸ್ಟಮ್‌ ಹಾಗೂ ರೇರ್ ಕ್ಯಾಮೆರಾವನ್ನು ಹೊಂದಿದೆ.

ಸುರಕ್ಷತಾ ವೈಶಿಷ್ಟ್ಯಗಳು (Safety Features): ನೂತನ ಕಾರು ಪ್ರಯಾಣಿಕರ ರಕ್ಷಣೆಗಾಗಿ ಗರಿಷ್ಠ ಮಟ್ಟದ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ. 6 - ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಟೈರ್ - ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಇಎಸ್‌ಸಿ (ಎಲೆಕ್ಟ್ರಿಕ್ ಸ್ಟೆಬಿಲಿಟಿ ಕಂಟ್ರೋಲ್), ವಿಎಸ್ಎಂ (ವೆಹಿಕಲ್ - ಸ್ಟೆಬಿಲಿಟಿ ಮ್ಯಾನೇಜ್ಮೆಂಟ್) ಅನ್ನು ಒಳಗೊಂಡಿದೆ.

Hyundai i20 Magna Executive Variant Top Things

ಸಾಮಾನ್ಯ ಹ್ಯುಂಡೈ ಐ20 ವಿಶೇಷತೆಗಳೇನು: ಇದು ಕನಿಷ್ಠ ರೂ.7.04 ಲಕ್ಷ ಹಾಗೂ ಗರಿಷ್ಠ ರೂ.11.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಮ್ಯಾಗ್ನಾ ಎಕ್ಸಿಕ್ಯುಟಿವ್ ಮಾತ್ರವಲ್ಲದೇ ಎರಾ, ಮ್ಯಾಗ್ನಾ, ಸ್ಪೋರ್ಟ್ಸ್ & ಆಸ್ತಾ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯೂ ದೊರೆಯುತ್ತದೆ.

ಹ್ಯುಂಡೈ ಐ20 ಮಾರಾಟ ಹೇಗಿದೆ: ಈ ಹ್ಯಾಚ್‌ಬ್ಯಾಕ್ ಪ್ರತಿ ತಿಂಗಳು ಸ್ಪರ್ಧಾತ್ಮಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಏಪ್ರಿಲ್‌ನಲ್ಲಿ 3,525 ಯುನಿಟ್, ಮಾರ್ಚ್‌ನಲ್ಲಿ 4,452 ಯುನಿಟ್, ಫೆಬ್ರವರಿಯಲ್ಲಿ 3,627 ಯುನಿಟ್ ಹಾಗೂ ಜನವರಿಯಲ್ಲಿ 4,741 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, May 24, 2025, 9:03 [IST]
English summary
Hyundai i20 magna executive variant top things
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+