Hyundai: ಅಲ್ಕಾಜರ್ ಫ್ಯಾಮಿಲಿ ಕಾರಿನಲ್ಲಿ ಹೊಸ ಅತ್ಯಾಧುನಿಕ ಫೀಚರ್ಸ್ ಪರಿಚಯಿಸಿದ ಹ್ಯುಂಡೈ
ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಅಲ್ಕಾಜರ್ ಗ್ರಾಹಕರಿಗೆ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಬಳಕೆಯನ್ನು ಒದಗಿಸಲು ವಿನ್ಯಾಸಗೊಳಿಸಲಾದ ಹೊಸ ವೈರ್ಡ್ ಟು ವೈರ್‌ಲೆಸ್ ಅಡಾಪ್ಟರ್ ಅನ್ನು ಪರಿಚಯಿಸಿದೆ. ವೈರ್ಡ್ ಟು ವೈರ್‌ಲೆಸ್ ಅಡಾಪ್ಟರ್ ಕಾರಿನೊಳಗಿನ ಅನುಭವವನ್ನು ಮತ್ತಷ್ಟು ಪ್ರೀಮಿಯಂ ಆಗಿ ಪರಿವರ್ತಿಸಲು ಸಜ್ಜಾಗಿದ್ದು, ಬಳಕೆದಾರರು ತಮ್ಮ ಮೊಬೈಲ್ ಅಪ್ಲಿಕೇಶನ್‌ಗಳನ್ನು (ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಬೆಂಬಲಿಸಿದಂತೆ) ಕೇಬಲ್ ಮೂಲಕ ಸಂಪರ್ಕಿಸದೆ ಸುಲಭವಾಗಿ ಬಳಸಲು ಅನುವು ಮಾಡಿಕೊಡುತ್ತದೆ.
ಹೊಸ ವೈರ್ಡ್ ಟು ವೈರ್‌ಲೆಸ್ ಅಡಾಪ್ಟರ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಬಳಸುವ ಅನುಕೂಲತೆ ಮತ್ತು ಸುಲಭತೆಯನ್ನು ಹೆಚ್ಚಿಸುತ್ತದೆ. ಮ್ಯಾಪ್‌ಗಳನ್ನು ನ್ಯಾವಿಗೇಟ್ ಮಾಡುವುದಾಗಲಿ, ಸಂಗೀತವನ್ನು ಸ್ಟ್ರೀಮಿಂಗ್ ಮಾಡುವುದಾಗಲಿ ಅಥವಾ ವಾಯಿಸ್ ಕಮಾಂಡ್‌ಗಳನ್ನು ಬಳಸುವುದಾಗಲಿ, ವೈರ್‌ಲೆಸ್ ಅಡಾಪ್ಟರ್ ಬಳಕೆದಾರರು ತಮ್ಮ ನೆಚ್ಚಿನ ಮೊಬೈಲ್ ಅಪ್ಲಿಕೇಶನ್‌ಗಳನ್ನು (ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಬೆಂಬಲಿಸಿದಂತೆ) ವಾಹನದ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮೂಲಕ ನೇರವಾಗಿ ಬಳಸಲು ಅನುವು ಮಾಡಿಕೊಡುತ್ತದೆ.

ವೈರ್ಡ್ ಟು ವೈರ್‌ಲೆಸ್ ಅಡಾಪ್ಟರ್ ಪರಿಚಯದ ಕುರಿತು ಪ್ರತಿಕ್ರಿಯಿಸಿದ ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ನಿರ್ದೇಶಕ ಮತ್ತು ಮುಖ್ಯ ಕಾರ್ಯಾಚರಣಾ ಅಧಿಕಾರಿ ತರುಣ್ ಗರ್ಗ್, "HMIL ನಲ್ಲಿ ಗ್ರಾಹಕರಿಗೆ ಅವರ ಚಾಲನಾ ಅನುಭವವನ್ನು ಹೆಚ್ಚಿಸುವ ಅತ್ಯುತ್ತಮ ತಂತ್ರಜ್ಞಾನವನ್ನು ಒದಗಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುವುದು ನಮ್ಮ ಗಮನವಾಗಿದೆ.
ನಮ್ಮ "ವೈರ್ಡ್ ಟು ವೈರ್‌ಲೆಸ್ ಅಡಾಪ್ಟರ್" ಪರಿಚಯವು ಇಂದಿನ ತಂತ್ರಜ್ಞಾನ - ಬುದ್ಧಿವಂತ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಗ್ರಾಹಕರು ತಮ್ಮ ಪ್ರಯಾಣದ ಉದ್ದಕ್ಕೂ ತಡೆರಹಿತ ಸಂಪರ್ಕವನ್ನು ನಿರೀಕ್ಷಿಸುತ್ತಾರೆ. ಈ ನಾವೀನ್ಯತೆಯು ನಮ್ಮ ಗ್ರಾಹಕರ ಕಾರಿನೊಳಗಿನ ಮನರಂಜನಾ ಅನುಭವವನ್ನು ಹೆಚ್ಚಿಸುತ್ತದೆ ಎಂದು ನಾವು ನಂಬುತ್ತೇವೆ" ಎಂದರು.

ಹೊಸ ವೈರ್ಡ್ ಟು ವೈರ್‌ಲೆಸ್ ಅಡಾಪ್ಟರ್ ಅಲ್ಕಾಜರ್ ಪ್ರೆಸ್ಟೀಜ್, ಪ್ಲಾಟಿನಂ ಮತ್ತು ಸಿಗ್ನೇಚರ್ ವೇರಿಯೆಂಟ್‌ಗಳೊಂದಿಗೆ ಲಭ್ಯವಿದೆ. ಹೊಸ ಅಲ್ಕಾಜರ್ ಫೇಸ್‌ಲಿಫ್ಟ್‌ನ ಪೆಟ್ರೋಲ್ ರೂಪಾಂತರದ ಬೆಲೆಗಳು ರೂ 14.99 ಲಕ್ಷದಿಂದ ಪ್ರಾರಂಭವಾದರೆ, ಡೀಸೆಲ್ ರೂಪಾಂತರಗಳ ಪ್ರಾರಂಭಿಕ ಬೆಲೆಯು ರೂ.15.99 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.
ನೂತನ ಹ್ಯುಂಡೈ ಅಲ್ಕಾಜರ್ ಎಸ್‌ಯುವಿ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 10.25-ಇಂಚಿನ ಡಿಸ್ಪ್ಲೇಗಳು, ಪನೊರೊಮಿಕ್ ಸನ್‌ರೂಫ್, ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 6 ಏರ್‌ಬ್ಯಾಗ್‌ನ್ನು ಪಡೆದಿದೆ. 6/7 ಆಸನ ಆಯ್ಕೆ ವ್ಯವಸ್ಥೆಯಲ್ಲಿಯೂ ಖರೀದಿಗೆ ಸಿಗುತ್ತದೆ.

ಈ ಹೊಸ ಹ್ಯುಂಡೈ ಅಲ್ಕಾಜರ್ ಎಸ್‌ಯುವಿ 2 ಪವರ್‌ಟ್ರೇನ್ ಆಯ್ಕೆಯಲ್ಲಿ ಲಭ್ಯವಿದೆ. ಮೊದಲಿಗೆ 1.5-ಲೀಟರ್ ಜಿಡಿಟಿ ಟರ್ಬೊ ಪೆಟ್ರೋಲ್ ಎಂಜಿನ್ 158 ಬಿಹೆಚ್‍ಪಿ ಗರಿಷ್ಠ ಪವರ್ ಹಾಗೂ 253 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತಾದೆ. ಮತ್ತೊಂದು 1.5-ಲೀಟರ್ ಡೀಸೆಲ್ ಎಂಜಿನ್ 113 ಬಿಹೆಚ್‍ಪಿ ಗರಿಷ್ಠ ಪವರ್ ಮತ್ತು 250 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ.
ಈ ಕಾರು ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಹಾಗೂ 7-ಸ್ಪೀಡ್ ಡಿಸಿಟಿ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ನಾರ್ಮಲ್, ಇಕೋ ಮತ್ತು ಸ್ಪೋರ್ಟ್ ಎಂಬ 3 ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದೆ. ಸ್ನೋ, ಮಡ್, ಮತ್ತು ಸ್ಯಾಂಡ್ ಹೆಸರಿನ 3 ಟ್ರಾಕ್ಷನ್ ಮೋಡ್‌ಗಳನ್ನು ಪಡೆದಿದ್ದು, ಸ್ಟಾರ್ಟ್/ ಸ್ಟಾಪ್ ಸಿಸ್ಟಮ್‌ಗಳನ್ನು ಒಳಗೊಂಡಿದೆ.


Click it and Unblock the Notifications








