ಜನಪ್ರಿಯ ಹ್ಯುಂಡೈ ಕಾರುಗಳ ಹೊಸ ರೂಪಾಂತರಗಳು ಆಕರ್ಷಕ ಬೆಲೆಯಲ್ಲಿ ಬಿಡುಗಡೆ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹುಂಡೈ ಮೋಟಾರ್ ಇಂಡಿಯಾ ತನ್ನ ವೆರ್ನಾ, ವೆನ್ಯೂ ಮತ್ತು ಗ್ರಾಂಡ್ ಐ10 ನಿಯೋಸ್‌ನ ಹೊಸ ರೂಪಾಂತರಗಳನ್ನು ಬಿಡುಗಡೆ ಮಾಡಿದೆ. ಹ್ಯುಂಡೈ ವೆನ್ಯೂ, ವೆರ್ನಾ ಮತ್ತು ಗ್ರ್ಯಾಂಡ್ i10 ನಿಯೋಸ್ ಕಾರುಗಳಲ್ಲಿ ಹೊಸ ವೈಶಿಷ್ಟ್ಯಗಳೊಂದಿಗೆ ನವೀಕರಿಸಲಾಗಿದೆ. ಈ ಮೂಲಕ ಗ್ರಾಹರಿಗೆ ಹೆಚ್ಚಿನ ಆಯ್ಕೆಗಳನ್ನು ಹೊಂದಿವೆ. ಹ್ಯುಂಡೈ ಕಾರುಗಳ ಹೊಸ ರೂಪಾಂತರಗಳ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಕೂಡ ಸಹಾಯವಾಗುತ್ತದೆ. ಈ ಹೊಸ ಆಯ್ಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಹ್ಯುಂಡೈ ವೆನ್ಯೂ ಕಾರಿನ 1.2 ಲೀಟರ್ MPi ಪೆಟ್ರೋಲ್ SX ಎಕ್ಸಿಕ್ಯುಟಿವ್ MT ಅನ್ನು ರೂ.10.79 ಲಕ್ಷಕ್ಕೆ ಎಕ್ಸ್ ಶೋರೂಂನಲ್ಲಿ ಬಿಡುಗಡೆ ಮಾಡಲಾಗಿದೆ. ನ್ಯಾಚುರಲ್ ಆಸ್ಪೈರ್ಡ್ ಪೆಟ್ರೋಲ್ ವೇರಿಯಂಟ್‌ನಲ್ಲಿ ಅಗ್ರಸ್ಥಾನದಲ್ಲಿರುವ ಇದು ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಜೊತೆಗೆ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ.

ಇದರೊಂದಿಗೆ ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಜೊತೆಗೆ ಸ್ಮಾರ್ಟ್ ಕೀ ಮತ್ತು ಸಂಪೂರ್ಣ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ (ಎಫ್‌ಎಟಿಸಿ) ನಂತಹ ಫೀಛರ್ಸ್ ಗಳನ್ನು ಪಡೆಯುತ್ತದೆ. ಹೊಸ ರೂಪಾಂತರದ ಪರಿಚಯದ ಜೊತೆಗೆ, ಹ್ಯುಂಡೈ ವೆನ್ಯೂ ಸರಣಿಯನ್ನು ಹಲವಾರು ಫೀಚರ್ಸ್ ಗಳೊಂದಿಗೆ ನವೀಕರಿಸಲಾಗಿದೆ.
ಈ ವೆನ್ಯೂ ಕಪ್ಪಾ 1.2 ಲೀಟರ್ MPi ಪೆಟ್ರೋಲ್ S MT ಮತ್ತು S+ MT ಹಿಂಬದಿಯ ಕ್ಯಾಮರಾ ಮತ್ತು ವೈರ್‌ಲೆಸ್ ಚಾರ್ಜರ್ ಸೇರಿಸಿ ಚಾಲನಾ ಅನುಭವವನ್ನು ಹೆಚ್ಚಿಸುತ್ತವೆ. ಪ್ರೀಮಿಯಂ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. S(O)+ ಅಡ್ವೆಂಚರ್ MT ರೂಪಾಂತರವು ಈಗ ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ವೈರ್‌ಲೆಸ್ ಚಾರ್ಜರ್‌ನೊಂದಿಗೆ ಸ್ಮಾರ್ಟ್ ಕೀಯನ್ನು ಪಡೆಯುತ್ತದೆ.

ಹ್ಯುಂಡೈ ವೆರ್ನಾ ಈ ಎರಡು ಹೊಸ ಮಿಡ್ ರೂಪಾಂತರಗಳನ್ನು ಸೇರಿಸಿದೆ. ಈ ವೆರ್ನಾ ಕಾರಿನಲ್ಲಿ 1.5 ಲೀಟರ್ ಟರ್ಬೊ GDi ಪೆಟ್ರೋಲ್ S(O) DCT ಮತ್ತು 1.5 ಲೀಟರ್ MPi ಪೆಟ್ರೋಲ್ S IVT, ಕ್ರಮವಾಗಿ ರೂ.13.62 ಲಕ್ಷವಾದಿಂದ ರೂ.15.27 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.
ಹೊಸ ಟರ್ಬೊ ಪೆಟ್ರೋಲ್ ರೂಪಾಂತರವು ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಜೊತೆಗೆ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫುಲ್ ಕ್ಲೈಮೆಂಟ್ ಕಂಟ್ರೋಲ್ (ಎಫ್‌ಎಟಿಸಿ), ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್ ಮತ್ತು ಡೈನಾಮಿಕ್ ಮಾರ್ಗಸೂಚಿಗಳೊಂದಿಗೆ ಹಿಂಭಾಗದ ಕ್ಯಾಮೆರಾದಂತಹ ಹಲವಾರು ಪ್ರಮುಖ ವೈಶಿಷ್ಟ್ಯಗಳನ್ನು ಪಡೆಯುತ್ತದೆ.

ಹೊರಭಾಗದಲ್ಲಿ ಹೊಸ ರೂಪಾಂತರವು ರೆಡ್ ಮುಂಭಾಗದ ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ 16 ಇಂಚಿನ ಅಲಾಯ್ ವ್ಹಿಲ್ ಗಳನ್ನು ಪಡೆಯುತ್ತದೆ. ಹೊಸ ನಾನ್ ಟರ್ಬೊ ಪೆಟ್ರೋಲ್ ರೂಪಾಂತರವು ಹ್ಯುಂಡೈ ವೆರ್ನಾ ಲೈನ್‌ಅಪ್‌ಗೆ iVT ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಪರಿಚಯಿಸುತ್ತದೆ. ಇದು ಸ್ಮಾರ್ಟ್ ಎಲೆಕ್ಟ್ರಿಕ್ ಸನ್‌ರೂಫ್, ಡ್ರೈವ್ ಮೋಡ್‌ಗಳು (ECO, ನಾರ್ಮಲ್, ಸ್ಪೋರ್ಟ್) ಮತ್ತು ಪ್ಯಾಡಲ್ ಶಿಫ್ಟರ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ವೆರ್ನಾ 1.5L MPi ಪೆಟ್ರೋಲ್ S MT ರೂಪಾಂತರ ಎಲೆಕ್ಟ್ರಿಕ್ ಸನ್‌ರೂಫ್‌ನೊಂದಿಗೆ ನವೀಕರಿಸಲಾಗಿದೆ.
ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್, ಹ್ಯುಂಡೈ ಗ್ರಾಂಡ್ i10 ನಿಯೋಸ್ ಸಹ ಹೊಸ ರೂಪಾಂತರವಾದ ಸ್ಪೋರ್ಟ್ಜ್ (O) ಅನ್ನು ಸೇರಿಸುತ್ತದೆ. ಹ್ಯುಂಡೈ ಗ್ರಾಂಡ್ i10 ನಿಯೋಸ್ ಸ್ಪೋರ್ಟ್ಜ್ (O) ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಒಳಭಾಗದಲ್ಲಿ, ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಜೊತೆಗೆ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ಲೈಮೆಂಟ್ (ಎಫ್‌ಎಟಿಸಿ) ಮತ್ತು ಸ್ಮಾರ್ಟ್ ಕೀಯನ್ನು ಪಡೆಯುತ್ತದೆ.


Click it and Unblock the Notifications








