ಭಾರತದಲ್ಲಿ ಈ ಕಾರನ್ನು ಕೇಳೋರಿಲ್ಲ.. ಆದರೆ, ವಿದೇಶಿಕರಿಗೆ ನಮ್ಮಲ್ಲಿ ತಯಾರಾಗುವ ಇದೇ ಎಸ್‌ಯುವಿ ಬೇಕಂತೆ!

ಭಾರತದಲ್ಲಿ ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ಪ್ರಖ್ಯಾತ ಆಫ್-ರೊಡ್ ಎಸ್‌ಯುವಿಯಾಗಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಖರೀದಿಗೆ ದೊರೆಯುತ್ತದೆ. ಅದರ ಹೊರತಾಗಿಯೂ ಮಾರಾಟ ಪ್ರಮಾಣ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಸದ್ಯ, ದೇಶದಲ್ಲಿ ತಯಾರಿಸಿದ ಇದೇ 5-ಡೋರ್ ಜಿಮ್ನಿಯನ್ನು ಜಪಾನ್‌ಗೂ ಕಂಪನಿಯು ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಫ್ತು ಮಾಡಲಿದೆ. ಅಲ್ಲಿಯೂ ಶೀಘ್ರದಲ್ಲೇ ಈ ಎಸ್‌ಯುವಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಜಪಾನ್‌ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಮಾತೃಸಂಸ್ಥೆಯಾಗಿರುವ 'ಸುಜುಕಿ' 5-ಡೋರ್ ಜಿಮ್ನಿಯನ್ನು ಹೊಸ ಹೆಸರಿನಲ್ಲಿ ಪರಿಚಯಿಸಲಿದೆ. ಅದಕ್ಕೆ 'ಜಿಮ್ನಿ ನೊಮೇಡ್ (Jimny Nomade) ಎಂದು ನಾಮಕರಣ ಮಾಡಿದೆ ಎಂದು ತಿಳಿದುಬಂದಿದೆ. ಈಗಾಗಲೇ ಜಪಾನ್‌ನಲ್ಲಿ ನೂತನ 'ಸುಜುಕಿ ಜಿಮ್ನಿ ನೊಮೇಡ್' ಬುಕ್ಕಿಂಗ್‌ಗಳು ಆರಂಭವಾಗಿದೆ. ಭಾರತದಿಂದ ಮೊದಲ ಬ್ಯಾಚ್‌ನ ಮಾಡೆಲ್‌ಗಳನ್ನು ಕೂಡ ರಫ್ತು ಮಾಡಲಾಗಿದೆ ಎಂದು ಹೇಳಲಾಗಿದೆ. ಮುಂಬರುವ ಕೆಲವೇ ದಿನಗಳಲ್ಲಿ ಈ ಎಸ್‌ಯುವಿಯ ವಿತರಣೆಗಳು ಶುರುವಾಗುವ ನಿರೀಕ್ಷೆಯಿದೆ.

India Made 5-Door Maruti Suzuki Jimny Suv Launch In Japan Very Soon Details

ಸುಜುಕಿ ಕಂಪನಿಯು ಜಪಾನ್‌ನ ಕೊಸೈ ತಯಾರಿಕಾ ಘಟಕದಲ್ಲಿ 3-ಡೋರ್ ಜಿಮ್ನಿಯನ್ನು ಅಭಿವೃದ್ಧಿಪಡಿಸುತ್ತದೆ. ಈ 3-ಡೋರ್ ಜಿಮ್ನಿಯು ಸ್ಟ್ಯಾಂಡರ್ಡ್ (660 ಸಿಸಿ ಎಂಜಿನ್) ಹಾಗೂ ಜಿಮ್ನಿ ಸಿಯೆರಾ (1.5 - ಲೀಟರ್ ಎಂಜಿನ್) ಎಂಬ ಎರಡು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಜಪಾನ್‌ನಲ್ಲಿ ಮಾರಾಟಕ್ಕೆ ಬರಲಿರುವ ಹೊಚ್ಚ ಹೊಸ ಸುಜುಕಿ ಜಿಮ್ನಿ ನೋಮೇಡ್, ಭಾರತದ ಗ್ರಾಹಕರ ಖರೀದಿಗೆ ದೊರೆಯುವ 5-ಡೋರ್ ಜಿಮ್ನಿ ಮಾಡೆಲ್‌ನಂತೆಯೇ ಇರಲಿದೆ. ಆದರೂ ಕೆಲವೊಂದು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿರಲಿದೆ ಎನ್ನಲಾಗಿದೆ. ಅದು ಬಿಟ್ಟರೆ ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳಲ್ಲಿ ಯಾವುದೇ ಪ್ರಮುಖ ಮಾರ್ಪಾಡುಗಳನ್ನು ಹೊಂದಿರುವುದಿಲ್ಲ ಎನ್ನಲಾಗಿದೆ.

India Made 5-Door Maruti Suzuki Jimny Suv Launch In Japan Very Soon Details

ಮಾರುತಿ ಸುಜುಕಿ ಜಿಮ್ನಿ ವಿಶೇಷತೆಗಳೇನು: ಈ ಎಸ್‌ಯುವಿ ರೂ.12.74 ಲಕ್ಷದಿಂದ ರೂ.14.95 ಲಕ್ಷ (ಎಕ್ಸ್ ಶೋರೂಂ) ದರವನ್ನು ಒಳಗೊಂಡಿದೆ. ಜಿಟಾ & ಆಲ್ಪಾ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಹೊಂದಿದೆ. ಕೈನೆಟಿಕ್ ಯೆಲ್ಲೋ, ಗ್ರಾನೈಟ್ ಗ್ರೇ, ನೆಕ್ಸಾ ಬ್ಲೂ ಮತ್ತು ಪರ್ಲ್ ಆರ್ಕ್ಟಿಕ್ ವೈಟ್ ಒಳಗೊಂಡಂತೆ ಹಲವು ಆಕರ್ಷಕ ಬಣ್ಣಗಳೊಂದಿಗೂ ಸಿಗುತ್ತದೆ.

ಈ ಮಾರುತಿ ಜಿಮ್ನಿ ಎಸ್‌ಯುವಿ 1.5-ಲೀ. ಪೆಟ್ರೋಲ್ ಎಂಜಿನ್‌ನ್ನು ಎಂಜಿನ್‌ನ್ನು ಹೊಂದಿದೆ. 16 ರಿಂದ 17 ಕೆಎಂಪಿಎಲ್‌ವರೆಗೂ ಮೈಲೇಜ್ ನೀಡುತ್ತದೆ. ಜೊತೆಗೆ 4ಡಬ್ಲ್ಯೂಡಿ (ಫೋರ್ ವೀಲ್ ಡ್ರೈವ್) ಆಯ್ಕೆಯನ್ನು ಹೊಂದಿದೆ. 4 ಆಸನಗಳನ್ನು ಪಡೆದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಯಬಹುದು. ಪ್ರವಾಸ ವೇಳೆಯಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು 211 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

India Made 5-Door Maruti Suzuki Jimny Suv Launch In Japan Very Soon Details

ನೂತನ ಜಿಮ್ನಿ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 4-ಸ್ಪೀಕರ್‌ಗಳು, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಕ್ರೂಸ್ ಕಂಟ್ರೋಲ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಮತ್ತು ಆಟೋ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಅನ್ನು ಒಳಗೊಂಡಿದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, January 29, 2025, 12:46 [IST]
English summary
India made 5 door maruti suzuki jimny suv launch in japan very soon details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+