7-ಸೀಟರ್ ವಿಭಾಗದ ನಂ.1 ಕಾರು: 26.11 ಕಿ.ಮೀ ಮೈಲೇಜ್... 9 ಲಕ್ಷಕ್ಕಿಂತ ಕಮ್ಮಿ ಬೆಲೆ
2025 ರಲ್ಲಿ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಭಾರತದಲ್ಲಿ ಅತ್ಯುತ್ತಮ ಆಯ್ಕೆಯ ಫ್ಯಾಮಿಲಿ MPV ಆಗಿ ಮುಂದುವರಿಯುತ್ತಿದೆ. ಇದು ಬಜೆಟ್ ಬೆಲೆಯಲ್ಲಿ ಉತ್ತಮ ಕ್ಯಾಬಿನ್, ಸುರಕ್ಷತೆ ಮತ್ತು ಬಹು ಪವರ್‌ಟ್ರೇನ್ ಆಯ್ಕೆಗಳ ಪ್ರಾಯೋಗಿಕ ಮಿಶ್ರಣವನ್ನು ನೀಡುತ್ತದೆ. ಹಾಗಾಗಿಯೇ ಮಾರುತಿ ಸುಜುಕಿ ಎರ್ಟಿಗಾ ಭಾರತದ ಅತ್ಯಂತ ಜನಪ್ರಿಯ 7 - ಸೀಟರ್ ವಾಹನಗಳಲ್ಲಿ ಒಂದಾಗಿದೆ. ಪ್ರಾಯೋಗಿಕತೆ, ಮೈಲೇಜ್ ಮತ್ತು ಸುಲಭವಾಗಿ ಚಾಲನೆ ಅನುಭವ ನೀಡುತ್ತದೆ. ಪ್ರಸ್ತುತ ಈ ಕಾರನ್ನು ಖರೀದಿಸಲು ನೋಡುತ್ತಿರುವವರಿಗಾಗಿ ಬೆಲೆ, ವೇರಿಯೆಂಟ್‌ಗಳು, ಎಂಜಿನ್ ಆಯ್ಕೆ, ಮೈಲೇಜ್ ಮತ್ತು ಸುರಕ್ಷತಾ ವೈಶಿಷ್ಟ್ಯಗಳ ವಿವರವಾದ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಪ್ರಸ್ತುತ 2025 ರ ಮಾರುತಿ ಸುಜುಕಿ ಎರ್ಟಿಗಾ ಆರಂಭಿಕ ಬೆಲೆಯು ರೂ.8,80,000 (ಎಕ್ಸ್ - ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಟಾಪ್ ಎಂಡ್ ವೇರಿಯೆಂಟ್ ಬೆಲೆಯು ರೂ. 12,94,100 (ಎಕ್ಸ್ - ಶೋರೂಂ) ಇದೆ. ಹಾಗಾಗಿ ಕೈಗೆಟುಕುವ ಬೆಲೆಯ 7 - ಸೀಟರ್ ವಾಹನ ಹುಡುಕುವ ಕುಟುಂಬಗಳಿಗೆ ಇದು ಬೆಸ್ಟ್ ಆಯ್ಕೆಯಾಗಿದೆ ಎಂದು ಹೇಳಬಹುದು.

ಮಾರುತಿ ಎರ್ಟಿಗಾ ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಗಳನ್ನು ಲಭ್ಯವಿದೆ. ಇದೆರ 1.5L - ಪೆಟ್ರೋಲ್ ಎಂಜಿನ್, 101.64 bhp ಪವರ್ ಮತ್ತು 139 Nm ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ 1.5L - CNG ಎಂಜಿನ್, 86.63 bhp ಪವರ್ ಮತ್ತು 122 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎರಡೂ ಎಂಜಿನ್‌ಗಳು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ.
ಕಂಪನಿಯ ಪ್ರಕಾರ ಪೆಟ್ರೋಲ್‌ನಲ್ಲಿ 20.51 kmpl ಮೈಲೇಜ್ ಹಾಗೂ ಸಿಎನ್‌ಜಿ ನಲ್ಲಿ 26.11 km/kg ಮೈಲೇಜ್ ಹಿಂದಿರುಗಿಸುತ್ತದೆ. ಇದು ಸಾಮಾನ್ಯವಾಗಿ 7-ಸೀಟರ್ ಕಾರಾಗಿದ್ದು, ಟಾಪ್ ವೇರಿಯೆಂಟ್‌ಗಳು ಹೆಚ್ಚುವರಿ ಸೌಕರ್ಯಕ್ಕಾಗಿ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳನ್ನು ಪಡೆಯುವ ಆಯ್ಕೆಯನ್ನು ಸಹ ನೀಡುತ್ತವೆ. ಮೂರನೇ ಸಾಲನ್ನು ಮಡಚುವ ಮೂಲಕ 209 ಲೀಟರ್ ಬೂಟ್ ಜಾಗವನ್ನು ವಿಸ್ತರಿಸಬಹುದಾಗಿದೆ.

ವಿನ್ಯಾಸದ ಪ್ರಕಾರ, ಎರ್ಟಿಗಾ 4395 ಎಂಎಂ ಉದ್ದ ಮತ್ತು 2740 ಎಂಎಂ ವ್ಹೀಲ್ ಬೇಸ್ ಹೊಂದಿರುವ ಕಾರಣ ಒಳಾಂಗಣ ವಿಶಾಲವಾಗಿರುತ್ತದೆ. ಇದು ಮೂರು ಸಾಲುಗಳಲ್ಲಿ ಏಳು ಜನರಿಗೆ ಆರಾಮದಾಯಕ ಪ್ರಯಾಣ ನೀಡುತ್ತದೆ. ಮೂರನೇ ಸಾಲಿನಲ್ಲಿ ಮಕ್ಕಳನ್ನು ಕೂರಿಸಿಕೊಂಡು ಸಣ್ಣ ಪ್ರವಾಸಗಳನ್ನು ಮಾಡಬಹುದು. ಆದರೆ ಮಧ್ಯದ ಸಾಲು ಹೆಚ್ಚುವರಿ ಆರಾಮಕ್ಕಾಗಿ ಎಸಿ ವೆಂಟ್‌ಗಳನ್ನು ಪಡೆದಿದೆ.
ಸ್ಟ್ಯಾಂಡರ್ಡ್ ವೇರಿಯೆಂಟ್‌ನಲ್ಲಿ ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಗಳೊಂದಿಗೆ ಬರುತ್ತದೆ. ಟಾಪ್ ವೇರಿಯೆಂಟ್ ಗಳು ರಿವರ್ಸ್ ಕ್ಯಾಮೆರಾ, ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್, ESC ನಂತಹ ಸುಧಾರಿತ ಸೇಫ್ಟಿ ಫೀಚರ್ಸ್ ಪಡೆದುಕೊಂಡು ಬರುತ್ತವೆ. ಹಾಗೆಯೇ ಇದರ ಇಂಧನ ಟ್ಯಾಂಕ್ ಸಾಮರ್ಥ್ಯವು 45 ಲೀಟರ್ ಇದೆ.

ಕ್ಯಾಬಿನ್ ವಿಶಾಲವಾದದ್ದು, ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್, ದೊಡ್ಡ ಟಚ್‌ಸ್ಕ್ರೀನ್ (ಆಂಡ್ರಾಯ್ಡ್ ಆಟೋ/ಆಪಲ್ ಕಾರ್‌ಪ್ಲೇ), ಸಾಫ್ಟ್ - ಟಚ್ ಮೆಟಿರಿಯಲ್‌ಗಳನ್ನು ಒಳಗೊಂಡಿದೆ. 2025 ಎರ್ಟಿಗಾ ತನ್ನ ಮೌಲ್ಯಯುತ ಬೆಲೆ, ಅತ್ಯುತ್ತಮ ಸ್ಥಳಾವಕಾಶ, ಇಂಧನ-ಸಮರ್ಥ ಎಂಜಿನ್‌ಗಳು ಮತ್ತು ಘನ ಸುರಕ್ಷತಾ ಪ್ಯಾಕೇಜ್‌ನೊಂದಿಗೆ ಎದ್ದು ಕಾಣುತ್ತದೆ, ಇದು ಭಾರತೀಯ ಕುಟುಂಬಗಳಿಗೆ ಉತ್ತಮ ಆಯ್ಕೆಯಾಗಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಒಟ್ಟಾರೆಯಾಗಿ, ಮಾರುತಿ ಸುಜುಕಿ ಎರ್ಟಿಗಾ ಕಾರು ಸ್ಥಳಾವಕಾಶ, ಪ್ರಾಯೋಗಿಕತೆ ಮತ್ತು ಕೈಗೆಟುಕುವ ಬೆಲೆಯ 7-ಸೀಟರ್ ವಾಹನ ಹುಡುಕುವ ಕುಟುಂಬಗಳಿಗೆ ವಿಶ್ವಾಸಾರ್ಹ ಆಯ್ಕೆಯಾಗಿ ಮುಂದುವರೆದಿದೆ. ಇದನ್ನು ಚಾಲನೆ ಮಾಡುವುದು ಸುಲಭ, ನಿರ್ವಹಿಸಲು ಅಗ್ಗವಾಗಿದೆ. ಜೊತೆಗೆ ದೈನಂದಿನ ಪ್ರಯಾಣವನ್ನು ಆರಾಮದಾಯಕವಾಗಿಸುವ ವೈಶಿಷ್ಟ್ಯಗಳಿಂದ ತುಂಬಿದೆ. ಈ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.


Click it and Unblock the Notifications