Jeep: ಹೊಸ ಅಡ್ವೆಂಚರ್ ಎಸ್‌ಯುವಿ ಬಿಡುಗಡೆ: ರಗಡ್ ಲುಕ್, ಪ್ರೀಮಿಯಂ ಇಂಟೀರಿಯರ್
ಜೀಪ್ ಇಂಡಿಯಾ, ಜೀಪ್ ಕಂಪಾಸ್ ಸ್ಯಾಂಡ್‌ಸ್ಟಾರ್ಮ್ ಎಡಿಷನ್ (Jeep Compass Sandstorm Edition) ಅನ್ನು ಬಿಡುಗಡೆ ಮಾಡುವ ಮೂಲಕ ಅಡ್ವೆಂಚರ್ ಉತ್ಸಾಹಿಗಳ ಗಮನಸೆಳೆದಿದೆ. ಇದು ಒರಟು ಮತ್ತು ಪ್ರೀಮಿಯಂ ಮಿಶ್ರಣವನ್ನು ಬಯಸುವವರಿಗಾಗಿ ವಿನ್ಯಾಸಗೊಳಿಸಲಾದ ವಿಶಿಷ್ಟ ಮತ್ತು ವಿಶೇಷ ಪ್ಯಾಕೇಜ್ ಆಗಿದೆ. ಕಂಪಾಸ್‌ನ ಈ ಸೀಮಿತ ಆವೃತ್ತಿಯ ರೂಪಾಂತರವು (Limited edition variant) ರಸ್ತೆಯಲ್ಲಿ ಎದ್ದು ಕಾಣಬೇಕೆಂದು ಬಯಸುವ ಉತ್ಸಾಹಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿ ರಚಿಸಲಾಗಿದೆ ಎಂದು ಜನಪ್ರಿಯ ಜೀಪ್ ಕಂಪನಿ ಹೇಳಿದೆ.
ಜೀಪ್ ಕಂಪಾಸ್ ಸ್ಯಾಂಡ್‌ಸ್ಟಾರ್ಮ್ ಆವೃತ್ತಿಯು ಐಕಾನಿಕ್ ಜೀಪ್ ಡಿಸೈನ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ. ಬಾನೆಟ್ ಮತ್ತು ಬದಿಗಳಲ್ಲಿ ಕಸ್ಟಮ್ ಸ್ಯಾಂಡ್‌ಸ್ಟಾರ್ಮ್ ಡೆಕಲ್‌ಗಳು ಅದರ ಕಮಾಂಡಿಂಗ್ ಉಪಸ್ಥಿತಿಯನ್ನು ಹೆಚ್ಚಿಸುತ್ತವೆ. ಇದರಲ್ಲಿ ಹೆಚ್ಚುವರಿ ಸೌಕರ್ಯಕ್ಕಾಗಿ ಪ್ರೀಮಿಯಂ ಸೀಟ್ ಕವರ್‌ಗಳು ಮತ್ತು ಪ್ರೋಗ್ರಾಮೆಬಲ್ ಆಂಬಿಯೆಂಟ್ ಲೈಟಿಂಗ್ ಅನ್ನು ಒದಗಿಸಲಾಗಿದೆ.

ಇವು ಮಾತ್ರವಲ್ಲದೆ ವರ್ಧಿತ ಸುರಕ್ಷತೆಗಾಗಿ ಮುಂಭಾಗ ಮತ್ತು ಹಿಂಭಾಗದ ಡ್ಯಾಶ್ ಕ್ಯಾಮ್‌ಗಳು, ಕಾರ್ಪೆಟ್ ಮತ್ತು ಕಾರ್ಗೋ ಮ್ಯಾಟ್‌ಗಳು ಸೇರಿದಂತೆ ಮಾಡೆಲ್ ವಿಶೇಷತೆಯನ್ನು ಗುರುತಿಸಲು ವಿಶೇಷ ಸ್ಯಾಂಡ್‌ಸ್ಟಾರ್ಮ್ ಬ್ಯಾಡ್ಜ್‌ನಂತಹ ಅತ್ಯಾಧುನಿಕ ವಿವರಗಳನ್ನು ಸಹ ನೀಡಲಾಗಿದೆ. ಒಟ್ಟಾರೆ ಈ ಕಾರು ಆಫ್‌ರೋಡ್ ರಗಡ್ ಲುಕ್ ಜೊತೆಗೆ ಪ್ರೀಮಿಂ ಇಂಟೀರಿಯರ್ ಹೊಂದಿದೆ.
ಕಸ್ಟಮೈಸ್‌ಗೊಳಿಸಿದ ಪ್ರೀಮಿಯಂ ಅಡ್ವೆಂಚರ್ ಉತ್ಸಾಹಗಳ ಆಕಾಂಕ್ಷೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಸ್ಯಾಂಡ್‌ಸ್ಟಾರ್ಮ್ ಆವೃತ್ತಿಯು ಸೀಮಿತ ಅವಧಿಗೆ ಸ್ಪೋರ್ಟ್ಸ್, ಲಾಂಗಿಟ್ಯೂಡ್ ಮತ್ತು ಲಾಂಗಿಟ್ಯೂಡ್ (O) ಎಂಬ ಮೂರು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಸೀಮಿತ ರನ್ ಮಾದರಿಗೆ ಪಾವತಿಸುವ 50,000 ರೂ.ಗಳ ಪ್ರೀಮಿಯಂ ಅನ್ನು ಪರಿಗಣಿಸಿ, ಕಂಪಾಸ್ ಸ್ಯಾಂಡ್ ಸ್ಟಾರ್ಮ್ ಬೆಲೆಗಳು 19.49 ಲಕ್ಷ ರೂ.ಗಳಿಂದ 27.33 ಲಕ್ಷ ರೂ.ಗಳ ನಡುವೆ ಇರುತ್ತವೆ.

ವಿವರವಾಗಿ ಹೇಳುವುದಾದ್ರೆ ಜೀಪ್ ಕಂಪಾಸ್ ಸ್ಯಾಂಡ್‌ಸ್ಟಾರ್ಮ್ ಆವೃತ್ತಿಯನ್ನು ರೂ. 50,000 ಪ್ರೀಮಿಯಂನಲ್ಲಿ ನೀಡಲಾಗುವುದು, ಇದು ಶೈಲಿ, ಒರಟುತನ ಮತ್ತು ಮೌಲ್ಯದ ಪರಿಪೂರ್ಣ ಸಮತೋಲನವನ್ನು ನೀಡುತ್ತದೆ. ಅಂದರೆ ಮೂಲ ಬೆಲೆಯ ಜೊತೆಗೆ ಈ ಹೆಚ್ಚಿವರಿ ಮೊತ್ತವನ್ನು ಪಾವತಿಸುವ ಮೂಲಕ ಕಾರನ್ನು ಮತ್ತಷ್ಟು ಪ್ರೀಮಿಯಂ ಆಗಿ ಕಸ್ಟಮೈಸ್ ಮಾಡಿಕೊಳ್ಳಬಹುದಾಗಿದೆ.
ಬಿಡುಗಡೆಯ ಕುರಿತು ಮಾತನಾಡಿದ ಜೀಪ್ ಇಂಡಿಯಾದ ನಿರ್ದೇಶಕ ಕುಮಾರ್ ಪ್ರಿಯೇಶ್, "ಜೀಪ್ ಕಂಪಾಸ್ ಸ್ಯಾಂಡ್‌ಸ್ಟಾರ್ಮ್ ಆವೃತ್ತಿಯು ವಿಶೇಷ ಕೊಡುಗೆಗಳೊಂದಿಗೆ ಜೀಪ್ ಉತ್ಸಾಹಿಗಳನ್ನು ಮತ್ತಷ್ಟು ಮೆಚ್ಚಿಸಲಿದೆ. ಈ ಆವೃತ್ತಿಯು ಸಾಹಸ ಮನೋಭಾವಕ್ಕೆ ಆಕರ್ಷಿತರಾದ ಮತ್ತು ಅವರ ವಿಶಿಷ್ಟ ಶೈಲಿಯ ಪ್ರಜ್ಞೆಯನ್ನು ಪ್ರತಿಬಿಂಬಿಸುವ ವಾಹನವನ್ನು ಹುಡುಕುವ ಗ್ರಾಹಕರಿಗೆ ಹೇಳಿಮಾಡಿಸಿದಂತಿರುತ್ತದೆ.

ಸ್ಯಾಂಡ್‌ಸ್ಟಾರ್ಮ್ ಆವೃತ್ತಿಯು ತನ್ನ ದೃಢವಾದ ವಿನ್ಯಾಸ ವರ್ಧನೆಗಳು, ಪ್ರೀಮಿಯಂ ಪರಿಕರಗಳು ಮತ್ತು ಕಸ್ಟಮೈಸೇಶನ್ ಆಯ್ಕೆಗಳೊಂದಿಗೆ ಜೀಪ್ ಅನ್ನು ಖರೀದಿಸುವ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ರಸ್ತೆಯಲ್ಲಿ ಎದ್ದು ಕಾಣಲು ಬಯಸುವವರಿಗೆ ನಿಜವಾಗಿಯೂ ಕಸ್ಟಮೈಸ್‌ಗೊಳಿಸಿದ ಅನುಭವವನ್ನು ನೀಡುತ್ತದೆ ಎಂದು ಜೀಪ್ ಇಂಡಿಯಾದ ನಿರ್ದೇಶಕ ಕುಮಾರ್ ಪ್ರಿಯೇಶ್ ಭರವಸೆ ನೀಡಿದ್ದಾರೆ.
ಜೀಪ್ ಕಂಪಾಸ್ ಸ್ಯಾಂಡ್‌ಸ್ಟಾರ್ಮ್ ಆವೃತ್ತಿಯು ಭಾರತದ ಜೀಪ್ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿರುತ್ತದೆ. ಗ್ರಾಹಕರು ಅಧಿಕೃತ ಶೋರೂಮ್‌ಗಳಲ್ಲಿ ಹೊಸ ಆವೃತ್ತಿಯನ್ನು ಅನ್ವೇಷಿಸಬಹುದು ಅಥವಾ ಹೆಚ್ಚಿನ ವಿವರಗಳಿಗಾಗಿ ಜೀಪ್ ಇಂಡಿಯಾ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಹೊಸ ಜೀಪ್ ಕಂಪಾಸ್ ಸ್ಯಾಂಡ್‌ಸ್ಟಾರ್ಮ್ ಎಡಿಷನ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications