2 ಕುಟುಂಬ ಪ್ರಯಾಣಿಸಬಹುದಾದ ಎಸ್‍ಯುವಿ ಬೆಲೆ ಹೆಚ್ಚಿಸಿ ಶಾಕ್ ಕೊಟ್ಟ ಜೀಪ್

ಅಮೆರಿಕ ಮೂಲದ ವಾಹನ ತಯಾರಕ ಕಂಪನಿಯಾದ ಜೀಪ್ ಭಾರತೀಯ ಮಾರುಕಟ್ಟೆಯಲ್ಲಿ ನವೀಕರಿಸಿದ ಮೆರಿಡಿಯನ್‌ ಎಸ್‍ಯುವಿಯನ್ನು ತಿಂಗಳ ಹಿಂದೆ ಬಿಡುಗಡೆಗೊಳಿಸಿತು. ಈ ಜೀಪ್ ಮೆರಿಡಿಯನ್ (Jeep Meridian) ಎಸ್‍ಯುವಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. 2024ರ ಡಿಸೆಂಬರ್ ತಿಂಗಳಿನಲ್ಲಿ ಜೀಪ್ ಇಂಡಿಯಾ ತನ್ನ ಸರಣಿಯಲ್ಲಿರುವ ಕಾರುಗಳ ಬೆಲೆಗಳನ್ನು ಹೊಸ ವರ್ಷದಲ್ಲಿ ಹೆಚ್ಚಿಸುವುದಾಗಿ ಘೋಷಿಸಿತು. ಇದೀಗ ಜೀಪ್ ಮೆರಿಡಿಯನ್ ಎಸ್‍ಯುವಿಯು ದುಬಾರಿಯಾಗಿದೆ. ಈ ಮೆರಿಡಿಯನ್ ಎಸ್‍ಯುವಿಯ ಬೆಲೆ ಮೇಲೆ ರೂ.30,000 ಹೆಚ್ಚಿಸಲಾಗಿದೆ.

ಜೀಪ್ ಮೆರಿಡಿಯನ್ ಎಸ್‍ಯುವಿಯ 4x2 MT ಆವೃತ್ತಿಯನ್ನು ಹೊರತುಪಡಿಸಿ ಎಲ್ಲಾ ರೂಪಾಂತರಗಳ ಬೆಲೆಯು ಹೆಚ್ಚಿಸಲಾಗಿದೆ. ಎದುರಾಳಿ ಜನಪ್ರಿಯ ಟೊಯೊಟಾ ಫಾರ್ಚೂನರ್ ಎಸ್‍ಯುವಿಗೆ ಹೆಚ್ಚಿನ ಪೈಪೋಟಿ ನೀಡಲು ಹೊಸ ಜೀಪ್ ಮೆರಿಡಿಯನ್ ಎಸ್‍ಯುವಿಯು ಹೊಸ ನವೀಕರಣವನ್ನು ಪಡೆದುಕೊಂಡಿತು. ಈ ಎಸ್‍ಯುವಿಯು 5 ಮತ್ತು 7 ಸೀಟುಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

Jeep Meridian

ಈ ಜೀಪ್ ಮೆರಿಡಿಯನ್ 7-ಸೀಟರ್ ಎಸ್‍ಯುವಿಯು ಖರೀದಿಸಲು ಬಯಸುವ ಗ್ರಾಹಕರು ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಈ ಜೀಪ್ ಮೆರಿಡಿಯನ್ ಎಸ್‍ಯುವಿಯು ಲಾಂಗಿಟ್ಯೂಡ್, ಲಾಂಗಿಟ್ಯೂಡ್ ಪ್ಲಸ್, ಲಿಮಿಟೆಡ್ (O) ಮತ್ತು ಓವರ್‌ಲ್ಯಾಂಡ್ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಈ ಹೊಸ ಪ್ರೀಮಿಯಂ ಎಸ್‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ.

ಈ ಹೊಸ ಜೀಪ್ ಮೆರಿಡಿಯನ್ ಎಸ್‍ಯುವಿಯಲ್ಲಿ ಮರುವಿನ್ಯಾಸಗೊಳಿಸಲಾದ ಫಾಸಿಕವನ್ನು ಹೊಂದಿದೆ. ಈ ಹೊಸ ಎಸ್‍ಯುವಿಯಲ್ಲಿ ಎಲ್‌ಇಡಿ ಹೆಡ್‌ಲೈಟ್‌ಗಳ ಕೆಳಗೆ ಬ್ಲ್ಯಾಕ್ ಬಣ್ಣವನ್ನು ಪಡೆಯುತ್ತದೆ ಆದರೆ ಮುಂಭಾಗದ ಫಾಸಿಕದ ಕೆಳಭಾಗದಲ್ಲಿ ಕ್ರೋಮ್ ಸ್ಟ್ರಿಪ್ ಸೇರಿಸಲಾಗುತ್ತದೆ. ಇದು ಗ್ನೇಚರ್ ಸೆವೆನ್ ಸ್ಲಾಟ್ ಗ್ರಿಡ್ ಅನ್ನು ಒಳಗೊಂಡಿದೆ.

Jeep Meridian

ಇನ್ನು ಈ ಹೊಸ ಮೆರಿಡಿಯನ್ ಎಸ್‍ಯುವಿಯಲ್ಲಿ ಎಲ್ಇಡಿ ಟೈಲ್ ಲೈಟ್‌ಗಳು ಸ್ಯಾಟಿನ್ ಕ್ರೋಮ್ ಅಸ್ಸೆಟ್ ಗಳನ್ನು ಒಳಗೊಂಡಿರುತ್ತವೆ. ಇನ್ನು ನವೀಕರಿಸಿದ ಮೆರಿಡಿಯನ್‌ನ ಪ್ರೊಫೈಲ್ ಟ್ರೆಪೆಜೋಡಲ್ ವ್ಹೀಲ್ ಅರ್ಚಾರ್ ಗಳನ್ನು ಹೊಂದಿದೆ. ಹೊಸ ಮೆರಿಡಿಯನ್ ಎಸ್‍ಯುವಿಯ 5 ಮತ್ತು 7 ಸೀಟುಗಳ ಕಾನ್ಫಿಗರೇಶನ್‌ನಲ್ಲಿ ಲಭ್ಯವಿದೆ. ಇನ್ನು ಒಳಭಾಗದಲ್ಲಿ ಲೆದರ್ ಮತ್ತು ಸ್ಯೂಡ್/ವೆಗಾನ್ ಲೆದರ್ ಅಸ್ಸೆಂಟ್ ಗಳೊಂದಿಗೆ ನವೀಕರಿಸಲಾಗಿದೆ.

ಈ ಮೆರಿಡಿಯನ್ ಎಸ್‍ಯುವಿಯ ಸೀಟ್‌ಗಳು, ಡ್ಯಾಶ್‌ಬೋರ್ಡ್ ಮತ್ತು ಆರ್ಮ್‌ರೆಸ್ಟ್‌ಗಳು ಪ್ರೀಮಿಯಂ ಸಾಫ್ಟ್ ಟಚ್ ವಸ್ತುಗಳನ್ನು ಒಳಗೊಂಡಿರುತ್ತವೆ. ತಂತ್ರಜ್ಞಾನದ ವಿಷಯದಲ್ಲಿ, ನವೀಕರಿಸಿದ ಮೆರಿಡಿಯನ್ ಗ್ರಾಹಕೀಯಗೊಳಿಸಬಹುದಾದ 10.25 ಇಂಚಿನ ಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು 10.1 ಇಂಚಿನ ಪೂರ್ಣ ಎಚ್‌ಡಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ನ್ಯಾವಿಗೇಷನ್ ಮತ್ತು ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗಾಗಿ ವೈರ್‌ಲೆಸ್ ಮಿರರಿಂಗ್ ಅನ್ನು ಒಳಗೊಂಡಿದೆ.

Jeep Meridian

ಇನ್ನು ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಮತ್ತು ಬಹು USB ಪೋರ್ಟ್‌ಗಳು, ಡ್ಯುಯಲ್-ಜೋನ್ ಸ್ವಯಂಚಾಲಿತ ಕ್ಲೈಮೇಟ್ ಕಂಟ್ರೋಲ್, ಎಲೆಕ್ಟ್ರಿಕ್-ಹೊಂದಾಣಿಕೆ ಮುಂಭಾಗದ ಸೀಟುಗಳು ಮತ್ತು ವಿಹಂಗಮ ಸನ್‌ರೂಫ್ ಸಹ ಕ್ಯಾಬಿನ್‌ನಲ್ಲಿ ಲಭ್ಯವಿದೆ. ಇನ್ನು 2025ರ ಜೀಪ್ ಮೆರಿಡಿಯನ್ GSDP 2.0 ಕನೆಕ್ಟಿವಿಟಿ ಪ್ರೋಟೋಕಾಲ್‌ನೊಂದಿಗೆ ಯುಕನೆಕ್ಟ್ ಕನೆಕ್ಟಿವಿಟಿಯೊಂದಿಗೆ ನವೀಕರಿಸಿದ ಕನೆಕ್ಟ್ ಸೂಟ್ ಅನ್ನು ಪಡೆಯುತ್ತದೆ.

2025ರ ಜೀಪ್ ಮೆರಿಡಿಯನ್ ಎಸ್‍ಯುವಿಯಲ್ಲಿ 2.0-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗುವುದನ್ನು ಮುಂದುವರಿಸುತ್ತದೆ. ಈ ಎಂಜಿನ್ 3,750 ಆರ್‌ಪಿಎಂನಲ್ಲಿ 168 ಬಿಹೆಚ್‌ಪಿ ಮತ್ತು 1,750-2,500 ಆರ್‌ಪಿಎಂ ನಡುವೆ 350 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಮಾದರಿಯು 16.25 ಕಿ.ಮೀ ಮೈಲೇಜ್ ನೀಡುತ್ತದೆ.

ಕೆಲವು ಪ್ರಮುಖ ಫೀಚರ್ಸ್ ಗಳಲ್ಲಿ ಆಟೋಮ್ಯಾಟಿಕ್ SOS ಕಾಲ್, ರಿಮೋಟ್ ಇಂಜಿನ್ ಸ್ಟಾರ್ಟ್/ಸ್ಟಾಪ್ ಜೊತೆಗೆ AC ಪ್ರಿಕಾಂಡಿಷನಿಂಗ್, ಅಲೆಕ್ಸಾ ಹೋಮ್ ಟು ವೆಹಿಕಲ್, ಸ್ಮಾರ್ಟ್‌ವಾಚ್ ವಿಸ್ತರಣೆ, ವಾರ್ನಿಂಗ್ ನೊಂದಿಗೆ ವಾಹನ ಆರೋಗ್ಯ ವರದಿ, ಲೈವ್ ಟ್ರಾಫಿಕ್, ಕ್ಲೈಮೆಂಟ್ ಮತ್ತು ಯುನಿಟ್ ಗಳ ನವೀಕರಣಗಳೊಂದಿಗೆ ಸಂಪರ್ಕಿತ ಒನ್-ಬಾಕ್ಸ್ ನ್ಯಾವಿಗೇಷನ್ ಅನ್ನು ಹೊಂದಿದೆ.

More from DriveSpark

Article Published On: Wednesday, January 1, 2025, 12:00 [IST]
English summary
Jeep meridian suv prices hiked in india details
Read more on jeep india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+