Jeep: ಫುಲ್ ಡಿಮ್ಯಾಂಡ್... ಬಿಡುಗಡೆಯಾದ ಕೆಲವೆ ದಿನಗಳಲ್ಲಿ ಎಲ್ಲಾ ಕಾರುಗಳು ಮಾರಾಟ!

ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಜೀಪ್ ವ್ರಾಂಗ್ಲರ್ ವಿಲ್ಲಿಸ್ ಲಿಮಿಟೆಡ್ ಎಡಿಷನ್ ಸಂಪೂರ್ಣವಾಗಿ ಮಾರಾಟವಾಗಿವೆ ಎಂದು ಜೀಪ್ ಇಂಡಿಯಾ ತಿಳಿಸಿದೆ. ನಿಜವಾದ ಆಫ್-ರೋಡ್ ಪ್ರಿಯರು ಮತ್ತು ಪರ್ಫಾಮೆನ್ಸ್ ಇಷ್ಟಪಡುವವರಿಗಾಗಿ ಈ ಜೀಪ್ ವ್ರಾಂಗ್ಲರ್ ವಿಲ್ಲೀಸ್ ಲಿಮಿಟೆಡ್ ಎಡಿಷನ್ ಅನ್ನು ಇತ್ತೀಚೆಗೆ ಪರಿಚಯಿಸಲಾಗಿತ್ತು. ಜೀಪ್‌ನ ಐಕಾನಿಕ್ ಪರಂಪರೆಗೆ ಹೇಳಿಮಾಡಿಸಿದ ಈ ಲಿಮಿಟೆಡ್ ಎಡಿಷನ್ ಮಾಡಲ್, ಭಾರತದಾದ್ಯಂತ ಚಾಲನಾ ಉತ್ಸಾಹಿಗಳಲ್ಲಿ ಆಫ್-ರೋಡಿಂಗ್‌ಗೆ ಅಪಾರ ಉತ್ಸಾಹವನ್ನು ಹುಟ್ಟುಹಾಕಿದ್ದು, ಭಾರತದಾದ್ಯಂತ ಕೇವಲ 30 ಕಾರುಗಳನ್ನು ಮಾತ್ರ ಮಾರಾಟ ಮಾಡಲಾಗುವುದು ಎಂದು ಹೇಳಿದ್ದೇ ತಡ ಎಲ್ಲಾ ಕಾರುಗಳು ಈಗ ಮಾರಾಟವಾಗಿಬಿಟ್ಟಿವೆ.

ಹೊಸ ಜೀಪ್ ವ್ರಾಂಗ್ಲರ್ ವಿಲ್ಲಿಸ್ ಲಿಮಿಟೆಡ್ ಎಡಿಷನ್ ತ್ವರಿತ ಮಾರಾಟವು ಬ್ರ್ಯಾಂಡ್‌ನ ನಿರಂತರ ಆಕರ್ಷಣೆ ಮತ್ತು ಭಾರತದಲ್ಲಿ ಅದರ ಬೆಳೆಯುತ್ತಿರುವ ಅಡ್ವೆಂಚರ್ ಸಮುದಾಯದೊಂದಿಗೆ ಬಲವಾದ ಸಂಪರ್ಕಕ್ಕೆ ಸಾಕ್ಷಿಯಾಗಿದೆ. ಜೀಪ್ ವ್ರಾಂಗ್ಲರ್ ವಿಲ್ಲಿಸ್ ಲಿಮಿಟೆಡ್ ಎಡಿಷನ್ 4x4 ಸಾಮರ್ಥ್ಯದೊಂದಿಗೆ ವಿಶೇಷ ವಿನ್ಯಾಸ ಅಂಶಗಳೊಂದಿಗೆ ನಿರ್ಮಾಣವಾಗಿದೆ.

jeep-wrangler-willys-limited-edition-complete-sold-out

ವಿಶೇಷತೆಗಳು: ಇತರ ಕಾರುಗಳಿಂದ ಪ್ರತ್ಯೇಕವಾಗಿ ಕಾಣುವಂತೆ ನಿರ್ಮಿಸಲಾದ ವ್ರಾಂಗ್ಲರ್ ವಿಲ್ಲಿಸ್ ಲಿಮಿಟೆಡ್ ಎಡಿಷನ್ ಅದರ ವಿಶಿಷ್ಟವಾದ 1941 ಹುಡ್ ಡೆಕಲ್ ಮಿಲಿಟರಿ ಮೂಲವನ್ನು ನೆನಪಿಸುತ್ತದೆ. ಪವರ್ ಸೈಡ್ ಸ್ಟೆಪ್‌ಗಳು, ಗ್ರಾಬ್ ಹ್ಯಾಂಡಲ್‌ಗಳು, ಫ್ಲೋರ್ ಮ್ಯಾಟ್‌ಗಳು ಸೇರಿದಂತೆ ಸುರಕ್ಷತೆಗಾಗಿ ಮುಂಭಾಗ ಮತ್ತು ಹಿಂಭಾಗದ ಡ್ಯಾಶ್ ಕ್ಯಾಮ್‌ಗಳನ್ನು ಒಳಗೊಂಡಂತೆ ದೃಢವಾಗಿ ನಿರ್ಮಿಸಲಾಗಿದೆ.

ಇದಿಷ್ಟೇ ಅಲ್ಲದೇ ಸನ್‌ರೈಡರ್ ರೂಫ್‌ಟಾಪ್ ಮತ್ತು ರೂಫ್ ಕ್ಯಾರಿಯರ್‌ನೊಂದಿಗೆ ಸೈಡ್ ಲ್ಯಾಡರ್‌ನಂತಹ ಆಪ್ಷನಲ್ ಅಡ್ವೆಂಚರ್ ನವೀಕರಣಗಳು ಕೂಡ ಲಭ್ಯವಿದೆ. '41 ಗ್ರೀನ್ ಪೇಂಟ್ ಆಯ್ಕೆಯಲ್ಲಿ ಬಿಡುಗಡೆಯಾಗಿರುವ ಭಾರತದ ಮೊದಲ ಕಾರು ಇದಾಗಿದ್ದು, ಅದರ ವಿಶಿಷ್ಟ ಗುರುತನ್ನು ಕಾಪಾಡಿಕೊಳ್ಳಲು ವಿಲ್ಲೀಸ್ ಆವೃತ್ತಿಗೆ ಮಾತ್ರ ಈ ಬಣ್ಣವನ್ನು ಮೀಸಲಿಡಲಾಗಿತ್ತು ಎಂದು ಕಂಪನಿ ತಿಳಿಸಿದೆ.

jeep-wrangler-willys-limited-edition-complete-sold-out

ಭಾರತದಲ್ಲಿ ವ್ರಾಂಗ್ಲರ್ ವಿಲ್ಲಿಸ್ ಲಿಮಿಟೆಡ್ ಎಡಿಷನ್‌ಗೆ ಗ್ರಾಹಕರ ಉತ್ಸಾಹಭರಿತ ಪ್ರತಿಕ್ರಿಯೆಗೆ ನಾವು ಕೃತಜ್ಞರಾಗಿದ್ದೇವೆ. ಇದು ಸಂಪೂರ್ಣವಾಗಿ ಮಾರಾಟವಾಗಿದೆ ಎಂಬ ಅಂಶವು ನಮ್ಮ ಗ್ರಾಹಕರು ಜೀಪ್ ಬ್ರ್ಯಾಂಡ್‌ನಲ್ಲಿ ಹೊಂದಿರುವ ಆಳವಾದ ಪ್ರೀತಿ ಮತ್ತು ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಇದು ಸಾಹಸ-ಸಿದ್ಧ ವಾಹನಗಳನ್ನು ತರಲು ನಮಗೆ ಸ್ಫೂರ್ತಿ ನೀಡುತ್ತಿದೆ. ನಮ್ಮ ಗ್ರಾಹಕರ ಬೆಂಬಲಕ್ಕಾಗಿ ನಾವು ಧನ್ಯವಾದ ಅರ್ಪಿಸುತ್ತೇವೆ ಎಂದು ಕಂಪನಿ ಹೇಳಿದೆ.

ಭಾರತದಲ್ಲಿ ಜೀಪ್ ಕಂಪನಿಯು ರಾಂಗ್ಲರ್, ಕಂಪಾಸ್, ಮೆರಿಡಿಯನ್ ಮತ್ತು ಗ್ರ್ಯಾಂಡ್ ಚೆರೋಕೀನಂತಹ ಎಸ್‌ಯುವಿಗಳನ್ನು ಒಳಗೊಂಡಿದೆ. ಉತ್ತರ ಅಮೆರಿಕಾದ ಹೊರಗೆ ಜೀಪ್ ಬ್ರ್ಯಾಂಡ್ ಸ್ಥಳೀಯವಾಗಿ 4 ಮಾದರಿಗಳನ್ನು ನೀಡುತ್ತಿದೆ. ಹಾಗೆಯೇ ಪ್ರಪಂಚದಾದ್ಯಂತದ ಇತರ ಬಲಗೈ ಡ್ರೈವ್ ಮಾರುಕಟ್ಟೆಗಳಿಗೆ ಎಸ್‌ಯುವಿಗಳನ್ನು ರಫ್ತು ನೀಡುವಲ್ಲಿ ಭಾರತವು ಮೊದಲ ದೇಶವಾಗಿದೆ.

jeep-wrangler-willys-limited-edition-complete-sold-out

ಸ್ಟೆಲ್ಲಾಂಟಿಸ್: ಸ್ಟೆಲ್ಲಾಂಟಿಸ್ ಒಂದು ಪ್ರಮುಖ ಜಾಗತಿಕ ವಾಹನ ತಯಾರಕ ಸಂಸ್ಥೆಯಾಗಿದ್ದು, ಇದು ಜೀಪ್ ಕಂಪನಿಗೂ ಮಾತೃ ಸಂಸ್ಥೆಯಾಗಿದೆ. ಕೇವಲ ಜೀಪ್ ಮಾತ್ರವಲ್ಲದೆ ಜನಪ್ರಿಯ ಅಂತರಾಷ್ಟ್ರೀಯ ಬ್ರಾಂಡ್‌ಗಳಾದ ಅಬಾರ್ತ್, ಆಲ್ಫಾ ರೋಮಿಯೋ, ಕ್ರಿಸ್ಲರ್, ಸಿಟ್ರನ್, ಡಾಡ್ಜ್, ಡಿಎಸ್ ಆಟೋಮೊಬೈಲ್ಸ್, ಫಿಯಾಟ್, ಲ್ಯಾನ್ಸಿಯಾ, ಮಾಸೆರಾಟಿ, ಒಪೆಲ್, ಪಿಯುಗಿಯೊ, ರಾಮ್, ವಾಕ್ಸ್‌ಹಾಲ್, ಫ್ರೀ2ಮೂವ್ ಮತ್ತು ಲೀಸಿಸ್ ಬ್ರಾಂಡ್‌ಗಳನ್ನು ಮುನ್ನಡೆಸುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, May 29, 2025, 13:54 [IST]
English summary
Jeep wrangler willys limited edition complete sold out
Read more on jeep india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+