ಹೊಸ ಎಂಜಿ ಹೆಕ್ಟರ್ ರೂ. 11.99 ಲಕ್ಷ ಬೆಲೆಯಲ್ಲಿ ಬಿಡುಗಡೆ: ಫುಲ್ ಪ್ರೀಮಿಯಂ SUV
ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ಇಂದು ಹೊಸ ಎಂಜಿ ಹೆಕ್ಟರ್ ಅನ್ನು ರೂ. 11.99 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಹೊಸ ಮುಂಭಾಗ ಮತ್ತು ಹಿಂಭಾಗದ ಬಂಪರ್ ವಿನ್ಯಾಸ, ಹೊಸ ಗ್ರಿಲ್, ಹೊಸ ಅಲಾಯ್ ವೀಲ್‌ಗಳೊಂದಿಗೆ ಗಮನಾರ್ಹವಾದ ಹೊರಭಾಗವನ್ನು ಪಡೆದುಕೊಂಡಿದೆ. ಸೆಲಾಡಾನ್ ಬ್ಲೂ ಮತ್ತು ಪರ್ಲ್ ವೈಟ್ ಎಂಬ ಎರಡು ಹೊಸ ಬಣ್ಣಗಳನ್ನು ಪರಿಚಯಿಸಲಾಗಿದೆ. ಇಂಟೀರಿಯರ್‌ನಲ್ಲಿ 5-ಸೀಟರ್ ಟ್ರಿಮ್‌ನಲ್ಲಿ ಡ್ಯುಯಲ್ ಟೋನ್ ಐಸ್ ಗ್ರೇ ಥೀಮ್ ಹಾಗೂ 6 ಮತ್ತು 7-ಸೀಟರ್ ಟ್ರಿಮ್‌ಗಳಿಗೆ ಡ್ಯುಯಲ್ ಟೋನ್ ಅರ್ಬನ್ ಟ್ಯಾನ್ ಅನ್ನು ನೀಡಲಾಗಿದೆ.
ಹೊಸ MG ಹೆಕ್ಟರ್ ಸೀಟುಗಳ ಮೇಲಿನ ಫ್ಯಾಬ್ರಿಕ್ ಇನ್ಸರ್ಟ್‌ಗಳು ಮತ್ತು ಲೆದರ್ ಪ್ಯಾಕ್ ಡ್ಯಾಶ್‌ಬೋರ್ಡ್, ಮುಂಭಾಗದ ವೆಂಟಿಲೇಟೆಡ್ ಸೀಟುಗಳು, ಟೆಲಿಸ್ಕೋಪಿಕ್ ಮತ್ತು ಟಿಲ್ಟ್ ಹೊಂದಾಣಿಕೆ ಮಾಡಬಹುದಾದ ಸ್ಟೀರಿಂಗ್ ಮತ್ತು 6-ವೇ ಪವರ್ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ದೈನಂದಿನ ಪ್ರಾಯೋಗಿಕತೆಯ ಪರಿಪೂರ್ಣ ಸೌಕರ್ಯವನ್ನು ಹೆಚ್ಚಿಸುತ್ತವೆ.

ಇಂಟೀರಿಯರ್ ಫೀಚರ್ಸ್ ವಿಷಯಕ್ಕೆ ಬಂದರೆ ಅತಿದೊಡ್ಡ- ಇನ್ -ಸೆಗ್ಮೆಂಟ್ (14-ಇಂಚಿನ) HD ಪೋರ್ಟ್ರೇಟ್ ಟಚ್ ಸ್ಕ್ರೀನ್ ಸ್ಮಾರ್ಟ್ ಬೂಸ್ಟ್ ಸಿಸ್ಟಮ್, 17.78 ಸೆಂ.ಮೀ ಎಂಬೆಡೆಡ್ ಎಲ್‌ಸಿಡಿ ಸ್ಕ್ರೀನ್ ಹೊಂದಿರುವ ಪೂರ್ಣ ಡಿಜಿಟಲ್ ಕ್ಲಸ್ಟರ್, ಐ-ಸ್ವೈಪ್ ಟಚ್ ಗೆಸ್ಚರ್ ಕಂಟ್ರೋಲ್, AC, ಮ್ಯೂಸಿಕ್ ಮತ್ತು ನ್ಯಾವಿಗೇಷನ್‌ಗಾಗಿ ಎರಡು ಮತ್ತು ಮೂರು - ಬೆರಳಿನ ಸ್ವೈಪ್‌ಗಳಂತಹ ಮಲ್ಟಿ-ಟಚ್ ಕಾರ್ಯಾಚರಣೆ ಮತ್ತು ಡಿಜಿಟಲ್ ಬ್ಲೂಟೂತ್ ಕೀ ಒದಗಿಸಲಾಗಿದೆ.
ಹೊಸ ಹೆಕ್ಟರ್ ತನ್ನ ಬಳಕೆದಾರರಿಗೆ ವೀಲ್ ವ್ಯೂ ನೀಡುವ 360° HD ಕ್ಯಾಮೆರಾದೊಂದಿಗೆ ಸುರಕ್ಷತೆ ಮತ್ತು ಅನುಕೂಲತೆಯನ್ನು ಹೆಚ್ಚಿಸುತ್ತದೆ. ABS, EBD, ESP, TCS, ಹಿಲ್ ಹೋಲ್ಡ್ ಕಂಟ್ರೋಲ್ ಮತ್ತು ಬ್ರೇಕ್ ಅಸಿಸ್ಟ್‌ನಂತಹ ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ವರ್ಧಿತ ವೈಶಿಷ್ಟ್ಯಗಳು ಈಗ ಪ್ರಯಾಣಿಕರಿಗೆ ನೆಮ್ಮದಿಯ ಪ್ರಯಾಣವನ್ನು ಖಚಿತಪಡಿಸುತ್ತವೆ.

1.5L ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ (CVT & MT) 143 PS ಪವರ್ ಮತ್ತು 250 NM ಟಾರ್ಕ್ ಅನ್ನು ನೀಡುವುದರಿಂದ, ಹೊಸ ಹೆಕ್ಟರ್ ಅನ್ನು ಎಂದಿಗಿಂತಲೂ ಹೆಚ್ಚು ಸ್ಟೈಲಿಶ್ ಪವರ್‌ಫುಲ್ ಕಾರಾಗಿದೆ. 2019 ರಲ್ಲಿ ಭಾರತದ ಮೊದಲ ಇಂಟರ್ನೆಟ್ ಕಾರು ಎಂದು ಬಿಡುಗಡೆಯಾದ MG ಹೆಕ್ಟರ್, ತಂತ್ರಜ್ಞಾನ, ಸುರಕ್ಷತೆ ಮತ್ತು ಶೈಲಿಯ ಆಕರ್ಷಕ ಸಂಯೋಜನೆಯೊಂದಿಗೆ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಂಡಿತ್ತು.
ಇದೀಗ ಡ್ಯುಯಲ್-ಪೇನ್ ಪನೋರಮಿಕ್ ಸನ್‌ರೂಫ್, 35.56 cm (14 - ಇಂಚಿನ) HD ಇನ್ಫೋಟೈನ್‌ಮೆಂಟ್ ಸಿಸ್ಟಮ್, 8-ಬಣ್ಣದ ಆಂಬಿಯೆಂಟ್ ಮೂಡ್ ಲೈಟಿಂಗ್ ಮತ್ತು 70+ ವೈಶಿಷ್ಟ್ಯಗಳೊಂದಿಗೆ MG ಯ ಸುಧಾರಿತ i-SMART ಸಂಪರ್ಕಿತ ತಂತ್ರಜ್ಞಾನ ಮತ್ತು ಸುಧಾರಿತ ADAS ಸೂಟ್‌ನಂತಹ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದುವ ಮೂಲಕ ಹಳೆಯ ಮಾಡಲ್‌ಗಿಂತ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ.

ಹೆಚ್ಚುವರಿ ಅನುಕೂಲಕ್ಕಾಗಿ, ಹೊಸ ಹೆಕ್ಟರ್ ಸ್ಮಾರ್ಟ್ ಕೀ ಮತ್ತು ಆಂಟಿ ಥೆಫ್ಟ್ ಇಮ್ಮೊಬಿಲೈಸೇಶನ್‌ನೊಂದಿಗೆ ಪುಶ್ ಬಟನ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಅನ್ನು ಸಹ ಒಳಗೊಂಡಿದೆ. ಇದು ಅಟೋಮ್ಯಾಟಿಕ್ ಟೈಲ್‌ಗೇಟ್, PM 2.5 ಫಿಲ್ಟರ್‌ನೊಂದಿಗೆ ಏರ್ ಪ್ಯೂರಿಫೈಯರ್, ರೈನ್ ಸೆನ್ಸಾರ್ ವೈಪರ್‌ಗಳು, ಆಡಿಯೋಗಾಗಿ ರಿಮೋಟ್ ಕಂಟ್ರೋಲ್, i-ಸ್ಮಾರ್ಟ್ ಅಪ್ಲಿಕೇಶನ್‌ನಲ್ಲಿ AC ಮತ್ತು ಮೂಡ್ ಲೈಟ್ ಮತ್ತು ಮುಂಭಾಗದ ಪಾರ್ಕಿಂಗ್ ಸೆನ್ಸರ್‌ಗಳನ್ನು ಸಹ ನೀಡಲಾಗಿದೆ.
ಹೊಸ ಹೆಕ್ಟರ್ ಕಾರು "MG SHIELD" ಎಂಬ ವಿಶಿಷ್ಟ ಕಾರು ಮಾಲೀಕತ್ವ ಕಾರ್ಯಕ್ರಮದೊಂದಿಗೆ ಬರುತ್ತದೆ, ಇದು ಮಾರಾಟದ ನಂತರದ ಸೇವಾ ಆಯ್ಕೆಗಳನ್ನು ನೀಡುತ್ತದೆ. ಗ್ರಾಹಕರು ಪ್ರಮಾಣಿತ 3+3+3 ಪ್ಯಾಕೇಜ್‌ನಿಂದ ಪ್ರಯೋಜನ ಪಡೆಯಬಹುದು. ಇದರಲ್ಲಿ ಅನಿಯಮಿತ ಕಿಲೋಮೀಟರ್‌ಗಳೊಂದಿಗೆ ಮೂರು ವರ್ಷಗಳ ವಾರೆಂಟಿ, ಮೂರು ವರ್ಷಗಳ ರಸ್ತೆಬದಿಯ ಸಹಾಯ ಮತ್ತು ಮೂರು ಲೇಬರ್-ಮುಕ್ತ ಆವರ್ತಕ ಸೇವೆಗಳು ಸೇರಿವೆ.


Click it and Unblock the Notifications








