MG Motor: ಮಾರಾಟವಿಲ್ಲದೆ ಸಂಕಷ್ಟದಲ್ಲಿದ್ದ ಬ್ರ್ಯಾಂಡ್‌ನ ಭವಿಷ್ಯ ಬದಲಿಸಿದೆ ಈ ಒಂದು ಕಾರು!

ಜೆಎಸ್‌ಡಬ್ಲ್ಯು ಎಂಜಿ ಮೋಟಾರ್ (JSW MG Motor) ಮೋಟಾರ್ ಇಂಡಿಯಾ ಮೇ 2025 ರಲ್ಲಿ 6,304 ಯುನಿಟ್‌ ಕಾರುಗಳ ಮಾಸಿಕ ಮಾರಾಟವನ್ನು ವರದಿ ಮಾಡಿದೆ. ಇದು ಮೇ 2024 ರಲ್ಲಿ ಮಾರಾಟವಾಗಿದ್ದ 4,510 ಯುನಿಟ್‌ ಕಾರುಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ40 ರಷ್ಟು ಬೆಳವಣಿಗೆ ಸಾಧಿಸಿದೆ. ಇದಕ್ಕೆ ಮೂಲ ಕಾರಣ ಕಂಪನಿಯ ಹೊಸ ಎಲೆಕ್ಟ್ರಿಕ್ ಕಾರಾಗಿದೆ. ಎಂಜಿ ಮೋಟಾರ್‌ನ ಇಂಧನ ಚಾಲಿತ ಕಾರುಗಳು ಅಷ್ಟೇನು ಜನಪ್ರಿಯತೆ ಪಡೆದಿಲ್ಲವಾದರೂ ಹೊಸ 'ಎಂಜಿ ವಿಂಡ್ಸರ್' ಮಾರಾಟದಲ್ಲಿ ಧೂಳೆಬ್ಬಿಸುತ್ತಿದೆ. ಕಂಪನಿಗೆ ಭಾರತದಲ್ಲಿ ಬೇಡಿಕೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.

MG ವಿಂಡ್ಸರ್ ಮತ್ತು ಅದರ ವೇರಿಯೆಂಟ್‌ಗಳ ಪ್ರಭಾವಶಾಲಿ ಕಾರ್ಯಕ್ಷಮತೆಯೊಂದಿಗೆ, JSW MG ಮೋಟಾರ್ ಇಂಡಿಯಾ ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಪ್ರಮುಖ ಎಲೆಕ್ಟ್ರಿಕ್ ವಾಹನ (EV) ಬ್ರಾಂಡ್‌ಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ಕಂಪನಿಯ ಎಲೆಕ್ಟ್ರಿಕ್ ಕಾರುಗಳು ಸದ್ಯ ದೇಶದಲ್ಲಿ ಟಾಟಾ ಎಲೆಕ್ಟ್ರಿಕ್ ಕಾರುಗಳಿಗೂ ಪೈಪೋಟಿ ನೀಡುತ್ತಿವೆ.

jsw-mg-motor-india-record-sales-of-6304-units-in-may-2025

ಈ ಯಶಸ್ಸಿಗೆ MG ವಿಂಡ್ಸರ್‌ನ ಅತ್ಯುತ್ತಮ ವಿನ್ಯಾಸ, ಉತ್ತಮ ಪರ್ಫಾಮೆನ್ಸ್‌ನಿಂದಾಗಿ, ಭಾರತೀಯ ಕಾರು ಖರೀದಿದಾರರಿಗೆ ಆಕರ್ಷಕ ಆಯ್ಕೆಯಾಗಿದೆ. ಇತ್ತೀಚೆಗೆ JSW MG ಮೋಟಾರ್ ಇಂಡಿಯಾ PRO ಸರಣಿಯಲ್ಲಿ ಭಾರತದ ಹೆಚ್ಚು ಮಾರಾಟವಾದ EV ವಿಂಡ್ಸರ್‌ನ 'ಎಸೆನ್ಸ್ ಪ್ರೊ' ಮತ್ತು 'ಎಕ್ಸ್‌ಕ್ಲೂಸಿವ್ PRO' ಎಂಬ ಎರಡು ಹೊಸ ವೇರಿಯೆಂಟ್‌ಗಳನ್ನು ಬಿಡುಗಡೆ ಮಾಡಿದೆ.

MG ವಿಂಡ್ಸರ್ ವಿಶೇಷತೆಗಳು: ಹೊಸ ಎಂಜಿ ವಿಂಡ್ಸರ್ ಇವಿ ಪ್ರೊ ರೂ.17.49 ಲಕ್ಷ ಎಕ್ಸ್-ಶೋರೂಂ ದರವನ್ನು ಹೊಂದಿದೆ. ಹೊಸ ಎಂಜಿ ವಿಂಡ್ಸರ್ ಇವಿ ಪ್ರೊ ಎಲೆಕ್ಟ್ರಿಕ್ ಕಾರು ಸೆಲಾಡಾನ್ ಬ್ಲೂ, ಗ್ಲೇಜ್ ರೆಡ್ & ಅರೋರಾ ಸಿಲ್ವರ್ ಎಂಬ 3 ಹೊಸ ಬಣ್ಣಗಳೊಂದಿಗೆ ಖರೀದಿಗೆ ದೊರೆಯುತ್ತದೆ. ಇಂಟೀರಿಯರ್‌ನಲ್ಲಿ ಡುಯಲ್-ಟೋನ್ ಐವರಿ & ಬ್ಲ್ಯಾಕ್ ಪೈಂಟ್ ಸ್ಕೀಮ್ ಅನ್ನು ಒಳಗೊಂಡಿದೆ.

jsw-mg-motor-india-record-sales-of-6304-units-in-may-2025

ಫೀಚರ್ಸ್ ಬಗ್ಗೆ ಹೇಳುವುದಾದ್ರೆ, ಇದು 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಪೋರ್ಟ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಹಾಗೂ ಬಟನ್ ಸ್ಟಾರ್ಟ್ ಸಿಸ್ಟಮ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಪ್ರಯಾಣಿಕರ ರಕ್ಷಣೆಗಾಗಿ ಟ್ರಾಫಿಕ್ ಜಾಮ್ ಅಸಿಸ್ಟ್ & ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಒಳಗೊಂಡಂತೆ ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ವೈಶಿಷ್ಟ್ಯವನ್ನು ಪಡೆದಿದೆ. ಹಾಗೆಯೇ ಸ್ಟ್ಯಾಂಡರ್ಡ್ ವಿಂಡ್ಸರ್ 6-ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.

jsw-mg-motor-india-record-sales-of-6304-units-in-may-2025

ವಿಂಡ್ಸರ್ ಇವಿ ಪ್ರೊ 52.9 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದೆ. ಇದು ಸಂಪೂರ್ಣ ಚಾರ್ಜ್‌ನಲ್ಲಿ 449 ಕಿಲೋಮೀಟರ್‌ ರೇಂಜ್ (ಮೈಲೇಜ್) ನೀಡುತ್ತದೆ. ವಿಂಡ್ಸರ್ ಇವಿನ 38 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿಯು ಪೂರ್ತಿ ಚಾರ್ಜ್‌ನಲ್ಲಿ 331 ಕಿಲೋಮೀಟರ್‌ ರೇಂಜ್ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, June 2, 2025, 11:37 [IST]
English summary
Jsw mg motor india record sales of 6304 units in may 2025
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+