ಬೆಲೆಗೆ ತಕ್ಕ ಹೊಸ ಕಾರು ಬಿಡುಗಡೆ: 1ರೂ. ಖರ್ಚಿಲ್ಲದೆ ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಹೋಗಿಬರಬಹುದು!
ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂದು ಎಂಜಿ ವಿಂಡ್ಸರ್ ಎಕ್ಸ್‌ಕ್ಲೂಸಿವ್ ಪ್ರೊ ವೇರಿಯೆಂಟ್ ಅನ್ನು ಬಿಡುಗಡೆ ಮಾಡಿದೆ. ಎಂಜಿ ವಿಂಡ್ಸರ್ ಎಕ್ಸ್‌ಕ್ಲೂಸಿವ್ ಪ್ರೊ ಬೆಲೆಯು ರೂ. 17,24,800 (ಎಕ್ಸ್-ಶೋರೂಂ) ನಲ್ಲಿ ಖರೀದಿಗೆ ಲಭ್ಯವಿದೆ. ಇಂದಿನಿಂದ, ಗ್ರಾಹಕರು ಈ ಕಾರನ್ನು ತಮ್ಮ ಹತ್ತಿರದ MG ಡೀಲರ್‌ಶಿಪ್‌ನಲ್ಲಿ ರೂ. 11,000 ಪಾವತಿಸುವ ಮೂಲಕ ಬುಕ್ ಮಾಡಬಹುದು. ಈ ಹೊಸ ವೇರಿಯೆಂಟ್ ಡೆಲಿವರಿಗಳು ಜೂನ್ ಮೊದಲ ವಾರದಲ್ಲಿ ಪ್ರಾರಂಭವಾಗುತ್ತವೆ ಎಂದು ಕಂಪನಿ ತಿಳಿಸಿದೆ.
ಮುಖ್ಯಾಂಶಗಳು: ಹೊಸ ಎಂಜಿ ವಿಂಡ್ಸರ್ ಎಕ್ಸ್‌ಕ್ಲೂಸಿವ್ ಪ್ರೊ ವೇರಿಯೆಂಟ್ ದೊಡ್ಡ 52.9 kWh ನ ಬ್ಯಾಟರಿ ಪ್ಯಾಕ್ ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 449 ಕಿ.ಮೀ ಹಿಂದಿರುಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಬೆಂಗಳೂರಿನಿಂದ ಚಿತ್ರದುರ್ಗಕ್ಕೆ 200 ಕಿ.ಮೀ ದೂರವಿದ್ದು, ಈ ಕಾರನ್ನು ಒಮ್ಮೆ ಚಾರ್ಜ್ ಮಾಡಿ ಆರಾಮವಾಗಿ ಹೋಗಿಬರಬಹುದಾಗಿದೆ.

ಕಾರಿನಲ್ಲಿ ಒಂಬತ್ತು ಸ್ಪೀಕರ್‌ಗಳೊಂದಿಗೆ ಅಳವಡಿಸಲಾದ 15.6 ಇಂಚಿನ ಗ್ರ್ಯಾಂಡ್‌ವ್ಯೂ ಡಿಸ್ಪ್ಲೇ ಪ್ರಯಾಣಿಕರಿಗೆ ಪ್ರೀಮಿಯಂ ಅನುಭವ ನೀಡುತ್ತದೆ. ಇಂಟೀರಿಯರ್‌ನಲ್ಲಿ ಡ್ಯುಯಲ್ - ಟೋನ್ ಐವರಿ ಮತ್ತು ಕಪ್ಪು ಒಳಾಂಗಣಗಳು ಕಾರಿನ ಪ್ರೀಮಿಯಂ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಮೂರು ಬಣ್ಣಗಳಲ್ಲಿ (ಪರ್ಲ್ ವೈಟ್, ಸ್ಟಾರಿ ಬ್ಲ್ಯಾಕ್ ಮತ್ತು ಟರ್ಕೋಯಿಸ್ ಗ್ರೀನ್) ಕಾರು ಖರೀದಿಗೆ ಲಭ್ಯವಿದೆ.
18 ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್‌ಗಳೊಂದಿಗೆ ಕಾರು ಚಾಲನೆಯಲ್ಲಿದ್ದಾಗ ಸ್ಪೋರ್ಟಿಯಾಗಿ ಕಾಣುತ್ತದೆ. ಎಂಜಿ ವಿಂಡ್ಸರ್ ಎಕ್ಸ್‌ಕ್ಲೂಸಿವ್ ಪ್ರೊ ಫ್ಯೂಚರಿಸ್ಟಿಕ್ ಏರೋಗ್ಲೈಡ್ ವಿನ್ಯಾಸವನ್ನು ಹೊಂದಿದ್ದು, ಅದರ ಗ್ಲೋಬಲ್ ಸ್ಮಾರ್ಟ್ ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣಗೊಂಡಿದೆ. ಇಂಟೀರಿಯರ್‌ನಲ್ಲಿ ಒರಗಬಹುದಾದ (135 ಡಿಗ್ರಿಗಳವರೆಗೆ) ಏರೋ ಲೌಂಜ್ ಸೀಟುಗಳು ಪ್ರತಿ ಪ್ರಯಾಣವನ್ನು ಪ್ರೀಮಿಯಂ ಅನುಭವವನ್ನಾಗಿ ಮಾಡುತ್ತದೆ.

80 ಕ್ಕೂ ಹೆಚ್ಚು ಕನೆಕ್ಟೆಡ್ ಫೀಚರ್ಸ್, 100 ಕ್ಕೂ ಹೆಚ್ಚು AI - ಆಧಾರಿತ ವಾಯಿಸ್ ಕಮಾಂಡ್‌ಗಳು ಮತ್ತು ಮನರಂಜನಾ ವೈಶಿಷ್ಟ್ಯಗಳೊಂದಿಗೆ i-SMART # ನಿಂದ ನಡೆಸಲ್ಪಡುವ ಇದರ ತಲ್ಲೀನಗೊಳಿಸುವ ತಂತ್ರಜ್ಞಾನವು, ಒಂಬತ್ತು ಸ್ಪೀಕರ್‌ಗಳೊಂದಿಗೆ ಅಳವಡಿಸಲಾದ ಸೆಂಟ್ರಲ್ ಕನ್ಸೋಲ್‌ನಲ್ಲಿ ಬೃಹತ್ 15.6" GRANDVIEW ಟಚ್ ಡಿಸ್ಪ್ಲೇಯನ್ನು ಹೊಂದಿದೆ.
ಬಿಡುಗಡೆಯ ಕುರಿತು ಮಾತನಾಡಿದ ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾದ ಮಾರಾಟ ಮುಖ್ಯಸ್ಥ ರಾಕೇಶ್ ಸೇನ್, "ಎಂಜಿ ವಿಂಡ್ಸರ್ ಪ್ರೊಗೆ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಿಡುಗಡೆಯಾದ 24 ಗಂಟೆಗಳಲ್ಲಿ 8,000 ಕ್ಕೂ ಹೆಚ್ಚು ಬುಕಿಂಗ್‌ಗಳು ದಾಖಲಾಗಿವೆ. ಈಗ ಉನ್ನತ ರೂಪಾಂತರವನ್ನು ಸ್ಥಾಪಿಸಿರುವುದರಿಂದ, ನಾವು ಎಕ್ಸ್‌ಕ್ಲೂಸಿವ್ ಪ್ರೊ ರೂಪಾಂತರವನ್ನು ಪರಿಚಯಿಸುವ ಮೂಲಕ ಎಂಜಿ ವಿಂಡ್ಸರ್‌ನ ಪ್ರವೇಶವನ್ನು ವಿಸ್ತರಿಸುತ್ತಿದ್ದೇವೆ.

ಪ್ರೀಮಿಯಂ ಸೌಕರ್ಯ ಮತ್ತು ಅನುಕೂಲತೆಯ ಜೊತೆಗೆ ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ನೀಡುತ್ತೇವೆ. ಈ ಕ್ರಮವು ಎಂಜಿ ವಿಂಡ್ಸರ್ ಪ್ರೊ ಅನ್ನು ಹೆಚ್ಚಿನ ಗ್ರಾಹಕರಿಗೆ ಹತ್ತಿರ ತರುವ ಉದ್ದೇಶವನ್ನು ಹೊಂದಿದೆ. ಈ ಕಾರು ಮುಂಬರುವ ದಿನಗಳಲ್ಲಿ ಗ್ರಾಹಕರಿಂದ ಇನ್ನೂ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಳ್ಳುವ ವಿಶ್ವಾಸವಿದೆ ಎಂದು ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾದ ಮಾರಾಟ ಮುಖ್ಯಸ್ಥ ರಾಕೇಶ್ ಸೇನ್ ಹೇಳಿದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








