ನಾಳೆ ಹೊಸ 'ಕಿಯಾ ಕ್ಲಾವಿಸ್' ಕಾರು ಬಿಡುಗಡೆ: ಈ ಬೃಹತ್ ಫ್ಯಾಮಿಲಿ ಕಾರಿನ ವಿಶೇಷತೆಗಳೇನು?

ಭಾರತದಲ್ಲಿ ಎಂಪಿವಿ ಕಾರುಗಳಿಗೆ ಭಾರೀ ಡಿಮ್ಯಾಂಡ್ ಇದೆ, ಈ ಕಾರಣಕ್ಕೆ ಬಹುತೇಕ ಕಾರು ತಯಾರಕರು ದೊಡ್ಡ ಫ್ಯಾಮಿಲಿ ಕಾರುಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಈಗಾಗಲೇ ಕಿಯಾ ತನ್ನ ಜನಪ್ರಿಯ ಕಾರೆನ್ಸ್ ಎಂಪಿವಿಯನ್ನು ಹೊಂದಿದ್ದರೂ, ಪ್ರೀಮಿಯಂ ಫ್ಯಾಮಿಲಿ ಕಾರನ್ನು ಬಯಸುವ ಗ್ರಾಹಕರಿಗಾಗಿ ಇದೀಗ ಕ್ಲಾವಿಸ್ ಅನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಕಿಯಾ ಇಂಡಿಯಾ ತನ್ನ ಹೊಸ ಎಂಪಿವಿ ಕ್ಲಾವಿಸ್ ಅನ್ನು ಮೇ 8, 2025 ರಂದು ಪರಿಚಯಿಸಲು ಮುಂದಾಗಿದೆ. ಹೊಸ ಕಿಯಾ ಕ್ಲಾವಿಸ್ ಕಾರಿನಲ್ಲಿ ಏನೆಲ್ಲಾ ವಿಶೇಷತೆಗಳನ್ನು ನಿರೀಕ್ಷಿಸಬಹುದು ಎಂಬುದನ್ನು ಇಲ್ಲಿ ನೋಡೋಣ.

ಕಿಯಾ ಕ್ಲಾವಿಸ್ ಎಂಪಿವಿ ಕಾರೆನ್ಸ್ ಗಿಂತ ಸ್ವಲ್ಪ ಹೆಚ್ಚಿನ ಬೆಲೆಯನ್ನು ಹೊಂದಿರಲಿದ್ದು, ಇದರ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.10.6 ಲಕ್ಷದಿಂದ ಆರಂಭವಾಗಿ ರೂ.19.6 ಲಕ್ಷಗಳವರೆಗೆ ಇರಲಿದೆ. ಕಿಯಾ ಕ್ಲಾವಿಸ್ ಬಿಡುಗಡೆ ನಂತರ ಭಾರತದಲ್ಲಿ ಟೊಯೊಟಾ ಇನ್ನೋವಾ ಹೈಕ್ರಾಸ್ ಮತ್ತು ಮಾರುತಿ ಸುಜುಕಿ ಇನ್ವಿಕ್ಟೋ ಕಾರುಗಳಿಗೆ ಪೈಪೋಟಿ ನೀಡಲಿದೆ.

kia-clavis-launch-on-may-8th-top-things-you-should-know

ಕಿಯಾ ಕ್ಲಾವಿಸ್ ತನ್ನ ಜನಪ್ರಿಯ ಕಾರೆನ್ಸ್‌ನಂತೆಯೇ ಅದೇ ವಿಶ್ವಾಸಾರ್ಹ ಎಂಜಿನ್ ಆಯ್ಕೆಗಳನ್ನು ನೀಡಲಿದೆ. 160 ಬಿಹೆಚ್ ಪವರ್, 253 ಎನ್ಎಂ ಟಾರ್ಕ್ ಹೊರಹಾಕುವ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹಾಗೂ 115 ಬಿಹೆಚ್ ಪವರ್, 250 ಎನ್ಎಂ ಟಾರ್ಕ್ ಹೊರಹಾಕುವ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡಲಿದೆ ಎನ್ನಲಾಗಿದೆ.

ಪ್ರಮುಖಾಂಶಗಳು: ಹೆಚ್ಚಿನ ಸುರಕ್ಷತೆಗಾಗಿ ಫಾರ್ವರ್ಡ್ ಕೊಲಿಷನ್ ತಪ್ಪಿಸುವುದು, ಲೇನ್ ಕೀಪ್ ಅಸಿಸ್ಟ್, ಎಕ್ಸಿಟ್ ವಾರ್ನಿಂಗ್, ಅಡ್ಜಸ್ಟಬಲ್ ಕ್ರೂಸ್ ಕಂಟ್ರೋಲ್, ಬ್ಲೈಂಡ್-ಸ್ಪಾಟ್ ಅನ್ನು ಒಳಗೊಂಡಿರುವ ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ಎಡಿಎಎಸ್) ಅನ್ನು ಹೊಂದಿರಲಿದೆ. ಹಾಗೆಯೇ 360 ಡಿಗ್ರಿ ಕ್ಯಾಮೆರಾ ಮತ್ತು ಆರು ಏರ್ ಬ್ಯಾಗ್‌ಗಳಂತಹ ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

kia-clavis-launch-on-may-8th-top-things-you-should-know

ಇಂಟೀರಿಯರ್‌ನಲ್ಲಿ ಪನೋರಮಿಕ್ ಸನ್‌ರೂಫ್ ಮತ್ತು ಡ್ಯುಯಲ್-ಜೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಸೀಟುಗಳು, ಪ್ರೀಮಿಯಂ ಆಡಿಯೊ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್, 360-ಡಿಗ್ರಿ ಕ್ಯಾಮೆರಾ ಮತ್ತು ವೈರ್ ಲೆಸ್ ಫೋನ್ ಚಾರ್ಜರ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇವುಗಳ ಜೊತೆಗೆ 12.3-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ಅನ್ನು ನೀಡುವ ನಿರೀಕ್ಷೆಯಿದೆ.

ಡಿಸೈನ್ ವಿಷಯಕ್ಕೆ ಬಂದರೆ ಮುಂಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ನೇರವಾದ ಗ್ರಿಲ್, 3 - ಪಾಡ್ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ (ಡಿಆರ್ಎಲ್) ಅನ್ನು ಹೊಂದಿದೆ. ಹಿಂಭಾಗದಲ್ಲಿ ಕನೆಕ್ಟೆಡ್ ಎಲ್ಇಡಿ ಟೈಲ್ ಲೈಟ್ ಗಳನ್ನು ಲೈಟ್ ಬಾರ್ ನೊಂದಿಗೆ ನೀಡಲಾಗಿದೆ.

kia-clavis-launch-on-may-8th-top-things-you-should-know

ಜೊತೆಗೆ ಸಿಲ್ವರ್ ಫಾಕ್ಸ್ ಸ್ಕಿಡ್ ಪ್ಲೇಟ್ ನೊಂದಿಗೆ ಒರಟಾದ ಬಂಪರ್ ಅನ್ನು ಹೊಂದಿರುವ ಈ ಕಾರು, 16 - ಇಂಚಿನ ರಿಮ್ ಗಳಿಗಿಂತ ದೊಡ್ಡದಾದ ಹೊಸ ಅಲಾಯ್ ವೀಲ್ ವಿನ್ಯಾಸ ಮತ್ತು ತಾಜಾ ಬಣ್ಣ ಆಯ್ಕೆಗಳು ಅದರ ಕಮಾಂಡಿಂಗ್ ರಸ್ತೆ ಉಪಸ್ಥಿತಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಒಟ್ಟಾರೆ ಈ ಪ್ರೀಮಿಯಂ ಕಾರು ಅಧಿಕೃತವಾಗಿ ನಾಳೆ ಅನಾವರಣವಾದ ಬಳಿಕ ವಿವರವಾದ ಮಾಹಿತಿ ಹೊರಬರಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, May 7, 2025, 17:40 [IST]
English summary
Kia clavis launch on may 8th top things you should know
Read more on kia motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+