ಕಿಯಾ ಕಾರು ಮಾಲೀಕರಿಗೆ ಶುಭಸುದ್ದಿ: ನಾಳೆಯಿಂದ ಸರ್ವಿಸ್ ಕ್ಯಾಂಪ್ ಪ್ರಾರಂಭ: ಪ್ರಯೋಜನವೇನು?
ಭಾರತದಲ್ಲಿ ಪ್ರಮುಖ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಕಿಯಾ, ನವೆಂಬರ್ 15 ರಿಂದ 23 ರವರೆಗೆ ದಕ್ಷಿಣ ಭಾರತದಾದ್ಯಂತ ಸೇವಾ ಶಿಬಿರ (Service Camp)ವನ್ನು ಆಯೋಜಿಸಿರುವುದಾಗಿ ಘೋಷಿಸಿದೆ. ಗ್ರಾಹಕರಿಗೆ ಕಾರುಗಳನ್ನು ಮಾರಾಟ ಮಾಡಿದ ನಂತರ ಕಾರುಗಳೊಂದಿಗೆ ಅವರ ಅನುಭವವನ್ನು ಹೆಚ್ಚಿಸಲು ಮತ್ತು ಕಂಪನಿಯೊಂದಿಗೆ ಬಾಂಧವ್ಯ ಬೆಳೆಸಲು ಇದು ಬ್ರ್ಯಾಂಡ್‌ನ ಪ್ರಯತ್ನವಾಗಿದೆ. ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಪುದುಚೇರಿಯಲ್ಲಿ 122 ಕಿಯಾ ಅಧಿಕೃತ ಕಾರ್ಯಾಗಾರಗಳಲ್ಲಿ 9 ದಿನಗಳ ಕಾಲ ಈ ಸೇವಾ ಶಿಬಿರವನ್ನು ನಡೆಸಲಾಗುವುದು ಎಂದು ಕಂಪನಿ ತಿಳಿಸಿದೆ.
ಈ ಕುರಿತು ಮಾತನಾಡಿದ ಕಿಯಾ ಇಂಡಿಯಾದ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷ ಅತುಲ್ ಸೂದ್, "ನಾವು ಸೇವೆಯನ್ನು ಮೀರಿ ಆರೈಕೆಯನ್ನು ನೀಡುವುದರಲ್ಲಿ ನಂಬಿಕೆ ಇಟ್ಟಿದ್ದೇವೆ. ಕಾರು ಮಾಲೀಕತ್ವ ಪ್ರಯಾಣದ ಪ್ರತಿಯೊಂದು ಹಂತವನ್ನು ಹೆಚ್ಚು ಲಾಭದಾಯಕವಾಗಿಸುವ, ಸಂಪೂರ್ಣ ಮನಸ್ಸಿನ ಶಾಂತಿಯನ್ನು ನೀಡುವತ್ತ ನಮ್ಮ ಗಮನ ಯಾವಾಗಲೂ ಇದೆ. ಹಾಗಾಗಿ ಈ ಸೇವಾ ಶಿಬಿರವು ಗ್ರಾಹಕರೊಂದಿಗಿನ ಸಂಬಂಧಗಳನ್ನು ಬೆಳೆಸುವ ಧ್ಯೇಯವನ್ನು ಮುಂದುವರಿಸುತ್ತದೆ" ಎಂದರು.

ಸೇವಾ ಶಿಬಿರದಲ್ಲಿ ಮಾಲೀಕರು ಇವನ್ನು ಪಡೆಯಬಹುದು
ಬಾಹ್ಯ, ಒಳಾಂಗಣ, ಎಂಜಿನ್ ವಿಭಾಗ, ಅಂಡರ್‌ಬಾಡಿ ಮತ್ತು ಆನ್-ರೋಡ್ ಪರ್ಫಾಮೆನ್ಸ್‌ನಂತಹ ನಿರ್ಣಾಯಕ ತಪಾಸಣೆಗಳನ್ನು ಒಳಗೊಂಡ ಪೂರಕ 36-ಪಾಯಿಂಟ್ ಸಮಗ್ರ ವಾಹನ ತಪಾಸಣೆ ಪಡೆಯಬಹುದು. ಕಾರ್ ಕೇರ್ ಸೇವೆಗಳ ಮೇಲೆ ಶೇ20 ರಷ್ಟು ರಿಯಾಯಿತಿ, ಉಚಿತ ಕಾರು ಮೌಲ್ಯಮಾಪನ, ಕಿಯಾ ಅಸಲಿ ಪರಿಕರಗಳ (ಒರಿಜಿನಲ್ ಪಾರ್ಟ್‌ಗಳ) ಮೇಲೆ ಶೇ10 ವರೆಗೆ ರಿಯಾಯಿತಿ ಮತ್ತು ಉಚಿತ ಕಾರ್ ಟಾಪ್ ವಾಶ್ ಸೇರಿದಂತೆ ವಿಶೇಷ ಕೊಡುಗೆಗಳು ಸೇರಿವೆ.
ಕಿಯಾ ಸೇವಾ ಶಿಬಿರವು ಸುಧಾರಿತ ತಂತ್ರಜ್ಞಾನಗಳು, ಜವಾಬ್ದಾರಿಯುತ ಚಾಲನೆ ಮತ್ತು ಅಗತ್ಯ ಮೇಂಟೇನನ್ಸ್ ಅಭ್ಯಾಸಗಳ ಕುರಿತು ಸಂವಾದಾತ್ಮಕ (feature interactive sessions) ಅವಧಿಗಳನ್ನು ಸಹ ಒಳಗೊಂಡಿರುತ್ತದೆ. ಗ್ರಾಹಕರು ಹೆಚ್ಚುವರಿಯಾಗಿ ಬಳಸಿದ ಕಾರು ಮೌಲ್ಯಮಾಪನ ಸೇವೆಗಳು (used car valuation services) ಮತ್ತು ಆಕರ್ಷಕ ವಾಹನ ವಿನಿಮಯ ಕೊಡುಗೆಗಳಿಂದ ಪ್ರಯೋಜನ ಪಡೆಯಬಹುದು ಎಂದು ಕಿಯಾ ತಿಳಿಸಿದೆ.
ಇಂತಹ ನಿರಂತರ ಉಪಕ್ರಮಗಳ ಮೂಲಕ ಮಾರಾಟದ ನಂತರದ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದನ್ನು ಮುಂದುವರೆಸುತ್ತಿದ್ದೇವೆ. ನಮ್ಮ ಮೌಲ್ಯಯುತ ಗ್ರಾಹಕರಿಗೆ ಪ್ರೀಮಿಯಂ ಮತ್ತು ಭರವಸೆಯ ಮಾಲೀಕತ್ವದ ಅನುಭವವನ್ನು ಖಚಿತಪಡಿಸುತ್ತೇವೆ ಎಂದು ಕಿಯಾ ಇಂಡಿಯಾ ಹೇಳಿದೆ. ಸೇವಾ ಶಿಬಿರದ ಆಫರ್‌ಗಳ ಕುರಿತು ಸಂಪೂರ್ಣ ವಿವರಗಳಿಗಾಗಿ, ಗ್ರಾಹಕರು ತಮ್ಮ ಹತ್ತಿರದ ಕಿಯಾ ಡೀಲರ್ ಅನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಕಿಯಾ ಇಂಡಿಯಾ ಬಗ್ಗೆ: ಏಪ್ರಿಲ್ 2017 ರಲ್ಲಿ ಕಿಯಾ ಅನಂತಪುರ ಜಿಲ್ಲೆಯಲ್ಲಿ ಹೊಸ ಉತ್ಪಾದನಾ ಸೌಲಭ್ಯವನ್ನು ನಿರ್ಮಿಸಲು ಆಂಧ್ರಪ್ರದೇಶ ರಾಜ್ಯ ಸರ್ಕಾರದೊಂದಿಗೆ ತಿಳುವಳಿಕೆ ಪತ್ರ (MOU)ಕ್ಕೆ ಸಹಿ ಹಾಕಿತು. ಕಿಯಾ ಆಗಸ್ಟ್ 2019 ರಲ್ಲಿ ಬೃಹತ್ ಉತ್ಪಾದನೆಯನ್ನು ಪ್ರಾರಂಭಿಸಿತು, ಸದ್ಯ 3,00,000 ಯೂನಿಟ್ ವಾಹನಗಳ ಸ್ಥಾಪಿತ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.
ಇಲ್ಲಿಯವರೆಗೆ ಕಿಯಾ ಭಾರತೀಯ ಮಾರುಕಟ್ಟೆಗೆ ಒಂಬತ್ತು ವಾಹನಗಳನ್ನು ಬಿಡುಗಡೆ ಮಾಡಿದೆ - ಸೆಲ್ಟೋಸ್, ಸೈರೋಸ್, ಸೋನೆಟ್, ಕ್ಯಾರೆನ್ಸ್, ಕಾರ್ನಿವಲ್, ಇವಿ6, ಇವಿ9, ಕ್ಯಾರೆನ್ಸ್ ಕ್ಲಾವಿಸ್ ಮತ್ತು ಹೊಸ ಕ್ಯಾರೆನ್ಸ್ ಕ್ಲಾವಿಸ್ ಇವಿ ಆಗಿವೆ. ಕಿಯಾ ಇಂಡಿಯಾ ತನ್ನ ಅನಂತಪುರ ಸ್ಥಾವರದಿಂದ ಸುಮಾರು 1.5 ಮಿಲಿಯನ್ ವಾಹನಗಳ ರವಾನೆಯನ್ನು ಪೂರ್ಣಗೊಳಿಸಿದೆ, ಇದರಲ್ಲಿ 1.2 ಮಿಲಿಯನ್ ದೇಶೀಯ ಮಾರಾಟ ಮತ್ತು 3.67 ಲಕ್ಷಕ್ಕೂ ಹೆಚ್ಚು ರಫ್ತುಗಳು ಸೇರಿವೆ.
ಭಾರತೀಯ ರಸ್ತೆಗಳಲ್ಲಿ 4.95 ಲಕ್ಷಕ್ಕೂ ಹೆಚ್ಚು ಸಂಪರ್ಕಿತ ಕಾರುಗಳೊಂದಿಗೆ, ಕಿಯಾ ಕಂಪನಿಯು ದೇಶದ ಸಂಪರ್ಕಿತ ಕಾರು ಬ್ರಾಂಡ್‌ಗಳಲ್ಲಿ ಒಂದಾಗಿದೆ. ಕಂಪನಿಯು ಪ್ರಸ್ತುತ 370 ನಗರಗಳಲ್ಲಿ 819 ಟಚ್‌ಪಾಯಿಂಟ್‌ಗಳ ವ್ಯಾಪಕ ಜಾಲವನ್ನು ಹೊಂದಿದೆ. ದೇಶಾದ್ಯಂತ ತನ್ನ ಹೆಜ್ಜೆಗುರುತನ್ನು ಬಲಪಡಿಸುವತ್ತ ಗಮನಹರಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.


Click it and Unblock the Notifications








