Kia: ಹೊಸ ಹೈಬ್ರಿಡ್ ಎಸ್‌ಯುವಿ ಬಿಡುಗಡೆಗೆ ಸರ್ವಸಿದ್ಧ: ಕಿಯಾ ಪ್ಲಾನ್‌ಗೆ ಶಾಕ್‌ನಲ್ಲಿ ಪ್ರತಿಸ್ಪರ್ಧಿಗಳು!

ಭಾರತೀಯ ಕಾರು ಮಾರುಕಟ್ಟೆಯು ಕಳೆದ ಹತ್ತು ವರ್ಷಗಳಲ್ಲಿ ತುಂಬಾ ಬೆಳೆದಿದೆ. ಸಿಎನ್‌ಜಿ, ಎಲೆಕ್ಟ್ರಿಕ್, ಹೈಬ್ರಿಡ್ ಹೀಗೆ ವಿವಿಧ ಟೆಕ್ನಾಲಜಿ ಹೊಂದಿರುವ ಕಾರುಗಳು ಮಾರುಕಟ್ಟೆಯಲ್ಲಿ ತುಂಬಾ ಜನಪ್ರಿಯತೆ ಪಡೆಯುತ್ತಿವೆ. ಮುಖ್ಯವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಹೈಬ್ರಿಡ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಗ್ರಾಹಕರು ಈ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಕಾರುಗಳ ಮೇಲೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಈ ಹೈಬ್ರಿಡ್ ಕಾರುಗಳು ಇಂಧನದಲ್ಲೂ ಚಲಿಸಬಲ್ಲವು ಹಾಗೂ ಎಲೆಕ್ಟ್ರಿಕ್ ಮೋಡ್‌ನಲ್ಲೂ ಚಲಿಸಬಲ್ಲವು. ಒಟ್ಟಾರೆ ಹೆಚ್ಚಿನ ಮೈಲೇಜ್ ಹಿಂದಿರುಗಿಸುವುದರಿಂದ ಈ ಕಾರುಗಳಿಗೆ ತುಂಬಾ ಬೇಡಿಕೆ ಇದೆ.

ಹಾಗಾಗಿಯೇ ಬಹುತೇಕ ಬ್ರಾಂಡ್‌ಗಳು ತಮ್ಮ ಪ್ರಮುಖ ಕಾರುಗಳನ್ನು ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಪರಿಚಯಿಸುತ್ತಿವೆ. ಇದೀಗ ಕಿಯಾ ಕೂಡ ತನ್ನ ಪ್ರಮುಖ ಕಾರಾಗಿರುವ ಸೆಲ್ಟೋಸ್ ಅನ್ನು ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಬಿಡುಗಡೆ ಮಾಡಲು ಮುಂದಾಗುತ್ತಿದೆ. ಈ ಕಾರನ್ನು ಮುಂದಿನ ವರ್ಷದೊಳಗೆ ಬಿಡುಗಡೆ ಮಾಡುವ ನಿರೀಕ್ಷೆಯಿದ್ದು, ಅಧಿಕೃತ ಬಿಡುಗಡೆ ದಿನಾಂಕವನ್ನು ಕಂಪನಿ ಬಹಿರಂಗಪಡಿಸಿಲ್ಲ.

kia-planning-to-launch-seltos-hybrid-suv-in-india

ಕಿಯಾ ಸೆಲ್ಟೋಸ್ ಹೈಬ್ರಿಡ್' ವಾಹನ ತಯಾರಕರ ದೊಡ್ಡ ಯೋಜನೆಯ ಭಾಗವಾಗಿದ್ದು, 2030 ರ ವೇಳೆಗೆ ಶೇಕಡಾ 25 ರಷ್ಟು ಪ್ರಮಾಣವು ಹೈಬ್ರಿಡ್ ಕಾರುಗಳಿಂದ ತುಂಬಿರಲಿದೆ ಎಂದು ಮೂಲಗಳು ತಿಳಿಸಿವೆ. ನಮ್ಮ ಪ್ರಕಾರ ಕಾರೆನ್ಸ್ ಹೈಬ್ರಿಡ್ ಮತ್ತು ಹ್ಯುಂಡೈ ಕ್ರೆಟಾ ಹೈಬ್ರಿಡ್ ಕೂಡ ಅಂತಿಮವಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸದ್ಯದ ಬೆಳವಣಿಗೆಗಳು ಈ ಸುಳಿವುಗಳನ್ನು ನೀಡುತ್ತಿವೆ.

ವೈವಿಧ್ಯತೆ ಮುಖ್ಯ: ಭಾರತೀಯ ಮಾರುಕಟ್ಟೆಯಲ್ಲಿ ಸೆಲ್ಟೋಸ್ ಹೈಬ್ರಿಡ್ ಅನ್ನು ತರಲು ಅತ್ಯಂತ ಸ್ಪಷ್ಟವಾದ ಕಾರಣವೆಂದರೆ ಹೊಸ ಎಮಿಷನ್ ಮತ್ತು ಇಂಧನ ದಕ್ಷತೆಯ ಮಾನದಂಡಗಳಾಗಿವೆ. ಇದು 2027 ರಲ್ಲಿ ಜಾರಿಗೆ ಬರುವ ನಿರೀಕ್ಷೆಯಿದೆ. ಕೇವಲ ಇಂಧನ ಚಾಲಿತ ಅಥವಾ ಎಲೆಕ್ಟ್ರಿಕ್ ಕಾರುಗಳ ಮೇಲೆ ಹೂಡಿಕೆ ಮಾಡುವ ಬದಲು, ಕಿಯಾ ವಿವಿಧ ಪವರ್ ಟ್ರೇನ್ ಆಯ್ಕೆಗಳನ್ನು ಪರಿಚಯಿಸುವ ಬಗ್ಗೆ ಯೋಚಿಸುತ್ತಿದೆ.

kia-planning-to-launch-seltos-hybrid-suv-in-india

ತನ್ನ ಪ್ರತಿಸ್ಪರ್ಧಿ ಕಂಪನಿಗಳಂತೆ, ಕಿಯಾ ಭಾರತದಲ್ಲಿ ಮಾರುಕಟ್ಟೆ ಯಶಸ್ಸು ಇಂಧನ ಚಾಲಿತ, ಎಲೆಕ್ಟ್ರಿಕ್ ಮತ್ತು ಎಚ್ಇವಿ (ಹೈಬ್ರಿಡ್) ಕಾರುಗಳಿಂದ ಬರುತ್ತದೆ ಎಂದು ಅರಿತುಕೊಂಡಿದೆ. ಸೆಲ್ಟೋಸ್ ಪ್ರಪಂಚದಾದ್ಯಂತದ ಪ್ರತಿಯೊಂದು ಮಾರುಕಟ್ಟೆಯಲ್ಲಿ ಮಾರಾಟವಾಗುವ ಜಾಗತಿಕ ಕಾರುಗಳಲ್ಲಿ ಒಂದಾಗಿದೆ. ಅಲ್ಲದೇ ಭಾರತದಲ್ಲಿ ಇದು ತನ್ನ ವಿಭಾಗದಲ್ಲಿ ಉತ್ತಮ ಮಾರಾಟ ಕಾಣುವ ಎಸ್‌ಯುವಿಯಾಗಿ ಗುರ್ತಿಸಿಕೊಂಡಿದೆ.

ಜೊತೆಗೆ ಇದು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಪ್ರಮುಖ ಎಸ್‌ಯುವಿಗಳಲ್ಲಿ ಪ್ರಮುಖ ಕಾರಾಗಿ ಜನಪ್ರಿಯತೆ ಪಡೆದುಕೊಂಡಿದೆ. ಹಾಗಾಗಿಯೇ ಈ ಕಾರನ್ನು ಹೈಬ್ರಿಡ್ ಆವೃತ್ತಿಯಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ. ಈ ಮೂಲಕ ಹೈಬ್ರಿಡ್ ಆವೃತ್ತಿಯು ಜಾಗತಿಕವಾಗಿ ಇತರ ಮಾರುಕಟ್ಟೆಗಳಲ್ಲಿಯೂ ಕಾರಿನ ಆಕರ್ಷಣೆಯನ್ನು ವಿಸ್ತರಿಸುವ ನಿರೀಕ್ಷೆಯಿದೆ.

ಮುಂಬರಲಿರುವ ಕಿಯಾ ಸೆಲ್ಟೋಸ್ ಅನ್ನು ಅನೇಕ ಸಂದರ್ಭಗಳಲ್ಲಿ ಈಗಾಗಲೇ ರಸ್ತೆಯಲ್ಲಿ ಕಂಪನಿ ಪರೀಕ್ಷಿಸುವ ವೇಳೆ ಕಾಣಿಸಿಕೊಂಡಿದೆ. ಇದು ಎಸ್‌ಯುವಿಯ 2nd ಜೆನರೇಷನ್ ಕಾರಾಗಿದ್ದು, ಪವರ್ ಟ್ರೇನ್‌ಗಳ ಗಾತ್ರ, ವೈಶಿಷ್ಟ್ಯಗಳು ಮತ್ತು ವೈವಿಧ್ಯತೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸುವ ನಿರೀಕ್ಷೆಯಿದೆ. ಇದು ಮುಂದಿನ ವರ್ಷದೊಳಗೆ ಭಾರತ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, April 19, 2025, 9:00 [IST]
English summary
Kia planning to launch seltos hybrid suv in india
Read more on kia motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+