Kia: ಕಿಯಾ ಹೊಸ ಕಾರು ಬಿಡುಗಡೆ ಸ್ಥಗಿತ? ಬಹುನಿರೀಕ್ಷಿತ 7-ಸೀಟರ್ ಕಾರಿನಲ್ಲಿ ಲೋಪವಿದೆಯೇ?

ಜನಪ್ರಿಯ ಕಾರು ತಯಾರಕ ಕಂಪನಿಯಾದ 'ಕಿಯಾ ಇಂಡಿಯಾ' (Kia india) ಇತ್ತೀಚೆಗೆ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮಗಳಿಂದ 'ಕಾರೆನ್ಸ್ ಕ್ಲಾವಿಸ್ ಇವಿ' (Carens Clavis EV) ಕಾರಿಗೆ ಸಂಬಂಧಿಸಿದ ಎಲ್ಲಾ ಟೀಸರ್ ವೀಡಿಯೊಗಳು ಮತ್ತು ಪ್ರಚಾರದ ವಿಷಯವನ್ನು ತೆಗೆದುಹಾಕಿದೆ. ಈ ಕ್ರಮವು ಭಾರತದಲ್ಲಿ ಕಾರೆನ್ಸ್ ಕ್ಲಾವಿಸ್ ಇವಿ ಬಿಡುಗಡೆಯ ಸ್ಥಿತಿಯ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ. ಕೆಲವರು ಕಂಪನಿ ಹೇಳಿರುವ ಬಿಡುಗಡೆ ದಿನಾಂಕಕ್ಕಿಂತ ವಿಳಂಬವಾಗಬಹುದು ಎಂದು ಹೇಳುತ್ತಿದ್ದರೇ, ಇನ್ನೂ ಕೆಲವರು ದೇಶದಲ್ಲಿ ಕಾರೆನ್ಸ್ ಕ್ಲಾವಿಸ್ ಇವಿಯನ್ನು ಬಿಡುಗಡೆ ಮಾಡುವುದನ್ನೇ ಸ್ಥಗಿತಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ. ಅಷ್ಟಕ್ಕೂ ಈ ಬೆಳವಣಿಗೆಗೆ ಕಾರಣವೇನು?

ಬಿಡುಗಡೆಯಲ್ಲಿ ವಿಳಂಬ ಅಥವಾ ಟೀಸರ್‌ನಲ್ಲಿ ತೋರಿಸಿದಂತೆ ಕಾರಿನ ಕೆಲವು ವಿವರಗಳಲ್ಲಿ ಪರಿಷ್ಕರಣೆ ಇರಬಹುದು, ಹಾಗಾಗಿ ಟೀಸರ್‌ಗಳನ್ನು ಸದ್ದಿಲ್ಲದೆ ತೆಗೆದುಹಾಕಿದ್ದಾರೆ. ಕೆಲವು ಮೂಲಗಳ ಪ್ರಕಾರ ಟೀಸರ್‌ಗಳಲ್ಲಿ ಪ್ರದರ್ಶಿಸಲಾದ ಕಾರಿನ ಬಾಹ್ಯ ಅಥವಾ ಒಳಾಂಗಣ ಡಿಸೈನ್‌ನಲ್ಲಿ ಬದಲಾವಣೆ ಮಾಡುತ್ತಿರಬಹುದು, ಇದು ಭಾರತದ ಅಂತಿಮ ಉತ್ಪಾದನಾ ಮಾಡಲ್‌ಗೆ ಹೊಂದಿಕೆಯಾಗುತ್ತಿಲ್ಲವಾದ್ದರಿಂದ ಹೀಗೆ ಮಾಡಿರಬಹುದು.

kia-removed-all-teasers-related-carens-clavis-ev-from-social-media

ತೆಗೆದುಹಾಕುವಿಕೆಯ ಹೊರತಾಗಿಯೂ, ಕಿಯಾ ಕಾರೆನ್ಸ್ ಕ್ಲಾವಿಸ್ ಇವಿ ಬಿಡುಗಡೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಸಾಧ್ಯತೆಯಿಲ್ಲ. ಕಂಪನಿಯು ಈ ಇವಿ ಕಾರಿನಲ್ಲಿ ಬೃಹತ್ ಹೂಡಿಕೆ ಮಾಡಿದೆ. ಉದಾಹರಣೆಗೆ ಕೆ-ಚಾರ್ಜ್ ಪ್ಲಾಟ್‌ಫಾರ್ಮ್ ಮೂಲಕ 18 ಚಾರ್ಜ್ ಪಾಯಿಂಟ್ ಆಪರೇಟರ್‌ಗಳೊಂದಿಗೆ ಪಾಲುದಾರಿಕೆಯಲ್ಲಿ 11,000 ಹೊಸ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸೇರಿಸುವಂತಹ ಒಪ್ಪಂದವಾಗಿದೆ.

ಬಿಡುಗಡೆ ಇನ್ನೂ ನಿರೀಕ್ಷಿತವಾಗಿದ್ದು, ಕಾರೆನ್ಸ್ ಕ್ಲಾವಿಸ್ ಇವಿ ಈ ಹಿಂದೆ ಜುಲೈ 15, 2025 ಕ್ಕೆ ಬಿಡುಗಡೆ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಬಿಡುಗಡೆ ದಿನಾಂಕದ ಮುಂದೂಡಿಕೆ ಬಗ್ಗೆ ಕಂಪನಿ ಇನ್ನು ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ. ಒಂದು ವೇಳೆ ಟೀಸರ್ ವೀಡಿಯೊಗಳು ಮತ್ತು ಪ್ರಚಾರದ ವಿಷಯವನ್ನು ತೆಗೆದುಹಾಕಿರುವುದಕ್ಕೆ ಮುಖ್ಯ ಕಾರಣವಿದ್ದು, ಬಿಡುಗಡೆಯನ್ನು ಮುಂದೂಡಿದರೂ ಅಚ್ಚರಿಯಿಲ್ಲ.

kia-removed-all-teasers-related-carens-clavis-ev-from-social-media

ಕಿಯಾ ಕಾರೆನ್ಸ್ ಕ್ಲಾವಿಸ್ ಇವಿ ವಿಶೇಷತೆಗಳು

ಹೊಸ ಮುಂಬರಲಿರುವ ಕಿಯಾ ಕಾರೆನ್ಸ್ ಕ್ಲಾವಿಸ್ ಇವಿ 51.4 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, 490 ಕಿಲೋಮೀಟರ್ ವರೆಗೆ ಓಡುವ ರೇಂಜ್ ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಬೇಸ್‌ ವೇರಿಯೆಂಟ್ 42 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಕಂಪನಿ ಬಹಿರಂಗಪಡಿಸಬೇಕಿದೆ. ಇದು ಕೂಡ 390-400 ಕಿ.ಮೀ ರೇಂಜ್ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ಇದು 7 - ಆಸನಗಳ ಸಂರಚನೆ ಹೊಂದಿರಲಿದೆ, ಡ್ಯುಯಲ್ 12.3 - ಇಂಚಿನ ಡಿಸ್ಪ್ಲೇಗಳು, ಪನೋರಮಿಕ್ ಸನ್‌ರೂಫ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜಿಂಗ್, ಲೆವೆಲ್ - 2 ADAS ವೈಶಿಷ್ಟ್ಯಗಳು ಸೇರಿದಂತೆ ಸುರಕ್ಷತೆಗಾಗಿ ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್‌ಗಳು, 360 - ಡಿಗ್ರಿ ಕ್ಯಾಮೆರಾ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಹೊಂದಿದೆ.

kia-removed-all-teasers-related-carens-clavis-ev-from-social-media

ನಿರೀಕ್ಷಿತ ಬೆಲೆಯು ಸುಮಾರು ರೂ. 18 ರಿಂದ 24 ಲಕ್ಷ (ಎಕ್ಸ್-ಶೋರೂಂ) ಇರಬಹುದಾಗಿದೆ. ಊಹಾಪೋಹಗಳನ್ನು ಬದಿಗಿಟ್ಟರೆ ಕಿಯಾ ಕಾರೆನ್ಸ್ ಕ್ಲಾವಿಸ್ EV ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಬಹುಶಃ ಮಾರುಕಟ್ಟೆ ನಿರೀಕ್ಷೆಗಳು ಅಥವಾ ನಿಯಂತ್ರಕ ಅವಶ್ಯಕತೆಗಳೊಂದಿಗೆ ಉತ್ತಮವಾಗಿ ಹೊಂದಿಕೊಳ್ಳಲು ಹೊಸ ಟೀಸರ್‌ನಲ್ಲಿ ಹೆಚ್ಚುವರಿ ಫೀಚರ್ಸ್ ತೋರಿಸಲು ಹಳೆಯ ಟೀಸರ್‌ಗಳನ್ನು ತೆಗೆದಿರಬಹುದು.

ಕಾರೆನ್ಸ್ ಕ್ಲಾವಿಸ್ ಇವಿಯನ್ನು ಏಳು ಆಸನಗಳ ಕಾನ್ಫಿಗರೇಶನ್ ನಲ್ಲಿ ಟೀಸರ್‌ನಲ್ಲಿ ತೋರಿಸಲಾಗಿದೆ. ಆದರೆ ಇದರ ಇಂಧನ ಚಾಲಿತ ಕಾರೆನ್ಸ್ ಕ್ಲಾವಿಸ್ ಕಾರಿನಲ್ಲಿರುವಂತೆಯೇ ಆರು ಆಸನಗಳ ಲೇಔಟ್ ಲಭ್ಯವಿದೆಯೇ ಎಂಬುದು ತಿಳಿದುಬಂದಿಲ್ಲ. ಬಿಡುಗಡೆಯಾದ ನಂತರ, ಇದು ಭಾರತೀಯ ಮಾರುಕಟ್ಟೆಯಲ್ಲಿ ಬಿವೈಡಿ ಇಮ್ಯಾಕ್ಸ್ 7 ನಂತಹ ಮಾದರಿಗಳೊಂದಿಗೆ ಸ್ಪರ್ಧಿಸುತ್ತದೆ.

More from DriveSpark

Article Published On: Thursday, July 10, 2025, 13:23 [IST]
English summary
Kia removed all teasers related carens clavis ev from social media
Read more on kia india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+