Kia Syros: ಗಮನಿಸಿ.. ಹೊಸ ಕಿಯಾ ಸೈರಸ್ ಕಾರಿನ ಬಗ್ಗೆ ಈ ವಿಚಾರಗಳನ್ನು ಯಾರು ಹೇಳಲ್ಲ!

ಇತ್ತೀಚೆಗೆ ದೇಶೀಯ ಮಾರುಕಟ್ಟೆಯಲ್ಲಿ ಕಿಯಾ ಸೈರಸ್ (Kia Syros) ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಈ ಕಾರು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ರೂ.8.99 ಲಕ್ಷದಿಂದ ರೂ.17.80 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. ಹೆಚ್‌ಟಿಕೆ, ಹೆಚ್‌ಟಿಕೆ (ಒ), ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ ಪ್ಲಸ್, ಹೆಚ್‌ಟಿಎಕ್ಸ್ ಪ್ಲಸ್ (ಒ) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಪಡೆದಿದೆ. ನಾವಿಲ್ಲಿ ಈ ರೂಪಾಂತರಗಳ ವಿಶೇಷತೆ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

ಕಿಯಾ ಸೈರಸ್ ಹೆಚ್‌ಟಿಕೆ ಆರಂಭಿಕ ಶ್ರೇಣಿ ರೂಪಾಂತರ (ಎಂಟ್ರಿ-ಲೆವೆಲ್ ವೇರಿಯೆಂಟ್) ಆಗಿದೆ. ಈ ಮಾಡೆಲ್ ಆಟೋ ಹ್ಯಾಲೊಜೆನ್ ಹೆಡ್‌ಲೈಟ್‌ಗಳು, ಫ್ಲಶ್ ಡೋರ್ ಹ್ಯಾಂಡಲ್‌ಗಳು, ಶಾರ್ಕ್ ಫಿನ್ ಆಂಟೆನಾ, ರೂಫ್-ಮೌಂಟೆಡ್ ಸ್ಪಾಯ್ಲರ್, 2-ಸ್ಪೋಕ್ ಸ್ಟೀರಿಂಗ್ ವೀಲ್, ಸನ್‌ಗ್ಲಾಸ್ ಹೋಲ್ಡರ್, 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್‌ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 6 ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Kia Syros Suv Variant Wise Features Details

ಸೈರಸ್ ಹೆಚ್‌ಟಿಕೆ (ಒ) ರೂಪಾಂತರ ಕೂಡ ಹೆಚ್ಚು ಆಕರ್ಷಕವಾಗಿದೆ. ಇದು ಅಲಾಯ್ ವೀಲ್‌ಗಳು (16-ಇಂಚು) ರೂಫ್ ರೈಲ್‌ಗಳು, ಪ್ಯಾಸೆಂಜರ್ - ಸೈಡ್ ಸೀಟ್ ಬ್ಯಾಕ್ ಪಾಕೆಟ್, ಸಿಂಗಲ್ ಪೇನ್ ಸನ್‌ರೂಫ್, ಹೈಟ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಆಟೋ ಫೋಲ್ಡಿಂಗ್ ಒಆರ್‌ವಿಎಂಗಳನ್ನು ಹೊಂದಿದೆ.

ಕಿಯಾ ಸೈರಸ್ ಕಾರಿನ ಹೆಚ್‌ಟಿಕೆ ಪ್ಲಸ್ ರೂಪಾಂತರವು ಸಹ ಸಾಕಷ್ಟು ಅತ್ಯಾಧುನಿಕವಾಗಿದೆ. ಈ ಮಾಡೆಲ್ 16-ಇಂಚಿನ ಅಲಾಯ್ ವೀಲ್‌ಗಳು, ಬ್ಲೂ & ಗ್ರೇ ಸೆಮಿ-ಲೆದರ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್, ಕ್ರೂಸ್ ಕಂಟ್ರೋಲ್, ಡ್ರೈವರ್-ಸೈಡ್ ವಿಂಡೋ ಒನ್-ಟಚ್ ಅಪ್/ಡೌನ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಪ್ಯಾಡಲ್ ಶಿಫ್ಟರ್‌ಗಳು, ಆಲ್ 4 ಡಿಸ್ಕ್ ಬ್ರೇಕ್‌ಗಳು ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.

Kia Syros Suv Variant Wise Features Details

ಸೈರಸ್ ಹೆಚ್‌ಟಿಎಕ್ಸ್ ರೂಪಾಂತರವು ಉತ್ತಮವಾಗಿದೆ. ಇದು ಎಲ್ಇಡಿ ಹೆಡ್‌ಲೈಟ್‌ಗಳು, ಡ್ರಾಪ್-ಡೌನ್ ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲೈಟ್‌ಗಳು, ಬೂಟ್ ಲ್ಯಾಂಪ್‌ಗಳು, ಬ್ಲೂ & ಗ್ರೇ ಸೆಮಿ-ಲೆದರ್ ಸೀಟ್‌ಗಳು, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ರೇರ್ ವೈಪರ್ - ವಾಷರ್‌ನ್ನು ತನ್ನದಾಗಿಸಿಕೊಂಡಿದೆ.

ಈ ಕಾರಿನ ಹೆಚ್‌ಟಿಎಕ್ಸ್ ಪ್ಲಸ್ ರೂಪಾಂತರ ಕೂಡ ಹೆಚ್ಚು ಅತ್ಯುತ್ತಮವಾಗಿದೆ. 17-ಇಂಚಿನ ಅಲಾಯ್ ವೀಲ್‌ಗಳು, ಪುಡಲ್ ಲೈಟ್‌ಗಳು, 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಏರ್ ಪ್ಯೂರಿಫೈಯರ್, ಪ್ಯಾಡಲ್ ಶಿಫ್ಟರ್‌ಗಳು, ಆಂಬಿಯೆಂಟ್ ಲೈಟಿಂಗ್, 8-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ಡುಯಲ್-ಕ್ಯಾಮೆರಾ ಡ್ಯಾಶ್‌ಕ್ಯಾಮ್ ಮತ್ತು ರೇರ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

Kia Syros Suv Variant Wise Features Details

ಕಿಯಾ ಸೈರಸ್ ಎಸ್‌ಯುವಿ ಗರಿಷ್ಠ ಶ್ರೇಣಿ ರೂಪಾಂತರ (ಟಾಪ್ ಎಂಡ್ ವೇರಿಯೆಂಟ್) ಆಗಿರುವ ಹೆಚ್‌ಟಿಎಕ್ಸ್ ಪ್ಲಸ್ (ಒ) ಬಹುತೇಕ 'ಹೆಚ್‌ಟಿಎಕ್ಸ್ ಪ್ಲಸ್' ರೀತಿಯಲ್ಲೇ ವೈಶಿಷ್ಟ್ಯಗಳನ್ನು ಹೊಂದಿದೆ. ಹೆಚ್ಚುವರಿಯಾಗಿ, ಸೈಡ್ ಪಾರ್ಕಿಂಗ್ ಸೆನ್ಸರ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

ಈ ಕಿಯಾ ಸೈರಸ್ ಕಾರು, 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. 1-ಲೀ. ಟರ್ಬೊ ಪೆಟ್ರೋಲ್ ಮತ್ತು 1.5-ಲೀ. ಡೀಸೆಲ್ ಎಂಜಿನ್‌ನ್ನು ಹೊಂದಿದೆ. 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಹಾಗೂ 7-ಸ್ಪೀಡ್ ಡಿಸಿಟಿ (ಡುಯಲ್-ಕ್ಲಚ್ ಟ್ರಾಸ್ಮಿಷನ್) ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, February 10, 2025, 8:30 [IST]
English summary
Kia syros suv variant wise features details
Read more on kia motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+